3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಫಿನ್ ಲ್ಯಾಂಡ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿಯವರ ಸಭೆ
May 19th, 06:42 pm
2026ರ ಮೇ 19 ರಂದು ಓಸ್ಲೋದಲ್ಲಿ ನಡೆದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರನ್ನು ಭೇಟಿಯಾದರು.ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಭೇಟಿ ನೀಡುವ ಮುನ್ನ ಪ್ರಧಾನ ಮಂತ್ರಿಯವರ ನಿರ್ಗಮನ ಹೇಳಿಕೆ
May 15th, 07:56 am
ಪ್ರಧಾನಿ ಮೋದಿ ಅವರು 2026 ರ ಮೇ 15 ರಿಂದ 20 ರವರೆಗೆ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಐದು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಈ ಭೇಟಿಯ ಸಮಯದಲ್ಲಿ ಅವರು ವಿವಿಧ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ ಮತ್ತು ಪ್ರಮುಖ ವಲಯಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳನ್ನು ನಡೆಸಲಿದ್ದಾರೆ. ಸ್ವೀಡನ್‌ನಲ್ಲಿ ಕೈಗಾರಿಕೆಗಾಗಿ ಯುರೋಪಿಯನ್ ದುಂಡು ಮೇಜಿನ ಸಭೆಯಲ್ಲಿ ಮತ್ತು ಓಸ್ಲೋದಲ್ಲಿ ನಡೆಯುವ 3 ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುವುದು ಈ ಭೇಟಿಯ ಪ್ರಮುಖ ಅಂಶಗಳಾಗಿವೆ.ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಪ್ರಧಾನಿಯವರ ಭೇಟಿ (ಮೇ 15 - 20, 2026)
May 11th, 09:00 pm
ಮೇ 15 ರಿಂದ ಮೇ 20, 2026 ರವರೆಗೆ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ, ಪ್ರಧಾನಿ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರನ್ನು ಭೇಟಿ ಮಾಡಿ ಪ್ರಧಾನಿ ರಾಬ್ ಜೆಟ್ಟನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸ್ವೀಡನ್‌ನಲ್ಲಿ, ಅವರು ಪ್ರಧಾನಿ ಕ್ರಿಸ್ಟರ್ಸನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಾರ್ವೆಯಲ್ಲಿ, ಅವರು ಕಿಂಗ್ ಹೆರಾಲ್ಡ್ V ಅವರನ್ನು ಭೇಟಿ ಮಾಡಿ ಪ್ರಧಾನಿ ಜೋನಾಸ್ ಗಹರ್ ಸ್ಟೋರೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ನಂತರ, ಅವರು ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಾತುಕತೆ ನಡೆಸಲು ಇಟಲಿಗೆ ಭೇಟಿ ನೀಡಲಿದ್ದಾರೆ.AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಫಿನ್ಲ್ಯಾಂಡ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರೊಂದಿಗೆ ಪ್ರಧಾನಮಂತ್ರಿ ಅವರ ಭೇಟಿ
February 18th, 05:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಫೆಬ್ರವರಿ 18, 2026 ರಂದು ನವದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಫಿನ್ಲ್ಯಾಂಡ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರನ್ನು ಭೇಟಿ ಮಾಡಿದರು.ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಫಿನ್‌ಲ್ಯಾಂಡ್ ಪ್ರಧಾನಮಂತ್ರಿ
February 18th, 02:04 pm
ಫಿನ್‌ಲ್ಯಾಂಡ್ ಪ್ರಧಾನ ಮಂತ್ರಿಗಳಾದ ಶ್ರೀ ಪೆಟ್ರಿ ಓರ್ಪೋ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ವಿಶ್ವ ನಾಯಕರಿಂದ ಪ್ರಧಾನಿ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ
June 10th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಭಿನಂದನಾ ಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆಯಾದ 'X' ನಲ್ಲಿ ವಿಶ್ವ ನಾಯಕರ ಸಂದೇಶಗಳಿಗೆ ಶ್ರೀ ಮೋದಿ ಉತ್ತರಿಸಿದರು.