ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 31st, 07:00 pm

ಮೊದಲಿಗೆ, ತಡವಾಗಿ ಬಂದಿದ್ದಕ್ಕಾಗಿ ನಾನುನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಇಂದು ಸರ್ದಾರ್ ಸಾಹೇಬ್ ಅವರ 150ನೇ ಜನ್ಮ ದಿನಾಚರಣೆ. ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಆ ಕಾರ್ಯಕ್ರಮದಿಂದಾಗಿ, ನಾನು ಇಲ್ಲಿಗೆ ತಲುಪಲು ವಿಳಂಬವಾಯಿತು. ಸಮಯಕ್ಕೆ ಸರಿಯಾಗಿ ಆಗಮಿಸಲು ಮತ್ತು ಅದಕ್ಕಾಗಿ ನಿಮ್ಮ ಕ್ಷಮೆ ಕೇಳಲು ಸಾಧ್ಯವಾಗದಿದ್ದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಆರಂಭದಲ್ಲಿ ನಾವು ಕೇಳಿದ ಮಂತ್ರಗಳ ಶಕ್ತಿ ಮತ್ತು ಚೈತನ್ಯವನ್ನು ಇನ್ನೂ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನಿಮ್ಮೊಂದಿಗೆ ಬರಲು ಅವಕಾಶ ಸಿಕ್ಕಾಗಲೆಲ್ಲಾ ಇದು ನನಗೆ ದೈವಿಕ ಮತ್ತು ಅಸಾಧಾರಣ ಅನುಭವವಾಗಿದೆ. ಇದು ಸ್ವಾಮಿ ದಯಾನಂದ ಜಿ ಅವರ ಆಶೀರ್ವಾದ, ಇದು ಅವರ ಆದರ್ಶಗಳಿಗೆ ನಮ್ಮ ಸಾಮೂಹಿಕ ಗೌರವ, ಮತ್ತು ನಿಮ್ಮೆಲ್ಲ ಚಿಂತಕರೊಂದಿಗಿನ ನನ್ನ ದಶಕಗಳ ವೈಯಕ್ತಿಕ ಬಾಂಧವ್ಯದ ಪರಿಣಾಮವಾಗಿ ನಾನು ನಿಮ್ಮೊಂದಿಗೆ ಇರಲು ಅವಕಾಶ ಪಡೆದಿದ್ದೇನೆ. ನಾನು ನಿಮ್ಮನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾನು ಒಂದು ಅನನ್ಯ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದ್ದೇನೆ. ಇದೇ ರೀತಿಯ 9 ಸಭಾಂಗಣಗಳನ್ನು ಸ್ಥಾಪಿಸಲಾಗಿದೆ ಎಂಬುದು ನನಗೆ ತಿಳಿದುಬಂದಿದೆ. ಅಲ್ಲಿ ನಮ್ಮ ಎಲ್ಲಾ ಆರ್ಯ ಸಮಾಜದ ಸದಸ್ಯರು ವೀಡಿಯೊ ಲಿಂಕ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ನಾನು ಅವರನ್ನು ನೋಡಲು ಸಾಧ್ಯವಾಗದಿದ್ದರೂ, ನಾನು ಇಲ್ಲಿಂದ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 31st, 09:00 am

ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಐತಿಹಾಸಿಕ ಸಂದರ್ಭ, ಏಕತಾನಗರದಲ್ಲಿ ಈ ಶುಭ ಬೆಳಗ್ಗೆ, ಈ ವಿಹಂಗಮ ನೋಟ, ಸರ್ದಾರ್ ಸಾಹೇಬರ ಪಾದಗಳ ಬಳಿ ನಮ್ಮ ಉಪಸ್ಥಿತಿಯ ಮೂಲಕ ಇಂದು ನಾವೆಲ್ಲರೂ ಒಂದು ಮಹಾನ್ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. ದೇಶಾದ್ಯಂತ ನಡೆಯುತ್ತಿರುವ ಏಕತಾ ಓಟ, ಕೋಟ್ಯಂತರ ಭಾರತೀಯರ ಉತ್ಸಾಹ, ನಾವು ಹೊಸ ಭಾರತದ ಸಂಕಲ್ಪವನ್ನು ನೇರವಾಗಿ ಅನುಭವಿಸುತ್ತಿದ್ದೇವೆ. ನಿನ್ನೆ ಸಂಜೆ ನಡೆದ ಅದ್ಭುತ ಪ್ರಸ್ತುತಿ ಸೇರಿದಂತೆ ಇತ್ತೀಚೆಗೆ ಇಲ್ಲಿ ನಡೆದ ಕಾರ್ಯಕ್ರಮಗಳು ಭೂತಕಾಲದ ಸಂಪ್ರದಾಯ, ವರ್ತಮಾನದ ಕಠಿಣ ಪರಿಶ್ರಮ, ಶೌರ್ಯ ಮತ್ತು ಭವಿಷ್ಯದ ಸಾಧನೆಗಳ ಒಂದು ನೋಟವನ್ನು ಹೊಂದಿದ್ದವು. ಸರ್ದಾರ್ ಸಾಹೇಬರ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ, ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಸರ್ದಾರ್ ಸಾಹೇಬರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿವಸ್(ರಾಷ್ಟ್ರೀಯ ಏಕತಾ ದಿನ)ದಂದು ಎಲ್ಲಾ 140 ಕೋಟಿ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಗುಜರಾತ್‌ ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು

October 31st, 08:44 am

ಗುಜರಾತ್ ನ ಕೆವಾಡಿಯಾದಲ್ಲಿ ಇಂದು ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಸರ್ದಾರ್ ಪಟೇಲ್ ಅವರ 150ನೇ ಜಯಂತಿಯು ಒಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಏಕತಾ ನಗರದ ಮುಂಜಾವು ದೈವಿಕ ಮತ್ತು ಸುಂದರ ಎಂದು ಬಣ್ಣಿಸಿದ ಶ್ರೀ ಮೋದಿ, ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನೆರೆದ ಜನಸಮೂಹವನ್ನು ಉಲ್ಲೇಖಿಸಿದರು ಮತ್ತು ದೇಶವು ಬಹಳ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ದೇಶಾದ್ಯಂತ ನಡೆದ ಏಕತಾ ಓಟ ಮತ್ತು ಲಕ್ಷಾಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಅವರು ಎತ್ತಿ ತೋರಿಸಿದರು, ನವ ಭಾರತಕ್ಕಾಗಿ ಸಂಕಲ್ಪವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಒತ್ತಿ ಹೇಳಿದರು. ಹಿಂದೆ ನಡೆದ ಕಾರ್ಯಕ್ರಮಗಳು ಮತ್ತು ನಿನ್ನೆ ಸಂಜೆ ನಡೆದ ಗಮನಾರ್ಹ ಪ್ರಸ್ತುತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಹಿಂದಿನ ಸಂಪ್ರದಾಯಗಳು, ಇಂದಿನ ಕಠಿಣ ಪರಿಶ್ರಮ ಮತ್ತು ಶೌರ್ಯ ಮತ್ತು ಭವಿಷ್ಯದ ಸಾಧನೆಗಳನ್ನು ಇವುಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರ 150 ನೇ ಜಯಂತಿಯ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ದೇಶದ 140 ಕೋಟಿ ನಾಗರಿಕರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.

ರಾಷ್ಟ್ರ ನಿರ್ಮಾಣಕ್ಕೆ ಆರ್‌ಎಸ್‌ಎಸ್‌ ನೀಡಿರುವ ಶ್ರೀಮಂತ ಕೊಡುಗೆಗಳನ್ನು ಎತ್ತಿ ತೋರಿಸುವ ಪರಮ ಪೂಜ್ಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಸ್ಪೂರ್ತಿದಾಯಕ ಭಾಷಣವನ್ನುಹಂಚಿಕೊಂಡ ಪ್ರಧಾನಮಂತ್ರಿ

October 02nd, 01:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ 100 ವರ್ಷಗಳ ಬದ್ಧತೆಯ ಸೇವೆ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಶ್ಲಾಘಿಸಿದ್ದಾರೆ. ಪರಮ ಪೂಜ್ಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನೀಡಿದ ಸ್ಪೂರ್ತಿದಾಯಕ ಭಾಷಣವನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಸಂಘ ವಹಿಸಿದ ಪ್ರಮುಖ ಪಾತ್ರ ಮತ್ತು ಭಾರತೀಯ ನಾಗರಿಕ ಮೌಲ್ಯಗಳನ್ನು ಪೋಷಿಸುವಲ್ಲಿ ಅದರ ಅಚಲ ಬದ್ಧತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 01st, 10:45 am

ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ(ಸರ್ಕಾರ್ಯವ್ಹ) ಶ್ರೀ ದತ್ತಾತ್ರೇಯ ಹೊಸಬಾಳೆ ಜಿ, ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಶೇಖಾವತ್ ಜಿ, ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲಾ ಸ್ವಯಂಸೇವಕರೆ, ಇತರ ಗಣ್ಯರೆ, ಮಹನೀಯರೆ ಮತ್ತು ಮಹಿಳೆಯರೆ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು

October 01st, 10:30 am

ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ ಎಸ್‌ ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ ಅವರು, ಎಲ್ಲಾ ನಾಗರಿಕರಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸಿದರು, ಇಂದು ಮಹಾ ನವಮಿ ಮತ್ತು ಸಿದ್ಧಿದಾತ್ರಿ ದೇವಿಯ ದಿನವಾಗಿದೆ ಎಂದು ಹೇಳಿದರು. ನಾಳಿನ ವಿಜಯದಶಮಿಯು ಭವ್ಯ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಅನ್ಯಾಯದ ವಿರುದ್ಧ ನ್ಯಾಯದ ವಿಜಯ, ಸುಳ್ಳಿನ ವಿರುದ್ದ ಸತ್ಯದ ವಿಜಯ ಮತ್ತು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ಇಂತಹ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ಇದು ಕಾಕತಾಳೀಯವಲ್ಲ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಪರಂಪರೆಯ ಪುನರುಜ್ಜೀವನ ಇದಾಗಿದ್ದು, ಇದರಲ್ಲಿ ರಾಷ್ಟ್ರೀಯ ಪ್ರಜ್ಞೆಯು ಪ್ರತಿ ಯುಗದ ಸವಾಲುಗಳನ್ನು ಎದುರಿಸಲು ಹೊಸ ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಅವರು ಹೇಳಿದರು. ಈ ಯುಗದಲ್ಲಿ, ಸಂಘವು ಆ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸಾಕಾರವಾಗಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 1 ರಂದು ಆರ್‌ಎಸ್‌ಎಸ್ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

September 30th, 10:30 am

ಅಕ್ಟೋಬರ್ 1, 2025ರಂದು ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ರಾಷ್ಟ್ರಕ್ಕೆ ಆರ್‌ಎಸ್‌ಎಸ್‌ನ ಕೊಡುಗೆಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸ್ವದೇಶಿ ಉತ್ಪನ್ನಗಳು, ವೋಕಲ್ ಫಾರ್ ಲೋಕಲ್ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರ ಹಬ್ಬದ ಕರೆ.

September 28th, 11:00 am

ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಪ್ರಧಾನಿ ಮೋದಿ ಭಗತ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಭಾರತೀಯ ಸಂಸ್ಕೃತಿ, ಮಹಿಳಾ ಸಬಲೀಕರಣ, ದೇಶಾದ್ಯಂತ ಆಚರಿಸಲಾಗುವ ವಿವಿಧ ಹಬ್ಬಗಳು, ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣ, ಸ್ವಚ್ಛತೆ ಮತ್ತು ಖಾದಿ ಮಾರಾಟದಲ್ಲಿನ ಏರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆಯೂ ಅವರು ಮಾತನಾಡಿದರು. ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮಾರ್ಗವು ಸ್ವದೇಶಿತ್ವವನ್ನು ಅಳವಡಿಸಿಕೊಳ್ಳುವುದರಲ್ಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಶ್ರೀ ಹರೀಶ್‌ ಭಾಯ್ ನಾಯಕ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

April 12th, 02:30 pm

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಹರೀಶ್‌ಭಾಯ್ ನಾಯಕ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದರು. ಸಾಮಾಜಿಕ ಸೇವಾ ಚಟುವಟಿಕೆಗಳು ಮತ್ತು ಸಂಘಟನಾ ಕಾರ್ಯಗಳಿಗೆ ಅವರ ಕೊಡುಗೆ ಸದಾ ಸ್ಮರಣೀಯ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

100ನೇ ವರ್ಷಕ್ಕೆ ಕಾಲಿಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಶುಭಾಶಯ ಕೋರಿದ ಪ್ರಧಾನಮಂತ್ರಿ

October 12th, 04:51 pm

ರಾಷ್ಟ್ರ ಸೇವೆಗೆ ಸಮರ್ಪಿತವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಶನಿವಾರ 100ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.