Prime Minister expresses gratitude to Deputy Chairman of Rajya Sabha Shri. Harivansh Ji for his wishes

June 10th, 09:45 pm

Prime Minister Shri Narendra Modi today expressed heartfelt gratitude to Deputy Chairman of Rajya Sabha, Shri. Harivansh Ji for his wishes. The Prime Minister stated that this occasion gives the inspiration to work for the country with even greater dedication, loyalty, and commitment.

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ

April 17th, 11:10 am

ಸದನದ ಪರವಾಗಿ ಮತ್ತು ನನ್ನ ಪರವಾಗಿ, ನಾನು ಶ್ರೀ ಹರಿವಂಶ್ ಅವರಿಗೆ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಾಜ್ಯಸಭೆ ಉಪಸಭಾಪತಿಯಾಗಿ ಸತತ 3ನೇ ಬಾರಿಗೆ ಆಯ್ಕೆಯಾಗಿರುವುದು, ಈ ಸದನವು ನಿಮ್ಮ ಮೇಲೆ ಹೊಂದಿರುವ ಆಳವಾದ ನಂಬಿಕೆಗೆ ಸಾಕ್ಷಿಯಾಗಿದೆ. ಹಿಂದಿನ ಅವಧಿಯಲ್ಲಿ ನಿಮ್ಮ ಅನುಭವ ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಿಮ್ಮ ಪ್ರಯತ್ನಗಳಿಂದ ಪಡೆದ ಪ್ರಯೋಜನಕ್ಕೆ ಸದನವು ಪರಿಣಾಮಕಾರಿಯಾಗಿ ತನ್ನ ಅನುಮೋದನೆಯ ಮುದ್ರೆ ಹೊತ್ತಿದೆ. ಇದು ಅನುಭವಕ್ಕೆ ಸಂದ ಗೌರವ, ಸ್ವಾಭಾವಿಕ ಕಾರ್ಯ ಶೈಲಿಗೆ ಸಂದ ಗೌರವ ಮತ್ತು ಆ ಸ್ವಾಭಾವಿಕ ಕಾರ್ಯ ಶೈಲಿಯ ಸ್ವೀಕಾರವೂ ಆಗಿದೆ. ಹರಿವಂಶ್ ಜಿ ಅವರ ನಾಯಕತ್ವದಲ್ಲಿ ಸದನದ ಶಕ್ತಿ ಹೆಚ್ಚು ಪರಿಣಾಮಕಾರಿಯಾಗುವುದನ್ನು ನಾವೆಲ್ಲರೂ ನೋಡಿದ್ದೇವೆ. ಅವರು ಸದನದ ಕಲಾಪಗಳನ್ನು ಕೇವಲ ನಡೆಸುವುದಿಲ್ಲ ಎಂದು ನಾನು ಹೇಳಬಲ್ಲೆ; ಅವರು ತಮ್ಮ ಹಿಂದಿನ ಜೀವನದ ಅನುಭವಗಳನ್ನು ಸದನವನ್ನು ಉತ್ಕೃಷ್ಟಗೊಳಿಸಲು ಅತ್ಯಂತ ನಿಖರವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅವರ ಅನುಭವವು ಸದನದ ಸಂಪೂರ್ಣ ಕಲಾಪಗಳು, ನಡವಳಿಕೆ ಮತ್ತು ವಾತಾವರಣವನ್ನು ಹೆಚ್ಚು ಪ್ರಬುದ್ಧಗೊಳಿಸುತ್ತದೆ. ಉಪಸಭಾಪತಿಯ ಹೊಸ ಅವಧಿಯು ಅದೇ ಮನೋಭಾವ, ಸಮತೋಲನ ಮತ್ತು ಸಮರ್ಪಣೆಯೊಂದಿಗೆ ಮುಂದುವರಿಯುತ್ತದೆ. ನಮ್ಮ ಎಲ್ಲಾ ಪ್ರಯತ್ನಗಳ ಮೂಲಕ ಸದನದ ಘನತೆ ಹೊಸ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ.

ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

April 17th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಐತಿಹಾಸಿಕ ಸತತ ಮೂರನೇ ಅವಧಿಗೆ ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದ ಶ್ರೀ ಹರಿವಂಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಐತಿಹಾಸಿಕ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಇದು ಶ್ರೀ ಹರಿವಂಶ್ ಅವರ ಮೇಲಿನ ಸದನದ ಆಳವಾದ ನಂಬಿಕೆ ಮತ್ತು ಸಂಸ್ಥೆಗೆ ಅವರು ತಂದಿರುವ ಅಮೂಲ್ಯ ಅನುಭವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವುದು ಅವರ ಅನುಭವ, ಎಲ್ಲರನ್ನೂ ಒಳಗೊಳ್ಳುವ ವಿಧಾನ ಮತ್ತು ಅವರ ಘನತೆಯ ಕಾರ್ಯ ಶೈಲಿಗೆ ಸದನದಿಂದ ಅನುಮೋದನೆಯ ಮುದ್ರೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ನವದೆಹಲಿಯಲ್ಲಿ ಆಯೋಜಿತವಾಗಿದ್ದ ನಾರಿ ಶಕ್ತಿ ವಂದನ್ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

April 13th, 11:15 am

ವೇದಿಕೆಯಲ್ಲಿ ಉಪಸ್ಥಿತರಿರುವ ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಜಿ, ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಜಿ, ಶ್ರೀಮತಿ ಸಾವಿತ್ರಿ ಠಾಕೂರ್ ಜಿ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ವಿಜಯ ರಹತ್ಕರ್ ಜಿ. ನಿಮ್ಮಲ್ಲಿ ಅನೇಕ ಹಿರಿಯರು, ಸಂಸತ್ ಸದಸ್ಯರು, ವಿಧಾನಸಭೆ ಸದಸ್ಯರು ಮತ್ತು ನಮ್ಮ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಜಿ ಕೂಡ ಇದ್ದಾರೆ. ನನ್ನ ಎಲ್ಲಾ ಗೌರವಾನ್ವಿತ ಸಹೋದರಿಯರು ಇಲ್ಲಿದ್ದಾರೆ, ಈ ಸಮಯದಲ್ಲಿ ದೇಶದೆಲ್ಲೆಡೆ ಬೈಸಾಖಿ ಹಬ್ಬದ ಸಂತಸ ಮನೆಮಾಡಿದೆ. ನಾಳೆ, ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ. ಇಂದು ನಾನು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಧೈರ್ಯಶಾಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸುತ್ತೇನೆ.

‘ನಾರಿ ಶಕ್ತಿ ವಂದನ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

April 13th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ನಾರಿ ಶಕ್ತಿ ವಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬೈಸಾಖಿಯ ಶುಭ ಸಂದರ್ಭದಲ್ಲಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷಾಚರಣೆಗೆ ಮುನ್ನ ಮಾತನಾಡಿದ ಪ್ರಧಾನಮಂತ್ರಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. “ಭಾರತವು 21ನೇ ಶತಮಾನದ ಅತಿದೊಡ್ಡ ನಿರ್ಧಾರಗಳಲ್ಲಿ ಒಂದನ್ನು ತೆಗೆದುಕೊಳ್ಳಲಿದ್ದು, ಇದು ನಾರಿ ಶಕ್ತಿಗೆ ಅರ್ಪಿಸುತ್ತಿರುವ ನಿರ್ಧಾರ’’ ಎಂದು ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀ ಹರಿವಂಶ್ ಅವರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ

April 10th, 02:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಗೌರವಾನ್ವಿತ ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಂತರ ಮುಂಬರುವ ಸಂಸದೀಯ ಅವಧಿಗೆ ಶ್ರೀ ಹರಿವಂಶ್ ಅವರಿಗೆ ಅವರು ಇಂದು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ನಿತೀಶ್ ಕುಮಾರ್ ಅವರಿಗೆ​​​​​​​ ಶುಭ ಕೋರಿದ ಪ್ರಧಾನಮಂತ್ರಿ

April 10th, 02:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ನಿತೀಶ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಕುರಿತು ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

March 24th, 02:05 pm

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅದರಿಂದ ಉಂಟಾಗುವ ಸನ್ನಿವೇಶಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇಂದು ನಾನು ಈ ಗಂಭೀರ ಪರಿಸ್ಥಿತಿಗಳ ಕುರಿತು ಸರ್ಕಾರದ ನಿಲುವು ಹಂಚಿಕೊಳ್ಳಲು ಸಂಸತ್ತಿನ ಮೇಲ್ಮನೆಯ ಮುಂದೆ ಮತ್ತು ನನ್ನ ಸಹ ನಾಗರಿಕರ ಮುಂದೆ ನಿಂತಿದ್ದೇನೆ. ಈ ಯುದ್ಧವು ಈಗ 3 ವಾರಗಳಿಗೂ ಹೆಚ್ಚು ಕಾಲದಿಂದ ಮುಂದುವರೆದಿದೆ. ಇದು ವಿಶ್ವಾದ್ಯಂತ ತೀವ್ರ ಇಂಧನ ಬಿಕ್ಕಟ್ಟು ಸೃಷ್ಟಿಸಿದೆ. ಭಾರತಕ್ಕೂ ಈ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿವೆ. ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಗಳು ಅಸ್ತವ್ಯಸ್ತಗೊಂಡಿವೆ. ಸುಮಾರು 1 ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಜೀವನೋಪಾಯ ಖಚಿತಪಡಿಸಿಕೊಳ್ಳುವುದು ಭಾರತಕ್ಕೆ ಒಂದು ಪ್ರಮುಖ ಕಾಳಜಿಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅನೇಕ ಹಡಗುಗಳು ಸಿಲುಕಿಕೊಂಡಿವೆ, ಅದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಇದ್ದಾರೆ. ಇದು ಭಾರತಕ್ಕೂ ಗಂಭೀರ ಕಳವಳದ ವಿಷಯವಾಗಿದೆ. ಇಂತಹ ಭೀಕರ ಸಂದರ್ಭಗಳಲ್ಲಿ ಸಂಸತ್ತಿನ ಈ ಮೇಲ್ಮನೆಯಿಂದ ಶಾಂತಿ ಮತ್ತು ಸಂವಾದಕ್ಕಾಗಿ ಒಗ್ಗಟ್ಟಿನ ಧ್ವನಿ ಇಡೀ ಜಗತ್ತನ್ನು ತಲುಪುವುದು ಅತ್ಯಗತ್ಯವಾಗಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡಿದರು

March 24th, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸಿದ ಪರಿಸ್ಥಿತಿಯ ಕುರಿತು ಸರ್ಕಾರದ ನಿಲುವನ್ನು ಮಂಡಿಸಿದರು. ಮೂರು ವಾರಗಳಿಗೂ ಹೆಚ್ಚು ಕಾಲದಿಂದ ಭುಗಿಲೆದ್ದಿರುವ ಈ ಯುದ್ಧವು ಭಾರತದ ಮೇಲೆ ತೀವ್ರ ಆತಂಕಕಾರಿ ಪರಿಣಾಮಗಳನ್ನು ಬೀರುವ ಸೂಚನೆಗಳೊಂದಿಗೆ ತೀವ್ರ ಜಾಗತಿಕ ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ ಎಂಬುದನ್ನು ತಿಳಿಸಿದ ಪ್ರಧಾನಮಂತ್ರಿ ಮೋದಿ ಅವರು, ಈ ಸಂಘರ್ಷವು ಭಾರತದ ವ್ಯಾಪಾರ ಮಾರ್ಗಗಳನ್ನು ಅಡ್ಡಿಪಡಿಸುತ್ತಿದೆ ಮತ್ತು ಪೆಟ್ರೋಲ್, ಡೀಸೆಲ್, ಅನಿಲ ಹಾಗೂ ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಸುಮಾರು ಒಂದು ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದು, ಕೆಲಸ ಮಾಡುತ್ತಿರುವುದರಿಂದ, ಅವರ ಸುರಕ್ಷತೆ ಮತ್ತು ಜೀವನೋಪಾಯವು ತೀವ್ರ ಕಳವಳದ ವಿಷಯವಾಗಿ ಮೂಡಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು, ಜೊತೆಗೆ ಹಾರ್ಮುಜ್ ಜಲಸಂಧಿಯಲ್ಲಿ, ಹಡಗುಗಳಲ್ಲಿ ಸಿಲುಕಿಕೊಂಡಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ಸದಸ್ಯರ ಬಗ್ಗೆಯೂ ಗಮನ ಸೆಳೆದರು. ಇಂತಹ ಗಂಭೀರ ಸಂದರ್ಭದಲ್ಲಿ, ಭಾರತ ಸಂಸತ್ತಿನ ಈ ಘನ ಮೇಲ್ಮನೆಯಿಂದ ಇಡೀ ಜಗತ್ತಿಗೆ ಶಾಂತಿ ಮತ್ತು ಸಂವಾದದ ಏಕೀಕೃತ ಧ್ವನಿ ಹೊರಹೊಮ್ಮುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಅವರು ದೃಢಪಡಿಸಿದರು.

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅವತರಣಿಕೆ

March 18th, 11:30 am

ಈ ವಿಶೇಷ ಸಂದರ್ಭದಲ್ಲಿ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ತಾವು ನೀಡಿದ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.

ನಿವೃತ್ತಿ ಹೊಂದುತ್ತಿರುವ ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

March 18th, 11:20 am

ಇಂದು ನಿವೃತ್ತರಾಗುತ್ತಿರುವ ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ನಿವೃತ್ತರಾಗುತ್ತಿರುವ ಸಹೋದ್ಯೋಗಿಗಳನ್ನು ಗೌರವಿಸುವ ಅವಕಾಶಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಇಂತಹ ಸಂದರ್ಭಗಳು ಸದನವು ಪಕ್ಷಗಳನ್ನು ಮೀರಿ ಬೆಳೆಯಲು ಮತ್ತು ಸಾಮಾನ್ಯ ಭಾವನೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಸದಸ್ಯರು ಹಿಂತಿರುಗಿದರೂ ಅಥವಾ ವಿಶಾಲವಾದ ಸಾಮಾಜಿಕ ಸೇವೆಗೆ ಹೋದರೂ, ಅವರ ಸಂಗ್ರಹಿತ ಅನುಭವವು ರಾಷ್ಟ್ರಕ್ಕೆ ಒಂದು ಆಸ್ತಿಯಾಗಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ರಾಜಕೀಯದ ಕ್ರಿಯಾತ್ಮಕ ಕ್ಷೇತ್ರದಲ್ಲಿ, ಪ್ರಯಾಣವು ಎಂದಿಗೂ ನಿಜವಾಗಿಯೂ ಕೊನೆಗೊಳ್ಳುವುದಿಲ್ಲ ಏಕೆಂದರೆ ಭವಿಷ್ಯವು ಸದಾ ಅನುಭವಿ ನಾಯಕರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದು ಅವರು ಗಮನಿಸಿದರು. ರಾಜಕೀಯದಲ್ಲಿ, ಯಾವುದೇ ಪೂರ್ಣವಿರಾಮಗಳಿಲ್ಲ; ನಿಮ್ಮ ಅನುಭವ ಮತ್ತು ಕೊಡುಗೆ ಶಾಶ್ವತವಾಗಿ ರಾಷ್ಟ್ರದ ಜೀವನದ ಒಂದು ಭಾಗವಾಗಿರುತ್ತದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಅವರ ಉತ್ತರ

February 05th, 05:35 pm

ವಂದನಾ ನಿರ್ಣಯಕ್ಕೆ ಬೆಂಬಲವಾಗಿ ಈ ಸದನದ ಮುಂದೆ ನನ್ನ ಭಾವನೆಗಳನ್ನು ಮಂಡಿಸುವುದು ನನ್ನ ಸೌಭಾಗ್ಯವೇ ಸರಿ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತರ

February 05th, 05:00 pm

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಿಸಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ವಂದನಾ ನಿರ್ಣಯವನ್ನು ಬೆಂಬಲಿಸಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಹೇಳಿದರು. ಕಳೆದ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪ್ರಯಾಣದಲ್ಲಿ ತ್ವರಿತ ಪ್ರಗತಿಯಾಗಿದ್ದು, ಪ್ರತಿಯೊಂದು ವಲಯದಲ್ಲಿ ಮತ್ತು ಸಮಾಜದ ಎಲ್ಲಾ ವರ್ಗಗಳಲ್ಲಿ ಪರಿವರ್ತನೆ ಗೋಚರಿಸುತ್ತಿದೆ, ರಾಷ್ಟ್ರವು ಸರಿಯಾದ ದಿಕ್ಕಿನಲ್ಲಿ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದರು. ರಾಷ್ಟ್ರಪತಿಗಳು ಈ ವಿಷಯಗಳನ್ನು ಸೂಕ್ಷ್ಮತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಸ್ತುತಪಡಿಸಿದ್ದಾರೆ ಎಂಬುದನ್ನೂ ಶ್ರೀ ಮೋದಿ ಉಲ್ಲೇಖಿಸಿದರು.

2025ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

July 21st, 10:30 am

ಮುಂಗಾರು ಎಂದರೆ ಹೊಸತನ ಮತ್ತು ಸೃಷ್ಟಿಯ ಸಂಕೇತ. ಇಲ್ಲಿಯವರೆಗೆ ಬಂದಿರುವ ವರದಿಗಳ ಪ್ರಕಾರ, ಇಡೀ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ವಲಯಕ್ಕೆ ಲಾಭವಾಗುವ ವಾತಾವರಣ ನಿರ್ಮಾಣವಾಗಿದೆ. ಮಳೆಯು ನಮ್ಮ ರೈತರ ಆರ್ಥಿಕತೆಗೆ ಮಾತ್ರವಲ್ಲದೆ, ದೇಶದ ಆರ್ಥಿಕತೆಗೂ, ಗ್ರಾಮೀಣ ಆರ್ಥಿಕತೆಗೂ ಮತ್ತು ಪ್ರತಿಯೊಂದು ಮನೆಯ ಆರ್ಥಿಕತೆಗೂ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಪಡೆದಿರುವ ಮಾಹಿತಿಯ ಪ್ರಕಾರ, ಈ ವರ್ಷ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವು ಕಳೆದ ಹತ್ತು ವರ್ಷಗಳ ದಾಖಲೆಗಿಂತ ಸುಮಾರು ಮೂರು ಪಟ್ಟು ಹೆಚ್ಚಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

July 21st, 09:54 am

ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ಹೇಳಿಕೆಗಳಲ್ಲಿ, ಅವರು ಭಯಾನಕ ಪಹಲ್ಗಾಮ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿದರು ಮತ್ತು ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸುವಲ್ಲಿ ಭಾರತದ ರಾಜಕೀಯ ನಾಯಕತ್ವದ ಒಗ್ಗಟ್ಟಿನ ಧ್ವನಿಯನ್ನು ಶ್ಲಾಘಿಸಿದರು. ಡಿಜಿಟಲ್ ಇಂಡಿಯಾದ, ವಿಶೇಷವಾಗಿ ಯುಪಿಐನ ಜಾಗತಿಕ ಮನ್ನಣೆಯನ್ನು ಪ್ರಧಾನಿ ಗಮನಿಸಿದರು. ನಕ್ಸಲಿಸಂ ಮತ್ತು ಮಾವೋವಾದ ಕ್ಷೀಣಿಸುತ್ತಿದೆ ಎಂದು ಅವರು ದೃಢಪಡಿಸಿದರು ಮತ್ತು ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಸಹ ಶ್ಲಾಘಿಸಿದರು.

ಭಾರತದ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಗಣ್ಯ ವ್ಯಕ್ತಿಗಳಿಗೆ ಪ್ರಧಾನಮಂತ್ರಿ ಅಭಿನಂದನೆ

July 13th, 10:47 am

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಲ್ವರು ಗಣ್ಯ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

June 13th, 02:53 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇತ್ತೀಚೆಗೆ ಅಹಮದಾಬಾದ್ ವಿಮಾನ ದುರಂತದಲ್ಲಿ ನಿರ್ದಯವಾಗಿ ಪ್ರಾಣ ಕಳೆದುಕೊಂಡ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ರೂಪಾನಿ ಅವರ ವಿಶಿಷ್ಟ ವೃತ್ತಿಜೀವನವನ್ನು ಬಿಂಬಿಸಿದ ಶ್ರೀ ನರೇಂದ್ರ ಮೋದಿ ಅವರು, ರಾಜ್ ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಅವರ ಅಧಿಕಾರಾವಧಿ, ರಾಜ್ಯಸಭಾ ಸಂಸದರಾಗಿ, ಗುಜರಾತ್ ಬಿಜೆಪಿ ಅಧ್ಯಕ್ಷರಾಗಿ ಮತ್ತು ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ರಾಜ್ಯಸಭಾ ಸಂಸದರಾದ ತಿರು ಇಳಯರಾಜ ಅವರಿಂದ ಪ್ರಧಾನಮಂತ್ರಿಗಳ ಭೇಟಿ

March 18th, 04:54 pm

ರಾಜ್ಯಸಭಾ ಸಂಸದರಾದ ತಿರು ಇಳಯರಾಜ ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಉತ್ತರ

February 06th, 04:21 pm

ಸನ್ಮಾನ್ಯ ರಾಷ್ಟ್ರಪತಿ ಅವರು ಭಾರತದ ಸಾಧನೆಗಳು, ಭಾರತದಿಂದ ಇಡೀ ವಿಶ್ವದ ನಿರೀಕ್ಷೆಗಳು ಮತ್ತು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸಲು ಭಾರತದಲ್ಲಿ ಶ್ರೀಸಾಮಾನ್ಯನ ಆತ್ಮವಿಶ್ವಾಸ ಬೆಳೆಸುವ ಸಂಕಲ್ಪವನ್ನು ವಿವರಿಸಿದ್ದಾರೆ. ಅವರು ದೇಶದ ಭವಿಷ್ಯಕ್ಕೆ ಸ್ಪಷ್ಟ ನಿರ್ದೇಶನವನ್ನು ಸಹ ಒದಗಿಸಿದ್ದಾರೆ. ಸನ್ಮಾನ್ಯ ರಾಷ್ಟ್ರಪತಿ ಅವರ ಭಾಷಣವು ಸ್ಫೂರ್ತಿದಾಯಕ ಮತ್ತು ಪ್ರಭಾವಶಾಲಿಯಾಗಿತ್ತು, ಭವಿಷ್ಯದ ಕೆಲಸಗಳಿಗಾಗಿ ನಮಗೆಲ್ಲರಿಗೂ ಮಾರ್ಗದರ್ಶನವಾಗಿ ಕಾರ್ಯ ನಿರ್ವಹಿಸಿತು. ಸನ್ಮಾನ್ಯ ರಾಷ್ಟ್ರಪತಿಗಳ ಭಾಷಣಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಲು ನಾನು ಇಲ್ಲಿದ್ದೇನೆ!

ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತರ

February 06th, 04:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಷ್ಟ್ರಪತಿಯವರ ಭಾಷಣವು ಭಾರತದ ಸಾಧನೆಗಳು, ಭಾರತದಿಂದ ಜಾಗತಿಕ ನಿರೀಕ್ಷೆಗಳು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಶ್ರೀಸಾಮಾನ್ಯನ ನಂಬಿಕೆ ಒಳಗೊಂಡಿದೆ ಎಂದು ಹೇಳಿದರು. ರಾಷ್ಟ್ರಪತಿಯವರ ಭಾಷಣ ಸ್ಪೂರ್ತಿದಾಯಕವಾಗಿದೆ, ಪ್ರಭಾವಶಾಲಿಯಾಗಿದೆ ಮತ್ತು ಭವಿಷ್ಯದ ಕೆಲಸಗಳಿಗೆ ಮಾರ್ಗದರ್ಶನ ನೀಡಿದೆ ಎಂದು ಅವರು ಹೇಳಿದರು. ಅವರು ರಾಷ್ಟ್ರಪತಿಯವರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸಿದರು.