ರಿಪಬ್ಲಿಕ್ ಸರ್ವಸದಸ್ಯರ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
March 06th, 08:05 pm
ನೀವೆಲ್ಲರೂ ದಣಿದಿರಬೇಕು, ಅರ್ನಬ್ ಅವರ ಗಟ್ಟಿಯಾದ ಧ್ವನಿಯಿಂದ ನಿಮ್ಮ ಕಿವಿಗಳು ದಣಿದಿರಬೇಕು, ಅರ್ನಬ್ ಕುಳಿತುಕೊಳ್ಳಿ, ಇದು ಚುನಾವಣಾ ಸಮಯವಲ್ಲ. ಮೊದಲನೆಯದಾಗಿ, ಈ ನವೀನ ಪ್ರಯೋಗಕ್ಕಾಗಿ ನಾನು ರಿಪಬ್ಲಿಕ್ ಟಿವಿಯನ್ನು ಅಭಿನಂದಿಸುತ್ತೇನೆ. ನೀವು ಯುವಕರನ್ನು ತಳಮಟ್ಟದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಇಷ್ಟು ದೊಡ್ಡ ಸ್ಪರ್ಧೆ ಆಯೋಜಿಸಿ ಇಲ್ಲಿಗೆ ಕರೆತಂದಿದ್ದೀರಿ. ದೇಶದ ಯುವಕರು ರಾಷ್ಟ್ರೀಯ ಚರ್ಚೆಯಲ್ಲಿ ತೊಡಗಿಸಿಕೊಂಡಾಗ, ಆಲೋಚನೆಗಳಲ್ಲಿ ಹೊಸತನ ಇರುತ್ತದೆ, ಅದು ಇಡೀ ಪರಿಸರವನ್ನು ಹೊಸ ಶಕ್ತಿಯಿಂದ ತುಂಬುತ್ತದೆ, ಈ ಸಮಯದಲ್ಲಿ ನಾವು ಈ ಹೊಸ ಶಕ್ತಿಯನ್ನು ಅನುಭವಿಸುತ್ತಿದ್ದೇವೆ. ಒಂದು ರೀತಿಯಲ್ಲಿ, ಯುವಕರ ಒಳಗೊಳ್ಳುವಿಕೆಯಿಂದ, ನಾವು ಪ್ರತಿಯೊಂದು ಬಂಧವನ್ನು ಮುರಿಯಲು, ಮಿತಿಗಳನ್ನು ಮೀರಿ ಹೋಗಲು ಸಾಧ್ಯವಾಗುತ್ತದೆ, ಆದರೆ ಸಾಧಿಸಲಾಗದ ಗುರಿ ಇಲ್ಲ. ತಲುಪಲಾಗದ ಯಾವುದೇ ಗಮ್ಯಸ್ಥಾನವಿಲ್ಲ. ಈ ಸಮಾವೇಶ(ಶೃಂಗಸಭೆ)ಕ್ಕಾಗಿ ರಿಪಬ್ಲಿಕ್ ಟಿವಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದೆ. ಈ ಶೃಂಗಸಭೆಯ ಯಶಸ್ಸಿಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ, ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಸರಿ, ಇದರಲ್ಲಿ ನನ್ನದೂ ಸ್ವಲ್ಪ ಸ್ವಾರ್ಥವಿದೆ, ಒಂದು, ಕಳೆದ ಕೆಲವು ದಿನಗಳಿಂದ ನಾನು 1 ಲಕ್ಷ ಯುವಕರನ್ನು ರಾಜಕೀಯಕ್ಕೆ ತರಬೇಕು, 1 ಲಕ್ಷ ಜನರು ತಮ್ಮ ಕುಟುಂಬಗಳಲ್ಲಿ ಮೊದಲ ಬಾರಿಗೆ ರಾಜಕೀಯಕ್ಕೆ ಬರುವವರು ಎಂದು ಯೋಚಿಸುತ್ತಿದ್ದೇನೆ, ಆದ್ದರಿಂದ ಒಂದು ರೀತಿಯಲ್ಲಿ, ಇಂತಹ ಘಟನೆಗಳು ನನ್ನ ಈ ಗುರಿಗೆ ವೇದಿಕೆಯನ್ನು ಸಿದ್ಧಪಡಿಸುತ್ತಿವೆ. ಎರಡನೆಯದಾಗಿ, ನನ್ನ ವೈಯಕ್ತಿಕ ಲಾಭವಿದೆ, ವೈಯಕ್ತಿಕ ಲಾಭವೆಂದರೆ 2029ರಲ್ಲಿ ಮತ ಚಲಾಯಿಸಲು ಹೋಗುವವರಿಗೆ 2014ಕ್ಕಿಂತ ಮೊದಲು ಪತ್ರಿಕೆಗಳ ಮುಖ್ಯಾಂಶಗಳು ಏನೆಂದು ತಿಳಿದಿರುವುದಿಲ್ಲ, ಅವರಿಗೆ ತಿಳಿದಿಲ್ಲ, 10-10, 12-12 ಲಕ್ಷ ಕೋಟಿ ಹಗರಣಗಳು ಇದ್ದವು, ಅದು ಅವರಿಗೆ ತಿಳಿದಿಲ್ಲ. ಆದರೆ ಅವರು 2029ರಲ್ಲಿ ಮತ ಚಲಾಯಿಸಲು ಹೋಗುವಾಗ, ಹೋಲಿಕೆ ಮಾಡಲು ಅವರ ಮುಂದೆ ಏನೂ ಇರುವುದಿಲ್ಲ. ಆದ್ದರಿಂದ, ನಾನು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಮತ್ತು ಈ ವೇದಿಕೆಯು ಆ ಕೆಲಸವನ್ನು ಬಲಪಡಿಸುತ್ತದೆ ಎಂದು ನನಗೆ ಪೂರ್ಣ ನಂಬಿಕೆಯಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಪಬ್ಲಿಕ್ ಸಮಗ್ರ ಶೃಂಗಸಭೆ 2025 ಉದ್ದೇಶಿಸಿ ಭಾಷಣ ಮಾಡಿದರು
March 06th, 08:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಡಪಂನಲ್ಲಿ ನಡೆದ ರಿಪಬ್ಲಿಕ್ ಪ್ಲೀನರಿ ಶೃಂಗಸಭೆ 2025ರಲ್ಲಿ ಭಾಗವಹಿಸಿದ್ದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ತಳಮಟ್ಟದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮತ್ತು ಮಹತ್ವದ ಹ್ಯಾಕಥಾನ್ ಸ್ಪರ್ಧೆಯನ್ನು ಆಯೋಜಿಸುವ ನವೀನ ವಿಧಾನಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅಭಿನಂದಿಸಿದರು. ರಾಷ್ಟ್ರದ ಯುವಕರು ರಾಷ್ಟ್ರೀಯ ಸಂವಾದದಲ್ಲಿ ತೊಡಗಿಸಿಕೊಂಡಾಗ, ಅದು ಆಲೋಚನೆಗಳಿಗೆ ಹೊಸತನವನ್ನು ತರುತ್ತದೆ ಮತ್ತು ಅವರ ಶಕ್ತಿಯಿಂದ ಇಡೀ ಪರಿಸರವನ್ನು ತುಂಬುತ್ತದೆ ಎಂದು ಅವರು ಹೇಳಿದರು. ಈ ಶಕ್ತಿಯನ್ನು ಶೃಂಗಸಭೆಯಲ್ಲಿ ಅನುಭವಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಯುವಕರ ಪಾಲ್ಗೊಳ್ಳುವಿಕೆಯು ಎಲ್ಲಾ ಅಡೆತಡೆಗಳನ್ನು ಮುರಿಯಲು ಮತ್ತು ಗಡಿಗಳನ್ನು ಮೀರಿ ಹೋಗಲು ಸಹಾಯ ಮಾಡುತ್ತದೆ, ಪ್ರತಿ ಗುರಿಯನ್ನು ಸಾಧಿಸಬಹುದು ಮತ್ತು ಪ್ರತಿ ಗಮ್ಯಸ್ಥಾನವನ್ನು ತಲುಪಬಹುದು ಎಂದು ಅವರು ಹೇಳಿದರು. ಈ ಶೃಂಗಸಭೆಗಾಗಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದ್ದಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅವರು ಶ್ಲಾಘಿಸಿದರು ಮತ್ತು ಅದರ ಯಶಸ್ಸಿಗೆ ಶುಭ ಹಾರೈಸಿದರು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ಭಾರತದ ರಾಜಕೀಯಕ್ಕೆ ಕರೆತರುವ ತಮ್ಮ ಕಲ್ಪನೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.