ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 31st, 07:00 pm
ಮೊದಲಿಗೆ, ತಡವಾಗಿ ಬಂದಿದ್ದಕ್ಕಾಗಿ ನಾನುನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಇಂದು ಸರ್ದಾರ್ ಸಾಹೇಬ್ ಅವರ 150ನೇ ಜನ್ಮ ದಿನಾಚರಣೆ. ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಆ ಕಾರ್ಯಕ್ರಮದಿಂದಾಗಿ, ನಾನು ಇಲ್ಲಿಗೆ ತಲುಪಲು ವಿಳಂಬವಾಯಿತು. ಸಮಯಕ್ಕೆ ಸರಿಯಾಗಿ ಆಗಮಿಸಲು ಮತ್ತು ಅದಕ್ಕಾಗಿ ನಿಮ್ಮ ಕ್ಷಮೆ ಕೇಳಲು ಸಾಧ್ಯವಾಗದಿದ್ದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಆರಂಭದಲ್ಲಿ ನಾವು ಕೇಳಿದ ಮಂತ್ರಗಳ ಶಕ್ತಿ ಮತ್ತು ಚೈತನ್ಯವನ್ನು ಇನ್ನೂ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನಿಮ್ಮೊಂದಿಗೆ ಬರಲು ಅವಕಾಶ ಸಿಕ್ಕಾಗಲೆಲ್ಲಾ ಇದು ನನಗೆ ದೈವಿಕ ಮತ್ತು ಅಸಾಧಾರಣ ಅನುಭವವಾಗಿದೆ. ಇದು ಸ್ವಾಮಿ ದಯಾನಂದ ಜಿ ಅವರ ಆಶೀರ್ವಾದ, ಇದು ಅವರ ಆದರ್ಶಗಳಿಗೆ ನಮ್ಮ ಸಾಮೂಹಿಕ ಗೌರವ, ಮತ್ತು ನಿಮ್ಮೆಲ್ಲ ಚಿಂತಕರೊಂದಿಗಿನ ನನ್ನ ದಶಕಗಳ ವೈಯಕ್ತಿಕ ಬಾಂಧವ್ಯದ ಪರಿಣಾಮವಾಗಿ ನಾನು ನಿಮ್ಮೊಂದಿಗೆ ಇರಲು ಅವಕಾಶ ಪಡೆದಿದ್ದೇನೆ. ನಾನು ನಿಮ್ಮನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾನು ಒಂದು ಅನನ್ಯ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದ್ದೇನೆ. ಇದೇ ರೀತಿಯ 9 ಸಭಾಂಗಣಗಳನ್ನು ಸ್ಥಾಪಿಸಲಾಗಿದೆ ಎಂಬುದು ನನಗೆ ತಿಳಿದುಬಂದಿದೆ. ಅಲ್ಲಿ ನಮ್ಮ ಎಲ್ಲಾ ಆರ್ಯ ಸಮಾಜದ ಸದಸ್ಯರು ವೀಡಿಯೊ ಲಿಂಕ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ನಾನು ಅವರನ್ನು ನೋಡಲು ಸಾಧ್ಯವಾಗದಿದ್ದರೂ, ನಾನು ಇಲ್ಲಿಂದ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 31st, 09:00 am
ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಐತಿಹಾಸಿಕ ಸಂದರ್ಭ, ಏಕತಾನಗರದಲ್ಲಿ ಈ ಶುಭ ಬೆಳಗ್ಗೆ, ಈ ವಿಹಂಗಮ ನೋಟ, ಸರ್ದಾರ್ ಸಾಹೇಬರ ಪಾದಗಳ ಬಳಿ ನಮ್ಮ ಉಪಸ್ಥಿತಿಯ ಮೂಲಕ ಇಂದು ನಾವೆಲ್ಲರೂ ಒಂದು ಮಹಾನ್ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. ದೇಶಾದ್ಯಂತ ನಡೆಯುತ್ತಿರುವ ಏಕತಾ ಓಟ, ಕೋಟ್ಯಂತರ ಭಾರತೀಯರ ಉತ್ಸಾಹ, ನಾವು ಹೊಸ ಭಾರತದ ಸಂಕಲ್ಪವನ್ನು ನೇರವಾಗಿ ಅನುಭವಿಸುತ್ತಿದ್ದೇವೆ. ನಿನ್ನೆ ಸಂಜೆ ನಡೆದ ಅದ್ಭುತ ಪ್ರಸ್ತುತಿ ಸೇರಿದಂತೆ ಇತ್ತೀಚೆಗೆ ಇಲ್ಲಿ ನಡೆದ ಕಾರ್ಯಕ್ರಮಗಳು ಭೂತಕಾಲದ ಸಂಪ್ರದಾಯ, ವರ್ತಮಾನದ ಕಠಿಣ ಪರಿಶ್ರಮ, ಶೌರ್ಯ ಮತ್ತು ಭವಿಷ್ಯದ ಸಾಧನೆಗಳ ಒಂದು ನೋಟವನ್ನು ಹೊಂದಿದ್ದವು. ಸರ್ದಾರ್ ಸಾಹೇಬರ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ, ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಸರ್ದಾರ್ ಸಾಹೇಬರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿವಸ್(ರಾಷ್ಟ್ರೀಯ ಏಕತಾ ದಿನ)ದಂದು ಎಲ್ಲಾ 140 ಕೋಟಿ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಗುಜರಾತ್ ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು
October 31st, 08:44 am
ಗುಜರಾತ್ ನ ಕೆವಾಡಿಯಾದಲ್ಲಿ ಇಂದು ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಸರ್ದಾರ್ ಪಟೇಲ್ ಅವರ 150ನೇ ಜಯಂತಿಯು ಒಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಏಕತಾ ನಗರದ ಮುಂಜಾವು ದೈವಿಕ ಮತ್ತು ಸುಂದರ ಎಂದು ಬಣ್ಣಿಸಿದ ಶ್ರೀ ಮೋದಿ, ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನೆರೆದ ಜನಸಮೂಹವನ್ನು ಉಲ್ಲೇಖಿಸಿದರು ಮತ್ತು ದೇಶವು ಬಹಳ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ದೇಶಾದ್ಯಂತ ನಡೆದ ಏಕತಾ ಓಟ ಮತ್ತು ಲಕ್ಷಾಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಅವರು ಎತ್ತಿ ತೋರಿಸಿದರು, ನವ ಭಾರತಕ್ಕಾಗಿ ಸಂಕಲ್ಪವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಒತ್ತಿ ಹೇಳಿದರು. ಹಿಂದೆ ನಡೆದ ಕಾರ್ಯಕ್ರಮಗಳು ಮತ್ತು ನಿನ್ನೆ ಸಂಜೆ ನಡೆದ ಗಮನಾರ್ಹ ಪ್ರಸ್ತುತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಹಿಂದಿನ ಸಂಪ್ರದಾಯಗಳು, ಇಂದಿನ ಕಠಿಣ ಪರಿಶ್ರಮ ಮತ್ತು ಶೌರ್ಯ ಮತ್ತು ಭವಿಷ್ಯದ ಸಾಧನೆಗಳನ್ನು ಇವುಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರ 150 ನೇ ಜಯಂತಿಯ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ದೇಶದ 140 ಕೋಟಿ ನಾಗರಿಕರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪರಂಪರೆಯನ್ನು ಗೌರವಿಸಲು ಅಕ್ಟೋಬರ್ 31 ರಂದು ನಡೆಯುವ ಏಕತಾ ಓಟದಲ್ಲಿ ನಾಗರಿಕರು ಭಾಗವಹಿಸಲು ಪ್ರಧಾನಮಂತ್ರಿ ಮನವಿ
October 27th, 09:15 am
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಅಕ್ಟೋಬರ್ 31 ರಂದು ನಡೆಯುವ ಏಕತಾ ಓಟದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ದೇಶಾದ್ಯಂತ ನಾಗರಿಕರಿಗೆ ಕರೆ ನೀಡಿದ್ದಾರೆ. ಈ ಕಾರ್ಯಕ್ರಮವು ರಾಷ್ಟ್ರೀಯ ಏಕತಾ ದಿನವನ್ನು ಸೂಚಿಸುತ್ತದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತಕ್ಕಾಗಿ ಕಲ್ಪಿಸಿಕೊಂಡ ಏಕತೆ ಮತ್ತು ಒಗ್ಗಟ್ಟಿನ ಶಾಶ್ವತ ಮನೋಭಾವವನ್ನು ಆಚರಿಸುವ ಸಂಕೇತವಾಗಿದೆ.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 30.03.2025 ರಂದು ಮಾಡಿದ ‘ಮನ್ ಕಿ ಬಾತ್’ – 120ನೇ ಸಂಚಿಕೆಯ ಕನ್ನಡ ಅವತರಣಿಕೆ
March 30th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಈ ಶುಭ ದಿನದಂದು, ನಿಮ್ಮೊಂದಿಗೆ 'ಮನದ ಮಾತು' ಹಂಚಿಕೊಳ್ಳುವ ಅವಕಾಶ ನನಗೆ ಲಭಿಸಿದೆ. ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿ. ಇಂದಿನಿಂದ ಚೈತ್ರ ನವರಾತ್ರಿ ಪ್ರಾರಂಭವಾಗಲಿದೆ. ಇಂದಿನಿಂದ ಭಾರತೀಯ ನವ ವರ್ಷವೂ ಆರಂಭವಾಗುತ್ತದೆ. ಈ ಬಾರಿ ವಿಕ್ರಮ ಸಂವತ್ಸರ ಅಂದರೆ ೨೦೮೨ (ಎರಡು ಸಾವಿರದ ಎಂಬತ್ತೆರಡು) ಶುರುವಾಗಲಿದೆ. ನನ್ನ ಮುಂದೆ ನೀವು ಬರೆದ ಬಹಳಷ್ಟು ಪತ್ರಗಳಿವೆ. ಬಿಹಾರದವರು, ಬಂಗಾಳದವರು, ಕೆಲವರು ತಮಿಳುನಾಡಿನವರು, ಕೆಲವರು ಗುಜರಾತ್‌ನವರು ಪತ್ರ ಬರೆದಿದ್ದಾರೆ. ಬಹಳ ಆಸಕ್ತಿಕರವಾಗಿ ಜನರು ತಮ್ಮ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪತ್ರಗಳು ಶುಭ ಹಾರೈಕೆಗಳು ಮತ್ತು ಅಭಿನಂದನಾ ಸಂದೇಶಗಳನ್ನು ಹೊತ್ತು ತಂದಿವೆ. ಆದರೆ ಇಂದು ನಿಮ್ಮೊಂದಿಗೆ ಕೆಲವು ಸಂದೇಶಗಳನ್ನು ಹಂಚಿಕೊಳ್ಳಬಯಸುತ್ತೇನೆ -ಸೌರ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತದ ಅದ್ಭುತಗಳಿಂದ ಜಗತ್ತು ಬೆರಗುಗೊಂಡಿದೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
October 30th, 11:30 am
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ಪವಿತ್ರ ಛಠ್ ಪೂಜೆಯ ಬಗ್ಗೆ ಮಾತನಾಡಿದೆವು, ಭಗವಾನ್ ಸೂರ್ಯನ ಆರಾಧನೆ ಬಗ್ಗೆ ಮಾತನಾಡಿದೆವು. ಹಾಗಾದರೆ ಇಂದು ಸೂರ್ಯನನ್ನು ಪೂಜಿಸುವ ಜೊತೆಗೆ ಅವನು ನೀಡಿದ ವರದ ಬಗ್ಗೆಯೂ ಚರ್ಚಿಸೋಣ. 'ಸೌರಶಕ್ತಿ' ಸೂರ್ಯದೇವನ ವರದಾನ. ಸೌರಶಕ್ತಿ ಇಡೀ ಜಗತ್ತು ತನ್ನ ಭವಿಷ್ಯವನ್ನು ಅದರಲ್ಲಿ ಕಾಣುವಂತಹ ಒಂದು ವಿಷಯವಾಗಿದೆ ಮತ್ತು ಭಾರತಕ್ಕಾಗಿ, ಸೂರ್ಯ ದೇವ ಶತಮಾನಗಳಿಂದ ಕೇವಲ ಪೂಜಿತನಲ್ಲ, ಜೀವನ ವಿಧಾನದ ಕೇಂದ್ರವಾಗಿ ಮಿಳಿತವಾಗಿದ್ದಾನೆ. ಭಾರತವು ಇಂದು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ, ಅದಕ್ಕಾಗಿಯೇ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಒಂದೆನಿಸಿದ್ದೇವೆ. ಸೌರಶಕ್ತಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದೂ ಅಧ್ಯಯನದ ವಿಷಯವಾಗಿದೆ.ರಾಷ್ಟ್ರೀಯ ಏಕತಾ ದಿನದಂದು ಕೇವಡಿಯಾದಲ್ಲಿ ರಾಷ್ಟ್ರೀಯ ಏಕತಾ ಪ್ರತಿಜ್ಞಾವಿಧಿ ಬೋಧಿಸಿದ ಪ್ರಧಾನಮಂತ್ರಿ
October 31st, 03:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿಂದು ಕೇವಡಿಯಾದ ಏಕತಾ ಪ್ರತಿಮೆಯ ಬಳಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ದೇಶಾದ್ಯಂತದ ಪೊಲೀಸ್ ತುಕಡಿಗಳು ಪ್ರದರ್ಶಿಸಿದ ರಾಷ್ಟ್ರೀಯ ಏಕತಾ ದಿನದ ಪರೇಡ್ ಅನ್ನೂ ಅವರು ವೀಕ್ಷಿಸಿದರು.ಕೆವಾಡಿಯಾದ ಏಕತಾ ಮೂರ್ತಿ ಸ್ಥಳದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಮಂತ್ರಿ
October 31st, 10:30 am
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವಾದ ಇಂದು ಗುಜರಾತ್ ನ ಕೆವಾಡಿಯಾದಲ್ಲಿರುವ ಜಗದ್ವಿಖ್ಯಾತ ಏಕತಾಮೂರ್ತಿ ಸ್ಥಳದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಪುಷ್ಪನಮನ ಸಲ್ಲಿಸಿದರು.ಅಕ್ಟೋಬರ್ 31ರಂದು ಏಕತಾ ಮೂರ್ತಿ ಬಳಿ ಸರ್ದಾರ್ ಪಟೇಲ್ ಗೆ ಗೌರವ ನಮನ ಸಲ್ಲಿಸಲಿರುವ ಪ್ರಧಾನಮಂತ್ರಿ
October 30th, 02:28 pm
ಅಕ್ಟೋಬರ್ 31, 2019ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಮೂರ್ತಿ ಸ್ಥಳದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.ದೇಶದ ಏಕತೆಯನ್ನು ಬಲಪಡಿಸುವಲ್ಲಿ ಸಮಾಜ ಸದಾ ಸಕ್ರಿಯ ಪಾತ್ರ ನಿರ್ವಹಿಸಿದೆ :ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಮಂತ್ರಿ
October 27th, 11:00 am
ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶವಾಸಿಗಳಿಗೆ ದೀಪಾವಳಿಯ ಶುಭ ಕೋರಿದ್ದಾರೆ. ಗುರು ನಾನಕ್ ದೇವ್ ಅವರ ಬೋಧನೆಗಳು, ಭಾರತದ ನಾರಿ ಶಕ್ತಿ, ಸರ್ದಾರ್ ಪಟೇಲ್ ಅಮೂಲ್ಯ ಕೊಡುಗೆ, ಏಕತೆಯ ಪ್ರತಿಮೆ ಮತ್ತು ಸಿಯಾಚಿನ್ ನಲ್ಲಿ ಯೋಧರ ಸ್ವಚ್ಛತೆಯ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ರಾಮ ಜನ್ಮ ಭೂಮಿ ಕುರಿತಂತೆ 2010ರ ಸೆಪ್ಟೆಂಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನೂ ಅವರು ಸ್ಮರಿಸಿದ್ದಾರೆ.‘ಏಕತಾ ಪ್ರತಿಮೆ’ಯನ್ನು ದೇಶಾರ್ಪಣೆ ಮಾಡಿದ ಪ್ರಧಾನಮಂತ್ರಿ
October 31st, 10:50 am
ಪ್ರಪಂಚದ ಅತಿದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆಯ ‘ಏಕತಾ ಪ್ರತಿಮೆ’ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾರ್ಪಣೆ ಮಾಡಿದರು.Sardar Patel wanted India to be strong, secure, sensitive, alert and inclusive: PM Modi
October 31st, 10:31 am
PM Modi dedicated the world’s largest statue, the ‘Statue of Unity’ to the nation. The 182 metres high statue of Sardar Patel, on the banks of River Narmada is a tribute to the great leader. Addressing a gathering at the event, the PM recalled Sardar Patel’s invaluable contribution towards India’s unification and termed the statue to be reflection of New India’s aspirations, which could be fulfilled through the mantra of ‘Ek Bharat, Shreshtha Bharat.’We want create an India where every citizen is empowered: PM Modi
February 25th, 08:05 pm
PM Narendra Modi today flagged off New India marathon from Surat. Speaking at the event, PM Modi urged to build a New India, which is free from politics of caste, communalism and corruption. He said, “We want create an India where every citizen is empowered.”ಸೋಶಿಯಲ್ ಮೀಡಿಯಾ ಕಾರ್ನರ್ 31 ಅಕ್ಟೋಬರ್ 2017
October 31st, 06:51 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !India is proud of its diversity: PM Narendra Modi
October 31st, 07:30 am
PM Narendra Modi flagged off the 'Run for Unity’ today. The PM remarked, “We are proud of Sardar Patel’s contribution to India before we attained freedom and during the early years after we became independent.”ಸರ್ದಾರ್ ಪಟೇಲ್ ಜಯಂತಿಯಂದು ಅವರಿಗೆ ಪುಷ್ಪ ನಮನ ಸಲ್ಲಿಸಿದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ;‘ಏಕತೆಗಾಗಿ ಓಟಕ್ಕೆ’ ಚಾಲನೆ ನೀಡಿದ ಪ್ರಧಾನಿ
October 31st, 07:28 am
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಾದ ಇಂದು ನವ ದೆಹಲಿಯ ಪಟೇಲ್ ಚೌಕ್ ನಲ್ಲಿರುವ ಸರ್ದಾರ್ ಪಟೇಲ್ ಪುತ್ಥಳಿಗೆ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು.ವಡೋದರದಲ್ಲಿ ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ
October 22nd, 05:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ವಡೋದರಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಡೋದರಾ ನಗರದ ಕಮಾಂಡ್ ನಿಯಂತ್ರಣ ಕೇಂದ್ರ; ವಗೋಡಿಯಾ ಪ್ರಾದೇಶಿಕ ನೀರು ಸರಬರಾಜು ಯೋಜನೆ; ಮತ್ತು ಬ್ಯಾಂಕ್ ಆಫ್ ಬರೋಡಾದ ನೂತನ ಪ್ರಧಾನ ಕಚೇರಿ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದರು.ರಾಜ್ಯಪಾಲರುಗಳ ಸಮ್ಮೇಳನದ ಸಮಾರೋಪ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆ
October 13th, 03:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರುಗಳ ಸಮ್ಮೇಳನದ ಸಮಾರೋಪದಲ್ಲಿ ಭಾಷಣ ಮಾಡಿದರು.ವಿವಿಧತೆಯಲ್ಲಿ ಏಕತೆ ಭಾರತದ ವಿಶಿಷ್ಟತೆ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ
September 24th, 11:30 am
ಮನ್ ಕಿ ಬಾತ್ ನ 36 ನೇ ಆವೃತ್ತಿ ಮೂಲಕ ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕಿ ಬಾತ್ ಅವರು ದೇಶಾದ್ಯಂತ ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಒಂದು ವಿಶಿಷ್ಟ ವೇದಿಕೆಯಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಹಲವು ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾ, ಅವರ ಕೊಡುಗೆಗಳು ಇಂದಿಗೂ ಸಹ ನಮಗೆ ಸ್ಫೂರ್ತಿ ನೀಡಿವೆ ಎಂದು ಹೇಳಿದರು. ಸ್ವಚ್ಚತಾ, ಪ್ರವಾಸೋದ್ಯಮ ಮತ್ತು ಉತ್ಸವಗಳ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು.