ಅಮೆರಿಕ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಮಾತುಕತೆ
December 11th, 08:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷರಾದ ಘನತೆವೆತ್ತ ಶ್ರೀ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದರು.ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್‌ಗೆ ಪ್ರಧಾನಮಂತ್ರಿ ಭೇಟಿ
December 11th, 08:43 pm
ಗೌರವಾನ್ವಿತ ದೊರೆ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ಡಿಸೆಂಬರ್ 15ರಿಂದ 16ರ ವರೆಗೆ ಜೋರ್ಡಾನ್‌ನ ಹ್ಯಾಶೆಮೈಟ್ ಸಾಮ್ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿ ಅವರು ಗೌರವಾನ್ವಿತ ದೊರೆ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರನ್ನು ಭೇಟಿ ಮಾಡಿ ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಲಿದ್ದಾರೆ, ಪ್ರಾದೇಶಿಕ ವಿಷಯಗಳ ಕುರಿತು ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಗುರುತಿಸುವ ಈ ಭೇಟಿಯು, ಭಾರತ-ಜೋರ್ಡಾನ್ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಸಹಯೋಗದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಪ್ರಾದೇಶಿಕ ಶಾಂತಿ, ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆ ಉತ್ತೇಜಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಅವಕಾಶ ಒದಗಿಸುತ್ತದೆ.ಧನತ್ರಯೋದಶಿ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ಶುಭಾಶಯ
October 18th, 08:52 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನತ್ರಯೋದಶಿ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.ಮಣಿಪುರದ ಚುರಚಂದಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 13th, 12:45 pm
ಮಣಿಪುರವು ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ. ಈ ಬೆಟ್ಟ ಗುಡ್ಡಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಅದೇ ಸಮಯದಲ್ಲಿ, ಈ ಬೆಟ್ಟಗಳು ನಿಮ್ಮೆಲ್ಲರ ನಿರಂತರ ಕಠಿಣ ಪರಿಶ್ರಮದ ಸಂಕೇತವೂ ಹೌದು. ಮಣಿಪುರದ ಜನರ ಚೈತನ್ಯಕ್ಕೆ ನಾನು ನಮಸ್ಕರಿಸುತ್ತೇನೆ. ಈ ಭಾರಿ ಮಳೆಯಲ್ಲೂ ನೀವು ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ನಿಮ್ಮ ಈ ಪ್ರೀತಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಾರಿ ಮಳೆಯಿಂದಾಗಿ ನನ್ನ ಹೆಲಿಕಾಪ್ಟರ್ ಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ರಸ್ತೆಯ ಮೂಲಕ ಪ್ರಯಾಣಿಸಲು ನಿರ್ಧರಿಸಿದೆ. ಇಂದು ನಾನು ರಸ್ತೆಯಲ್ಲಿ ನೋಡಿದ ದೃಶ್ಯಗಳು, ನನ್ನ ಹೆಲಿಕಾಪ್ಟರ್ ಇಂದು ಹಾರದಂತೆ ದೇವರು ಒಳ್ಳೆಯದನ್ನು ಮಾಡಿದನೆಂದು ನನ್ನ ಹೃದಯ ಹೇಳುತ್ತಿದೆ. ನಾನು ರಸ್ತೆಯ ಮೂಲಕ ಬರುವಾಗ ದಾರಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಚಿಕ್ಕವರಿಂದ ದೊಡ್ಡವರು ಸಹ ಎಲ್ಲರೂ ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯವನ್ನು ನಾನು ನೋಡಿದೆ. ಈ ಕ್ಷಣವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಣಿಪುರದ ಜನರಿಗೆ ನಾನು ತಲೆ ಬಾಗುತ್ತೇನೆ.ಮಣಿಪುರದ ಚುರಚಂದಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು
September 13th, 12:30 pm
ಮಣಿಪುರದ ಚುರಚಂದಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಮಣಿಪುರ ಧೈರ್ಯ ಮತ್ತು ದೃಢಸಂಕಲ್ಪದ ಭೂಮಿಯಾಗಿದೆ ಮತ್ತು ಮಣಿಪುರದ ಗುಡ್ಡಗಾಡುಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿವೆ ಎಂದು ಒತ್ತಿ ಹೇಳಿದರು. ಈ ಗುಡ್ಡಗಾಡು ಜನರ ನಿರಂತರ ದಣಿವರಿಯದ ಪರಿಶ್ರಮದ ಸಂಕೇತವಾಗಿವೆ ಎಂದು ಅವರು ಹೇಳಿದರು. ಮಣಿಪುರದ ಜನರ ಉತ್ಸಾಹಕ್ಕೆ ನಮನ ಸಲ್ಲಿಸಿದ ಶ್ರೀ ಮೋದಿ, ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಅವರ ಪ್ರೀತಿಗೆ ಧನ್ಯವಾದ ತಿಳಿಸಿದರು.ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಸುಶೀಲಾ ಕರ್ಕಿ ಅವರಿಗೆ ಶುಭಕೋರಿದ ಪ್ರಧಾನಮಂತ್ರಿ
September 13th, 08:57 am
ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀಮತಿ ಸುಶೀಲಾ ಕರ್ಕಿಯವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಶುಭಾಶಯಗಳನ್ನು ಕೋರಿದ್ದಾರೆ. ನೇಪಾಳದ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ದೃಢವಾಗಿ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ
August 30th, 08:00 am
ನಾನು ಈ ಸಭಾಂಗಣದಲ್ಲಿ ಸೈತಾಮಾದ ವೇಗ, ಮಿಯಾಗಿಯ ಚೇತರಿಕೆ, ಫುಕುವೋಕಾದ ಚೈತನ್ಯ ಮತ್ತು ನಾರಾದ ಪರಂಪರೆಯನ್ನು ಅನುಭವಿಸಬಲ್ಲೆ. ನಿಮ್ಮೆಲ್ಲರಲ್ಲೂ ಕುಮಾಮೊಟೊದ ಉಷ್ಣತೆ, ನಾಗಾನೊದ ತಾಜಾತನ, ಶಿಜುವೋಕಾದ ಸೌಂದರ್ಯ ಮತ್ತು ನಾಗಸಾಕಿಯ ನಾಡಿಮಿಡಿತವಿದೆ. ನೀವೆಲ್ಲರೂ ಫ್ಯೂಜಿ ಪರ್ವತದ ಶಕ್ತಿ ಮತ್ತು ಸಕುರಾದ ಚೈತನ್ಯವನ್ನು ಸಾಕಾರಗೊಳಿಸುತ್ತೀರಿ. ಒಟ್ಟಾಗಿ, ನೀವು ಜಪಾನ್ ದೇಶವನ್ನು ಕಾಲಾತೀತವಾಗಿಸುತ್ತೀರಿ.ವಾಸ್ತವಾಂಶ ಪತ್ರ (ಫ್ಯಾಕ್ಟ್ ಶೀಟ್) : ಭಾರತ-ಜಪಾನ್ ಆರ್ಥಿಕ ಭದ್ರತಾ ಸಹಕಾರ
August 29th, 08:12 pm
ಎರಡು ಚೈತನ್ಯಶೀಲ ಅಥವಾ ರೋಮಾಂಚನಾಕಾರಿ ಪ್ರಜಾಪ್ರಭುತ್ವಗಳಾಗಿ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಗಳಾಗಿ, ಭಾರತ ಮತ್ತು ಜಪಾನ್ ನಮ್ಮ ರಾಜಕೀಯ ನಂಬಿಕೆ, ಆರ್ಥಿಕ ಚೈತನ್ಯ ಮತ್ತು ನೈಸರ್ಗಿಕ ಪೂರಕತೆಯ ಆಧಾರದ ಮೇಲೆ ನಿರ್ಣಾಯಕ ಮತ್ತು ಉದಯೋನ್ಮುಖ ವಲಯಗಳಲ್ಲಿ ತಮ್ಮ ಪಾಲುದಾರಿಕೆಯನ್ನು ವೇಗಗೊಳಿಸಲು ಬದ್ಧವಾಗಿವೆ.15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಜಂಟಿ ಹೇಳಿಕೆ: ನಮ್ಮ ಮುಂದಿನ ಪೀಳಿಗೆಯ ಭದ್ರತೆ ಮತ್ತು ಸಮೃದ್ಧಿಗಾಗಿ ಸಹಭಾಗಿತ್ವ
August 29th, 07:06 pm
ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಇಶಿಬಾ ಶಿಗೇರು ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 29-30, ರಂದು 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಅಧಿಕೃತ ಭೇಟಿ ನೀಡಿದರು. 2025 ರ ಆಗಸ್ಟ್ 29 ರಂದು ಸಂಜೆ ಪ್ರಧಾನಮಂತ್ರಿ ಮೋದಿ ಅವರನ್ನು ಪ್ರಧಾನಮಂತ್ರಿ ಇಶಿಬಾ ಅವರು ಪ್ರಧಾನಮಂತ್ರಿ ಕಚೇರಿಯಲ್ಲಿ (ಕಾಂಟೆ) ಬರಮಾಡಿಕೊಂಡರು, ಅಲ್ಲಿ ಅವರಿಗೆ ವಿಧ್ಯುಕ್ತ ಗೌರವ ರಕ್ಷೆಯನ್ನು ನೀಡಲಾಯಿತು. ಇಬ್ಬರು ಪ್ರಧಾನಮಂತ್ರಿಗಳು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಅವರು ನಾಗರಿಕ ಸಂಬಂಧಗಳು, ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿಗಳು, ಸಾಮಾನ್ಯ ಕಾರ್ಯತಂತ್ರದ ದೃಷ್ಟಿಕೋನ ಮತ್ತು ಪರಸ್ಪರ ಗೌರವದಲ್ಲಿ ಬೇರೂರಿರುವ ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹವನ್ನು ನೆನಪಿಸಿಕೊಂಡರು. ಕಳೆದ ದಶಕದಲ್ಲಿ ಭಾರತ-ಜಪಾನ್ ಪಾಲುದಾರಿಕೆಯು ಮಾಡಿದ ಮಹತ್ವದ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಶ್ಲಾಘಿಸಿದರು ಮತ್ತು ಮುಂಬರುವ ದಶಕಗಳಲ್ಲಿ ಪರಸ್ಪರ ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ಕಾರ್ಯತಂತ್ರದ ಮತ್ತು ಭವಿಷ್ಯತ್ತಿನ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ರಚನಾತ್ಮಕ ಚರ್ಚೆ ನಡೆಸಿದರು.ಸುಗಮ ಜೀವನ ಮತ್ತು ವ್ಯಾಪಾರವನ್ನು ವೇಗಗೊಳಿಸಲು ಮುಂದಿನ ಪೀಳಿಗೆಯ ಸುಧಾರಣೆಗಳ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
August 18th, 08:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ತ್ವರಿತ ಮತ್ತು ಸಮಗ್ರ ಸುಧಾರಣೆಗಳ ಗುರಿಯನ್ನು ಹೊಂದಿರುವ ಮುಂದಿನ ಪೀಳಿಗೆಯ ಸುಧಾರಣೆಗಳ ಮಾರ್ಗಸೂಚಿಯ ಕುರಿತು ಚರ್ಚಿಸಿದರು, ಇದು ಸುಗಮ ಜೀವನವನ್ನು ಹೆಚ್ಚಿಸುತ್ತದೆ, ಸುಗಮ ವ್ಯಾಪಾರವನ್ನು ಸುಧಾರಿಸುತ್ತದೆ ಮತ್ತು ಎಲ್ಲರನ್ನೂ ಒಳಗೊಂಡ ಸಮೃದ್ಧಿಯನ್ನು ಉತ್ತೇಜಿಸುತ್ತದೆ.79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು
August 15th, 07:26 pm
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯ ಕೋರಿದ ಪ್ರಧಾನಮಂತ್ರಿ
August 07th, 03:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯ ಕೋರಿದ್ದಾರೆ. ನಮ್ಮ ಜನರ ಸೃಜನಶೀಲತೆಯನ್ನು ಪ್ರದರ್ಶಿಸುವ ನಮ್ಮ ಶ್ರೀಮಂತ ನೇಯ್ಗೆ ಸಂಪ್ರದಾಯವನ್ನು ಆಚರಿಸುವ ದಿನ ಇಂದು. ನಮಗೆ ಭಾರತದ ಕೈಮಗ್ಗದ ವೈವಿಧ್ಯತೆ ಮತ್ತು ಜೀವನೋಪಾಯ ಹಾಗೂ ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರದ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀ ಮೋದಿ ಅವರು ಹೇಳಿದರು.ಭಾರತ-ಯುಕೆ (ಯುನೈಟೆಡ್ ಕಿಂಗ್‌ಡಮ್) ವಿಷನ್ 2035
July 24th, 07:12 pm
ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿಗಳು 2025 ರ ಜುಲೈ 24ರಂದು ಲಂಡನ್‌ನಲ್ಲಿ ನಡೆದ ಸಭೆಯಲ್ಲಿ ಹೊಸ ಭಾರತ-ಯುಕೆ ವಿಷನ್ 2035 ಅನ್ನು ಅನುಮೋದಿಸಿದರು. ಇದು ಪುನರುಜ್ಜೀವನಗೊಂಡ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಮುಕ್ತಗೊಳಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ಮಹತ್ವಾಕಾಂಕ್ಷೆಯ ಮತ್ತು ಭವಿಷ್ಯದ ಕೇಂದ್ರಿತ ಒಪ್ಪಂದವು ಪರಸ್ಪರ ಬೆಳವಣಿಗೆ, ಸಮೃದ್ಧಿಗಾಗಿ ಮತ್ತು ತ್ವರಿತ ಜಾಗತಿಕ ಬದಲಾವಣೆಯ ಸಮಯದಲ್ಲಿಸಮೃದ್ಧ, ಸುರಕ್ಷಿತ ಮತ್ತು ಸುಸ್ಥಿರ ಜಗತ್ತನ್ನು ರೂಪಿಸಲು ಒಟ್ಟಾಗಿ ಕೆಲಸ ಮಾಡುವ ಉಭಯ ರಾಷ್ಟ್ರಗಳ ಸಂಕಲ್ಪವನ್ನು ಒತ್ತಿಹೇಳುತ್ತದೆ.ಪರಾಗ್ವೆ ಅಧ್ಯಕ್ಷ ರೊಂದಿಗಿನ ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಆರಂಭಿಕ ಹೇಳಿಕೆಯ ಕನ್ನಡ ಅನುವಾದ
June 02nd, 03:00 pm
ನಾವು ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ಭಾರತಕ್ಕೆ ಆತ್ಮೀಯ ಸ್ವಾಗತವನ್ನು ನೀಡುತ್ತೇವೆ. ಪರಾಗ್ವೆ ದಕ್ಷಿಣ ಅಮೆರಿಕಾದಲ್ಲಿ ಪ್ರಮುಖ ಪಾಲುದಾರ. ನಮ್ಮ ಭೌಗೋಳಿಕತೆಗಳು ವಿಭಿನ್ನವಾಗಿರಬಹುದು, ಆದರೆ ನಾವು ಒಂದೇ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತೇವೆ.ಸೌದಿ ಅರೇಬಿಯಾ ಭೇಟಿಗೂ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
April 22nd, 08:30 am
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಮಂತ್ರಿ ಘನತೆವೆತ್ತ ಮೊಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಆಹ್ವಾನದ ಮೇರೆಗೆ, ಇಂದು ನಾನು ಸೌದಿ ರಾಜ್ಯಕ್ಕೆ ಎರಡು ದಿನಗಳ ಅಧಿಕೃತ ಭೇಟಿಗೆ ತೆರಳುತ್ತಿದ್ದೇನೆ.ಮಹಾಕುಂಭ ಮೇಳ ಮುಕ್ತಾಯದ ಬಳಿಕ ಗುಜರಾತ್‌ನ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
March 02nd, 08:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಯಾಗ್ ರಾಜ್‌ನಲ್ಲಿ ಮಹಾಕುಂಭ ಮುಕ್ತಾಯದ ನಂತರ ಗುಜರಾತ್‌ನ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದರು. ದೇವಾಲಯವು ನಮ್ಮ ಸಂಸ್ಕೃತಿಯ ಕಾಲಾತೀತ ಪರಂಪರೆ ಮತ್ತು ಧೈರ್ಯವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದರು.ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
January 09th, 10:15 am
ಒಡಿಶಾದ ಗವರ್ನರ್ ಹರಿ ಬಾಬು ಜೀ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹ ಸದಸ್ಯ ಎಸ್. ಜೈಶಂಕರ್ ಜೀ, ಜುವಾಲ್ ಒರಾಮ್ ಜೀ, ಧರ್ಮೇಂದ್ರ ಪ್ರಧಾನ ಜೀ, ಅಶ್ವಿನಿ ವೈಷ್ಣವ್ ಜೀ, ಶೋಭಾ ಕರಂದ್ಲಾಜೆ ಜೀ, ಕೀರ್ತಿ ವರ್ಧನ್ ಸಿಂಗ್ ಜೀ, ಪಬಿತ್ರ ಮಾರ್ಗರೇಟಾ ಜೀ, ಒಡಿಶಾದ ಉಪ ಮುಖ್ಯಮಂತ್ರಿ ಕನಕ್ ವರ್ಧನ್ ಸಿಂಗ್ ದೇವ್ ಜೀ, ಪ್ರವತಿ ಪರಿದಾ ಜೀ, ಇತರ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಜಗತ್ತಿನ ಮೂಲೆ ಮೂಲೆಯಿಂದ ಇಲ್ಲಿಗೆ ಬಂದಿರುವ ಭಾರತ ಮಾತೆಯ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ!ಒಡಿಶಾದಲ್ಲಿ 18ನೇ ಪ್ರವಾಸಿ ಭಾರತೀಯ ದಿನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 09th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಇಂದು 18ನೇ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಿದರು. ಜಗತ್ತಿನ ನಾನಾ ಮೂಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ಜಗತ್ತಿನಾದ್ಯಂತದ ವಿವಿಧ ಭಾರತೀಯ ಅನಿವಾಸಿ ಕಾರ್ಯಕ್ರಮಗಳಲ್ಲಿ ಉದ್ಘಾಟನಾ ಗೀತೆಯನ್ನು ನುಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಲಸಿಗರ ಭಾವನೆಗಳು ಮತ್ತು ಅನುಭವಗಳನ್ನು ಸೆರೆಹಿಡಿದ ಅದ್ಭುತ ಗಾಯನಕ್ಕಾಗಿ ಅವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ರಿಕಿ ಕೇಜ್ ಮತ್ತು ಅವರ ತಂಡವನ್ನು ಶ್ಲಾಘಿಸಿದರು.2025ನೇ ಹೊಸ ವರ್ಷಕ್ಕೆ ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ
January 01st, 10:42 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಎಲ್ಲಾ ನಾಗರಿಕರಿಗೂ 2025ನೇ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸಿ 5 ವರ್ಷಗಳನ್ನು ಪೂರೈಸಿದ ಪ್ರಧಾನಿ
August 05th, 03:27 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸುವ ಸಂಸತ್ತಿನ 5 ವರ್ಷಗಳ ಹಳೆಯ ನಿರ್ಧಾರವನ್ನು ನೆನಪಿಸಿಕೊಂಡರು, ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಗತಿ ಮತ್ತು ಸಮೃದ್ಧಿಯ ಹೊಸ ಯುಗದ ಆರಂಭಕ್ಕೆ ಕಾರಣವಾದ ಜಲಾನಯನ ಕ್ಷಣ ಎಂದು ಕರೆದರು. ಲಡಾಖ್