ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶ

August 23rd, 11:00 am

ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ವರ್ಷದ ಬಾಹ್ಯಾಕಾಶ ದಿನದ ವಿಷಯ 'ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಜ್ಞಾನದಿಂದ ಅನಂತ ಸಾಧ್ಯತೆಗಳಿಗೆ'. ಇದು ಭೂತಕಾಲದ ವಿಶ್ವಾಸ ಮತ್ತು ಭವಿಷ್ಯದ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ. ಇಂದು ಇಷ್ಟು ಕಡಿಮೆ ಅವಧಿಯಲ್ಲಿ, ರಾಷ್ಟ್ರೀಯ ಬಾಹ್ಯಾಕಾಶ ದಿನವು ನಮ್ಮ ಯುವಕರಿಗೆ ಉತ್ಸಾಹ ಮತ್ತು ಸ್ಫೂರ್ತಿಯ ಸೆಲೆಯಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ನಿಜಕ್ಕೂ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತರುವ ವಿಷಯವಾಗಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಬಾಹ್ಯಾಕಾಶ ವಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ, ನಮ್ಮ ವಿಜ್ಞಾನಿಗಳಿಗೆ ಮತ್ತು ಎಲ್ಲಾ ಯುವಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇತ್ತೀಚೆಗೆ ಭಾರತವು 'ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಅಂತಾರಾಷ್ಟ್ರೀಯ ಒಲಿಂಪಿಯಾಡ್' ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ, ವಿಶ್ವಾದ್ಯಂತದ 60ಕ್ಕೂ ಹೆಚ್ಚು ದೇಶಗಳಿಂದ ಸುಮಾರು 300 ಯುವ ಪ್ರತಿನಿಧಿಗಳು ಭಾಗವಹಿಸಿದ್ದರು. ನಮ್ಮ ಭಾರತೀಯ ಯುವಕರು ಸಹ ಪದಕಗಳನ್ನು ಗೆದ್ದಿದ್ದಾರೆ. ಈ ಒಲಿಂಪಿಯಾಡ್ ಬಾಹ್ಯಾಕಾಶ ವಲಯದಲ್ಲಿ ಭಾರತದ ಉದಯೋನ್ಮುಖ ನಾಯಕತ್ವದ ಸಂಕೇತವಾಗಿದೆ.

2025ನೇ ಸಾಲಿನ ʻರಾಷ್ಟ್ರೀಯ ಬಾಹ್ಯಾಕಾಶ ದಿನʼದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

August 23rd, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ರಾಷ್ಟ್ರೀಯ ಬಾಹ್ಯಾಕಾಶ ದಿನ- 2025’ರ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿಯವರು, ಆರ್ಯಭಟದಿಂದ ಗಗನಯಾನದವರೆಗೆ ಎಂಬ ಈ ವರ್ಷದ ಧ್ಯೇಯವಾಕ್ಯವು ಭಾರತದ ಗತಕಾಲದ ವಿಶ್ವಾಸ ಮತ್ತು ಅದರ ಭವಿಷ್ಯದ ಸಂಕಲ್ಪ ಎರಡನ್ನೂ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅತ್ಯಲ್ಪ ಕಾಲದಲ್ಲಿ, ʻರಾಷ್ಟ್ರೀಯ ಬಾಹ್ಯಾಕಾಶ ದಿನʼವು ಭಾರತದ ಯುವಕರಿಗೆ ಉತ್ಸಾಹ ಮತ್ತು ಆಕರ್ಷಣೆಯ ಸಂದರ್ಭವಾಗಿ ಮಾರ್ಪಟ್ಟಿದೆ, ಇದು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ವಿಜ್ಞಾನಿಗಳು ಮತ್ತು ಯುವಕರು ಸೇರಿದಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳಿಗೆ ಅವರು ಶುಭಾಶಯಗಳನ್ನು ತಿಳಿಸಿದರು. ಭಾರತವು ಪ್ರಸ್ತುತ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕುರಿತ ಅಂತಾರಾಷ್ಟ್ರೀಯ ಒಲಿಂಪಿಯಾಡ್ಗೆ ಆತಿಥ್ಯ ವಹಿಸುತ್ತಿದ್ದು, ಅರವತ್ತಕ್ಕೂ ಹೆಚ್ಚು ದೇಶಗಳ ಸುಮಾರು 300 ಯುವ ಸ್ಪರ್ಧಿಗಳು ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಈ ಸ್ಪರ್ಧೆಯಲ್ಲಿ ಅನೇಕ ಭಾರತೀಯ ಸ್ಪರ್ಧಿಗಳು ಪದಕಗಳನ್ನು ಗೆದ್ದಿರುವುದಕ್ಕೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಈ ಒಲಿಂಪಿಯಾಡ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಉದಯೋನ್ಮುಖ ಜಾಗತಿಕ ನಾಯಕತ್ವದ ಸಂಕೇತವಾಗಿದೆ ಎಂದು ಅವರು ಹೇಳಿದರು. ಯುವಜನರಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲು, ʻಭಾರತೀಯ ಬಾಹ್ಯಾಕಾಶ ಹ್ಯಾಕಥಾನ್ʼ ಮತ್ತು ʻರೊಬೊಟಿಕ್ಸ್ ಚಾಲೆಂಜ್ʼ ನಂತಹ ಉಪಕ್ರಮಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ʻಇಸ್ರೋʼ) ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಸಂತೋಷ ವ್ಯಕ್ತಪಡಿಸಿದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಜೇತರನ್ನು ಅವರು ಅಭಿನಂದಿಸಿದರು.

ಪಿಎಸ್ ಎಲ್ ವಿ ಸಿ54 ರಾಕೆಟ್ ಯಶಸ್ವಿ ಉಡಾವಣೆ, ಇಸ್ರೊ ಮತ್ತು ಎನ್ ಎಸ್ ಐಎಲ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

November 26th, 06:07 pm

ಇಂದು ಬೆಳಗ್ಗೆ ಪಿಎಸ್ ಎಲ್ ವಿ ಸಿ54(PSLV C54) ರಾಕೆಟ್ ನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ ಹಾಗೂ ಎನ್ ಎಸ್ ಐಎಲ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಉಡಾವಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಂಪನಿಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.