ಗುಜರಾತ್‌ನ ಸೂರತ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

June 05th, 04:30 pm

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸಿ.ಆರ್. ಪಾಟೀಲ್, ಉಪಮುಖ್ಯಮಂತ್ರಿ ಭಾಯಿ ಹರ್ಷ ಸಾಂಘ್ವಿ, ಗುಜರಾತ್ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜಿ, ಇಲ್ಲಿ ಉಪಸ್ಥಿತರಿರುವ ಇತರೆ ಸಚಿವರೆ, ಜನಪ್ರತಿನಿಧಿಗಳೆ ಮತ್ತು ಸೂರತ್‌ನ ನನ್ನ ಆತ್ಮೀಯ ಸಹೋದರ ಸಹೋದರಿಯರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಸೂರತ್ ನಲ್ಲಿ ₹18,800 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸಿದರು

June 05th, 04:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಸೂರತ್ ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಜರಾತ್ ನ ಜನತೆ ನೀಡುತ್ತಿರುವ ಅಚಲ ಬೆಂಬಲಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ನಾನು ಮೊದಲ ಬಾರಿಗೆ ಸೂರತ್ ಗೆ ಭೇಟಿ ನೀಡುತ್ತಿದ್ದೇನೆ. ಸೂರತ್ ನಿಂದ ನಾನು ಇಡೀ ಗುಜರಾತ್ ನ ಜನತೆಗೆ ನಮಸ್ಕರಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ, ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ

May 09th, 11:17 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನ ಮಂತ್ರಿ ಬೆಳಿಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್ಟ್ ಆಫ್ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಪ್ರಧಾನಮಂತ್ರಿ ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆಗೆ ಸುಮಾರು 9,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3:45 ರ ಸುಮಾರಿಗೆ ಪ್ರಧಾನಮಂತ್ರಿ ಹೈದರಾಬಾದ್‌ನಲ್ಲಿರುವ ಸಿಂಧು ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಹಡಗು ನಿರ್ಮಾಣ, ಸಾಗಣೆ ಮತ್ತು ಕಡಲ ಲಾಜಿಸ್ಟಿಕ್ಸ್‌ನಲ್ಲಿ ಪಾಲುದಾರಿಕೆಗಾಗಿ ಭಾರತ-ಆರ್‌ಒಕೆ ಸಮಗ್ರ ಚೌಕಟ್ಟು

April 20th, 10:51 pm

ಏಪ್ರಿಲ್ 20, 2026 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೊರಿಯಾ ಗಣರಾಜ್ಯದ (ROK) ಗೌರವಾನ್ವಿತ ಶ್ರೀ ಲೀ ಜೇ ಮ್ಯುಂಗ್ ಅವರ ನಡುವಿನ ಸಭೆಯಲ್ಲಿ, ಹಡಗು ನಿರ್ಮಾಣ, ಸಾಗಣೆ ಮತ್ತು ಕಡಲ ಲಾಜಿಸ್ಟಿಕ್ಸ್‌ನಲ್ಲಿ ಪಾಲುದಾರಿಕೆಗಾಗಿ ತಮ್ಮ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಪರಸ್ಪರ ಪ್ರಯೋಜನಕಾರಿ ಸಹಕಾರದ ಕುರಿತು ಎರಡೂ ಕಡೆಯವರು ಫಲಪ್ರದ ಮತ್ತು ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಕೊರಿಯಾ ಗಣರಾಜ್ಯದ ರಾಷ್ಟ್ರಾಧ್ಯಕ್ಷರ ಭಾರತ ಭೇಟಿ: ಫಲಿತಾಂಶಗಳ ಪಟ್ಟಿ

April 20th, 03:57 pm

ಭಾರತ-ಕೊರಿಯಾ ಗಣರಾಜ್ಯ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗಾಗಿ ಜಂಟಿ ಕಾರ್ಯತಂತ್ರದ ದೃಷ್ಟಿಕೋನ

ಮನ್ ಕಿ ಬಾತ್‌ನಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟನ್ನು ನಿವಾರಿಸಲು 140 ಕೋಟಿ ಭಾರತೀಯರ ಒಗ್ಗಟ್ಟಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ

March 29th, 11:30 am

ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದರು ಮತ್ತು ಬಿಕ್ಕಟ್ಟನ್ನು ನಿವಾರಿಸಲು ಒಗ್ಗಟ್ಟಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದರು. ನಾಗರಿಕರು ವದಂತಿಗಳಿಂದ ದಾರಿತಪ್ಪಿಸಬೇಡಿ ಮತ್ತು ಸರ್ಕಾರ ನೀಡುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕೆಂದು ಅವರು ಮನವಿ ಮಾಡಿದರು. ಜ್ಞಾನ ಭಾರತಂ ಸಮೀಕ್ಷೆ, ಕ್ರೀಡೆ ಮತ್ತು ಫಿಟ್‌ನೆಸ್, ನೀರಿನ ಸಂರಕ್ಷಣೆ, ಮೀನು ಸಾಕಣೆ ಮತ್ತು ಸೌರಶಕ್ತಿಯಂತಹ ಪ್ರಮುಖ ವಿಷಯಗಳ ಮೇಲೂ ಪ್ರಧಾನಿ ಮಾತನಾಡಿದರು.

ಟಿವಿ9 ಶೃಂಗಸಭೆ 2026 ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

March 23rd, 08:30 pm

ಇತ್ತೀಚಿನ ದಿನಗಳಲ್ಲಿ ಟಿವಿ9 ಭಾರತ ವರ್ಷವನ್ನು ಒಮ್ಮೆ ಅಥವಾ 2 ಬಾರಿ ನೋಡುವ ಅವಕಾಶ ನನಗೆ ಸಿಕ್ಕಿದೆ. ಸಾಮಾನ್ಯವಾಗಿ, ನಿಮ್ಮ ಗಮನವು ಯುದ್ಧಗಳು ಮತ್ತು ಕ್ಷಿಪಣಿಗಳ ಮೇಲೆ ಹೆಚ್ಚು ಇದೆ, ಇತ್ತೀಚಿನ ದಿನಗಳಲ್ಲಿ ನಿಮಗೆ ಈ ವಿಷಯಗಳೇ ಅತಿಯಾಗಿ ತುಂಬಿ ಹೋಗುತ್ತಿವೆ. ದೊಡ್ಡ ದೇಶಗಳು ಟಿವಿ9ಗೆ ಹಲವು ಸುದ್ದಿ ಸಾಮಗ್ರಿಗಳನ್ನು ಒದಗಿಸಲು ದೃಢನಿಶ್ಚಯ ಮಾಡುವಂತೆ ತೋರುತ್ತಿದೆ. ಆದರೆ ಗಂಭೀರವಾಗಿ ಹೇಳುವುದಾದರೆ, ಇಂದು ಜಗತ್ತು ಎದುರಿಸುತ್ತಿರುವ ಪ್ರತಿಕೂಲ ಪರಿಸ್ಥಿತಿಗಳು ಹಿಂದೆಂದೂ ಕಾಣದ ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಈ ಪರಿಸ್ಥಿತಿಗಳ ನಡುವೆ, ಟಿವಿ9 ನೆಟ್‌ವರ್ಕ್ ವಿಚಾರಗಳಿಗೆ ಬಹಳ ಮುಖ್ಯವಾದ ವೇದಿಕೆ ಸೃಷ್ಟಿಸಿದೆ. ಈ ಶೃಂಗಸಭೆಯಲ್ಲಿ, ನೀವೆಲ್ಲರೂ ಭಾರತ ಮತ್ತು ವಿಶ್ವ ಎಂಬ ವಿಷಯವನ್ನು ಚರ್ಚಿಸುತ್ತಿದ್ದೀರಿ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಈ ಶೃಂಗಸಭೆಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ಎಲ್ಲಾ ಅತಿಥಿಗಳನ್ನು ಸ್ವಾಗತಿಸುತ್ತೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಟಿವಿ9 ನೆಟ್‌ವರ್ಕ್ ಶೃಂಗಸಭೆ ಉದ್ದೇಶಿಸಿ ಭಾಷಣ

March 23rd, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಭಾರತ ಮತ್ತು ವಿಶ್ವ' (India and the World) ಎಂಬ ವಿಷಯದ ಮೇಲೆ ನಡೆದ ಟಿವಿ9 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಭೂತಪೂರ್ವ ಮತ್ತು ಗಂಭೀರವಾದ ಜಾಗತಿಕ ಸಂದರ್ಭಗಳನ್ನು ಒಪ್ಪಿಕೊಂಡ ಪ್ರಧಾನಮಂತ್ರಿಯವರು, ಈ ನಿರ್ಣಾಯಕ ಸಮಯದಲ್ಲಿ ವಿಚಾರ ವಿನಿಮಯಕ್ಕಾಗಿ ಪ್ರಮುಖ ವೇದಿಕೆಯನ್ನು ಸೃಷ್ಟಿಸಿದ್ದಕ್ಕಾಗಿ ಟಿವಿ9 ನೆಟ್‌ ವರ್ಕ್ ಅನ್ನು ಶ್ಲಾಘಿಸಿದರು. ಇಂದು ವಿಶ್ವವು ಸಾಗುತ್ತಿರುವ ಗಂಭೀರ ಪರಿಸ್ಥಿತಿಗಳು ಅಭೂತಪೂರ್ವ ಮತ್ತು ಅತ್ಯಂತ ಗಂಭೀರವಾಗಿವೆ ಮತ್ತು ಇವುಗಳ ನಡುವೆ, ಟಿವಿ9 ನೆಟ್‌ವರ್ಕ್ ವಿಚಾರಗಳಿಗಾಗಿ ಅತ್ಯಂತ ಪ್ರಮುಖವಾದ ವೇದಿಕೆಯನ್ನು ಸೃಷ್ಟಿಸಿದೆ, ಎಂದು ಶ್ರೀ ಮೋದಿ ತಿಳಿಸಿದರು.

ಫಲಪ್ರದ ಕಾರ್ಯಯೋಜನೆಗಳ ಪಟ್ಟಿ: ಪ್ರಧಾನಮಂತ್ರಿಯವರ ಥೈಲ್ಯಾಂಡ್‌ ಭೇಟಿ

April 03rd, 08:36 pm

ಭಾರತ-ಥೈಲ್ಯಾಂಡ್‌ ದೇಶಗಳ ನಡುವಿನ ಕಾರ್ಯತಂತ್ರದ ಹಾಗೂ ಸಹಭಾಗಿತ್ವ ಪ್ರಾರಂಭ ಕುರಿತು ಜಂಟಿ ಘೋಷಣೆ

ಭುವನೇಶ್ವರದಲ್ಲಿ ನಡೆದ 'ಉತ್ಕರ್ಷ್ ಒಡಿಶಾ' - ಮೇಕ್ ಇನ್ ಒಡಿಶಾ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣ

January 28th, 11:30 am

ಒಡಿಶಾದ ರಾಜ್ಯಪಾಲರಾದ ಶ್ರೀ ಹರಿ ಬಾಬು ಅವರು, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ ಮಾಝಿ ಜೀ ಅವರು, ನನ್ನ ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿಗಳು, ಒಡಿಶಾ ಸರ್ಕಾರದ ಸಚಿವರು, ಸಂಸದರು, ಶಾಸಕರು, ಕೈಗಾರಿಕಾ ಮತ್ತು ವಾಣಿಜ್ಯ ಜಗತ್ತಿನ ಪ್ರಮುಖ ಉದ್ಯಮಿಗಳು, ದೇಶ ಮತ್ತು ವಿದೇಶಗಳಿಂದ ಆಗಮಿಸಿರುವ ಹೂಡಿಕೆದಾರರು ಮತ್ತು ನನ್ನ ಪ್ರೀತಿಯ ಒಡಿಶಾದ ಸಹೋದರ ಮತ್ತು ಸಹೋದರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದೀರಿ!

ಭುವನೇಶ್ವರದಲ್ಲಿ 'ಉತ್ಕರ್ಷ್ ಒಡಿಶಾ- ಮೇಕ್ ಇನ್ ಒಡಿಶಾ ಸಮಾವೇಶ- 2025' ಅನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

January 28th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ ಉತ್ಕರ್ಷ್ ಒಡಿಶಾ - ಮೇಕ್ ಇನ್ ಒಡಿಶಾ ಸಮಾವೇಶ- 2025 ಹಾಗೂ ಮೇಕ್ ಇನ್ ಒಡಿಶಾ ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, 2025ರ ಜನವರಿ ತಿಂಗಳಲ್ಲೇ ಒಡಿಶಾಗೆ ಇದು ತಮ್ಮ ಎರಡನೇ ಭೇಟಿಯಾಗಿದೆʼʼ ಎಂದು ಹೇಳುವ ಮೂಲಕ ʼಪ್ರವಾಸಿ ಭಾರತೀಯ ದಿವಸ್ 2025ʼ ಕಾರ್ಯಕ್ರಮವನ್ನು ಉದ್ಘಾಟಿಸಲು ತಾವು ಇದೇ ತಿಂಗಳು ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಇದು ಒಡಿಶಾದಲ್ಲಿ ಈವರೆಗಿನ ಅತಿದೊಡ್ಡ ವ್ಯಾಪಾರ ಶೃಂಗಸಭೆಯಾಗಿದೆ ಎಂದು ಬಣ್ಣಿಸಿದ ಶ್ರೀ ಮೋದಿ ಅವರು, ಮೇಕ್ ಇನ್ ಒಡಿಶಾ ಸಮಾವೇಶ- 2025ರಲ್ಲಿ ಸುಮಾರು 5-6 ಪಟ್ಟು ಹೆಚ್ಚು ಹೂಡಿಕೆದಾರರು ಭಾಗವಹಿಸಿದ್ದಾರೆ ಎಂದು ಹೇಳಿದರು. ಹಾಗೆಯೇ ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ಒಡಿಶಾ ಜನತೆ ಹಾಗೂ ಸರ್ಕಾರವನ್ನು ಅಭಿನಂದಿಸಿದರು.

ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

January 09th, 10:15 am

ಒಡಿಶಾದ ಗವರ್ನರ್ ಹರಿ ಬಾಬು ಜೀ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹ ಸದಸ್ಯ ಎಸ್. ಜೈಶಂಕರ್ ಜೀ, ಜುವಾಲ್ ಒರಾಮ್ ಜೀ, ಧರ್ಮೇಂದ್ರ ಪ್ರಧಾನ ಜೀ, ಅಶ್ವಿನಿ ವೈಷ್ಣವ್ ಜೀ, ಶೋಭಾ ಕರಂದ್ಲಾಜೆ ಜೀ, ಕೀರ್ತಿ ವರ್ಧನ್ ಸಿಂಗ್ ಜೀ, ಪಬಿತ್ರ ಮಾರ್ಗರೇಟಾ ಜೀ, ಒಡಿಶಾದ ಉಪ ಮುಖ್ಯಮಂತ್ರಿ ಕನಕ್ ವರ್ಧನ್ ಸಿಂಗ್ ದೇವ್ ಜೀ, ಪ್ರವತಿ ಪರಿದಾ ಜೀ, ಇತರ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಜಗತ್ತಿನ ಮೂಲೆ ಮೂಲೆಯಿಂದ ಇಲ್ಲಿಗೆ ಬಂದಿರುವ ಭಾರತ ಮಾತೆಯ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ!

ಒಡಿಶಾದಲ್ಲಿ 18ನೇ ಪ್ರವಾಸಿ ಭಾರತೀಯ ದಿನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 09th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಇಂದು 18ನೇ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಿದರು. ಜಗತ್ತಿನ ನಾನಾ ಮೂಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ಜಗತ್ತಿನಾದ್ಯಂತದ ವಿವಿಧ ಭಾರತೀಯ ಅನಿವಾಸಿ ಕಾರ್ಯಕ್ರಮಗಳಲ್ಲಿ ಉದ್ಘಾಟನಾ ಗೀತೆಯನ್ನು ನುಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಲಸಿಗರ ಭಾವನೆಗಳು ಮತ್ತು ಅನುಭವಗಳನ್ನು ಸೆರೆಹಿಡಿದ ಅದ್ಭುತ ಗಾಯನಕ್ಕಾಗಿ ಅವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ರಿಕಿ ಕೇಜ್ ಮತ್ತು ಅವರ ತಂಡವನ್ನು ಶ್ಲಾಘಿಸಿದರು.

ನಾವು ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಕೆಲಸದ ಸಂಸ್ಕೃತಿಯನ್ನು ಮಾತ್ರ ಅಭಿವೃದ್ಧಿಪಡಿಸಿದ್ದೇವೆ : ಪ್ರಧಾನಿ ಮೋದಿ

October 13th, 11:55 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಹು ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ -ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಅವರು ಪ್ರಗತಿ ಮೈದಾನದಲ್ಲಿ ಹೊಸ ಪ್ರದರ್ಶನ ಸಂಕೀರ್ಣವನ್ನೂ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ಪಿಯೂಷ್ ಗೋಯಲ್, ಶ್ರೀ ಹರ್ದೀಪ್ ಸಿಂಗ್ ಪುರಿ, ಶ್ರೀ ಸರ್ಬಾನಂದ ಸೋನೊವಾಲ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ಅಶ್ವಿನಿ ವೈಷ್ಣವ್, ಮುಖ್ಯಮಂತ್ರಿ, ಲೆಫ್ಟಿನೆಂಟ್ ಗವರ್ನರ್‌, ರಾಜ್ಯ ಸಚಿವರು, ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದ್ಯಮ ಕ್ಷೇತ್ರದಿಂದ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ್ ಮಂಗಳಂ ಬಿರ್ಲಾ, ಟ್ರಾಕ್ಟರುಗಳು ಮತ್ತು ಕೃಷಿ ಸಲಕರಣೆಗಳ ಸಿಎಂಡಿ ಶ್ರೀಮತಿ ಮಲ್ಲಿಕಾ ಶ್ರೀನಿವಾಸನ್, ಟಾಟಾ ಸ್ಟೀಲ್ ಸಿಇಒ ಮತ್ತು ಸಿಐಐ ಅಧ್ಯಕ್ಷರಾದ ಶ್ರೀ ಟಿವಿ ನರೇಂದ್ರನ್ ಮತ್ತು ರಿವಿಗೋ ಸಹ ಸಂಸ್ಥಾಪಕ ಶ್ರೀ ದೀಪಕ್ ಗರ್ಗ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿಯವರಿಂದ ಪಿಎಂ ಗತಿ ಶಕ್ತಿ ಯೋಜನೆಗೆ ಚಾಲನೆ

October 13th, 11:54 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಹು ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ -ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಅವರು ಪ್ರಗತಿ ಮೈದಾನದಲ್ಲಿ ಹೊಸ ಪ್ರದರ್ಶನ ಸಂಕೀರ್ಣವನ್ನೂ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ಪಿಯೂಷ್ ಗೋಯಲ್, ಶ್ರೀ ಹರ್ದೀಪ್ ಸಿಂಗ್ ಪುರಿ, ಶ್ರೀ ಸರ್ಬಾನಂದ ಸೋನೊವಾಲ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ಅಶ್ವಿನಿ ವೈಷ್ಣವ್, ಮುಖ್ಯಮಂತ್ರಿ, ಲೆಫ್ಟಿನೆಂಟ್ ಗವರ್ನರ್‌, ರಾಜ್ಯ ಸಚಿವರು, ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದ್ಯಮ ಕ್ಷೇತ್ರದಿಂದ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ್ ಮಂಗಳಂ ಬಿರ್ಲಾ, ಟ್ರಾಕ್ಟರುಗಳು ಮತ್ತು ಕೃಷಿ ಸಲಕರಣೆಗಳ ಸಿಎಂಡಿ ಶ್ರೀಮತಿ ಮಲ್ಲಿಕಾ ಶ್ರೀನಿವಾಸನ್, ಟಾಟಾ ಸ್ಟೀಲ್ ಸಿಇಒ ಮತ್ತು ಸಿಐಐ ಅಧ್ಯಕ್ಷರಾದ ಶ್ರೀ ಟಿವಿ ನರೇಂದ್ರನ್ ಮತ್ತು ರಿವಿಗೋ ಸಹ ಸಂಸ್ಥಾಪಕ ಶ್ರೀ ದೀಪಕ್ ಗರ್ಗ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ‘ಮೈತ್ರಿ ಸೇತು’ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

March 09th, 11:59 am

ಮೂರು ವರ್ಷಗಳ ಹಿಂದೆ ತ್ರಿಪುರದ ಜನರು ಹೊಸ ಇತಿಹಾಸವನ್ನು ಸೃಷ್ಟಿಸಿದರು ಮತ್ತು ಇಡೀ ದೇಶಕ್ಕೆ ಬಹಳ ಬಲವಾದ ಸಂದೇಶವನ್ನು ನೀಡಿದರು. ತ್ರಿಪುರವು ದಶಕಗಳವರೆಗೆ ರಾಜ್ಯದ ಅಭಿವೃದ್ಧಿಯನ್ನು ತಡೆಯುವ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ಮೂಲಕ ಹೊಸ ಆರಂಭವನ್ನು ಮಾಡಿತು. ನೀವು ತ್ರಿಪುರದ ಸಾಮರ್ಥ್ಯವನ್ನು ಹಿಡಿದಿಟ್ಟಿದ್ದ ಸಂಕೋಲೆಗಳನ್ನು ಬಿಡಿಸಿದ್ದೀರಿ. ಮಾ ತ್ರಿಪುರ ಸುಂದರಿಯ ಆಶೀರ್ವಾದದೊಂದಿಗೆ ಬಿಪ್ಲಾಬ್ ದೇಬ್ ಜಿ ನೇತೃತ್ವದ ಸರ್ಕಾರವು ತನ್ನ ನಿರ್ಣಯಗಳನ್ನು ಶೀಘ್ರ ಕೈಗೊಂಡಿದ್ದರ ಬಗ್ಗೆ ಎಂದು ನನಗೆ ಸಂತೋಷವಾಗಿದೆ.

ಭಾರತ – ಬಾಂಗ್ಲಾದೇಶ ನಡುವಿನ “ ಮೈತ್ರಿ ಸೇತು” ಉದ್ಘಾಟಿಸಿದ ಪ್ರಧಾನಮಂತ್ರಿ

March 09th, 11:58 am

ಭಾರತ – ಬಾಂಗ್ಲಾದೇಶ ನಡುವೆ ಸಂಪರ್ಕ ಕಲ್ಪಿಸುವ “ ಮೈತ್ರಿ ಸೇತು” ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. ಅಲ್ಲದೇ ತ್ರಿಪುರಾದಲ್ಲಿ ಹಲವು ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ತ್ರಿಪುರ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಅಲ್ಲಿನ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶವನ್ನು ಸಹ ಪ್ರಸಾರ ಮಾಡಲಾಯಿತು.

ಭಾರತ ಸಾಗರಯಾನ ಶೃಂಗಸಭೆ 2021 ಉದ್ಘಾಟಿಸಿದ ಪ್ರಧಾನಿ

March 02nd, 11:00 am

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಭಾರತ ಸಾಗರಯಾನ ಶೃಂಗಸಭೆ-2021’ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡೆನ್ಮಾರ್ಕ್‌ನ ಸಾರಿಗೆ ಸಚಿವ ಬೆನ್ನಿ ಎಂಗ್ಲೆಬ್ರೆಕ್ಟ್‌, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಮನ್ಸುಖ್ ಮಾಂಡವಿಯಾ ಉಪಸ್ಥಿತರಿದ್ದರು.

ಭಾರತ ಸಾಗರಯಾನ ಶೃಂಗಸಭೆ 2021 ಉದ್ಘಾಟಿಸಿದ ಪ್ರಧಾನಿ

March 02nd, 10:59 am

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಭಾರತ ಸಾಗರಯಾನ ಶೃಂಗಸಭೆ-2021’ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡೆನ್ಮಾರ್ಕ್‌ನ ಸಾರಿಗೆ ಸಚಿವ ಬೆನ್ನಿ ಎಂಗ್ಲೆಬ್ರೆಕ್ಟ್‌, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಮನ್ಸುಖ್ ಮಾಂಡವಿಯಾ ಉಪಸ್ಥಿತರಿದ್ದರು.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಹಲವು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಭಾಷಣ

February 25th, 04:14 pm

ನೈವೇಲಿಯ 1000 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಮತ್ತು ಎನ್.ಎಲ್.ಸಿ.ಐ.ಎಲ್ ನ 709 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದರು.