ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ
August 15th, 06:35 am
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಾರ್ದಿಕ ಶುಭಾಶಯ ಕೋರಿದ್ದಾರೆ. ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸಲು ನಮ್ಮ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರ ಅಚಲ ಸ್ಥೈರ್ಯ, ದಣಿವರಿಯದ ಹೋರಾಟ ಮತ್ತು ತಾಯ್ನಾಡಿಗೆ ಅವರ ಅನನ್ಯ ಸಮರ್ಪಣೆಯನ್ನು ಈ ರಾಷ್ಟ್ರೀಯ ಉತ್ಸವವು ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.ಇರಾಕ್ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅಲಿ ಫಾಲಿಹ್ ಕದೀಮ್ ಅಲ್-ಜೈದಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
May 16th, 01:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇರಾಕ್ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಫಾಲಿಹ್ ಕದೀಮ್ ಅಲ್-ಝೈದಿ ಅವರನ್ನು ಅಭಿನಂದಿಸಿದ್ದಾರೆ. ಭಾರತವು ಇರಾಕ್ ನೊಂದಿಗಿನ ತನ್ನ ದೀರ್ಘಕಾಲೀನ ಮತ್ತು ಸ್ನೇಹಪರ ಸಂಬಂಧಗಳನ್ನು ಹೆಚ್ಚು ಗೌರವಿಸುತ್ತದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ದೃಢವಾಗಿ ಬದ್ಧವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುವೇಂದು ಅಧಿಕಾರಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
May 09th, 02:06 pm
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸುವೇಂದು ಅಧಿಕಾರಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.ಶ್ರೀ ಅಜಯ್ ರೈ ಅವರ ಆರೋಗ್ಯ ಶೀಘ್ರ ಗುಣಮಖವಾಗಲೆಂದು ಹಾರೈಸಿದ ಪ್ರಧಾನಮಂತ್ರಿ
May 02nd, 07:19 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅಜಯ್ ರೈ ಅವರ ಆರೋಗ್ಯ ಶೀಘ್ರ ಗುಣಮುಖವಾಗಲೆಂದು ಹಾರೈಸಿದ್ದಾರೆ.ನೇಮಕಗೊಂಡ ಪ್ರೊ. ಗೋಬರ್ಧನ್ ದಾಸ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
April 25th, 10:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀತಿ ಆಯೋಗದ ಸದಸ್ಯರಾಗಿ ನೇಮಕಗೊಂಡ ಪ್ರೊ. ಗೋಬರ್ಧನ್ ದಾಸ್ ಅವರನ್ನು ಅಭಿನಂದಿಸಿದ್ದಾರೆ ಮತ್ತು ಯಶಸ್ವಿ ಅಧಿಕಾರಾವಧಿಗೆ ಶುಭ ಹಾರೈಸಿದ್ದಾರೆ. ದಣಿವರಿಯದ ಸಮರ್ಪಣೆ ಮತ್ತು ನಮ್ರತೆಯಿಂದ ಗುರುತಿಸಲ್ಪಟ್ಟ ಪ್ರೊ. ದಾಸ್ ಅವರ ಪ್ರಯಾಣವು ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಾರ್ವಜನಿಕ ಆರೋಗ್ಯ, ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಪ್ರೊ. ದಾಸ್ ಅವರ ಅಮೂಲ್ಯ ಕೊಡುಗೆಗಳನ್ನು ಒತ್ತಿ ಹೇಳಿದ ಅವರು, ಅವರ ಸಾಧನೆಗಳ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ ಎಂದು ಹೇಳಿದರು.ನೀತಿ ಆಯೋಗದ ಪುನರ್ ರಚನೆಗೆ ಶುಭ ಕೋರಿದ ಪ್ರಧಾನಮಂತ್ರಿ
April 25th, 10:46 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನೀತಿ ಆಯೋಗದ ಪುನರ್ ರಚನೆಗೆ ಶುಭ ಹಾರೈಸಿದ್ದಾರೆ. ನೀತಿ ಆಯೋಗವು ಭಾರತದ ನೀತಿ ನಿರೂಪಣೆಯ ವಾಸ್ತುಶಿಲ್ಪದಲ್ಲಿ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಪ್ರಮುಖ ಸುಧಾರಣೆಗಳಿಗೆ ಚಾಲನೆ ನೀಡಿದೆ ಮತ್ತು ನಾಗರಿಕರಿಗೆ 'ಸುಗಮ ಜೀವನ'ವನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು. ಈ ಸಂಸ್ಥೆಯು ನಾವೀನ್ಯತೆ ಮತ್ತು ಕ್ಷೇತ್ರಗಳಾದ್ಯಂತ ದೀರ್ಘಕಾಲೀನ ಕಾರ್ಯತಂತ್ರದ ಚಿಂತನೆಗೆ ಕ್ರಿಯಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.ಪುತ್ತಾಂಡು ವಿಶೇಷ ಸಂದರ್ಭದ ನಿಮಿತ್ತ ಪ್ರಧಾನಮಂತ್ರಿ ಶುಭಾಶಯ
April 14th, 09:21 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುತ್ತಾಂಡು ವಿಶೇಷ ಸಂದರ್ಭಕ್ಕೆ ಶುಭ ಕೋರಿದ್ದಾರೆ.ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀ ಹರಿವಂಶ್ ಅವರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ
April 10th, 02:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಗೌರವಾನ್ವಿತ ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಂತರ ಮುಂಬರುವ ಸಂಸದೀಯ ಅವಧಿಗೆ ಶ್ರೀ ಹರಿವಂಶ್ ಅವರಿಗೆ ಅವರು ಇಂದು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ನಿತೀಶ್ ಕುಮಾರ್ ಅವರಿಗೆ ಶುಭ ಕೋರಿದ ಪ್ರಧಾನಮಂತ್ರಿ
April 10th, 02:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ನಿತೀಶ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರಿದ್ದಾರೆ.ಜನತೆಗೆ ರಾಮನವಮಿ ಪ್ರಯುಕ್ತ ಶುಭ ಹಾರೈಸಿದ ಪ್ರಧಾನಮಂತ್ರಿ
March 26th, 12:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ರಾಮನವಮಿಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ತ್ಯಾಗ, ತಪಸ್ಸು ಮತ್ತು ಸ್ವಯಂ ಸಂಯಮದಿಂದ ಗುರುತಿಸಲ್ಪಟ್ಟ ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಜೀವನವು ಪ್ರತಿಯೊಂದು ಪರಿಸ್ಥಿತಿಯನ್ನು ಶಕ್ತಿ ಮತ್ತು ದೃಢನಿಶ್ಚಯದಿಂದ ಎದುರಿಸಲು ಜನರನ್ನು ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿ ಹೇಳಿದ್ದಾರೆ.ಈದ್-ಉಲ್-ಫಿತರ್ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ
March 21st, 08:24 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್-ಉಲ್-ಫಿತರ್ ಹಬ್ಬದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.ಕತಾರ್ ಅಮೀರ್ ಜೊತೆ ಪ್ರಧಾನಮಂತ್ರಿ ಮಾತುಕತೆ
March 19th, 10:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಪ್ರಾದೇಶಿಕ ಭದ್ರತಾ ಕಾಳಜಿಗಳ ಕುರಿತು ಸಮಾಲೋಚಿಸಿದರು.ಗುಡಿ ಪಾಡ್ವಾ, ಯುಗಾದಿ, ಚೇತಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರೋಬಾ ಪ್ರಯುಕ್ತ ಶುಭಾಶಯ ಕೋರಿದ ಪ್ರಧಾನಮಂತ್ರಿ
March 19th, 08:46 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಡಿ ಪಾಡ್ವಾ, ಯುಗಾದಿ, ಚೇತಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರೋಬಾದ ಪ್ರಯುಕ್ತ ಜನತೆಗೆ ಇಂದು ಶುಭಾಶಯ ಕೋರಿದ್ದಾರೆ.ನವಸಂವತ್ಸರದ ಅಂಗವಾಗಿ ಸರ್ವರಿಗೂ ಪ್ರಧಾನಮಂತ್ರಿ ಶುಭ ಹಾರೈಕೆ
March 19th, 08:03 am
ನೂತನ ಸಂವತ್ಸರದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ರಾಷ್ಟ್ರಕ್ಕೆ ಆತ್ಮೀಯ ಶುಭಾಶಯ ಕೋರಿದ್ದಾರೆ. ರಾಷ್ಟ್ರದ ಪ್ರಗತಿಗೆ ನವ ಬದ್ಧತೆಯೊಂದಿಗೆ ಈ ವರ್ಷವು ಸಮೃದ್ಧಿಯಿಂದ ಕೂಡಿರಲಿ ಎಂದು ಅವರು ಹಾರೈಸಿದ್ದಾರೆ.ನೇಪಾಳದ ಚುನಾವಣೆಯಲ್ಲಿ ಯಶಸ್ಸು ಸಾಧಿಸಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷದ ನಾಯಕರಿಗೆ ಪ್ರಧಾನಮಂತ್ರಿ ಅಭಿನಂದನೆ
March 09th, 10:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್ ಎಸ್ ಪಿ) ಅಧ್ಯಕ್ಷರಾದ ಶ್ರೀ ರಬಿ ಲಾಮಿಚಾನೆ ಮತ್ತು ಆರ್ ಎಸ್ ಪಿಯ ಹಿರಿಯ ನಾಯಕರಾದ ಶ್ರೀ ಬಾಲೇಂದ್ರ ಶಾ ಅವರೊಂದಿಗೆ ಆತ್ಮೀಯವಾದ ದೂರವಾಣಿ ಸಂಭಾಷಣೆ ನಡೆಸಿದರು.ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಮಂತ್ರಿ
March 08th, 11:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯಗಳು, ದೃಢನಿಶ್ಚಯ ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಪಂದ್ಯಾವಳಿಯುದ್ದಕ್ಕೂ ತಂಡವು ಅತ್ಯುತ್ತಮ ಧೈರ್ಯವನ್ನು ತೋರಿಸಿದೆ ಎಂದು ಅವರು ಹೇಳಿದರು.ಅಟ್ಟುಕಲ್ ಪೊಂಗಲದ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿ
March 03rd, 07:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಟ್ಟುಕಲ್ ಪೊಂಗಲದ ಪವಿತ್ರ ಸಂದರ್ಭದಲ್ಲಿ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.ಉತ್ತರ ಪ್ರದೇಶದ ಮೀರತ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 22nd, 01:30 pm
ಉತ್ತರ ಪ್ರದೇಶದ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಪಂಕಜ್ ಚೌಧರಿ ಜಿ ಮತ್ತು ಜಯಂತ್ ಚೌಧರಿ ಜಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಜಿ, ಉತ್ತರ ಪ್ರದೇಶ ಸರ್ಕಾರದ ಸಚಿವರೆ, ನನ್ನ ಸಹ ಸಂಸತ್ ಸದಸ್ಯರೆ, ಶಾಸಕರೆ ಮತ್ತು ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮೊದಲ ನಮೋ ಭಾರತ್ ಆರ್‌ಆರ್‌ಟಿಎಸ್ ಅನ್ನು ಉದ್ಘಾಟಿಸುತ್ತಿದ್ದಾರೆ ಮತ್ತು ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ
February 22nd, 01:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೀರತ್‌ನಲ್ಲಿ ನಮೋ ಭಾರತ್ ರ‍್ಯಾಪಿಡೊ ರೈಲು ಮತ್ತು ಮೀರತ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು, ಈ ಯೋಜನೆಯನ್ನು 'ವಿಕಸಿತ ಉತ್ತರ ಪ್ರದೇಶ' ಮತ್ತು 'ವಿಕಸಿತ ಭಾರತ'ಕ್ಕೆ ಹೊಸ ಶಕ್ತಿ ಎಂದು ಬಣ್ಣಿಸಿದರು. ಈ ಕಾರ್ಯಕ್ರಮವು ಭಾರತದಲ್ಲಿ ಮೊದಲ ಬಾರಿಗೆ ಒಂದೇ ವೇದಿಕೆಯಿಂದ ಒಂದೇ ದಿನ ತ್ವರಿತ ರೈಲು ಮತ್ತು ಮೆಟ್ರೋ ಸೇವೆಯನ್ನು ಪ್ರಾರಂಭಿಸಲಾಗಿದೆ.ಅರುಣಾಚಲ ಪ್ರದೇಶ ರಾಜ್ಯೋತ್ಸವದ ಅಂಗವಾಗಿ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ
February 20th, 09:35 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.