ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಭಾಗಲ್ಪುರ್ - ದುಮ್ಕಾ – ರಾಂಪುರ್ ಹಾತ್ ಏಕ ರೈಲು ಮಾರ್ಗದಲ್ಲಿ (177 ಕಿ.ಮೀ) ಒಟ್ಟು 3,169 ಕೋಟಿ ರೂ ವೆಚ್ಚದಲ್ಲಿ ಜೋಡಿ ಹಳಿ ಮಾರ್ಗಕ್ಕೆ ಸಂಪುಟ ಅನುಮೋದನೆ

September 10th, 03:05 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾಗಲ್ಪುರ್ - ದುಮ್ಕಾ - ರಾಂಪುರ್ ಹಾತ್ ಏಕ ರೈಲು ಮಾರ್ಗವನ್ನು (177 ಕಿ.ಮೀ) ಒಟ್ಟು (ಅಂದಾಜು) ರೂ. 3,169 ಕೋಟಿ ವೆಚ್ಚದಲ್ಲಿ ಜೋಡಿ ಮಾರ್ಗ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ.