
ಸಮೃದ್ಧಿ ಮತ್ತು ಯುವ ಸಬಲೀಕರಣದೆಡೆಗಿನ ನಮ್ಮ ಪ್ರಯಾಣದಲ್ಲಿ ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ನ ಒಳನೋಟಗಳು ಬಹಳ ಮೌಲ್ಯಯುತವಾಗಿವೆ: ಪ್ರಧಾನಮಂತ್ರಿ
January 16th, 06:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ಡಿಜಿಟಲ್ ಕೌಶಲದಲ್ಲಿ ಭಾರತವು ಕೆನಡಾ ಮತ್ತು ಜರ್ಮನಿಯನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನೋಡಲು ಹೃದಯಸ್ಪರ್ಶಿಯಾಗಿದೆ! ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ನಮ್ಮ ಯುವಕರನ್ನು ಸ್ವಾವಲಂಬಿಗಳಾಗಿ, ಸಂಪತ್ತನ್ನು ಸೃಷ್ಟಿಸಲು ಅನುವು ಮಾಡಿಕೊಡುವ ಕೌಶಲ್ಯಗಳೊಂದಿಗೆ ಅವರನ್ನು ಬಲಪಡಿಸುವ ಕೆಲಸ ಮಾಡಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ. ಸಮೃದ್ಧಿ ಮತ್ತು ಯುವ ಸಬಲೀಕರಣದೆಡೆಗಿನ ಈ ನಮ್ಮ ಪ್ರಯಾಣದಲ್ಲಿ ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ಒಳನೋಟಗಳು ಮೌಲ್ಯಯುತವಾಗಿವೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿಯವರು ಹೇಳಿದ್ದಾರೆ.