ಶ್ರೀ ಪಿಯೂಷ್ ಪಾಂಡೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

October 24th, 11:29 am

ಜಾಹೀರಾತು ಮತ್ತು ಸಂವಹನ ಕ್ಷೇತ್ರದ ದಿಗ್ಗಜ ಶ್ರೀ ಪಿಯೂಷ್ ಪಾಂಡೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಪಾಂಡೆ ಅವರ ಅನನ್ಯ ಸೃಜನಶೀಲತೆ ಮತ್ತು ಭಾರತದ ಜಾಹೀರಾತು ವಲಯಕ್ಕೆ ಅವರ ಅಮೋಘ ಕೊಡುಗೆಗಳು ಸ್ಮರಣೀಯ ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.