17ನೇ ಬ್ರಿಕ್ಸ್ ಶೃಂಗಸಭೆ - ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ ಕುರಿತ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 07th, 11:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ ಕುರಿತಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಅಧಿವೇಶನದಲ್ಲಿ ಬ್ರಿಕ್ಸ್ ಸದಸ್ಯರು, ಪಾಲುದಾರ ರಾಷ್ಟ್ರಗಳು ಮತ್ತು ಆಹ್ವಾನಿತ ರಾಷ್ಟ್ರಗಳು ಭಾಗವಹಿಸಿದ್ದವು. ವಿಶ್ವದ ಭವಿಷ್ಯಕ್ಕಾಗಿ ಇಂತಹ ಮಹತ್ವದ ವಿಷಯ ಕುರಿತು ಅಧಿವೇಶನವನ್ನು ಆಯೋಜಿಸಿದ್ದಕ್ಕಾಗಿ ಅವರು ಬ್ರೆಜಿಲ್ ಗೆ ಧನ್ಯವಾದ ಸಲ್ಲಿಸಿದರು. ಭಾರತಕ್ಕೆ ಹವಾಮಾನ ಬದಲಾವಣೆಯು ಕೇವಲ ಇಂಧನ ಸಮಸ್ಯೆಗಳನ್ನು ನಿಭಾಯಿಸುವುದಲ್ಲ, ಬದಲಾಗಿ ಅದು ಜೀವನ ಮತ್ತು ನಿಸರ್ಗದ ನಡುವಿನ ಸಮತೋಲನದ ಮೇಲೆ ಪರಿಣಾಮ ಬೀರುವುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಹವಾಮಾನ ನ್ಯಾಯವನ್ನು ಈಡೇರಿಸಬೇಕಾದ ನೈತಿಕ ಜವಾಬ್ದಾರಿಯಾಗಿ ನೋಡುತ್ತದೆ ಎಂದು ಅವರು ಒತ್ತಿ ಹೇಳಿದರು. ಪರಿಸರ ಕ್ರಮಕ್ಕೆ ಭಾರತದ ಆಳವಾದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಜನರು ಮತ್ತು ಗ್ರಹದ ಅಭಿವೃದ್ಧಿಯನ್ನು ಉತ್ತೇಜಿಸಲು ಅದು ಕೈಗೊಂಡ ಉಪಕ್ರಮಗಳಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ, ಮಿಷನ್ ಲೈಫ್, ತಾಯಿಯ ಹೆಸರಿನಲ್ಲಿ ಒಂದು ಗಿಡ ಇತ್ಯಾದಿಗಳ ಬಗ್ಗೆ ವಿವರಿಸಿದರು.ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯದ ಕುರಿತಾದ ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
July 07th, 11:13 pm
ಬ್ರೆಜಿಲ್ ಅಧ್ಯಕ್ಷತೆಯಲ್ಲಿ ಬ್ರಿಕ್ಸ್, ಪರಿಸರ ಮತ್ತು ಆರೋಗ್ಯ ಸುರಕ್ಷತೆಯಂತಹ ಪ್ರಮುಖ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ನನಗೆ ಸಂತೋಷ ತಂದಿದೆ. ಈ ವಿಷಯಗಳು ಪರಸ್ಪರ ಸಂಬಂಧ ಹೊಂದಿರುವುದು ಮಾತ್ರವಲ್ಲ ಮಾನವೀಯತೆಯ ಉಜ್ವಲ ಭವಿಷ್ಯಕ್ಕೂ ಸಹ ಬಹಳ ಮುಖ್ಯವಾಗಿವೆ.ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರು ಉರುಗ್ವೆ ಅಧ್ಯಕ್ಷರನ್ನು ಭೇಟಿ ಮಾಡಿದರು
July 07th, 09:20 pm
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ಚರ್ಚೆಗಳನ್ನು ನಡೆಸಿದರು. ಡಿಜಿಟಲ್ ಸಹಯೋಗ, ಐಸಿಟಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಯುಪಿಐ, ರಕ್ಷಣೆ, ರೈಲ್ವೆ, ಆರೋಗ್ಯ ಮತ್ತು ಔಷಧೀಯ, ಕೃಷಿ, ಇಂಧನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಪರ್ಕ ಕ್ಷೇತ್ರಗಳಲ್ಲಿನ ಸಹಕಾರವನ್ನು ಅವರು ಪರಿಶೀಲಿಸಿದರು. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಬಲಪಡಿಸುವುದು ಚರ್ಚೆಯ ಪ್ರಮುಖ ಕ್ಷೇತ್ರವಾಗಿತ್ತು. ಹೆಚ್ಚಿನ ಆರ್ಥಿಕ ಸಾಮರ್ಥ್ಯ ಮತ್ತು ವ್ಯಾಪಾರದ ಅವಕಾಶಗಳನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಭಾರತ-ಮೆರ್ಕೋಸುರ್ ಆದ್ಯತಾ ವ್ಯಾಪಾರ ಒಪ್ಪಂದದ ವಿಸ್ತರಣೆಯಲ್ಲಿ ಎರಡೂ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು.ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬೊಲಿವಿಯಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
July 07th, 09:19 pm
ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೊಲಿವಿಯಾ ಬಹುರಾಷ್ಟ್ರೀಯ ರಾಜ್ಯದ ಅಧ್ಯಕ್ಷ ಘನತೆವೆತ್ತ ಲೂಯಿಸ್ ಆರ್ಸ್ ಕ್ಯಾಟಕೋರಾ ಅವರನ್ನು ಭೇಟಿ ಮಾಡಿದರು.ರಿಯೋ ಡಿ ಜನೈರೋ ಘೋಷಣೆ - ಹೆಚ್ಚು ಸಮಗ್ರ ಹಾಗೂ ಸುಸ್ಥಿರ ಆಡಳಿತಕ್ಕಾಗಿ 'ಗ್ಲೋಬಲ್ ಸೌತ್' ಸಹಕಾರ ಬಲವರ್ಧನೆ
July 07th, 06:00 am
ಬ್ರಿಕ್ಸ್ ರಾಷ್ಟ್ರಗಳ ನಾಯಕರಾದ ನಾವು, ಹೆಚ್ಚು ಸಮಗ್ರ ಹಾಗೂ ಸುಸ್ಥಿರ ಆಡಳಿತಕ್ಕಾಗಿ ಗ್ಲೋಬಲ್ ಸೌತ್ ಸಹಕಾರವನ್ನು ಬಲಪಡಿಸುವುದು ಎಂಬ ಧ್ಯೇಯವಾಕ್ಯದ ಅಡಿಯಲ್ಲಿ, ಜುಲೈ 6 ರಿಂದ 7, 2025 ರವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಸಭೆ ಸೇರಿದ್ದೇವೆ.ಶಾಂತಿ ಮತ್ತು ಭದ್ರತೆ ಕುರಿತ ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
July 06th, 11:07 pm
ಜಾಗತಿಕ ಶಾಂತಿ ಮತ್ತು ಭದ್ರತೆ ಕೇವಲ ಆದರ್ಶಗಳಲ್ಲ, ಬದಲಿಗೆ ಅವು ನಮ್ಮ ಹಂಚಿಕೆಯ ಹಿತಾಸಕ್ತಿಗಳು ಮತ್ತು ಭವಿಷ್ಯದ ಅಡಿಪಾಯವಾಗಿದೆ. ಶಾಂತಿಯುತ ಮತ್ತು ಸುಭದ್ರ ವಾತಾವರಣದಲ್ಲಿ ಮಾತ್ರ ಮಾನವೀಯತೆಯ ಪ್ರಗತಿ ಸಾಧ್ಯ. ಈ ಉದ್ದೇಶವನ್ನು ಈಡೇರಿಸುವಲ್ಲಿ ಬ್ರಿಕ್ಸ್ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದೆ. ನಾವೆಲ್ಲರೂ ಒಗ್ಗೂಡಲು, ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಲು ಮತ್ತು ನಾವೆಲ್ಲರೂ ಎದುರಿಸುತ್ತಿರುವ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಲು ಇದು ಸುಸಮಯ. ನಾವು ಒಟ್ಟಾಗಿ ಮುಂದೆ ಸಾಗಬೇಕು.ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಇಂಗ್ಲಿಷ್ ಅನುವಾದ: ಜಾಗತಿಕ ಆಡಳಿತದ ಸುಧಾರಣೆ
July 06th, 09:41 pm
17ನೇ ಬ್ರಿಕ್ಸ್ ಶೃಂಗಸಭೆಯ ಅತ್ಯುತ್ತಮ ಸಂಘಟನೆಗಾಗಿ ಅಧ್ಯಕ್ಷ ಲೂಲಾ ಅವರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬ್ರೆಜಿಲ್‌ನ ಕ್ರಿಯಾತ್ಮಕ ಅಧ್ಯಕ್ಷತೆಯಲ್ಲಿ, ನಮ್ಮ ಬ್ರಿಕ್ಸ್ ಸಹಕಾರವು ಹೊಸ ಆವೇಗ ಮತ್ತು ಚೈತನ್ಯವನ್ನು ಪಡೆದುಕೊಂಡಿದೆ. ನಾವು ಪಡೆದ ಶಕ್ತಿಯು ಕೇವಲ ಎಸ್ಪ್ರೆಸೊ ಅಲ್ಲ; ಇದು ಡಬಲ್ ಎಸ್ಪ್ರೆಸೊ ಶಾಟ್! ಇದಕ್ಕಾಗಿ, ಅಧ್ಯಕ್ಷ ಲೂಲಾ ಅವರ ದೃಷ್ಟಿಕೋನ ಮತ್ತು ಅವರ ಅಚಲ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ. ಭಾರತದ ಪರವಾಗಿ, ಬ್ರಿಕ್ಸ್ ಕುಟುಂಬದಲ್ಲಿ ಇಂಡೋನೇಷ್ಯಾ ಸೇರ್ಪಡೆಗಾಗಿ ನನ್ನ ಸ್ನೇಹಿತರಾದ ಅಧ್ಯಕ್ಷ ಪ್ರಬೋವೊ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ.ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಹೇಳಿಕೆ: ಬಹುಪಕ್ಷೀಯತೆ, ಆರ್ಥಿಕ ಹಣಕಾಸು ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಲಪಡಿಸುವುದು
July 06th, 09:40 pm
ವಿಸ್ತೃತ ಬ್ರಿಕ್ಸ್ ಕುಟುಂಬದ ನನ್ನ ಸ್ನೇಹಿತರೊಂದಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಬಹಳ ಸಂತೋಷವಾಗಿದೆ. ಬ್ರಿಕ್ಸ್ ಔಟ್ರೀಚ್ ಶೃಂಗಸಭೆಯಲ್ಲಿ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದ ಸ್ನೇಹಪರ ರಾಷ್ಟ್ರಗಳೊಂದಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ ಅಧ್ಯಕ್ಷ ಲೂಲಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದರು
July 06th, 09:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜುಲೈ 6-7, 2025 ರಂದು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಜಾಗತಿಕ ಆಡಳಿತದ ಸುಧಾರಣೆ, ಗ್ಲೋಬಲ್ ಸೌತ್ ನ (ದಕ್ಷಿಣದ ದೇಶಗಳ) ಧ್ವನಿಯನ್ನು ಹೆಚ್ಚಿಸುವುದು, ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯತೆಯನ್ನು ಬಲಪಡಿಸುವುದು, ಅಭಿವೃದ್ಧಿ ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಬ್ರಿಕ್ಸ್ ಕಾರ್ಯಸೂಚಿಯಲ್ಲಿನ ವಿವಿಧ ವಿಷಯಗಳ ಕುರಿತು ನಾಯಕರು ಫಲಪ್ರದ ಚರ್ಚೆಗಳನ್ನು ನಡೆಸಿದರು. ಪ್ರಧಾನಮಂತ್ರಿಯವರು, ಬ್ರೆಜಿಲ್ ಅಧ್ಯಕ್ಷರ ಆತ್ಮೀಯ ಆತಿಥ್ಯಕ್ಕೆ ಹಾಗೂ ಶೃಂಗಸಭೆಯ ಯಶಸ್ವಿ ಆಯೋಜನೆಗೆ ಧನ್ಯವಾದಗಳನ್ನು ಅರ್ಪಿಸಿದರು.ಬ್ರೆಜಿಲ್ ನಲ್ಲಿರುವ ಭಾರತೀಯ ಸಮುದಾಯದ ರೋಮಾಂಚಕ ಸ್ವಾಗತಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ
July 06th, 08:28 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಯೊ ಡಿ ಜನೈರೊದಲ್ಲಿ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಬ್ರೆಜಿಲ್ ನಲ್ಲಿರುವ ಭಾರತೀಯ ಸಮುದಾಯದವರನ್ನು ಶ್ಲಾಘಿಸಿದ್ದಾರೆ. ಭಾರತದ ಅಭಿವೃದ್ಧಿಯ ಬಗ್ಗೆ ಅನಿವಾಸಿ ಭಾರತೀಯರು ಅತ್ಯಂತ ಉತ್ಸುಕರಾಗಿರುವುದು ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ತಮ್ಮ ಸಂಪರ್ಕ ಮುಂದುವರಿಸಿರುವುದು ಅಮೋಘವಾಗಿದೆ ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ. ಅಲ್ಲಿನ ಸ್ವಾಗತದ ಕೆಲವು ಚಿತ್ರಗಳನ್ನು ಕೂಡ ಶ್ರೀ ಮೋದಿ ಅವರು ಹಂಚಿಕೊಂಡಿದ್ದಾರೆ.ಪ್ರಧಾನಿ ಮೋದಿ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದರು
July 06th, 04:47 am
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಬ್ರೆಜಿಲ್‌ಗೆ ಆಗಮಿಸಿದ್ದಾರೆ. ಅವರು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಹಲವಾರು ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ.ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ
November 20th, 08:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರು ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ 2ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯನ್ನು ನಡೆಸಿದರು. ಪ್ರಥಮ ವಾರ್ಷಿಕ ಶೃಂಗಸಭೆಯನ್ನು 2023ರ ಮಾರ್ಚ್ 10ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಅವರ ಭಾರತದ ಭೇಟಿಯ ಸಮಯದಲ್ಲಿ ನಡೆಸಲಾಗಿತ್ತು.ಚಿಲಿ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 20th, 08:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವೆಂಬರ್ 19ರಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಚಿಲಿ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಗೇಬ್ರಿಯಲ್ ಬೋರಿಕ್ ಫಾಂಟ್ ಅವರನ್ನು ಭೇಟಿಯಾದರು. ಇದು ಅವರ ಮೊದಲ ಭೇಟಿಯಾಗಿತ್ತು.ಪ್ರಧಾನಮಂತ್ರಿ ಅವರಿಂದ ಅರ್ಜೆಂಟೀನಾ ಅಧ್ಯಕ್ಷರ ಭೇಟಿ
November 20th, 08:09 pm
ಇದು ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಾಗಿತ್ತು. ಐತಿಹಾಸಿಕ ಮೂರನೇ ಅವಧಿಯ ಅಧಿಕಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಮಿಲೀ ಅವರು ಅಭಿನಂದಿಸಿದರು. ಪ್ರಧಾನಮಂತ್ರಿ ಸಹ ಅಧ್ಯಕ್ಷ ಮೈಲಿ ಅವರು ಅಧಿಕಾರ ವಹಿಸಿಕೊಂಡಿರುವುದಕ್ಕೆ ಶುಭ ಕೋರಿದರು.ಪ್ರಧಾನಮಂತ್ರಿ ಅವರಿಂದ ಬ್ರೆಜಿಲ್ ಅಧ್ಯಕ್ಷರ ಭೇಟಿ
November 20th, 08:05 pm
ರಿಯೊ ಡಿ ಜನೈರೊದಲ್ಲಿ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರನ್ನು ನವೆಂಬರ್ 19 ರಂದು ಭೇಟಿಯಾದರು. ಅಧ್ಯಕ್ಷ ಲುಲಾ ಅವರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಗಳು ಧನ್ಯವಾದ ಅರ್ಪಿಸಿ ಬ್ರೆಜಿಲ್ನ ಜಿ-20 ಮತ್ತು ಐ ಬಿ ಎಸ್ ಎ ಅಧ್ಯಕ್ಷತೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದರು. ಬಡತನ ಮತ್ತು ಹಸಿವಿನ ವಿರುದ್ಧ ಜಾಗತಿಕ ಒಕ್ಕೂಟವನ್ನು ಸ್ಥಾಪಿಸುವ ಬ್ರೆಜಿಲಿಯನ್ ಉಪಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅದಕ್ಕೆ ಭಾರತದ ದೃಢ ಬೆಂಬಲವನ್ನು ತಿಳಿಸಿದರು. ಜಿ 20 ತ್ರಿ ಸದಸ್ಯ ರಾಷ್ಟ್ರವಾಗಿ, ಜಾಗತಿಕ ದಕ್ಷಿಣದ ಒಳಿತಿಗೆ ಆದ್ಯತೆ ನೀಡಿರುವ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆಡಳಿತ ಸುಧಾರಣೆಯ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ನ ಜಿ 20 ಕಾರ್ಯಸೂಚಿಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಮುಂದಿನ ವರ್ಷ ಬ್ರಿಕ್ಸ್ ಮತ್ತು ಸಿಒಪಿ 30ರ ಬ್ರೆಜಿಲ್ ನ ನಾಯಕತ್ವಕ್ಕಾಗಿ ಅವರು ಶುಭ ಕೋರಿದರು ಮತ್ತು ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.ತಂತ್ರಜ್ಞಾನವನ್ನು ಸಂಯೋಜಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ: ಪ್ರಧಾನಮಂತ್ರಿ
November 20th, 05:02 am
ಆರೋಗ್ಯಕರ ಪ್ರಪಂಚವು ಉತ್ತಮವಾಗಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತಂತ್ರಜ್ಞಾನವನ್ನು ಸಂಯೋಜಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ಭಾರತವು ಜಾಗತಿಕ ಪ್ರಯತ್ನಗಳನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಕುರಿತ ಜಿ 20 ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
November 20th, 01:40 am
ಇಂದಿನ ಅಧಿವೇಶನದ ವಿಷಯವು ಬಹಳ ಪ್ರಸ್ತುತವಾಗಿದೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ. ನವದೆಹಲಿ ಜಿ -20 ಶೃಂಗಸಭೆಯಲ್ಲಿ, ಎಸ್ ಡಿಜಿಗಳ ಸಾಧನೆಯನ್ನು ವೇಗಗೊಳಿಸಲು ನಾವು ವಾರಣಾಸಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡಿದ್ದೇವೆ.ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಕುರಿತು ಜಿ 20 ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 20th, 01:34 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಕುರಿತು ಜಿ-20 ಶೃಂಗಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ನವದೆಹಲಿ ಜಿ-20 ಶೃಂಗಸಭೆಯ ಸಮಯದಲ್ಲಿ, ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಮತ್ತು 2030ರ ವೇಳೆಗೆ ಇಂಧನ ದಕ್ಷತೆಯ ದರವನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಈ ಸುಸ್ಥಿರ ಅಭಿವೃದ್ಧಿ ಆದ್ಯತೆಗಳನ್ನು ಮುಂದಕ್ಕೆ ತೆಗೆದುಕೊಳ್ಳುವ ಬ್ರೆಜಿಲ್ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದರು.ಇಟಲಿ-ಭಾರತ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029
November 19th, 09:25 am
18 ನವೆಂಬರ್ 2024 ರಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರು ಭಾರತ ಇಟಲಿಯ ರಚನಾತ್ಮಕ ಪಾಲುದಾರಿಕೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಿದ್ದಾರೆ. ಕೆಳಗಿನ ಕೇಂದ್ರೀಕೃತ, ಸಮಯ ಬದ್ಧ ಉಪಕ್ರಮಗಳು ಮತ್ತು ಕಾರ್ಯತಂತ್ರದ ಕ್ರಿಯೆಯ ಜಂಟಿ ಯೋಜನೆಯ ಮೂಲಕ ಮತ್ತಷ್ಟು ಆದ್ಯತೆ ನೀಡುವ ನಿಟ್ಟಿನಲ್ಲಿ ಇಟಲಿ ಮತ್ತು ಭಾರತ ಒಪ್ಪಿಗೆ ಸೂಚಿಸಿವೆ.ಇಟಲಿಯ ಮಂತ್ರಿಗಳ ಮಂಡಳಿಯ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
November 19th, 08:34 am
ರಿಯೊ ಡಿ ಜನೈರೊದಲ್ಲಿ ನಡೆಯುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಾಲಿಯನ್ ಗಣರಾಜ್ಯದ ಮಂತ್ರಿಗಳ ಪರಿಷತ್ತಿನ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಭೇಟಿಯಾದರು. ಕಳೆದ ಎರಡು ವರ್ಷಗಳಲ್ಲಿ ಉಭಯ ಪ್ರಧಾನಮಂತ್ರಿಗಳ ನಡುವಿನ ಐದನೇ ಭೇಟಿ ಇದಾಗಿದೆ. ಜೂನ್ 2024 ರಲ್ಲಿ ಇಟಲಿಯ ಪುಗ್ಲಿಯಾದಲ್ಲಿ ಪ್ರಧಾನ ಮಂತ್ರಿ ಮೆಲೋ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರ ಅಧ್ಯಕ್ಷತೆಯಲ್ಲಿ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿಯಾಗಿದ್ದರು. ಸವಾಲಿನ ಈ ಸಂದರ್ಭದದಲ್ಲಿ ಜಿ7 ಅನ್ನು ಮುನ್ನಡೆಸಿದ್ದಕ್ಕಾಗಿ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.