ಅಧಿಕೃತ ಕಾರ್ಯಕ್ರಮಗಳ ಸಮಯದಲ್ಲಿ ಸ್ವೀಕರಿಸಲಾದ ಉಡುಗೊರೆಗಳ ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಲು ನಾಗರಿಕರನ್ನು ಆಹ್ವಾನಿಸಿದ ಪ್ರಧಾನಮಂತ್ರಿ

September 24th, 01:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿವಿಧ ಅಧಿಕೃತ ಭೇಟಿಗಳು ಮತ್ತು ಕಾರ್ಯಕ್ರಮಗಳ ಸಮಯದಲ್ಲಿ ಸ್ವೀಕರಿಸಲಾದ ಉಡುಗೊರೆಗಳ ಸಂಗ್ರಹವನ್ನು ಒಳಗೊಂಡ ಆನ್‌ಲೈನ್ ಹರಾಜನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ನಾಗರಿಕರು ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶ್ರೀ ಮೋದಿಯವರು ಪ್ರೋತ್ಸಾಹಿಸಿದರು. ಇದರಿಂದ ಬರುವ ಆದಾಯವು ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಭಾರತದ ಪ್ರಮುಖ ಕಾರ್ಯಕ್ರಮವಾದ ನಮಾಮಿ ಗಂಗೆ ಉಪಕ್ರಮಕ್ಕೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿಯವರು ಹೇಳಿದರು.

ಸ್ವೀಕರಿಸಿದ ಸ್ಮರಣಿಕೆಗಳ ಹರಾಜಿನಲ್ಲಿ ಪಾಲ್ಗೊಳ್ಳಲು ನಾಗರಿಕರಿಗೆ ಪ್ರಧಾನಮಂತ್ರಿ ಉತ್ತೇಜನ

October 27th, 01:54 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಾವು ಸ್ವೀಕರಿಸಿದ ಸ್ಮರಣಿಕೆಗಳನ್ನು ತಮ್ಮದಾಗಿಸಿಕೊಳ್ಳಲು ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಮತ್ತು ತಮ್ಮ ಬಿಡ್ ಗಳನ್ನು ಸಲ್ಲಿಸುವಂತೆ ನಾಗರಿಕರನ್ನು ಉತ್ತೇಜಿಸಿದ್ದಾರೆ. ಇದರಿಂದ ಬರುವ ಹಣವನ್ನು ನಮಾಮಿ ಗಂಗೆಗೆ ಅರ್ಪಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಮಾಹಿತಿ ನೀಡಿದರು.

ಸ್ಮರಣಿಕೆಗಳ ಹರಾಜು 12 ರವರೆಗೆ ವಿಸ್ತರಣೆ

October 07th, 10:51 pm

ಪ್ರಧಾನಮಂತ್ರಿಯವರ ಸ್ಮರಣಿಕೆ 2022ರ ಹರಾಜನ್ನು ಈ ತಿಂಗಳ 12 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಮಾಹಿತಿ ನೀಡಿದ್ದಾರೆ.

PM appreciates enthusiasm for ‘PM Mementoes auction’

September 28th, 05:49 pm

The Prime Minister, Shri Narendra Modi has expressed happiness for the current enthusiasm for PM Mementoes auction . He urged all, specially youngsters, to have a look at the gifts being auctioned and gift them among family and friends.