ಎಐ ಪ್ರಗತಿಯಿಂದ ಟಿ20 ವಿಶ್ವಕಪ್ ವರೆಗೆ, ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಭಾರತದ ಏರಿಕೆಯನ್ನು ಪ್ರದರ್ಶಿಸುತ್ತಾರೆ

February 22nd, 11:30 am

ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ಭಾರತೀಯ ಮೂಲದ ಕ್ರಿಕೆಟಿಗರು, ಅಂಗಾಂಗ ದಾನ, ನದಿ ಉತ್ಸವಗಳು, ಡಿಜಿಟಲ್ ಸುರಕ್ಷತೆ, ಪರೀಕ್ಷಾ ಪೆ ಚರ್ಚಾ ಮತ್ತು ಇನ್ನೂ ಅನೇಕ ಪ್ರಮುಖ ವಿಷಯಗಳನ್ನು ಅವರು ಸ್ಪರ್ಶಿಸಿದರು. ಫೆಬ್ರವರಿ 23 ರಂದು ರಾಷ್ಟ್ರಪತಿ ಭವನದಲ್ಲಿ 'ರಾಜಾಜಿ ಉತ್ಸವ' ಆಚರಿಸಲಾಗುವುದು ಎಂದು ಅವರು ಹೈಲೈಟ್ ಮಾಡಿದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಿ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು, ನಾರಿ ಶಕ್ತಿಯೊಂದಿಗಿನ ಅವರ ಆಳವಾದ ಸಂಪರ್ಕವನ್ನು ಗಮನಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ 2026ರ ಎರಡನೇ ಸಂಚಿಕೆಯಲ್ಲಿ ಕೊಯಮತ್ತೂರು, ಛತ್ತೀಸ್‌ಗಢ, ಗುಜರಾತ್‌ ಮತ್ತು ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ಕೆಲವು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

February 10th, 05:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2026ರ 9ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಪಿಪಿಸಿ 2026ರ ಎರಡನೇ ಸಂಚಿಕೆಯಲ್ಲಿ ಕೊಯಮತ್ತೂರು, ಛತ್ತೀಸ್‌ಗಢ, ಗುಜರಾತ್‌ ಮತ್ತು ಅಸ್ಸಾಂನ ಪರೀಕ್ಷಾ ಯೋಧರೊಂದಿಗೆ ಪ್ರಧಾನಮಂತ್ರಿ ಅವರು ಅನೌಪಚಾರಿಕ ಸಂವಾದ ನಡೆಸಿದರು. ‘ಪರೀಕ್ಷಾ ಪೇ ಚರ್ಚಾ’ದ ವಿಶೇಷ ಆವೃತ್ತಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು, ಈ ಬಾರಿ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿನಡೆಸಲಾಗಿದೆ ಎಂದು ಹೇಳಿದರು.

2ನೇ ಸಂಚಿಕೆಯ “ಪರೀಕ್ಷಾ ಪೇ ಚರ್ಚಾ 2026” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಅವರ​​​​​​​ ಸಂವಾದ

February 09th, 10:30 am

ನನ್ನ ಪ್ರೀತಿಯ ಸ್ನೇಹಿತರೆ, ಪರೀಕ್ಷಾ ಪೇ ಚರ್ಚಾದ ಈ ಮಹತ್ವದ ಆವೃತ್ತಿಗೆ ಸ್ವಾಗತ. ಈ ಬಾರಿ ಇದು ಸ್ವಲ್ಪ ವಿಭಿನ್ನವಾಗಿದೆ, ಸ್ವಲ್ಪ ವಿಶೇಷವೂ ಆಗಿದೆ. ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಪೇ ಚರ್ಚಾವನ್ನು ದೇಶದ ವಿವಿಧ ಭಾಗಗಳಲ್ಲಿಯೂ ನಡೆಸಬೇಕೆಂದು ಸೂಚಿಸಿದ್ದರು. ಆದ್ದರಿಂದ ಈ ಬಾರಿ, ನಾನು ಭಾರತದಾದ್ಯಂತ ವಿದ್ಯಾರ್ಥಿಗಳೊಂದಿಗೆ ಕುಳಿತು ಈ ಚರ್ಚೆಗಳನ್ನು ನಡೆಸಿದ್ದೇನೆ. ಈ ವಿಶೇಷ ಸಂಚಿಕೆಯಲ್ಲಿ, ನೀವು ಅದನ್ನು ನಿಖರವಾಗಿ ನೋಡುತ್ತೀರಿ. ತಮಿಳುನಾಡಿನ ಕೊಯಮತ್ತೂರಿನಿಂದ ಪ್ರಾರಂಭಿಸೋಣ. ತಮಿಳುನಾಡಿನ ವಿದ್ಯಾರ್ಥಿಗಳ ಶಕ್ತಿ ಮತ್ತು ಕುತೂಹಲ ನನಗೆ ತುಂಬಾ ಪ್ರಭಾವ ಬೀರಿದೆ, ನೋಡೋಣ.

ಪರೀಕ್ಷಾ ಪೇ ಚರ್ಚಾ 2026ರ ಎರಡನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಯಮತ್ತೂರು, ರಾಯ್‌ಪುರ, ದೇವಮೊಗ್ರಾ ಮತ್ತು ಗುವಾಹಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು

February 09th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಪರೀಕ್ಷಾ ಪೇ ಚರ್ಚಾ' 2026ರ 9ನೇ ಆವೃತ್ತಿಯ ಮುಂದುವರಿದ ಭಾಗವಾಗಿ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರೀಕ್ಷಾ ಪೇ ಚರ್ಚಾ 2026ರ ಎರಡನೇ ಸಂಚಿಕೆಯ ಅವಧಿಯಲ್ಲಿ ಪ್ರಧಾನಮಂತ್ರಿಯವರು ಕೊಯಮತ್ತೂರು, ರಾಯ್‌ಪುರ, ದೇವಮೊಗ್ರಾ ಮತ್ತು ಗುವಾಹಟಿಯ 'ಎಕ್ಸಾಮ್ ವಾರಿಯರ್ಸ್' (ಪರೀಕ್ಷಾ ಯೋಧರ) ಜೊತೆಗೆ ಅನೌಪಚಾರಿಕ ಸಂವಾದ ನಡೆಸಿದರು. 'ಪರೀಕ್ಷಾ ಪೇ ಚರ್ಚಾ'ದ ವಿಶೇಷ ಆವೃತ್ತಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶ್ರೀ ಮೋದಿಯವರು, ಈ ಬಾರಿ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ ಎಂದು ಉಲ್ಲೇಖಿಸಿದರು.

ವಿದ್ಯಾರ್ಥಿಗಳ ಅಪರಿಮಿತ ಸಾಮರ್ಥ್ಯ ಮತ್ತು 'ಪರೀಕ್ಷಾ ಪೇ ಚರ್ಚಾ'ದ ಸ್ಫೂರ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

February 09th, 09:06 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ನಮ್ಮ ವಿದ್ಯಾರ್ಥಿಗಳು ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದಾರೆ ಮತ್ತು ಅವರ ಕನಸುಗಳನ್ನು ನನಸು ಮಾಡಿಕೊಳ್ಳುವ ಸಂಪೂರ್ಣ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ವೈಯಕ್ತಿಕ ಬೆಳವಣಿಗೆ ಮತ್ತು ಯಶಸ್ಸಿಗೆ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಅರ್ಥಪೂರ್ಣವಾಗಿ ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುವುದು ಪರೀಕ್ಷಾ ಪೇ ಚರ್ಚಾದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

“ಪರೀಕ್ಷಾ ಪೇ ಚರ್ಚಾ 2026” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಮಂತ್ರಿ ಅವರ ಸಂವಾದ

February 06th, 10:21 am

ನಾನು ಸಾನ್ವಿ ಆಚಾರ್ಯ, ನಿಮ್ಮ ಸ್ವಂತ ರಾಜ್ಯ ಗುಜರಾತ್ ‌ನವನು. ನನ್ನ ಮೊದಲ ಪ್ರಶ್ನೆ ಇದು: ಪೋಷಕರು ನಮ್ಮ ಬಗ್ಗೆ ಚಿಂತಿಸುತ್ತಾರೆ, ಶಿಕ್ಷಕರು ನಮ್ಮನ್ನು ಬೆಂಬಲಿಸುತ್ತಾರೆ. ಆದರೆ ಶಿಕ್ಷಕರು ಒಂದು ಅಧ್ಯಯನ ಮಾದರಿ ಸೂಚಿಸಿದಾಗ, ಪೋಷಕರು ಇನ್ನೊಂದನ್ನು ಒತ್ತಾಯಿಸುತ್ತಾರೆ, ಆದರೆ ವಿದ್ಯಾರ್ಥಿಗಳ ಮಾದರಿಯೇ ಇನ್ನೊಂದು ಇದ್ದಾಗ ಮುಖ್ಯ ಸಮಸ್ಯೆ ಉದ್ಭವಿಸುತ್ತದೆ. ಆ ಸಮಯದಲ್ಲಿ, ಯಾವ ಮಾದರಿ ಸರಿಯಾಗಿದೆ ಎಂಬುದರ ಬಗ್ಗೆ ನಮಗೆ ಗೊಂದಲವಾಗುತ್ತದೆ

ಪರೀಕ್ಷಾ ಪೇ ಚರ್ಚಾ 2026 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂವಾದ

February 06th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು 9ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ(ಪಿಪಿಸಿ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷಾ ಯೋಧರೊಂದಿಗೆ ಅನೌಪಚಾರಿಕ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಅವರು ಎಲ್ಲರನ್ನೂ #ParikshaPeCharcha26 ಗೆ ಸೇರಲು ಆಹ್ವಾನಿಸಿದ್ದಾರೆ

February 05th, 09:56 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ, ಫೆಬ್ರವರಿ 6 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ #ParikshaPeCharcha26 ನಲ್ಲಿ ಭಾಗವಹಿಸಲು ಎಲ್ಲರನ್ನೂ ಆಹ್ವಾನಿಸಿದರು. ಈ ವರ್ಷದ ಆವೃತ್ತಿಯು ಪರೀಕ್ಷೆಗಳಿಗೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿರುತ್ತದೆ, ಅದರಲ್ಲೂ ಮುಖ್ಯವಾಗಿ ಒತ್ತಡ ಮುಕ್ತವಾಗಿರುವುದು ಮತ್ತು ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಈ ವೇದಿಕೆಯು ತಮಗೆ ಯಾವಾಗಲೂ ಸಂತೋಷ ನೀಡುವಂತಹುದಾಗಿದೆ, ಏಕೆಂದರೆ ಇದು ದೇಶಾದ್ಯಂತದ ಪ್ರಖರ ಮನಸ್ಸುಗಳೊಂದಿಗೆ ಸಂವಹನ ನಡೆಸಲು ತಮಗೆ ಅವಕಾಶ ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು.