ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ

October 01st, 03:23 pm

ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ವ್ಯಾಪಕ ಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಫಿಲಿಪ್ಪೀನ್ಸ್ ಸರ್ಕಾರಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸುವ ಘೋಷಣೆ

August 05th, 05:23 pm

ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಫಿಲಿಪ್ಪೀನ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಫರ್ಡಿನಾಂಡ್ ಆರ್ ಮಾರ್ಕೋಸ್ ಜೂನಿಯರ್ ಅವರು 2025ರ ಆಗಸ್ಟ್ 4 ರಿಂದ 8 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಅಧ್ಯಕ್ಷರಾದ ಮಾರ್ಕೋಸ್ ಅವರೊಂದಿಗೆ ಪ್ರಥಮ ಮಹಿಳೆ ಮೇಡಂ ಲೂಯಿಸ್ ಅರಾನೆಟಾ ಮಾರ್ಕೋಸ್ ಮತ್ತು ಫಿಲಿಪ್ಪೀನ್ಸ್ ನ ಹಲವಾರು ಸಂಪುಟ ಸಚಿವರು ಮತ್ತು ವ್ಯಾಪಾರ ನಿಯೋಗ ಸೇರಿದಂತೆ ಉನ್ನತ ಮಟ್ಟದ ಅಧಿಕೃತ ನಿಯೋಗ ಆಗಮಿಸಿದೆ.

ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿ: ಫಲಪ್ರದತೆಯ ವಿವರ

August 05th, 04:31 pm

ಭಾರತ ಗಣರಾಜ್ಯ ಮತ್ತು ಫಿಲಿಪೈನ್ಸ್ ಗಣರಾಜ್ಯದ ನಡುವೆ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾಪಿಸುವ ಘೋಷಣೆ

ಪಿಲಿಪೀನ್ಸ್ ಅಧ್ಯಕ್ಷರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ

August 05th, 03:45 pm

ನಾನು ಭಾರತಕ್ಕೆ ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇಂದು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಐತಿಹಾಸಿಕ ದಿನವಾಗಿದೆ. ನಾವು ಭಾರತ- ಪಿಲಿಪೀನ್ಸ್ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಎತ್ತರಿಸುತ್ತಿದ್ದೇವೆ. ಇದು ನಮ್ಮ ಸಂಬಂಧಗಳಿಗೆ ಹೊಸ ವೇಗ ಮತ್ತು ತೀವ್ರತೆಯನ್ನು ತಂದುಕೊಡುತ್ತದೆ ಮತ್ತು ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ನಮ್ಮ ಸಹಕಾರ ಮತ್ತಷ್ಟು ಬಲವರ್ಧನೆಗೊಳ್ಳಲಿದೆ. ಕಳೆದ ಕೆಲವು ವರ್ಷಗಳಿಂದ, ವ್ಯಾಪಾರ, ರಕ್ಷಣೆ, ಸಾಗರ ಸಹಕಾರ, ಆರೋಗ್ಯ ರಕ್ಷಣೆ, ಭದ್ರತೆ, ಆಹಾರ ಭದ್ರತೆ, ಅಭಿವೃದ್ಧಿ ಪಾಲುದಾರಿಕೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ನಮ್ಮ ಸಂಬಂಧಗಳು ಪ್ರಗತಿಯನ್ನು ಸಾಧಿಸಿವೆ. ಮುಂದಿನ ಐದು ವರ್ಷಗಳಿಗಾಗಿ ನಾವು ಇಂದು ಕ್ರಿಯಾ ಯೋಜನೆಯನ್ನು ರೂಪಿಸುತ್ತಿರುವುದೂ ಸಹ ನಿಜಕ್ಕೂ ತೃಪ್ತಿಯ ವಿಷಯವಾಗಿದೆ.

ಫಿಲಿಪ್ಪೀನ್ಸ್ ಅಧ್ಯಕ್ಷರೊಂದಿಗೆ ಜಂಟಿ ಮಾಧ್ಯಮ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಮಾಧ್ಯಮ ಹೇಳಿಕೆಯ ಕನ್ನಡ ಅನುವಾದ

August 05th, 11:06 am

ಮೊದಲನೆಯದಾಗಿ, ನಾನು ಅಧ್ಯಕ್ಷರನ್ನು ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಈ ವರ್ಷ, ಭಾರತ ಮತ್ತು ಫಿಲಿಪ್ಪೀನ್ಸ್ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷವನ್ನು ಆಚರಿಸುತ್ತಿವೆ. ಮತ್ತು ಈ ಸಂದರ್ಭದಲ್ಲಿ, ಈ ಭೇಟಿಯು ವಿಶೇಷ ಮಹತ್ವವನ್ನು ಪಡೆದಿದೆ. ನಮ್ಮ ರಾಜತಾಂತ್ರಿಕ ಸಂಬಂಧಗಳು ಇತ್ತೀಚಿನವಾದರೂ, ನಮ್ಮ ನಾಗರಿಕ ಸಂಪರ್ಕವು ಪ್ರಾಚೀನ ಕಾಲದಿಂದಲೂ ಇದೆ. ರಾಮಾಯಣದ ಫಿಲಿಪ್ಪೀನ್ಸ್ ಆವೃತ್ತಿ - ಮಹಾರಾಡಿಯಾ ಲಾವಾನಾ ನಮ್ಮ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಬಂಧಕ್ಕೆ ಜೀವಂತ ಪುರಾವೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಂಚೆ ಚೀಟಿಗಳು, ಎರಡೂ ದೇಶಗಳ ರಾಷ್ಟ್ರೀಯ ಹೂವುಗಳನ್ನು ಒಳಗೊಂಡಿದ್ದು, ನಮ್ಮ ಸ್ನೇಹದ ಪರಿಮಳವನ್ನು ಸುಂದರವಾಗಿ ಸಂಕೇತಿಸುತ್ತವೆ.

ಈ ವಾರ ಭಾರತದ ಬಗ್ಗೆ ಜಗತ್ತು

February 10th, 06:40 pm

ಈ ವಾರ, ಭಾರತ ಮತ್ತು ಭಾರತೀಯರು ವಿಶ್ವ ವೇದಿಕೆಯಲ್ಲಿ ತಮ್ಮ ಗಮನಾರ್ಹ ಆರೋಹಣವನ್ನು ಮುಂದುವರೆಸಿದ್ದಾರೆ, ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಬಲಪಡಿಸುತ್ತಿದ್ದಾರೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಆಚರಿಸುತ್ತಿದ್ದಾರೆ. ಆಗ್ನೇಯ ಏಷ್ಯಾದೊಂದಿಗೆ ಆಳವಾದ ಸಂಬಂಧಗಳನ್ನು ಬೆಳೆಸುವುದರಿಂದ ಹಿಡಿದು ಕೃತಕ ಬುದ್ಧಿಮತ್ತೆ ಮತ್ತು ವಾಯುಯಾನವನ್ನು ಮುನ್ನಡೆಸುವವರೆಗೆ, ಭಾರತದ ಪ್ರಗತಿಯು ಜಾಗತಿಕ ಪಾಲುದಾರರಿಗೆ ಪ್ರಮುಖ ಗಮನವಾಗಿದೆ. ಈ ವಾರದ ಕೆಲವು ಪ್ರಮುಖ ಮುಖ್ಯಾಂಶಗಳನ್ನು ಇಲ್ಲಿ ನೋಡೋಣ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫಿಲಿಪೈನ್ಸ್ ನ ಅಧ್ಯಕ್ಷ ಗೌರವಾನ್ವಿತ ಶ್ರೀ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ನಡುವೆ ದೂರವಾಣಿ ಮಾತುಕತೆ

August 05th, 02:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫಿಲಿಪೈನ್ಸ್ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

Telephone conversation between Prime Minister and President of Philippines

June 09th, 07:47 pm

Prime Minister Shri Narendra Modi spoke on telephone today with President of Philippines, His Excellency Rodrigo Duterte, and discussed the steps being taken by the two Governments to address the challenges arising out of the COVID-19 pandemic.

ಆಸಿಯಾನ್ – ಭಾರತ: ಹಂಚಿಕೆಯ ಮೌಲ್ಯ, ಸಮಾನ ಡೆಸ್ಟಿನಿ: ನರೇಂದ್ರ ಮೋದಿ

January 26th, 05:48 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸಿಯಾನ್ – ಭಾರತ ಪಾಲುದಾರಿಕೆಯ ಬಗ್ಗೆ ಸಂಪಾದಕೀಯ ಪುಟದ ಪಕ್ಕದ ಪುಟದಲ್ಲಿ ‘ಆಸಿಯಾನ್ – ಭಾರತ: ಹಂಚಿಕೆಯ ಮೌಲ್ಯ, ಸಮಾನ ನಿರ್ದಿಷ್ಟ ಸ್ಥಾನ (ಡೆಸ್ಟಿನಿ)’ ಎಂಬ ಶೀರ್ಷಿಕೆಯಡಿ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ. ಈ ಲೇಖನ ಆಸಿಯಾನ್ ಸದಸ್ಯ ರಾಷ್ಟ್ರಗಳ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಈ ಲೇಖನದ ಪೂರ್ಣ ಪಾಠ ಈ ಕೆಳಕಂಡಂತಿದೆ.

ಆಸಿಯಾನ್ – ಭಾರತ ಸ್ಮರಣಾರ್ಥ ಶೃಂಗಸಭೆಗೂ ಮುನ್ನ ಪ್ರಧಾನಮಂತ್ರಿಯವರ ದ್ವಿಪಕ್ಷೀಯ ಸಭೆಗಳು

January 24th, 10:07 pm

ಭಾರತ- ಆಸಿಯಾನ್ ಪಾಲುದಾರಿಕೆಯ 25ನೇ ವರ್ಷದ ಅಂಗವಾದಆಸಿಯಾನ್ – ಭಾರತ ಸ್ಮರಣಾರ್ಥ ಶೃಂಗ (ಎ.ಐ.ಸಿ.ಎಸ್.)ದ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮ್ಯಾನ್ಮಾರ್ ನ ಸ್ಟೇಟ್ ಕೌನ್ಸಿಲರ್ ಘನತೆವೆತ್ತ ಡಾವ್ ಆಂಗ್ ಸಾನ್ ಸ್ಯೂ ಕಿ, ವಿಯಟ್ನಾಂನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನ್ಗುಯೇನ್ ಕ್ಸುವಾನ್ ಫುಕ್ ಮತ್ತು ಪಿಲಿಪ್ಪೀನ್ಸ್ ನ ಅಧ್ಯಕ್ಷ ಘನತೆವೆತ್ತ ಶ್ರೀ ರೋಡ್ರಿಗೋ ರೋ ದುತೇರ್ತೆ ಅವರೊಂದಿಗೆ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಫಿಲಿಪೈನ್ಸ್ ನ ಮನಿಲಾದ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣ

November 14th, 04:21 pm

ಆಸಿಯಾನ್ ನ 50 ವರ್ಷಗಳ ಕಾಲ ಹೆಮ್ಮೆಯ ಸಮಯ , ಸಂತೋಷ ಮತ್ತು ನಾವು ಸಾಧಿಸುವ ಸಾಧ್ಯತೆಗಳ ಬಗ್ಗೆ ಮುಂದೆ ಯೋಚಿಸುವ ಸಮಯವೆಂದು ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಪೂರ್ವ ನೀತಿ ಪಾಲಿಸಿಯ ಮುಖ್ಯ ಭಾಗದಲ್ಲಿ ಭಾರತವು ಆಸಿಯಾನ್ ಅನ್ನು ಇರಿಸುತ್ತದೆ ಎಂದು ಅವರು ಹೇಳಿದರು. ಆಸಿಯಾನ್ ಜತೆಗಿನ ನಮ್ಮ ಸಂಬಂಧವು ಹಳೆಯದು ಮತ್ತು ನಾವು ಸಹಕಾರವನ್ನು ಇನ್ನಷ್ಟು ಬಲಪಡಿಸಲು ಬಯಸುತ್ತೇವೆ.

12 ನೇ ಪೂರ್ವ ಏಷ್ಯಾ ಸಮ್ಮೇಳನದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಅಂಶಗಳು

November 14th, 02:39 pm

12 ನೇ ಪೂರ್ವ ಏಷ್ಯಾದ ಶೃಂಗಸಭೆಯಲ್ಲಿ, ಆಸಿಯಾನ್ ಒಂದು ದೊಡ್ಡ ಜಾಗತಿಕ ವಿಭಜನೆಯ ಸಮಯದಲ್ಲಿ ಪ್ರಾರಂಭವಾಯಿತು , ಆದರೆ ಇಂದು ಅದರ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದಂತೆ, ಅದು ಭರವಸೆಯ ಸಂಕೇತವಾಗಿ ಕಾಣಿಸಿತು; ಶಾಂತಿ ಮತ್ತು ಸಮೃದ್ಧಿಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಫಿಲಿಪೈನ್ಸ್ ನ ಮನಿಲಾದ ಆಸಿಯಾನ್ ಶೃಂಗಸಭೆಯ ಬದಿಯಲ್ಲಿ ಪ್ರಧಾನಿ ದ್ವಿಪಕ್ಷೀಯ ಸಭೆಗಳು

November 14th, 09:51 am

ಫಿಲಿಪೈನ್ಸ್ ನ ಮನಿಲಾದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿ ಫಿಲಿಪ್ಪೀನ್ಸ್ ನ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು

November 13th, 07:53 pm

ಪ್ರಧಾನಿ ನರೇಂದ್ರ ಮೋದಿ ಮನಿಲಾದಲ್ಲಿ ಫಿಲಿಪೈನ್ಸ್ ಅಧ್ಯಕ್ಷ , ರೋಡ್ರಿಗೊ ಡುಟರ್ಟೆ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು . ಈ ಎರಡೂ ರಾಷ್ಟ್ರಗಳ ನಡುವಿನ ಸಹಕಾರದ ವಿಸ್ತರಣೆಗೆ ಹಲವಾರು ಮಾರ್ಗಗಳನ್ನು ತಮ್ಮ ಸಭೆಯಲ್ಲಿ ಚರ್ಚಿಸಲಾಗಿದೆ.

ಫಿಲಿಪ್ಪೀನ್ಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ.

November 13th, 07:34 pm

ನಾನು ತಮ್ಮನ್ನು ಭೇಟಿಮಾಡದೆ ಹಿಂದಿರುಗಿದ್ದಿದ್ದರೆ ನನ್ನ ಯಾತ್ರೆ ಅಪೂರ್ಣವಾಗುತ್ತಿತ್ತು. ಬೇರೆ ಬೇರೆ ಪ್ರದೇಶಗಳಿಂದ ತಾವು ಬಿಡುವು ಮಾಡಿಕೊಂಡು ಇಲ್ಲಿಗೆ ಆಗಮಿಸಿದ್ದೀರಿ. ಇಂದು ಕೆಲಸದ ದಿನವಾದರೂ ಕೂಡಾ ತಾವು ಇಲ್ಲಿಗೆ ಆಗಮಿಸಿದ್ದೀರಿ. ಇದು ಭಾರತದ ಬಗೆಗೆನ ತಮ್ಮ ಪ್ರೀತಿ, ಭಾರತದ ಬಗ್ಗೆ ತಮಗಿರುವ ಬಾಂಧವ್ಯದ ಕಾರಣದಿಂದಾಗಿ ಇಂದು ತಾವೆಲ್ಲರೂ ಇಲ್ಲಿ ಸೇರಿದ್ದೀರಿ.

ಸಾಮಾಜಿಕ ಮಾಧ್ಯಮ ಕಾರ್ನರ್ 13 ನವೆಂಬರ್ 2017

November 13th, 06:53 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ಪಿಲಿಪ್ಪೀನ್ಸ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

November 13th, 04:36 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಿಲಿಪ್ಪೀನ್ಸ್ ನ ಮನಿಲಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.

ಮನಿಲಾದಲ್ಲಿ ಆಸಿಯಾನ್ ವಾಣಿಜ್ಯ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ (ನವೆಂಬರ್ 13, 2017)

November 13th, 03:28 pm

ನಾನು ಮೊದಲಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ. ವಾಣಿಜ್ಯದಲ್ಲಿ, ರಾಜಕೀಯದಂತೆಯೇ ಸಮಯ ಮತ್ತು ಸಮಯಪಾಲನೆ ಅತ್ಯಂತ ಮಹತ್ವದ್ದು. ಕೆಲವು ಸಂದರ್ಭದಲ್ಲಿ ನಮ್ಮ ಸಂಪೂರ್ಣ ಪ್ರಯತ್ನದ ನಡುವೆಯೂ ನಾವೂ ಏನೂ ಮಾಡಲು ಆಗುವುದಿಲ್ಲ. ನನ್ನ ಪ್ರಥಮ ಫಿಲಿಪ್ಪೀನ್ಸ್ ಭೇಟಿಯಲ್ಲಿ ನಾನು ಮನಿಲಾದಲ್ಲಿರುವ ಹರ್ಷಿಸುತ್ತೇನೆ.

ಪ್ರಧಾನಿ ಮೋದಿ ಅವರು ಯುಎಸ್ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದರು

November 13th, 02:31 pm

ಪ್ರಧಾನಿ ನರೇಂದ್ರ ಮೋದಿ ಫಿಲಿಪೈನ್ಸ್ ನ ಮನಿಲಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು . ಭಾರತದ-ಯುಎಸ್ ಪಾಲುದಾರಿಕೆಯ ಹಲವಾರು ಕ್ಷೇತ್ರಗಳ ಬಗ್ಗೆ ನಾಯಕರು ಚರ್ಚಿಸಿದ್ದಾರೆ.

ಮಹಾವೀರ್ ಫಿಲಿಪ್ಪೀನ್ ಫೌಂಡೇಷನ್ ಗೆ ಪ್ರಧಾಮಂತ್ರಿ ಭೇಟಿ

November 13th, 11:45 am

ಪ್ರಧಾನಿ ನರೇಂದ್ರ ಮೋದಿ ಭಾರತ ಮತ್ತು ಫಿಲಿಪ್ಪೈನ್ಸ್ ನಡುವೆ ದೀರ್ಘಕಾಲದ ಮಾನವೀಯ ಸಹಕಾರ ಕಾರ್ಯಕ್ರಮವಾದ ಮಹಾವೀರ್ ಫಿಲಿಪೈನ್ ಫೌಂಡೇಶನ್ ಗೆ ಭೇಟಿ ನೀಡಿದರು. ಇದನ್ನು ಮನಿಲಾದ ಡಾ. ರಾಮೋನ್ ಬಗಾಟ್ಸಿಂಗ್ ಎಂಬ ಭಾರತೀಯ ಮೂಲದ ಮೇಯರ್ ಸ್ಥಾಪಿಸಿದ್ದರು .