ಭಾರತ-ಥೈಲ್ಯಾಂಡ್ ವ್ಯೂಹಾತ್ಮಕ ಪಾಲುದಾರಿಕೆ ಸ್ಥಾಪನೆ ಕುರಿತ ಜಂಟಿ ಘೋಷಣೆ
April 04th, 07:29 pm
2025ರ ಏಪ್ರಿಲ್ 03-04 ರ ಅವಧಿಯಲ್ಲಿ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು ಥೈಲ್ಯಾಂಡ್ ಗೆ ಅಧಿಕೃತ ಭೇಟಿ ನೀಡಿದರು ಮತ್ತು ಥೈಲ್ಯಾಂಡ್ ರಾಜಪ್ರಭುತ್ವದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀಮತಿ ಪೇಟೊಂಗ್ಟಾರ್ನ್ ಶಿನವಾತ್ರಾ ಅವರ ಆಹ್ವಾನದ ಮೇರೆಗೆ ಬ್ಯಾಂಕಾಕ್ ನಲ್ಲಿ ನಡೆದ 6 ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬ್ಯಾಂಕಾಕ್ ನ ಸರ್ಕಾರಿ ಭವನದಲ್ಲಿ ಪ್ರಧಾನಮಂತ್ರಿ ಶಿನವಾತ್ರಾ ಅವರು ಔಪಚಾರಿಕ, ಸಾಂಪ್ರದಾಯಿಕ ಸ್ವಾಗತ ಕೋರಿದರು.Prime Minister’s visit to Wat Pho
April 04th, 03:36 pm
PM Modi with Thai PM Paetongtarn Shinawatra, visited Wat Pho, paying homage to the Reclining Buddha. He offered ‘Sanghadana’ to senior monks and presented a replica of the Ashokan Lion Capital. He emphasized the deep-rooted civilizational ties between India and Thailand, strengthening cultural bonds.ಥಾಯ್ಲೆಂಡ್ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
April 03rd, 08:42 pm
ಸರ್ಕಾರಿ ಭವನಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಶಿನವಾತ್ರ ಅವರು ಬರಮಾಡಿಕೊಂಡರು ಮತ್ತು ಔಪಚಾರಿಕವಾಗಿ ಸ್ವಾಗತಿಸಿದರು. ಇದು ಅವರ ಎರಡನೇ ಸಭೆಯಾಗಿತ್ತು. ಇದಕ್ಕೂ ಮೊದಲು, 2024ರ ಅಕ್ಟೋಬರ್‌ನಲ್ಲಿ ವಿಯೆಂಟಿಯಾನ್‌ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.ಥಾಯ್ಲೆಂಡ್ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
April 03rd, 03:01 pm
ನನಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಪ್ರಧಾನಿ ಶಿನವಾತ್ರಾ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.ಪ್ರಧಾನಿ ಮೋದಿ ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ಆಗಮಿಸಿದರು
April 03rd, 11:01 am
ಪ್ರಧಾನಿ ನರೇಂದ್ರ ಮೋದಿ ಅವರು ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ಆಗಮಿಸಿದರು. ಅವರು ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭೇಟಿಯ ಸಮಯದಲ್ಲಿ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಥಾಯ್ಲೆಂಡ್ ಮತ್ತು ಶ್ರೀಲಂಕಾ ಭೇಟಿಗೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
April 03rd, 06:00 am
ಪ್ರಧಾನಮಂತ್ರಿ ಪೆಟೊಂಗ್ಟಾರ್ನ್ ಶಿನವಾತ್ರಾ ಅವರ ಆಹ್ವಾನದ ಮೇರೆಗೆ ನಾನು ಇಂದು ಅಧಿಕೃತ ಭೇಟಿಗಾಗಿ ಮತ್ತು 6ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್ ಗೆ ತೆರಳುತ್ತಿದ್ದೇನೆ.ಏಪ್ರಿಲ್ 03-06, 2025 ರಿಂದ ಪ್ರಧಾನ ಮಂತ್ರಿಯವರ ಥೈಲ್ಯಾಂಡ್ ಮತ್ತು ಶ್ರೀಲಂಕಾ ಭೇಟಿ
April 02nd, 02:00 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ಯಾಂಕಾಕ್‌ನಲ್ಲಿ ನಡೆಯಲಿರುವ 6 ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥೈಲ್ಯಾಂಡ್‌ಗೆ (ಏಪ್ರಿಲ್ 3-4, 2025) ಭೇಟಿ ನೀಡಲಿದ್ದಾರೆ. ನಂತರ, ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರ ಆಹ್ವಾನದ ಮೇರೆಗೆ ಅವರು ಶ್ರೀಲಂಕಾಕ್ಕೆ (ಏಪ್ರಿಲ್ 4-6, 2025) ರಾಜ್ಯ ಭೇಟಿ ನೀಡಲಿದ್ದಾರೆ.PM thanks Prime Minister of Thailand for greetings on India’s 76th Republic Day
January 26th, 10:20 pm
The Prime Minister Shri Narendra Modi today thanked the Prime Minister of Thailand, Ms. Paetongtarn Shinawatra for greetings on India’s 76th Republic Day.ಥಾಯ್ಲೆಂಡ್ ಪ್ರಧಾನಮಂತ್ರಿ ಪೀಟೊಂಗ್ಟಾರ್ನ್ ಶಿನವತ್ರಾ ಅವರ ಅಭಿವ್ಯಕ್ತಿಗೆ ಪ್ರಧಾನಮಂತ್ರಿ ಸಂತಸ
October 30th, 09:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ಪ್ರಧಾನಿ ಪೀಟೊಂಗ್ಟಾರ್ನ್ ಶಿನಾವತ್ರಾ ಅವರ ಅಭಿವ್ಯಕ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಇಂದು ಬ್ಯಾಂಕಾಕ್ನ ಲಿಟಲ್ ಇಂಡಿಯಾದ ಪಹರತ್ನಲ್ಲಿ ಅತ್ಯದ್ಭುತ ಥಾಯ್ಲೆಂಡ್ ದೀಪಾವಳಿ ಉತ್ಸವ 2024 ಅನ್ನು ಉದ್ಘಾಟಿಸಿದರು. ಈ ಅದ್ಭುತ ಥಾಯ್ಲೆಂಡ್ ದೀಪಾವಳಿ ಉತ್ಸವಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಇದು ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಆಳವಾಗಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.ಥೈಲ್ಯಾಂಡ್ ಪ್ರಧಾನಮಂತ್ರಿಗಳ ಜೊತೆ ಪ್ರಧಾನಮಂತ್ರಿ ಮಾತುಕತೆ
October 11th, 12:41 pm
ಥೈಲ್ಯಾಂಡ್ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀಮತಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯೆಂಟಿಯಾನ್‌ನಲ್ಲಿ ನಡೆಯುತ್ತಿರುವ ಪೂರ್ವ ಏಷ್ಯಾ ಶೃಂಗಸಭೆ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವಿನ ಮೊದಲ ಭೇಟಿ ಇದಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥೈಲ್ಯಾಂಡ್ ಪ್ರಧಾನಿಯಾಗಿ ಆಯ್ಕೆಯಾದ ಶ್ರೀಮತಿ ಪೇಟೊಂಗ್ಟಾರ್ನ್ ಶಿನವತ್ರಾ ಅವರನ್ನು ಅಭಿನಂದಿಸಿದರು
August 18th, 11:53 am
ಥೈಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಶ್ರೀಮತಿ ಪೇಟೊಂಗ್ಟಾರ್ನ್ ಶಿನವತ್ರಾ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ನಾಗರಿಕ, ಸಾಂಸ್ಕೃತಿಕ ಮತ್ತು ಜನರ ಮಧ್ಯೆ ಸಂಪರ್ಕ ಸಾಧಿಸುವ ಬಲವಾದ ಅಡಿಪಾಯವನ್ನು ಆಧರಿಸಿದ ಭಾರತ ಮತ್ತು ಥೈಲ್ಯಾಂಡ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ವ್ಯಕ್ತಪಡಿಸಿದ್ದಾರೆ.