ಭಾರತದ ಉತ್ಪಾದನಾ ವಲಯದ ಮೇಲೆ ಇತ್ತೀಚಿನ ಜಿ.ಎಸ್‌.ಟಿ ಸುಧಾರಣೆಗಳ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ

September 04th, 08:49 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಉತ್ಪಾದನಾ ವಲಯದ ಮೇಲೆ ಇತ್ತೀಚಿನ ಜಿ.ಎಸ್‌.ಟಿ ಸುಧಾರಣೆಗಳ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ್ದಾರೆ. #NextGenGST ಉಪಕ್ರಮವು ಸರಳೀಕೃತ ತೆರಿಗೆ ಸ್ಲ್ಯಾಬ್‌ಗಳು, ಸುವ್ಯವಸ್ಥಿತ ಡಿಜಿಟಲ್ ಅನುಸರಣೆ ಮತ್ತು ವೆಚ್ಚ ದಕ್ಷತೆಯ ಬಗ್ಗೆ ವಿವರಿಸುತ್ತದೆ, ಇದು ದೇಶೀಯ ಉತ್ಪಾದನೆ ಹೆಚ್ಚಿಸಿ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ.