ಥಾಯ್ಲೆಂಡ್ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಶಸ್ತಿ ಗೆದ್ದ ಸಾಯಿ ಪ್ರಣೀತ್ ಗೆ ಪ್ರಧಾನಿ ಅಭಿನಂದನೆ
June 04th, 07:08 pm
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಥಾಯ್ಲೆಂಡ್ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಶ್ರೀ. ಬಿ. ಸಾಯಿ ಪ್ರಣೀತ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. “ಥಾಯ್ಲೆಂಡ್ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ ಪ್ರಶಸ್ತಿ ಗೆದ್ದ ಬಿ. ಸಾಯಿ ಪ್ರಣೀತ್ ಗೆ ಅಭಿನಂದನೆಗಳು. ನಿಮ್ಮ ಸಾಧನೆಯಿಂದ ಭಾರತ ಉತ್ಸಾಹಭರಿತವಾಗಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.