ಸೆಪ್ಟೆಂಬರ್ 13 ರಿಂದ 15 ರವರೆಗೆ ಪ್ರಧಾನಮಂತ್ರಿ ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ಭೇಟಿ

September 12th, 02:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಸೆಪ್ಟಂಬರ್ 13ರಿಂದ 15ರವರೆಗೆ ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.

NextGenGST ಸುಧಾರಣೆಗಳು ಡೈರಿ ರೈತರನ್ನು ಸಬಲೀಕರಣಗೊಳಿಸಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತವೆ: ಪ್ರಧಾನಮಂತ್ರಿ

September 04th, 08:43 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಡೈರಿ ರೈತರು ಮತ್ತು ಗ್ರಾಮೀಣ ಆರ್ಥಿಕತೆಯ ಸಬಲೀಕರಣಕ್ಕಾಗಿ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ, ಪೌಷ್ಠಿಕಾಂಶ ಸುರಕ್ಷತೆಯನ್ನು ಕಾಪಾಡಿಕೊಂಡು ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರ್ತಿಸಿದ್ದಾರೆ.

ವಾರಣಾಸಿಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ/ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಅವರ ಭಾಷಣ

April 11th, 11:00 am

ವೇದಿಕೆಯಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌; ಮುಖ್ಯಮಂತ್ರಿ, ಗೌರವಾನ್ವಿತ ಶ್ರೀ ಯೋಗಿ ಆದಿತ್ಯನಾಥ್‌; ಉಪ ಮುಖ್ಯಮಂತ್ರಿಗಳಾದ ಕೇಶವ್‌ ಪ್ರಸಾದ್‌ ಮೌರ್ಯ ಮತ್ತು ಬ್ರಜೇಶ್‌ ಪಾಠಕ್‌; ಹಾಜರಿದ್ದ ಗೌರವಾನ್ವಿತ ಮಂತ್ರಿಗಳು; ಇತರ ಸಾರ್ವಜನಿಕ ಪ್ರತಿನಿಧಿಗಳು; ಬನಾಸ್‌ ಡೈರಿಯ ಅಧ್ಯಕ್ಷ ಶಂಕರ್‌ ಭಾಯ್‌ ಚೌಧರಿ; ಮತ್ತು ತಮ್ಮ ಆಶೀರ್ವಾದವನ್ನು ಅರ್ಪಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿಇಲ್ಲಿ ನೆರೆದಿರುವ ನನ್ನ ಪ್ರೀತಿಯ ಕುಟುಂಬ ಸದಸ್ಯರೆಲ್ಲರೂ- ನಮ್ಮ ಕಾಶಿ ಕುಟುಂಬದ ಪ್ರೀತಿಯ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಸಂದರ್ಭದಲ್ಲಿ ನಾನು ವಿನಮ್ರತೆಯಿಂದ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ಈ ಅಗಾಧ ಪ್ರೀತಿಗೆ ನಾನು ನಿಜವಾಗಿಯೂ ಋುಣಿಯಾಗಿದ್ದೇನೆ. ಕಾಶಿ ನನ್ನದು, ನಾನು ಕಾಶಿಗೆ ಸೇರಿದವನು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿ 3,880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು

April 11th, 10:49 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ 3,880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಶಿಯೊಂದಿಗಿನ ತಮ್ಮ ಆಳವಾದ ಸಂಬಂಧವನ್ನು ಎತ್ತಿ ತೋರಿಸಿದರು, ತಮಗೆ ಕುಟುಂಬದವರು ಮತ್ತು ಈ ಪ್ರದೇಶದ ಜನರು ನೀಡಿದ ಆಶೀರ್ವಾದಕ್ಕಾಗಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ತಮಗೆ ನೀಡಿರುವ ಪ್ರೀತಿ ಮತ್ತು ಬೆಂಬಲವನ್ನು ಶ್ಲಾಘಿಸಿದರು. ಈ ಪ್ರೀತಿಗೆ ತಾವು ಋಣಿಯಾಗಿರುವುದಾಗಿ ಅವರು ಒತ್ತಿ ಹೇಳಿದರು, ಕಾಶಿ ತಮ್ಮದು ಮತ್ತು ತಾವು ಕಾಶಿಗೆ ಸೇರಿದವರು ಎಂದು ಹೇಳಿದರು. ನಾಳೆ ಹನುಮಾನ್ ಜಯಂತಿಯ ಶುಭ ಸಂದರ್ಭ ಎಂದು ಹೇಳಿದ ಶ್ರೀ ಮೋದಿ, ಕಾಶಿಯಲ್ಲಿ ಸಂಕಟ ಮೋಚನ ಮಹಾರಾಜರ ಸನ್ನಿಧಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ತಮಗೆ ದೊರೆತ ಗೌರವ ಎಂದರು. ಹನುಮಾನ್ ಜಯಂತಿಗೂ ಮುನ್ನ, ಕಾಶಿಯ ಜನರು ಅಭಿವೃದ್ಧಿಯ ಹಬ್ಬವನ್ನು ಆಚರಿಸಲು ಹೇಗೆ ಒಗ್ಗೂಡಿದ್ದಾರೆ ಎಂಬುದನ್ನು ಅವರು ಎತ್ತಿ ತೋರಿಸಿದರು.

ಬವಾಲಿಯಾಲಿ ಧಾಮ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

March 20th, 04:35 pm

ಮಹಂತ್ ಶ್ರೀ ರಾಮ್ ಬಾಪು ಜಿ, ಸಮಾಜದ ಗೌರವಾನ್ವಿತ ಸದಸ್ಯರೆ ಮತ್ತು ಇಲ್ಲಿ ನೆರೆದಿರುವ ಲಕ್ಷಾಂತರ ಶ್ರದ್ಧಾಭಕ್ತಿಯುಳ್ಳ ಸಹೋದರ ಸಹೋದರಿಯರೆ - ನಮಸ್ಕಾರ ಮತ್ತು ಜೈ ಠಾಕುರ್!

ಬವಾಲಿಯಾಲಿ ಧಾಮ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

March 20th, 04:30 pm

ಗುಜರಾತ್‌ನ ಭರ್ವಾಡ್ ಸಮುದಾಯದ ಬವಲಿಯಾಲಿ ಧಾಮ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಅವರು ಮಹಾಂತ ಶ್ರೀ ರಾಮ್ ಬಾಪು ಜಿ, ಸಮುದಾಯದ ಮುಖಂಡರು ಮತ್ತು ಸಾವಿರಾರು ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು. ಭರ್ವಾಡ್ ಸಮುದಾಯದ ಸಂಪ್ರದಾಯಗಳಿಗೆ ಮತ್ತು ಈ ಸಂಪ್ರದಾಯಗಳನ್ನು ಎತ್ತಿಹಿಡಿಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಪೂಜ್ಯ ಸಂತರು ಮತ್ತು ಮಹಾಂತರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ, ಐತಿಹಾಸಿಕ ಮಹಾಕುಂಭದ ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ಪ್ರಸ್ತಾಪಿಸಿದರು. ಈ ಪವಿತ್ರ ಕಾರ್ಯಕ್ರಮದ ಸಮಯದಲ್ಲಿ ಮಹಾಂತ ಶ್ರೀ ರಾಮ್ ಬಾಪು ಜಿ ಅವರಿಗೆ ಮಹಾಮಂಡಲೇಶ್ವರ ಎಂಬ ಬಿರುದು ನೀಡಿ ಗೌರವಿಸಿದ ಮಹತ್ವದ ಸಂದರ್ಭವನ್ನು ಪ್ರಸ್ತಾಪಿಸಿದರು. ಇದು ಒಂದು ಸ್ಮರಣೀಯ ಸಾಧನೆ ಮತ್ತು ಎಲ್ಲರಿಗೂ ಅಪಾರ ಸಂತೋಷದ ಕ್ಷಣವಾಗಿದೆ. ಸಮುದಾಯದ ಕುಟುಂಬಗಳಿಗೆ ಮಹಾಂತ ಶ್ರೀ ರಾಮ್ ಬಾಪು ಜಿ ಅವರ ಕೊಡುಗೆಗಳು ಮತ್ತು ಸಾಧನೆಗಳನ್ನು ಆಚರಿಸುವ ಸಂದರ್ಭದಲ್ಲಿ ಅವರು ಶುಭಾಶಯಗಳನ್ನು ತಿಳಿಸಿದರು.

2024-25 ಮತ್ತು 2025-26 ಸಾಲಿಗೆ ಹೆಚ್ಚಿನ ಹಂಚಿಕೆಯೊಂದಿಗೆ ಪರಿಷ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ ಅನುಷ್ಠಾನಕ್ಕೆ ಸಂಪುಟದ ಅನುಮೋದನೆ

March 19th, 04:18 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾನುವಾರು ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಪರಿಷ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ (RGM) ಗೆ ಇಂದು ಅನುಮೋದನೆ ನೀಡಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯ ಕೇಂದ್ರ ವಲಯದ ಅಂಶವಾಗಿ ಪರಿಷ್ಕೃತ RGM ಅನುಷ್ಠಾನಕ್ಕೆ 1000 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತಿದೆ, ಇದು 2021-22 ರಿಂದ 2025-26 ರವರೆಗಿನ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು 3400 ಕೋಟಿ ರೂ. ವೆಚ್ಚವಾಗಿದೆ.

ಅಮುಲ್ ಒಕ್ಕೂಟದ ಜಿಸಿಎಂಎಂಎಫ್ ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 22nd, 11:30 am

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜೀ; ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್; ನನ್ನ ಸಂಪುಟ ಸಹೋದ್ಯೋಗಿ ಪುರುಷೋತ್ತಮ್ ರೂಪಾಲಾ ಜೀ; ಸಂಸತ್ತಿನ ಗೌರವಾನ್ವಿತ ಸಹೋದ್ಯೋಗಿ ಸಿ.ಆರ್.ಪಾಟೀಲ್, ಅಮುಲ್ ಅಧ್ಯಕ್ಷ ಶ್ರೀ ಶಾಮಲ್ ಭಾಯ್ ಮತ್ತು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ನನ್ನ ಎಲ್ಲಾ ಸಹೋದರ ಸಹೋದರಿಯರೇ!

​​​​​​​ಗುಜರಾತ್ ನ ಅಹಮದಾಬಾದ್ ನಲ್ಲಿ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು

February 22nd, 10:44 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಸುವರ್ಣ ಮಹೋತ್ಸವ ಕಾಫಿ ಟೇಬಲ್ ಪುಸ್ತಕವನ್ನು ಬಿಡಿಗಡೆ ಮಾಡಿದರು. ಜಿಸಿಎಂಎಂಎಫ್ ಸಹಕಾರಿ ಸಂಸ್ಥೆಗಳ ಸ್ಥಿತಿಸ್ಥಾಪಕತ್ವ, ಉದ್ಯಮಶೀಲತಾ ಮನೋಭಾವ ಮತ್ತು ರೈತರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ, ಇದು ಅಮುಲ್ ಅನ್ನು ವಿಶ್ವದ ಪ್ರಬಲ ಡೈರಿ ಬ್ರ್ಯಾಂಡ್ ಗಳಲ್ಲಿ ಒಂದನ್ನಾಗಿ ಮಾಡಿದೆ.

​​​​​​​ರಾಜಸ್ಥಾನದ ಭಿಲ್ವಾರಾದಲ್ಲಿ ಭಗವಾನ್ ಶ್ರೀ ದೇವನಾರಾಯಣ್ ಜಿ ಅವರ 1111 ನೇ ಅವತಾರ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

January 28th, 03:50 pm

ಶ್ರೀ ಹೇಮರಾಜ್ ಜಿ ಗುರ್ಜರ್, ಶ್ರೀ ಸುರೇಶ್ ದಾಸ್ ಜಿ, ದೀಪಕ್ ಪಾಟೀಲ್ ಜಿ, ರಾಮ್ ಪ್ರಸಾದ್ ಧಬಾಯಿ ಜಿ, ಅರ್ಜುನ್ ಮೇಘವಾಲ್ ಜಿ, ಸುಭಾಷ್ ಬಹೇರಿಯಾ ಜಿ, ಮತ್ತು ದೇಶಾದ್ಯಂತದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ರಾಜಸ್ತಾನದ ಭಿಲ್ವಾರದಲ್ಲಿ ಭಗವಾನ್ ಶ್ರೀ ದೇವನಾರಾಯಣ್ ಅವರ 1111ನೇ 'ಅವತರಣ ಮಹೋತ್ಸವ'ದ ಅಂಗವಾಗಿ ನಡೆದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

January 28th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜಸ್ಥಾನದ ಭಿಲ್ವಾರಾದಲ್ಲಿ ಭಗವಾನ್ ಶ್ರೀ ದೇವನಾರಾಯಣ ಅವರ 1111ನೇ 'ಅವತರಣ ಮಹೋತ್ಸವ'ದ ಅಂಗವಾಗಿ ನಡೆದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಮಂತ್ರಿಯವರು ಮಂದಿರ ದರ್ಶನ ಮಾಡಿ, ಪರಿಕ್ರಮದ ಬಳಿಕ ಬೇವಿನ ಸಸಿಯನ್ನು ನೆಟ್ಟರು. ಯಜ್ಞ ಶಾಲೆಯಲ್ಲಿ ನಡೆಯುತ್ತಿದ್ದ ವಿಷ್ಣು ಮಹಾಯಜ್ಞದಲ್ಲಿ ಅವರು ಪೂರ್ಣಾಹುತಿಯನ್ನು ಅರ್ಪಿಸಿದರು. ಭಗವಾನ್ ಶ್ರೀ ದೇವನಾರಾಯಣ್ ಅವರನ್ನು ರಾಜಸ್ಥಾನದ ಜನರು ಪೂಜಿಸುತ್ತಾರೆ ಮತ್ತು ಅವರ ಅನುಯಾಯಿಗಳು ದೇಶದ ಉದ್ದಗಲಕ್ಕೂ ಇದ್ದಾರೆ. ಅವರು ವಿಶೇಷವಾಗಿ ಮಾಡಿದ ಸಾರ್ವಜನಿಕ ಸೇವೆ ಕಾರ್ಯಕ್ಕಾಗಿ ಗೌರವ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಡೇರಿ ಒಕ್ಕೂಟದ ವಿಶ್ವ ಡೈರಿ ಶೃಂಗಸಭೆ 2022 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

September 12th, 11:01 am

ಇಂದು ವಿಶ್ವದಾದ್ಯಂತದ ಡೇರಿ ಕ್ಷೇತ್ರದ ತಜ್ಞರು ಮತ್ತು ಆವಿಷ್ಕಾರಕರು ಭಾರತದಲ್ಲಿ ಸೇರಿರುವುದು ನನಗೆ ಸಂತೋಷ ತಂದಿದೆ. ಭಾರತದ ಪ್ರಾಣಿಗಳು, ಭಾರತದ ಪ್ರಜೆಗಳು ಮತ್ತು ಭಾರತ ಸರ್ಕಾರದ ಪರವಾಗಿ, ವಿಶ್ವ ಡೇರಿ ಶೃಂಗಸಭೆಗೆ ವಿವಿಧ ದೇಶಗಳಿಂದ ಬಂದಿರುವ ಎಲ್ಲ ಗಣ್ಯರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಹೈನುಗಾರಿಕೆಯ ಸಾಮರ್ಥ್ಯವು ಗ್ರಾಮೀಣ ಆರ್ಥಿಕತೆಗೆ ಇಂಧನವನ್ನು ನೀಡುವುದಲ್ಲದೆ, ವಿಶ್ವದಾದ್ಯಂತದ ಕೋಟ್ಯಂತರ ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳು, ತಂತ್ರಜ್ಞಾನ, ಪರಿಣತಿ ಮತ್ತು ಸಂಪ್ರದಾಯಗಳ ವಿಷಯದಲ್ಲಿ ಪರಸ್ಪರರ ಜ್ಞಾನ ಮತ್ತು ಕಲಿಕೆಯನ್ನು ಹೆಚ್ಚಿಸುವಲ್ಲಿ ಈ ಶೃಂಗಸಭೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ.

PM inaugurates International Dairy Federation World Dairy Summit 2022 in Greater Noida

September 12th, 11:00 am

PM Modi inaugurated International Dairy Federation World Dairy Summit. “The potential of the dairy sector not only gives impetus to the rural economy, but is also a major source of livelihood for crores of people across the world”, he said.

ಪಶುಸಂಗೋಪನೆ ಮತ್ತು ಹೈನುಗಾರಿಕೆ ಯೋಜನೆಗಳ ವಿವಿಧ ಘಟಕಗಳನ್ನು ಪರಿಷ್ಕರಿಸಲು ಮತ್ತು ಮರುಹೊಂದಿಸಲು ಮತ್ತು ವಿಶೇಷ ಜಾನುವಾರುಗಳಿಗಾಗಿ ರೂ .54,618 ಕೋಟಿ ಪ್ಯಾಕೇಜ್ ಹೂಡಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

July 14th, 07:40 pm

ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಜಾನುವಾರು ಕ್ಷೇತ್ರದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ 2021-22 ರಿಂದ ಆರಂಭಗೊಂಡು ಮುಂದಿನ 5 ವರ್ಷಗಳವರೆಗೆ ಭಾರತ ಸರ್ಕಾರದ ಯೋಜನೆಗಳ ವಿವಿಧ ಅಂಶಗಳನ್ನು ಪರಿಷ್ಕರಿಸುವ ಮತ್ತು ಮರುರೂಪಿಸುವ ಮೂಲಕ ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುವ ವಿಶೇಷ ಜಾನುವಾರು ವಲಯದ ಪ್ಯಾಕೇಜ್ ಅನುಷ್ಠಾನಕ್ಕೆ ಅನುಮೋದನೆ ನೀಡಿತು. ಮತ್ತು ಆ ಮೂಲಕ ಪಶುಸಂಗೋಪನೆಯನ್ನು ಈ ವಲಯದಲ್ಲಿ ತೊಡಗಿರುವ 10 ಕೋಟಿ ರೈತರಿಗೆ ಹೆಚ್ಚು ಸಂಭಾವನೆ ನೀಡುತ್ತದೆ.