Prime Minister meets with the President of Trinidad and Tobago
July 04th, 11:37 pm
PM Modi met Trinidad & Tobago President Kangaloo and the two leaders reflected on the enduring bonds shared by the two countries, anchored by strong people-to-people ties. PM Modi conveyed his sincere gratitude for the conferment of the ‘Order of the Republic of Trinidad and Tobago’—describing it as an honour for the 1.4 billion people of India.ಪೋರ್ಟ್ ಆಫ್ ಸ್ಪೇನ್‌ನಲ್ಲಿ ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
July 04th, 09:42 am
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿಯಾದರು. ಅವರು ಕೆಲವು ವರ್ಷಗಳ ಹಿಂದೆ ನಡೆದ ಮಹಾತ್ಮ ಗಾಂಧಿಯವರ 150 ನೇ ಜಯಂತಿ ಆಚರಣೆಯ ವೇಳೆ 'ವೈಷ್ಣವ ಜನ ತೋ' ಹಾಡಿದ್ದರು.ಪೋರ್ಟ್ ಆಫ್ ಸ್ಪೇನ್ ನಲ್ಲಿ ಭೋಜಪುರಿ ಚೌತಾಲ್ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
July 04th, 09:06 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ರೋಮಾಂಚಕ ಭೋಜ್‌ಪುರಿ ಚೌತಾಲ್ ಪ್ರದರ್ಶನವನ್ನು ಶ್ಲಾಘಿಸಿದರು. ಇದು ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.ಟ್ರಿನಿಡಾಡ್ ಮತ್ತು ಟೊಬಾಗೊಗೆ ಅಧಿಕೃತ ಭೇಟಿಗಾಗಿ ಪ್ರಧಾನಮಂತ್ರಿ ಅವರು ಪೋರ್ಟ್ ಆಫ್ ಸ್ಪೇನ್ ಗೆ ಆಗಮಿಸಿದರು
July 04th, 02:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜುಲೈ 3-4ರವರೆಗೆ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಲು ಇಂದು ಪೋರ್ಟ್ ಆಫ್ ಸ್ಪೇನ್ ಗೆ ಆಗಮಿಸಿದರು. 1999ರ ಬಳಿಕ ಭಾರತದ ಪ್ರಧಾನಿಯೊಬ್ಬರು ಟಿ ಮತ್ತು ಟಿಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಉಭಯ ದೇಶಗಳ ನಡುವಿನ ನಿಕಟ ಬಾಂಧವ್ಯದ ಸಂಕೇತವಾಗಿ, ಪೋರ್ಟ್ ಆಫ್ ಸ್ಪೇನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಗೌರವಾನ್ವಿತ ಶ್ರೀಮತಿ ಕಮಲಾ ಪರ್ಸಾದ್-ಬಿಸ್ಸೆಸ್ಸಾರ್ ಮತ್ತು ಅವರ ಕ್ಯಾಬಿನೆಟ್ ಸದಸ್ಯರು ಮತ್ತು ಇತರ ಹಲವಾರು ಗಣ್ಯರು ಸ್ವಾಗತಿಸಿದರು. ಪ್ರಧಾನಮಂತ್ರಿಯವರಿಗೆ ಔಪಚಾರಿಕ ಗಾರ್ಡ್ ಆಫ್ ಹಾನರ್ ನೀಡಲಾಯಿತು ಮತ್ತು ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸ್ವಾಗತಿಸಲಾಯಿತು.