ಕವಿ ಮತ್ತು ಚಿಂತಕ ಅಂದೇ ಶ್ರೀ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

November 10th, 03:02 pm

ಅಂದೇ ಶ್ರೀ ಅವರ ಆಲೋಚನೆಗಳು ತೆಲಂಗಾಣದ ಆತ್ಮವನ್ನು ಪ್ರತಿಬಿಂಬಿಸುತ್ತವೆ. ಒಬ್ಬ ಪ್ರತಿಭಾನ್ವಿತ ಕವಿ ಮತ್ತು ಚಿಂತಕರಾಗಿದ್ದ ಅವರು ಜನರ ಧ್ವನಿಯಾಗಿದ್ದರು, ಅವರ ಹೋರಾಟಗಳು, ಆಕಾಂಕ್ಷೆಗಳು ಮತ್ತು ಅವಿನಾಭಾವ ಚೈತನ್ಯವನ್ನು ವ್ಯಕ್ತಪಡಿಸುತ್ತಿದ್ದರು. ಅವರ ಮಾತುಗಳು ಹೃದಯಗಳನ್ನು ಕಲಕುವ, ಧ್ವನಿಗಳನ್ನು ಒಂದುಗೂಡಿಸುವ ಮತ್ತು ಸಮಾಜದ ಸಾಮೂಹಿಕ ನಾಡಿಮಿಡಿತಕ್ಕೆ ಆಕಾರ ನೀಡುವ ಶಕ್ತಿಯನ್ನು ಹೊಂದಿದ್ದವು. ಅವರು ಸಾಮಾಜಿಕ ಪ್ರಜ್ಞೆಯನ್ನು ಸಾಹಿತ್ಯ ಸೌಂದರ್ಯದೊಂದಿಗೆ ಬೆರೆಸಿದ ರೀತಿ ಅತ್ಯುತ್ತಮವಾಗಿತ್ತು ಎಂದು ಶ್ರೀ ಮೋದಿ ಹೇಳಿದರು.

ಶ್ರೀ ರಾಮಕಾಂತ್ ರಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

March 16th, 02:53 pm

ಖ್ಯಾತ ಕವಿ ಮತ್ತು ವಿದ್ವಾಂಸರಾದ ಶ್ರೀ ರಾಮಕಾಂತ್‌ ರಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ ಮತ್ತು ಶ್ರೀ ರಾಮಕಾಂತ್ ರಥ್ ಅವರ ಕೃತಿಗಳು, ವಿಶೇಷವಾಗಿ ಕಾವ್ಯ‌ ರಚನೆಗಳು, ಸಮಾಜದ ಎಲ್ಲಾ ವರ್ಗಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ ಎಂದು ಹೇಳಿದ್ದಾರೆ.

ಸೂಫಿ ಸಂಪ್ರದಾಯವು ಭಾರತದಲ್ಲಿ ತನಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದೆ: ಜಹಾನ್-ಎ-ಖುಸ್ರೌನಲ್ಲಿ ಪ್ರಧಾನಿ

February 28th, 07:31 pm

ಪ್ರಧಾನಿ ಮೋದಿ ಅವರು ಜಹಾನ್-ಎ-ಖುಸ್ರೌ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದಲ್ಲಿ ಸೂಫಿ ಸಂಪ್ರದಾಯದ ವಿಶಿಷ್ಟ ಗುರುತನ್ನು ಒತ್ತಿ ಹೇಳಿದರು. ಹಜರತ್ ಖುಸ್ರೌ ಭಾರತವನ್ನು ಎಲ್ಲಾ ಪ್ರಮುಖ ರಾಷ್ಟ್ರಗಳಿಗಿಂತ ಶ್ರೇಷ್ಠವೆಂದು ಬಣ್ಣಿಸಿದರು ಮತ್ತು ಸಂಸ್ಕೃತವನ್ನು ವಿಶ್ವದ ಅತ್ಯುತ್ತಮ ಭಾಷೆ ಎಂದು ಪರಿಗಣಿಸಿದರು ಎಂದು ಪ್ರಧಾನಿ ಹೇಳಿದರು.

ಜಹಾನ್-ಎ-ಖುಸ್ರೌ 2025 ರ ಸೂಫಿ ಸಂಗೀತ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು

February 28th, 07:30 pm

ಪ್ರಧಾನಿ ಮೋದಿ ಜಹಾನ್-ಎ-ಖುಸ್ರೌ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದಲ್ಲಿ ಸೂಫಿ ಸಂಪ್ರದಾಯದ ವಿಶಿಷ್ಟ ಗುರುತನ್ನು ಒತ್ತಿ ಹೇಳಿದರು. ಹಜರತ್ ಖುಸ್ರೌ ಭಾರತವನ್ನು ಎಲ್ಲಾ ಪ್ರಮುಖ ರಾಷ್ಟ್ರಗಳಿಗಿಂತ ಶ್ರೇಷ್ಠವೆಂದು ಬಣ್ಣಿಸಿದರು ಮತ್ತು ಸಂಸ್ಕೃತವನ್ನು ವಿಶ್ವದ ಅತ್ಯುತ್ತಮ ಭಾಷೆ ಎಂದು ಪರಿಗಣಿಸಿದರು ಎಂದು ಪ್ರಧಾನಿ ಹೇಳಿದರು.

ಫೆಬ್ರವರಿ 28 ರಂದು ನವದೆಹಲಿಯಲ್ಲಿ ನಡೆಯಲಿರುವ ಜಹಾನ್-ಎ-ಖುಸ್ರೌ 2025 ರಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ

February 27th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 28 ರಂದು ಸಂಜೆ 7:30ರ ಸುಮಾರಿಗೆ ನವದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆಯಲಿರುವ ಭವ್ಯ ಸೂಫಿ ಸಂಗೀತ ಉತ್ಸವ ಜಹಾನ್-ಎ-ಖುಸ್ರೌ 2025ರಲ್ಲಿ ಭಾಗವಹಿಸಲಿದ್ದಾರೆ.