ಪಾಡ್‌ಕ್ಯಾಸ್ಟ್ ನಲ್ಲಿ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪ್ರಧಾನಮಂತ್ರಿಯವರ ಮಾತುಕತೆಯ ಕನ್ನಡ ಅನುವಾದ
March 16th, 11:47 pm
ಪ್ರಧಾನಮಂತ್ರಿ ನರೇಂದ್ರ ಮೋದಿ: ನನ್ನ ಶಕ್ತಿ ಇರುವುದು ಮೋದಿಯಾಗಿರುವುದರಲ್ಲಿ ಅಲ್ಲ; ಅದು 140 ಕೋಟಿ ಭಾರತೀಯರಿಂದ ಬಂದಿದೆ, ಸಾವಿರಾರು ವರ್ಷಗಳ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿಂದ ಬಂದಿದೆ. ಅದೇ ನನ್ನ ನಿಜವಾದ ಶಕ್ತಿ. ನಾನು ಎಲ್ಲಿಗೆ ಹೋದರೂ, ಮೋದಿಯಾಗಿ ಹೋಗುವುದಿಲ್ಲ - ವೇದಗಳಿಂದ ವಿವೇಕಾನಂದರವರೆಗೆ ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಹಳೆಯ ಶ್ರೇಷ್ಠ ಸಂಪ್ರದಾಯಗಳನ್ನು ನನ್ನೊಂದಿಗೆ ಕೊಂಡೊಯ್ಯತೇನೆ. ನಾನು 140 ಕೋಟಿ ಜನರನ್ನು, ಅವರ ಕನಸುಗಳನ್ನು ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ಅದಕ್ಕಾಗಿಯೇ, ನಾನು ಯಾವುದೇ ವಿಶ್ವ ನಾಯಕರೊಂದಿಗೆ ಕೈಕುಲುಕಿದಾಗ, ಅದು ಕೇವಲ ಮೋದಿಯವರ ಕೈ ಆಗಿರುವುದಿಲ್ಲ - ಅದು 140 ಕೋಟಿ ಭಾರತೀಯರ ಸಾಮೂಹಿಕ ಕೈ ಆಗಿರುತ್ತದೆ. ನನ್ನ ಶಕ್ತಿ ಮೋದಿಯದ್ದಲ್ಲ; ಅದು ಭಾರತದ ಶಕ್ತಿ. ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜಗತ್ತು ಕೇಳುತ್ತದೆ, ಏಕೆಂದರೆ ಇದು ಬುದ್ಧನ ನಾಡು, ಮಹಾತ್ಮ ಗಾಂಧಿಯವರ ನಾಡು. ನಾವು ಸಂಘರ್ಷದ ಪ್ರತಿಪಾದಕರಲ್ಲ; ನಾವು ಸಾಮರಸ್ಯವನ್ನು ಪ್ರತಿಪಾದಿಸುತ್ತೇವೆ. ನಾವು ಪ್ರಕೃತಿಯೊಂದಿಗೆ ಸಂಘರ್ಷ ಅಥವಾ ರಾಷ್ಟ್ರಗಳ ನಡುವಿನ ಕಲಹವನ್ನು ಬಯಸುವುದಿಲ್ಲ - ನಾವು ಸಹಕಾರದಲ್ಲಿ ನಂಬಿಕೆ ಇಡುವ ಜನರು ಮತ್ತು ನಾವು ಶಾಂತಿಯನ್ನು ಉತ್ತೇಜಿಸಲು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾದರೆ, ನಾವು ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ನನ್ನ ಜೀವನವು ಅತ್ಯಂತ ಬಡತನದಿಂದ ಬಂದಿದೆ, ಆದರೂ ನಾವು ಅದರ ಹೊರೆಯನ್ನು ಎಂದಿಗೂ ಅನುಭವಿಸಲಿಲ್ಲ. ಜೀವನದುದ್ದಕ್ಕೂ ಬೂಟುಗಳನ್ನು ಧರಿಸಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅವುಗಳಿಲ್ಲದೆ ಹೋದರೆ ಅವನು ಕಷ್ಟಪಡಬೇಕಾಗಬಹುದು. ಆದರೆ ಎಂದಿಗೂ ಬೂಟುಗಳನ್ನು ಧರಿಸದವರಿಗೆ, ಅಭಾವದ ಭಾವನೆಯೇ ಇರುವುದಿಲ್ಲ - ನಾವು ನಮ್ಮ ಜೀವನವನ್ನು ಅದು ಇದ್ದಂತೆಯೇ ಸರಳವಾಗಿ ಬದುಕಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು
March 16th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಇಂದು ವಿವಿಧ ವಿಷಯಗಳ ಬಗ್ಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು. ಪ್ರಾಮಾಣಿಕವಾದ, ಮನದಾಳದ ಮಾತುಕತೆಯ ವೇಳೆ ಪ್ರಧಾನಿ ಅವರನ್ನು ನೀವು ಏಕೆ ಉಪವಾಸ ಮಾಡುತ್ತೀರಿ ಮತ್ತು ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದಾಗ, ಪ್ರಧಾನಿಯವರು ತಮ್ಮ ಮೇಲಿನ ಗೌರವದ ಸಂಕೇತವಾಗಿ ಉಪವಾಸ ಮಾಡಿದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಧರ್ಮವು ಕೇವಲ ಆಚರಣೆಗಳ ಕುರಿತಾದದ್ದಲ್ಲ. ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಈ ಕುರಿತು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಉಲ್ಲೇಖಿಸಿದರು. ಉಪವಾಸವು ಶಿಸ್ತನ್ನು ಬೆಳೆಸಲು ಹಾಗೂ ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸಲು ಒಂದು ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವು ಇಂದ್ರಿಯಗಳ ಪ್ರಜ್ಞೆಯನ್ನು ಹೆಚ್ಚಿಸುತ್ತದೆ, ಅವುಗಳನ್ನು ಹೆಚ್ಚು ಸೂಕ್ಷ್ಮ ಮತ್ತು ಜಾಗೃತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಪವಾಸದ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಸುವಾಸನೆ ಮತ್ತು ವಿವರಗಳನ್ನು ಸಹ ಹೆಚ್ಚು ಸ್ಪಷ್ಟವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು. ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ರೀತಿಯಲ್ಲಿ (ಔಟ್ ಆಫ್ ದಿ ಬಾಕ್ಸ್) ಆಲೋಚನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಇದು ಪೂರ್ವ ಸಿದ್ಧತೆ ಮತ್ತು ನಿರ್ವಿಷೀಕರಣದ (ಡಿಟಾಕ್ಸಿಕೇಷನ್) ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಹಲವಾರು ದಿನಗಳ ಮುಂಚಿತವಾಗಿ ಆಯುರ್ವೇದ ಮತ್ತು ಯೋಗ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ದೇಹವನ್ನು ಉಪವಾಸಕ್ಕಾಗಿ ಸಜ್ಜುಗೊಳಿಸುವುದಾಗಿ ಅವರು ಒತ್ತಿ ಹೇಳಿದರು ಮತ್ತು ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಉಪವಾಸ ಪ್ರಾರಂಭವಾದ ನಂತರ, ಅವರು ಅದನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆಯಾಗಿ ನೋಡುವುದಾಗಿ, ಮತ್ತು ಇದು ಆಳವಾದ ಆತ್ಮಾವಲೋಕನ ಮತ್ತು ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ತಮ್ಮ ಶಾಲಾ ದಿನಗಳಲ್ಲಿ ಉಪವಾಸದ ಅಭ್ಯಾಸವು ವೈಯಕ್ತಿಕ ಅನುಭವದಿಂದ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿಪಡೆದ ಆಂದೋಲನದಿಂದ ಅದು ಶುರುವಾಯಿತು ಎಂದು ಪ್ರಧಾನಿ ಹಂಚಿಕೊಂಡರು. ಅವರು ತಮ್ಮ ಮೊದಲ ಉಪವಾಸದ ಸಮಯದಲ್ಲಿ ಶಕ್ತಿ ಮತ್ತು ಜಾಗೃತಿಯಲ್ಲಿ ಉಂಟಾದ ತೀವ್ರತೆಯ ಅನುಭವನ್ನು ವಿವರಿಸಿದರು. ಅದು ಉಪವಾಸದ ಪರಿವರ್ತಕ ಶಕ್ತಿಯನ್ನು ತಮಗೆ ಮನವರಿಕೆ ಮಾಡಿಕೊಟ್ಟಿತು ಎಂದರು. ಉಪವಾಸವು ತಮ್ಮನ್ನು ತಾಮಸ ಅಥವಾ ನಿಧಾನಗೊಳಿಸುವುದಿಲ್ಲ. ಬದಲಾಗಿ, ಇದು ಆಗಾಗ್ಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸದ ಸಮಯದಲ್ಲಿ, ಅವರ ಆಲೋಚನೆಗಳು ಹೆಚ್ಚು ಮುಕ್ತವಾಗಿ ಮತ್ತು ಸೃಜನಶೀಲವಾಗಿ ಹರಿಯುತ್ತವೆ, ಇದು ತಮ್ಮನ್ನು ವ್ಯಕ್ತಪಡಿಸಲು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 23rd, 06:11 pm
ಸಹೋದರ ಸಹೋದರಿಯರೆ, ನೀವೆಲ್ಲಾ ದಯಮಾಡಿ ಮಾತಂಗೇಶ್ವರನಿಗೆ ಜೈ, ಬಾಗೇಶ್ವರ ಧಾಮಕ್ಕೆ ಜೈ, ಜಟಾಶಂಕರ ಧಾಮಕ್ಕೆ ಜೈ ಎಂದು ಹೇಳಿ, ನಾನು ನನ್ನ ಎರಡೂ ಕೈಗಳನ್ನು ಎತ್ತಿ ಹಿಡಿದು ನಿಮ್ಮ ಪರವಾಗಿ ನಮಿಸುತ್ತಿದ್ದೇನೆ, ಜೋರಾಗಿ ರಾಮ್-ರಾಮ್ ಎಂದು ಹೇಳಿ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ಮಾಡಿದರು
February 23rd, 04:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ಗರ್ಹಾ ಗ್ರಾಮದಲ್ಲಿ ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಪಾವಧಿಯಲ್ಲಿಯೇ ಎರಡನೇ ಬಾರಿಗೆ ಬುಂದೇಲಖಂಡಕ್ಕೆ ಮತ್ತೆ ಬಂದಿರುವುದು ತಮ್ಮ ಅದೃಷ್ಟ ಎಂದು ಹೇಳಿದ ಶ್ರೀ ಮೋದಿ, ಆಧ್ಯಾತ್ಮಿಕ ಕೇಂದ್ರ ಬಾಗೇಶ್ವರ ಧಾಮ ಶೀಘ್ರದಲ್ಲೇ ಆರೋಗ್ಯ ಕೇಂದ್ರವಾಗಲಿದೆ ಎಂದು ಹೇಳಿದರು. ಬಾಗೇಶ್ವರ ಧಾಮ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವುದು ಮತ್ತು ಮೊದಲ ಹಂತದಲ್ಲಿ 100 ಹಾಸಿಗೆಗಳ ಸೌಲಭ್ಯ ಸಿದ್ಧವಾಗಲಿದೆ ಎಂದು ಅವರು ಹೇಳಿದರು. ಶ್ರೀ ಧೀರೇಂದ್ರ ಶಾಸ್ತ್ರಿ ಅವರ ಉದಾತ್ತ ಕಾರ್ಯಕ್ಕಾಗಿ ಅವರು ಅವರನ್ನು ಅಭಿನಂದಿಸಿದರು ಮತ್ತು ಬುಂದೇಲಖಂಡದ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
December 11th, 02:00 pm
ಕೇಂದ್ರ ಸಚಿವರಾದ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜಿ, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಎಲ್. ಮುರುಗನ್ ಜಿ, ಈ ಕಾರ್ಯಕ್ರಮದ ಕೇಂದ್ರ ವ್ಯಕ್ತಿ, ಸಾಹಿತ್ಯ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಜಿ, ಪ್ರಕಾಶಕ ವಿ. ಶ್ರೀನಿವಾಸನ್ ಜಿ, ಮತ್ತು ಉಪಸ್ಥಿತರಿರುವ ಎಲ್ಲ ಗೌರವಾನ್ವಿತ ಗಣ್ಯರೇ... ಮಹಿಳೆಯರೇ ಮತ್ತು ಮಹನೀಯರೇ,ತಮಿಳು ಶ್ರೇಷ್ಠ ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 11th, 01:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಂಬರ್ 7 ನಿವಾಸದಲ್ಲಿ ತಮಿಳು ಮಹಾನ್ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಮಗ್ರ ಕೃತಿಗಳ ಸಂಕಲನ ಬಿಡುಗಡೆ ಮಾಡಿದರು. ತಮಿಳಿನ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ ಅವರು, ಭಾರತದ ಸಂಸ್ಕೃತಿ ಮತ್ತು ಸಾಹಿತ್ಯ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮತ್ತು ತಮಿಳುನಾಡಿನ ಹೆಮ್ಮೆಗೆ ಇಂದು ಉತ್ತಮ ಅವಕಾಶವಾಗಿದೆ. ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಕೃತಿಗಳ ಪ್ರಕಟಣೆಯ ಮಹಾಪೂರವೇ ಇಂದು ನೆರವೇರಿತು ಎಂದರು.ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನದ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿದೆ
February 05th, 07:42 pm
ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನ ( ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ) ಸಂಸ್ಥೆಯ ಧಾರ್ಮಿಕ ಮುಖಂಡರ ನಿಯೋಗವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ಭೇಟಿ ಮಾಡಿದರು.ಆಧ್ಯಾತ್ಮಿಕ ನಾಯಕರ ಸಂದೇಶದಿಂದಾಗಿ ಭಾರತವು ಇತರ ದೇಶಗಳಲ್ಲಿ ಕಂಡುಬರುವಂತೆ ಲಸಿಕೆ ಹಿಂಜರಿಕೆಯನ್ನು ಎದುರಿಸಲಿಲ್ಲ: ಪ್ರಧಾನಿ
August 24th, 11:01 am
ಫರಿದಾಬಾದ್‌ನಲ್ಲಿ ಅತ್ಯಾಧುನಿಕ ಅಮೃತಾ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಆಸ್ಪತ್ರೆಯು ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣವಾಗಿದ್ದು, ನಿರ್ಗತಿಕ ರೋಗಿಗಳಿಗೆ ಕೈಗೆಟುಕುವ ಮತ್ತು ಕೈಗೆಟುಕುವ ಚಿಕಿತ್ಸೆಯ ಮಾಧ್ಯಮವಾಗಲಿದೆ ಎಂದು ಅವರು ಹೇಳಿದರು.ಫರಿದಾಬಾದ್ ನಲ್ಲಿ ಅತ್ಯಾಧುನಿಕ ಅಮೃತಾ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ
August 24th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫರಿದಾಬಾದ್‌ನಲ್ಲಿ ಅತ್ಯಾಧುನಿಕ ಅಮೃತಾ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿಯಾಣದ ರಾಜ್ಯಪಾಲ ಶ್ರೀ ಬಂಡಾರು ದತ್ತಾತ್ರೇಯ, ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್, ಉಪಮುಖ್ಯಮಂತ್ರಿ ಶ್ರೀ ದುಷ್ಯಂತ್ ಚೌತಾಲಾ, ಕೇಂದ್ರ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜಾರ್, ಶ್ರೀ ಮಾತಾ ಅಮೃತಾನಂದಮಯಿ ಸೇರಿ ಹಲವರು ಗಣ್ಯರು ಉಪಸ್ಥಿತರಿದ್ದರು.ಇಟಲಿಯ ಹಿಂದೂ ಒಕ್ಕೂಟದ ಪ್ರತಿನಿಧಿಗಳನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
October 30th, 12:04 am
ಇಟಲಿಯ ಸನಾತನ ಧರ್ಮ ಸಂಘ ಸೇರಿದಂತೆ ವಿವಿಧ ಹಿಂದೂ ಒಕ್ಕೂಟದ ಪ್ರತಿನಿಧಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು ಮತ್ತು ಸಂವಾದ ನಡೆಸಿದರು.2021ರ ಮಾರ್ಚ್ 11ರಂದು ಸ್ವಾಮಿ ಚಿದ್ಭಾವನಾನಂದಜೀ ಅವರ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ
March 10th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 11ರಂದು (ಗುರುವಾರ) ಬೆಳಗ್ಗೆ 10.25ಕ್ಕೆ ವರ್ಚುವಲ್ ಮಾಧ್ಯಮದ ಮೂಲಕ ಸ್ವಾಮಿ ಚಿದ್ಭಾವನಾನಂದಜೀ ಅವರ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ಸ್ವಾಮಿ ಚಿದ್ಭಾವನಾನಂದ ಸ್ವಾಮೀಜಿ ಅವರ ಭಗವದ್ಗೀತೆಯ 5 ಲಕ್ಷ ಪ್ರತಿಗಳು ಮಾರಾಟವಾದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.PM Modi addresses public meeting in Kozhikode, Kerala
April 12th, 06:30 pm
Prime Minister Narendra Modi addressed his last public meeting for the day in the southern state of Kerala’s Kozhikode.ಆಹಾರ ಸಂಸ್ಕರಣ ಕೈಗಾರಿಕಾ ಸಚಿವರ ಜೊತೆಯಲ್ಲಿ ಎಸ್.ಜಿ.ಪಿ.ಸಿ. ನಿಯೋಗದಿಂದ ಪ್ರಧಾನ ಮಂತ್ರಿಗಳ ಭೇಟಿ.
June 08th, 12:42 pm
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಶ್ರೀಮತಿ ಹರ್ಶಿಮ್ರಾತ್ ಕೌರ್ ಬಾದಲ್ ನೇತೃತ್ವದಲ್ಲಿ ನಿಯೋಗವು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ನಿಯೋಗದಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸದಸ್ಯರು ಇದ್ದರು.ಶಾಂಘ್ರಿಲಾದಲ್ಲಿ ನಡೆದ ಶೃಂಗಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಪ್ರಧಾನ ಭಾಷಣ
June 01st, 07:00 pm
ಸಿಂಗಪುರದ ಮಾನ್ಯ ಪ್ರಧಾನಮಂತ್ರಿಗಳಾದ ಲೀ ಸಿಯಾನ್ ಲೂಂಗ್ ಅವರೇ, ನಿಮ್ಮ ಸ್ನೇಹಕ್ಕೆ, ಭಾರತ-ಸಿಂಗಪುರ್ ಪಾಲದಾರಿಕೆಯ ಸಂಬಂಧವರ್ಧನೆಯ ನಿಮ್ಮ ನಾಯಕತ್ವಕ್ಕೆ ಮತ್ತು ಈ ವಲಯದಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ನಿಮಗೆ ಧನ್ಯವಾದಗಳ. ಆಸಿಯಾನ್ ಮತ್ತು ಭಾರತದ ಸ್ನೇಹದ ವಿಚಾರದಲ್ಲಿ ಒಂದು ವಿಶೇಷವಾದ ವರ್ಷವಾಗಿರುವ ಈಸಂದರ್ಭದಲ್ಲಿ ನಾನು ಸಿಂಗಪುರದಲ್ಲಿರುವುದಕ್ಕೆ ನನಗೆ ಖುಷಿಯಾಗುತ್ತಿದೆ.'ಧನಾತ್ಮಕ ಭಾರತ'ದಿಂದ' ಪ್ರಗತಿಶೀಲ ಭಾರತ'ದ ಕಡೆಗೆ ನಾವು ಪ್ರಯಾಣವನ್ನು ಆರಂಭಿಸೋಣ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನ ಮಂತ್ರಿ
December 31st, 11:30 am
2017 ರ 'ಮನ್ ಕಿ ಬಾತ್ ' ನ ಅಂತಿಮ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಪ್ರಗತಿಶೀಲ ಭಾರತ'ಕ್ಕೆ ತೆರಳಲು ಜನರಿಗೆ ಕರೆ ನೀಡಿದರು ಮತ್ತು ಹೊಸ ವರ್ಷವನ್ನು ಸಕಾರಾತ್ಮಕವಾಗಿ ಸ್ವಾಗತಿಸೋಣ ಎಂದರು . ಪ್ರಧಾನಿ 21 ನೇ ಶತಮಾನದಲ್ಲಿ ಹೊಸ ಯುಗದ ಮತದಾರರ ಕುರಿತು ಮಾತನಾಡಿದರು ಮತ್ತು ಮತದಾರರ ಶಕ್ತಿ ಪ್ರಜಾಪ್ರಭುತ್ವದಲ್ಲಿ ಅತೀ ದೊಡ್ಡದಾಗಿದೆ , ಅದು ಅನೇಕ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಸಾಧಿಸುತ್ತದೆ ಎಂದು ಹೇಳಿದರು.ಮ್ಯಾನ್ಮಾರ್ ದೇಶದ ಕೌನ್ಸಿಲರೊಂದಿಗೆ ನೇ ಪೆ ತೋನಲ್ಲಿ ಜಂಟಿ ಮಾಧ್ಯಮ ಹೇಳಿಕೆಯ ವೇಳೆ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಪಠ್ಯ
September 06th, 10:37 am
ನಾನು 2014ರಲ್ಲಿ ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದೆ, ಆದಾಗ್ಯೂ, ಇದು ಚಿನ್ನದ ನಾಡು ಮ್ಯಾನ್ಮಾರ್ ಗೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಆದರೆ ನನಗೆ ನೀಡಲಾದ ಆತಿಥ್ಯದಿಂದ ನನಗೆ ತವರು ಮನೆಯಲ್ಲೇ ಇರುವಂತೆ ಭಾಸವಾಗುತ್ತಿದೆ. ನಾನು ಇದಕ್ಕಾಗಿ ಮ್ಯಾನ್ಮಾರ್ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.ಸಂಘರ್ಷ ತಪ್ಪಿಸುವ ಮತ್ತು ಪರಿಸರಪ್ರಜ್ಞೆ ಕುರಿತ ಜಾಗತಿಕ ಉಪಕ್ರಮ "ಸಂವಾದ್"ನ ಎರಡನೇ ಆವೃತ್ತಿಗೆ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶ
August 05th, 10:52 am
ಸಂಘರ್ಷ ತಪ್ಪಿಸುವ ಮತ್ತು ಪರಿಸರ ಪ್ರಜ್ಞೆ ಕುರಿತ ಜಾಗತಿಕ ಉಪಕ್ರಮ “ಸಂವಾದ್”ನ ಎರಡನೇ ಆವೃತ್ತಿಯನ್ನು ಯಾಂಗೊನ್ ನಲ್ಲಿ ಇಂದು ಮತ್ತು ನಾಳೆ ಆಯೋಜಿಸಲಾಗಿದೆ. ವಿವಿಧ ಧರ್ಮ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ ಈ ವಿಶಿಷ್ಠ ಸಮಾವೇಶದ ಪ್ರಥಮ ಆವೃತ್ತಿಯ ಆತಿಥ್ಯವನ್ನು ನವದೆಹಲಿಯಲ್ಲಿ ವಿವೇಕಾನಂದ ಕೇಂದ್ರ 2015ರ ಸೆಪ್ಟೆಂಬರ್ ನಲ್ಲಿ ವಹಿಸಿತ್ತು, ಇದನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದ್ದರು.ಅಂತರರಾಷ್ಟ್ರೀಯ ವೀಸಾಕ್ ದಿನಾಚರಣೆಯಲ್ಲಿ ಪ್ರಧಾನಿಯವರ ಪಾಲ್ಗೊಳ್ಳುವಿಕೆಯನ್ನು ಶ್ರೀಲಂಕಾದ ಮುಖಂಡರನ್ನು ಮೋದಿ ಶ್ಲಾಘಿಸಿದ್ದಾರೆ
May 12th, 12:25 pm
ಇಂಟರ್ನ್ಯಾಷನಲ್ ವೆಸಕ್ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾಲ್ಗೊಳ್ಳುವಿಕೆಯನ್ನುಶ್ರೀಲಂಕಾದ ಮುಖಂಡರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು ಮತ್ತು ಶ್ರೀಲಂಕಾದಲ್ಲಿ ಆಚರಣೆಯಲ್ಲಿ ಸೇರಿದಕ್ಕೆ ಪ್ರಧಾನಿ ಮೋದಿ ಅವರ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರು ಭಗವಾನ್ ಬುದ್ಧನ ಶ್ರೀಮಂತ ಬೋಧನೆಗಳ ಬಗ್ಗೆ ಮಾತನಾಡಿದರು .ಪ್ರಧಾನಿ ಅಂತರರಾಷ್ಟ್ರೀಯ ವೆಸಕ್ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು
May 12th, 10:20 am
ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಅಂತಾರಾಷ್ಟ್ರೀಯ ವೆಸಕ್ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ, ಬುದ್ಧನ ಬೋಧನೆಗಳು ಆಡಳಿತ, ಸಂಸ್ಕೃತಿ ಮತ್ತು ತತ್ವಶಾಸ್ತ್ರದಲ್ಲಿ ಹೇಗೆ ಆಳವಾದವು ಎಂಬುದನ್ನು ತೋರಿಸಿದೆ ಎಂದು ಹೇಳಿದರು . ನಮ್ಮ ಪ್ರದೇಶವು ಜಗತ್ತಿಗೆ ಬುದ್ಧನ ಅಮೂಲ್ಯ ಕೊಡುಗೆ ಮತ್ತು ಅವರ ಬೋಧನೆಗಳಿಂದ ಆಶೀರ್ವದಿಸಿದೆ ಎಂದು ಪ್ರಧಾನಿ ಹೇಳಿದರು .ಪ್ರಧಾನಮಂತ್ರಿಯವರ ಮುಂಬರುವ ಶ್ರೀಲಂಕಾ ಪ್ರವಾಸ
May 11th, 11:06 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮೇ 11 ಮತ್ತು 12 ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ. ಅವರ ಫೇಸ್ಬುಕ್ ಖಾತೆಯ ಒಂದು ಪೋಸ್ಟ್ ನಲ್ಲಿ ಪ್ರಧಾನಿ ಹೀಗೆ ಹೇಳಿದರು: ನಾನು ಇಂದು ಎರಡು ದಿನಗಳ ಭೇಟಿಗಾಗಿ ಶ್ರೀಲಂಕಾಗೆ ಮೇ 11 ರಂದು ಆಗಮಿಸಲಿದ್ದೇನೆ , ಇದು ಎರಡು ವರ್ಷಗಳಲ್ಲಿ ನನ್ನ ಎರಡನೇ ದ್ವಿಪಕ್ಷೀಯ ಭೇಟಿಯಾಗಲಿದೆ, ಇದು ನಮ್ಮ ಬಲವಾದ ಸಂಬಂಧದ ಸಂಕೇತವಾಗಿದೆ.