ಮಲೇಷ್ಯಾದಲ್ಲಿ ವ್ಯಾಪಾರೋದ್ಯಮಿಗಳ ನಾಯಕರೊಂದಿಗೆ ಪ್ರಧಾನಮಂತ್ರಿ ಅವರ ಸಭೆ
February 08th, 02:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ನಾಲ್ವರು ಉದ್ಯಮದ ನಾಯಕರೊಂದಿಗೆ ಸಂವಾದ ನಡೆಸಿದರು. ಅವರು ಪೆಟ್ರೋನಾಸ್ನ ಅಧ್ಯಕ್ಷ ಮತ್ತು ಗ್ರೂಪ್ ಸಿಇಒ ತಾನ್ ಶ್ರೀ ಟೆಂಕು ಮುಹಮ್ಮದ್ ತೌಫಿಕ್; ಟಾನ್ ಶ್ರೀ ಡಾಟೊ ಸೆರಿ ವಿನ್ಸೆಂಟ್ ಟಾನ್ ಚೀ ಯಿಯೋನ್, ಬೆರ್ಜಯಾ ಕಾರ್ಪೊರೇಷನ್ ಬರ್ಹಾದ್ನ ಸಂಸ್ಥಾಪಕ; ಡಾಟೊ ಅಮಿರುಲ್ ಫೈಸಲ್ ವಾನ್ ಜಹೀರ್, ಖಜಾನಾ ನ್ಯಾಷನಲ್ ಬೆರ್ಹಾದ್ನ ವ್ಯವಸ್ಥಾಪಕ ನಿರ್ದೇಶಕ; ಮತ್ತು ಫಿಸನ್ ಎಲೆಕ್ಟ್ರಾನಿಕ್ಸ್ನ ಸಂಸ್ಥಾಪಕ ಡಾಟೊ ಪುವಾ ಖೈನ್ ಸೆಂಗ್ ಅವರನ್ನು ಭೇಟಿಯಾದರು.