ಜೈ ಪ್ರಕಾಶ್ ನಾರಾಯಣ ಪಕ್ಷಿಧಾಮವನ್ನು ಭಾರತದ 100ನೇ ರಾಮ್ಸರ್ ತಾಣವೆಂದು ಗುರುತಿಸಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ
June 05th, 11:58 am
ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಜೈ ಪ್ರಕಾಶ್ ನಾರಾಯಣ ಪಕ್ಷಿಧಾಮವನ್ನು (ಸುರ್ಹಾ ತಾಲ್) ದೇಶದ 100ನೇ ರಾಮ್ಸರ್ ತಾಣವೆಂದು ಗೊತ್ತುಪಡಿಸಿದ ನಂತರ ಭಾರತವು ರಾಮ್ಸರ್ ತಾಣಗಳ ಶತಮಾನವನ್ನು ಸಾಧಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಸ ವ್ಯಕ್ತಪಡಿಸಿದ್ದಾರೆ.ಪಾಟ್ನಾ ಪಕ್ಷಿಧಾಮ ಮತ್ತು ಛಾರಿ-ಧಂಡ್ ನಲ್ಲಿ ಹೊಸ ರಾಮ್ಸರ್ ತಾಣಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿ
January 31st, 10:52 am
ಇಟಾಹ್ (ಉತ್ತರ ಪ್ರದೇಶ)ದ ಪಟ್ನಾ ಪಕ್ಷಿಧಾಮ ಮತ್ತು ಗುಜರಾತ್ ಕಚ್ ನ ಛಾರಿ-ಧಂಡ್ ಅನ್ನು ರಾಮ್ಸಾರ್ ತಾಣಗಳಾಗಿ ಸೇರ್ಪಡೆ ಮಾಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಸ್ಥಳೀಯ ಜನಸಂಖ್ಯೆ ಮತ್ತು ಜೌಗು ಭೂಮಿ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು, ಈ ಮಾನ್ಯತೆಗಳು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದರು.ಭಾರತದ ಜೌಗು ಪ್ರದೇಶ ಸಂರಕ್ಷಣಾ ಅಭಿಯಾನದಲ್ಲಿ ಬಿಹಾರದ ಹೊಸ ರಾಮ್ಸರ್ ತಾಣಗಳನ್ನು ಮೈಲಿಗಲ್ಲು ಎಂದು ಶ್ಲಾಘಿಸಿದ ಪ್ರಧಾನಮಂತ್ರಿ
September 27th, 06:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಿಹಾರದಲ್ಲಿ ಎರಡು ಹೊಸ ರಾಮ್ಸರ್ ತಾಣಗಳಾದ ಬಕ್ಸಾರ್ ಜಿಲ್ಲೆಯ ಗೋಕುಲ್ ಜಲಾಶಯ (448 ಹೆಕ್ಟೇರ್) ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಯ ಉದಯಪುರ ಝೀಲ್ (319 ಹೆಕ್ಟೇರ್) ಸೇರ್ಪಡೆಯಾಗಿರುವುದು ಭಾರತದ ಪರಿಸರ ನಿರ್ವಹಣೆಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಶ್ಲಾಘಿಸಿದ್ದಾರೆ.