ಭೂತಾನ್ ನ ಮಹಾರಾಜ ಅವರ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 11th, 12:00 pm
ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡಲಾಗುವುದಿಲ್ಲ.ಭೂತಾನ್ ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 11th, 11:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್ ನ ಥಿಂಪು ನಗರದಲ್ಲಿರುವ ಚಾಂಗ್ಲಿಮೆಥಾಂಗ್ ಸಂಭ್ರಮಾಚರಣೆ ಮೈದಾನದಲ್ಲಿ ನಡೆದ, ಭೂತಾನ್ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭೂತಾನ್ನ ದೊರೆ, ಘನತೆವೆತ್ತ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರಿಗೆ ಹಾಗೂ ನಾಲ್ಕನೇ ದೊರೆ, ಘನತೆವೆತ್ತ ಜಿಗ್ಮೆ ಸಿಂಗ್ಯೆ ವಾಂ ಗ್ಚುಕ್ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು. ಅಲ್ಲದೆ, ರಾಜಮನೆತನದ ಗೌರವಾನ್ವಿತ ಸದಸ್ಯರು, ಭೂತಾನ್ ನ ಪ್ರಧಾನ ಮಂತ್ರಿಗಳಾದ ಘನತೆವೆತ್ತ ಶ್ರೀ ಶೆರಿಂಗ್ ತೊಬ್ಗೆ ಅವರು ಹಾಗೂ ಅಲ್ಲಿ ಉಪಸ್ಥಿತರಿದ್ದ ಇತರ ಗಣ್ಯಾತಿಗಣ್ಯರಿಗೆ ಪ್ರಧಾನಮಂತ್ರಿಗಳು ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು.ಬಿಹಾರದಲ್ಲಿ ಒಟ್ಟು 2,192 ಕೋಟಿ ರೂಪಾಯಿ ವೆಚ್ಚದಲ್ಲಿ ʻಬಖ್ತಿಯಾರಪುರ್ – ರಾಜಗೀರ್ – ತಿಲೈಯʼ ಏಕ ಹಳಿ ರೈಲು ಮಾರ್ಗವನ್ನು (104 ಕಿ.ಮೀ.) ಜೋಡಿ ಮಾರ್ಗಕ್ಕೆ ವಿಸ್ತರಿಸಲು ಸಂಪುಟದ ಅನುಮೋದನೆ
September 24th, 03:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯು, ಬಿಹಾರದಲ್ಲಿ ಒಟ್ಟು 2,192 ಕೋಟಿ ರೂಪಾಯಿ (ಅಂದಾಜು) ವೆಚ್ಚದಲ್ಲಿ ಬಖ್ತಿಯಾರಪುರ್ – ರಾಜಗೀರ್ – ತಿಲೈಯ ನಡುವಿನ ಏಕ ಹಳಿ ರೈಲು ಮಾರ್ಗವನ್ನು (104 ಕಿ.ಮೀ.) ಜೋಡಿ ಮಾರ್ಗಕ್ಕೆ ವಿಸ್ತರಿಸಲು ಅನುಮೋದನೆ ನೀಡಿದೆ.ಬಿಹಾರದ ಪುರ್ನಿಯಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 15th, 04:30 pm
ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಇತರೆ ಗಣ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಬಿಹಾರದ ಪೂರ್ಣಿಯಾದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ
September 15th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಪೂರ್ಣಿಯಾದಲ್ಲಿ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲರಿಗೂ ಗೌರವಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಪೂರ್ಣಿಯಾವು ಮಾ ಪುರನ್ ದೇವಿ, ಭಕ್ತ ಪ್ರಹ್ಲಾದ, ಮತ್ತು ಮಹರ್ಷಿ ಮೇಹಿ ಬಾಬಾ ಅವರ ಪುಣ್ಯಭೂಮಿಯಾಗಿದೆ ಎಂದು ಅವರು ಬಣ್ಣಿಸಿದರು. ಈ ಮಣ್ಣು ಫಣೀಶ್ವರ್ ನಾಥ್ ರೇಣು ಮತ್ತು ಸತೀನಾಥ್ ಭಾದುರಿ ಅವರಂತಹ ಸಾಹಿತ್ಯ ದಿಗ್ಗಜರಿಗೆ ಜನ್ಮ ನೀಡಿದೆ ಎಂದು ಶ್ರೀ ಮೋದಿಯವರು ಸ್ಮರಿಸಿದರು. ಇದಲ್ಲದೆ, ಈ ಪ್ರದೇಶವು ವಿನೋಬಾ ಭಾವೆ ಅವರಂತಹ ನಿಷ್ಠಾವಂತ ಕರ್ಮಯೋಗಿಗಳ ಕರ್ಮಭೂಮಿಯಾಗಿದೆ ಎಂದು ಹೇಳಿದ ಅವರು, ಈ ಪವಿತ್ರ ಭೂಮಿಯ ಬಗ್ಗೆ ತನಗೆ ಅಗಾಧವಾದ ಗೌರವವಿದೆ ಎಂದು ಹೇಳಿದರು.2025ರ ಏಷ್ಯಾ ಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ
September 08th, 07:20 am
ಬಿಹಾರದ ರಾಜಗೀರ್‌ನಲ್ಲಿ ನಡೆದ 2025ರ ಏಷ್ಯಾ ಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಸೋಲಿಸಿದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ರಾಷ್ಟ್ರೀಯ ಕ್ರೀಡಾ ದಿನದಂದು ಬಿಹಾರದ ರಾಜ್ ಗಿರ್ ನಲ್ಲಿ ಪುರುಷರ ಹಾಕಿ ಏಷ್ಯಾ ಕಪ್ 2025 ಆರಂಭ – ಪ್ರಧಾನಮಂತ್ರಿ ಅವರಿಂದ ಶುಭ ಹಾರೈಕೆ
August 28th, 09:33 pm
ಬಿಹಾರದ ಐತಿಹಾಸಿಕ ನಗರಿ ರಾಜ್ ಗಿರ್ ನಲ್ಲಿ ನಾಳೆ, ಆಗಸ್ಟ್ 29ರಂದು ಪುರುಷರ ಹಾಕಿ ಏಷ್ಯಾಕಪ್ 2025 ಪ್ರಾರಂಭವಾಗಲಿದ್ದು, ಏಷ್ಯಾದಾದ್ಯಂತ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ತಂಡಗಳು, ಆಟಗಾರರು, ಅಧಿಕಾರಿಗಳು ಮತ್ತು ಬೆಂಬಲಿಗರಿಗೆ ಕ್ರೀಡಾಕೂಟ ಆರಂಭವಾಗುವ ರಾಷ್ಟ್ರೀಯ ಕ್ರೀಡಾ ದಿನದ ಮುನ್ನಾ ದಿನವಾದ ಇಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕವಾಗಿ ಶುಭ ಕೋರಿದ್ದಾರೆ. ಬಿಹಾರವು ಇತ್ತೀಚಿನ ದಿನಗಳಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2025, ಏಷ್ಯಾ ರಗ್ಬಿ U20 ಸೆವೆನ್ಸ್ ಚಾಂಪಿಯನ್ಶಿಪ್ 2025, ISTAF ಸೆಪಕ್ ಟಕ್ರಾ ವಿಶ್ವಕಪ್ 2024 ಮತ್ತು ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ನಂತಹ ಪ್ರಮುಖ ಪಂದ್ಯಾವಳಿಗಳನ್ನು ಆಯೋಜಿಸುತ್ತಾ ರೋಮಾಂಚಕ ಕ್ರೀಡಾ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಶ್ರೀ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಿಹಾರದ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
June 19th, 10:31 am
ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಈ ರಾಜ್ಯಕ್ಕಾಗಿ ಪರಿಶ್ರಮ ಪಡುವ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ನಮ್ಮ ವಿದೇಶಾಂಗ ಸಚಿವ, ಶ್ರೀ ಎಸ್. ಜೈಶಂಕರ್ ಜಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಪಬಿತ್ರಾ ಜಿ, ವಿವಿಧ ದೇಶಗಳ ಗಣ್ಯರು ಮತ್ತು ರಾಯಭಾರಿಗಳೆ, ನಳಂದ ವಿಶ್ವವಿದ್ಯಾಲಯದ ಉಪ -ಕುಲಪತಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನನ್ನ ಎಲ್ಲಾ ಸ್ನೇಹಿತರೆ!ಬಿಹಾರದ ರಾಜ್ ಗಿರ್ ನಲ್ಲಿ ನಳಂದಾ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಮಂತ್ರಿ
June 19th, 10:30 am
ಬಿಹಾರದ ರಾಜ್ ಗಿರ್ ನ ನಳಂದಾ ವಿಶ್ವವಿದ್ಯಾಲಯದಲ್ಲಿ ಹೊಸ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ [ಇಎಎಸ್] ದೇಶಗಳೊಂದಿಗೆ ಈ ವಿಶ್ವವಿದ್ಯಾಲಯ ಸಹಯೋಗ ಹೊಂದಿದೆ. ಈ ಉದ್ಘಾಟನಾ ಸಮಾರಂಭದಲ್ಲಿ 17 ಪ್ರಮುಖ ದೇಶಗಳ ಮುಖ್ಯಸ್ಥರು ಒಳಗೊಂಡಂತೆ ಹಲವು ಪ್ರಮುಖ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗಿಡ ನೆಟ್ಟು ನೀರೆರದರು.