ಖ್ಯಾತ ಗಾಯಕ ಶ್ರೀ ಪಂಕಜ್ ಉದಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ

February 26th, 07:08 pm

ಖ್ಯಾತ ಗಾಯಕ ಶ್ರೀ ಪಂಕಜ್ ಉದಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಕಜ್ ಉದಾಸ್ ಅವರೊಂದಿಗೆ ನಡೆಸಿದ ವಿವಿಧ ಸಂವಾದಗಳನ್ನು ಸ್ಮರಿಸಿದ ಶ್ರೀ ಮೋದಿ, ಶ್ರೀ ಪಂಕಜ್ ಉದಾಸ್ ಜಿ ಅವರು ಭಾರತೀಯ ಸಂಗೀತದ ದಾರಿದೀಪವಾಗಿದ್ದರು, ಅವರ ಮಧುರ ಸ್ವರಗಳು ಪೀಳಿಗೆಯನ್ನು ಮೀರಿದೆ. ಅವರ ನಿರ್ಗಮನವು ಸಂಗೀತ ಜಗತ್ತಿನಲ್ಲಿ ಎಂದಿಗೂ ತುಂಬಲಾಗದೆ, ಶೂನ್ಯ ಅನುಭವವನ್ನು ಉಂಟುಮಾಡುತ್ತದೆ ಎಂದು ಶ್ರೀ ಮೋದಿ ಹೇಳಿದರು.