ಹರಿಯಾಣದ ಜಿಂದ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

July 17th, 12:00 pm

ಇವೆಲ್ಲ ಇಲ್ಲಿ ತರಲಾದ ಕೆಲವು ಫೋಟೋಗಳು - ದಯವಿಟ್ಟು ಅವುಗಳನ್ನು ಸಂಗ್ರಹಿಸಿ, ಇಲ್ಲದಿದ್ದರೆ ಹಿಂದೆ ಕುಳಿತಿರುವವರು ನೋಡಲು ಸಾಧ್ಯವಾಗುವುದಿಲ್ಲ. ಎಸ್‌ಪಿಜಿ ಸಿಬ್ಬಂದಿ, ದಯವಿಟ್ಟು ಅವುಗಳನ್ನು ಸಂಗ್ರಹಿಸಿ. ಧನ್ಯವಾದಗಳು, ಸಹೋದರ, ಅಂತಹ ಸುಂದರವಾದ ರೇಖಾಚಿತ್ರಗಳನ್ನು ತಂದಿದ್ದಕ್ಕಾಗಿ. ಅಲ್ಲಿ, ಒಬ್ಬ ಪುಟ್ಟ ಹುಡುಗಿ ಕೂಡ ಏನನ್ನೋ ತಂದಿದ್ದಾಳೆ - ದಯವಿಟ್ಟು ಅದನ್ನು ಸಂಗ್ರಹಿಸಿ. ಇಲ್ಲಿಯೂ ಸಹ, ಇಬ್ಬರು ಮಹನೀಯರು ಗೋಚರಿಸುತ್ತಾರೆ. ಮತ್ತು ಈಗ, ಎಲ್ಲರೂ ದಯವಿಟ್ಟು ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಪ್ರೀತಿಗಾಗಿ, ನಿಮ್ಮ ಕಲಾತ್ಮಕ ಅರ್ಪಣಾ ಭಾವಕ್ಕಾಗಿ/ಭಕ್ತಿಗಾಗಿ, ನಾನು ನಿಮ್ಮೆಲ್ಲರಿಗೂ ಋಣಿ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ನಲ್ಲಿ ಸುಮಾರು 14,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು

July 17th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ನಲ್ಲಿ ಸುಮಾರು 14,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಸ್ಥಳಕ್ಕೆ ಆಗಮಿಸಿದ ಬಳಿಕ ಅಪಾರ ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಶಕ್ತಿ ಪೀಠ ಮಾತಾ ಜಯಂತಿಯವರಿಂದ ಅನನ್ಯವಾಗಿ ಆಶೀರ್ವದಿಸಲ್ಪಟ್ಟ ಪ್ರದೇಶದ ಶ್ರೀಮಂತ ಐತಿಹಾಸಿಕ, ಸಮರ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಲ್ಲೇಖಿಸಿದರು. ಸಂಘಟನೆಯ ಕರ್ತವ್ಯಗಳಿಗಾಗಿ ದಶಕಗಳ ಹಿಂದೆ ನಗರಕ್ಕೆ ತಮ್ಮ ಆರಂಭಿಕ ಭೇಟಿಗಳನ್ನು ನೆನಪಿಸಿಕೊಂಡ ಅವರು, ಮುರ್ರಾ ಎಮ್ಮೆ ಡೈರಿ, ದೇಸಿ ಬುರಾ ಮತ್ತು ಘೇವರ್ ನಂತಹ ಸ್ಥಳೀಯ ಪಾಕಶಾಲೆಯ ಪ್ರಮುಖ ಆಹಾರಗಳೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿರುವ ತಾವು ಪಡೆದ ಮರೆಯಲಾಗದ ವಾತ್ಸಲ್ಯವನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಇದು ಸಾಮಾನ್ಯ ಭೂಮಿಯಲ್ಲ. ಇದು ಇತಿಹಾಸ, ಶೌರ್ಯ, ಧರ್ಮ ಮತ್ತು ಅಪಾರ ಹೆಮ್ಮೆಯ ಭೂಮಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಕ್ರೀಡಾ ಸಹಭಾಗಿತ್ವಕ್ಕಾಗಿ ಭಾರತ-ಆಸ್ಟ್ರೇಲಿಯಾ ನೀಲನಕ್ಷೆ

July 10th, 10:07 am

ಕ್ರೀಡೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಬಲ ಸೇತುವೆಯಾಗಿದ್ದು, ಸಮುದಾಯಗಳನ್ನು ಒಗ್ಗೂಡಿಸುತ್ತದೆ ಮತ್ತು ಪಾಲುದಾರಿಕೆಗೆ ಹೊಸ ಮಾರ್ಗಗಳನ್ನು ತೆರೆಯುತ್ತಿದೆ.

ಕ್ರೀಡಾ ಕಾರ್ಯಕ್ರಮಕ್ಕಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ

July 10th, 08:21 am

ಭಾರತ-ಆಸ್ಟ್ರೇಲಿಯಾ ನಡುವಿನ ಕ್ರೀಡಾ ಸಂಬಂಧಗಳನ್ನು ಆಚರಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ವಿಕ್ಟೋರಿಯಾದ ಪ್ರೀಮಿಯರ್ ಗೌರವಾನ್ವಿತ ಜೆಸಿಂತಾ ಅಲನ್ ಅವರೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು. ಶ್ರೀ ಸ್ಟೀವ್ ವಾ ಮತ್ತು ಶ್ರೀಮತಿ ಲಿಸಾ ಸ್ಥಾಲೇಕರ್ ಸೇರಿದಂತೆ ಹಲವು ಆಸ್ಟ್ರೇಲಿಯಾದ ಕ್ರೀಡಾ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಆಧಾರಸ್ತಂಭಗಳಾಗಿ ಕ್ರೀಡೆ, ಸಾಂಸ್ಕೃತಿಕ ವಿನಿಮಯ ಮತ್ತು ಜನರ ನಡುವಿನ ಸಂಬಂಧ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಈ ಭೇಟಿ ಬಲವಾಗಿ ಪ್ರತಿಪಾದಿಸಿತು.

ಆಸ್ಟ್ರೇಲಿಯಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

July 09th, 03:22 pm

ನಾವು ಭೇಟಿಯಾಗುವ ಭೂಮಿಯ ಸಾಂಪ್ರದಾಯಿಕ ಮಾಲೀಕರನ್ನು ಗುರುತಿಸುವ ಮೂಲಕ ನಾನು ಇಂದು ಮಾತು ಆರಂಭಿಸಲು ಬಯಸುತ್ತೇನೆ ಮತ್ತು ಅವರ ಹಿಂದಿನ, ವರ್ತಮಾನ ಮತ್ತು ಉದಯೋನ್ಮುಖ ಹಿರಿಯರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

July 09th, 03:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನ ಮಾರ್ವೆಲ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ವಿಶೇಷ ಸದ್ಭಾವನೆಯ ಸಂಕೇತವಾಗಿ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೂ ಸಹ ಈ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

July 09th, 11:15 am

ಈ ಹಂಚಿಕೆಯ ಗುಣಲಕ್ಷಣಗಳು ಮತ್ತು ನಮ್ಮ ಸಾಮಾನ್ಯ ವಿಶ್ವ ದೂರದೃಷ್ಟಿಯು ಆಳವಾದ ಪರಸ್ಪರ ನಂಬಿಕೆಯೊಂದಿಗೆ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಅಭೂತಪೂರ್ವ ಪ್ರಗತಿಯನ್ನು ಕಂಡಿದೆ ಮತ್ತು ಇಂದು ಮೂರನೇ ವಾರ್ಷಿಕ ಶೃಂಗಸಭೆಯು ನಮ್ಮ ಸಹಕಾರಕ್ಕೆ ಹಲವು ಹೊಸ ಆಯಾಮಗಳನ್ನು ಸೇರ್ಪಡೆ ಮಾಡಿದೆ.

ನವದೆಹಲಿಯಲ್ಲಿ ನಡೆದ ರಿಪಬ್ಲಿಕ್ ಶೃಂಗಸಭೆ 2026 ರಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

June 22nd, 10:24 pm

ಸ್ವರ ಸಾಧನೆ, ಮನೋಕಮಾನ, ಆರಾಧನಾ - ಅಂತಹ ಶುಭ ಆರಂಭದ ನಂತರ, ನಿಮ್ಮ ಕಾರ್ಯಕ್ರಮ ಮುಂದುವರೆದಿದ್ದರೆ ಅದು ಅದ್ಭುತವಾಗಿರುತ್ತಿತ್ತು. ನಿಮ್ಮೆಲ್ಲರಿಗೂ ಶುಭಾಶಯಗಳು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಪಬ್ಲಿಕ್ ಶೃಂಗಸಭೆ 2026 ಉದ್ದೇಶಿಸಿ ಭಾಷಣ ಮಾಡಿದರು

June 22nd, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಪಬ್ಲಿಕ್ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಶೃಂಗಸಭೆಯಲ್ಲಿ ಭಾಗವಹಿಸಿದವರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ ಅವರು, ಜಗತ್ತು ಕ್ಷಿಪ್ರ ಮತ್ತು ಪರಿಣಾಮಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ಮಹಾನ್ ಶಕ್ತಿ ಭಾರತ: ರಾಷ್ಟ್ರ ಮೊದಲು ಎಂಬ ವಿಷಯದ ಕುರಿತು ಚರ್ಚೆಯನ್ನು ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಅಭಿನಂದಿಸಿದರು.

The trust of 140 crore Indians is our greatest strength and responsibility: PM Modi at the NDA Leaders’ Conclave

June 10th, 06:33 pm

PM Modi addressed the NDA Leaders' Conclave in New Delhi, highlighting the government's commitment to fulfilling the aspirations of 140 crore Indians and accelerating India's journey towards a Viksit Bharat. Speaking at the NDA Conclave at Bharat Mandapam after becoming the longest continuously serving elected Prime Minister of India, he said, To have the opportunity to serve Maa Bharti for such a long time is possible only through God's blessings. For me, 'Janta Janardan' is God.

PM Modi addresses NDA Leaders' Conclave, reaffirms commitment to Viksit Bharat

June 10th, 06:30 pm

PM Modi addressed the NDA Leaders' Conclave in New Delhi, highlighting the government's commitment to fulfilling the aspirations of 140 crore Indians and accelerating India's journey towards a Viksit Bharat. Speaking at the NDA Conclave at Bharat Mandapam after becoming the longest continuously serving elected Prime Minister of India, he said, To have the opportunity to serve Maa Bharti for such a long time is possible only through God's blessings. For me, 'Janta Janardan' is God.

ಅಹಮದಾಬಾದ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಯೋಗಾಸನ ವಿಶ್ವ ಚಾಂಪಿಯನ್ ಶಿಪ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

June 04th, 06:41 pm

ಇಂದು, ಅಹಮದಾಬಾದ್ ನ ಮಣ್ಣಿನಿಂದ ವಿಶ್ವದ ಕ್ರೀಡಾ ಪರಂಪರೆಗೆ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಇಂದು ಪ್ರಾರಂಭವಾಗುತ್ತಿದೆ. ಇದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ವಿವಿಧ ದೇಶಗಳ ಎಲ್ಲಾ ಕ್ರೀಡಾಪಟುಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅವರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಯುನೆಸ್ಕೋ ವಿಶ್ವ ಪರಂಪರೆಯ ನಗರವಾದ ಅಹಮದಾಬಾದ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ, ಜೂನ್ 21 ರಂದು ‘ವಿಶ್ವ ಯೋಗ ದಿನ’ವನ್ನು ಸಹ ಆಚರಿಸಲಾಗುವುದು. ಅಂದು ವಿವಿಧ ದೇಶಗಳಲ್ಲಿ ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿದ್ದು, ಮುಖ್ಯ ಕಾರ್ಯಕ್ರಮವು ಭಾರತದ ಮತ್ತೊಂದು ಐತಿಹಾಸಿಕ ನಗರವಾದ ಕೋಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ, ವಿಶ್ವ ಯೋಗ ದಿನಕ್ಕೂ ಮೊದಲು ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಬಂದಿರುವುದು, ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ಅನ್ನು ತಂದಿದೆ.

ಗುಜರಾತ್ ನ ಅಹಮದಾಬಾದ್ ನಲ್ಲಿ, ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಅನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

June 04th, 06:40 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನಿಂದ ವಿಡಿಯೋ ಸಂದೇಶದ ಮೂಲಕ ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಅನ್ನು ಉದ್ಘಾಟಿಸಿದರು, ಇದು ಜಾಗತಿಕ ಕ್ರೀಡಾ ಪರಂಪರೆಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಇಂದು, ಅಹಮದಾಬಾದ್ ನ ಮಣ್ಣಿನಿಂದ ವಿಶ್ವದ ಕ್ರೀಡಾ ಪರಂಪರೆಗೆ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಭಾರತದ ಪ್ರಧಾನಮಂತ್ರಿ ಅವರ ನೆದರ್‌ಲ್ಯಾಂಡ್ಸ್ ಭೇಟಿ ಕುರಿತು ಭಾರತ- ನೆದರ್‌ಲ್ಯಾಂಡ್ಸ್ ಜಂಟಿ ಹೇಳಿಕೆ

May 17th, 03:45 am

ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 16-17ರಂದು ನೆದರ್‌ಲ್ಯಾಂಡ್ಸ್ ಗೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನಮಂತ್ರಿ ಮೋದಿ ಅವರು ನೆದರ್‌ಲ್ಯಾಂಡ್ಸ್ ಗೆ ನೀಡುತ್ತಿರುವ 2ನೇ ಭೇಟಿಯಾಗಿದೆ.

ನೆದರ್‌ಲ್ಯಾಂಡ್ಸ್ ನಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 16th, 01:30 pm

ಇಲ್ಲಿ ತುಂಬಾ ಪ್ರೀತಿ, ತುಂಬಾ ಉತ್ಸಾಹ ಕಾಣುತ್ತಿದೆ. ನಿಜ ಹೇಳಬೇಕೆಂದರೆ, ನಾನು ನೆದರ್‌ಲ್ಯಾಂಡ್ಸ್‌ನಲ್ಲಿದ್ದೇನೆ ಎಂಬುದನ್ನು ಒಂದು ಕ್ಷಣ ಮರೆತೇ ಬಿಟ್ಟಿದ್ದೆ. ಭಾರತದಲ್ಲಿಯೇ ಎಲ್ಲೋ ಒಂದು ಹಬ್ಬ ನಡೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ!

ನೆದರ್ಲ್ಯಾಂಡ್ಸ್ ನಲ್ಲಿರುವ ಅನಿವಾಸಿ ಭಾರತೀಯ ಸಮುದಾಯದವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 16th, 01:20 pm

ಇಂದು ನಡೆದ ಭಾರತೀಯ ವಲಸಿಗ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಗ್ ನಲ್ಲಿ ಭಾಗವಹಿಸಿದ್ದರು. ಆಗಮಿಸಿದಾಗ, ನೆದರ್ಲ್ಯಾಂಡ್ಸ್ ನಲ್ಲಿರುವ ಭಾರತೀಯ ವಲಸಿಗರು ಮತ್ತು ಭಾರತದ ಸ್ನೇಹಿತರ ದೊಡ್ಡ ಸಭೆಯಿಂದ ಅವರಿಗೆ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ದೊರೆಯಿತು.

ಬಜೆಟ್ ನಂತರದ ವೆಬಿನಾರ್‌ನಲ್ಲಿ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಈಡೇರಿಸುವುದು" ವಿಷಯ ಕುರಿತು ಪ್ರಧಾನಮಂತ್ರಿ ಅವರ ವಿಶೇಷ ಭಾಷಣ

March 09th, 10:30 am

ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇಂದು 4ನೇ ಮತ್ತು ಅತ್ಯಂತ ಮಹತ್ವದ ವೆಬಿನಾರ್‌ ನಡೆಸಲಾಗುತ್ತಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಕೇವಲ ಚರ್ಚೆಯ ವಿಷಯವಲ್ಲ - ಇದು ಈ ಬಜೆಟ್‌ನ ಪ್ರಮುಖ ಉದ್ದೇಶ ಮತ್ತು ಈ ಸರ್ಕಾರದ ದೃಢ ಸಂಕಲ್ಪವಾಗಿದೆ. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಈ ಆಕಾಂಕ್ಷೆಗಳನ್ನು ಈಡೇರಿಸುವ ಪ್ರಮುಖ ಸಾಧನಗಳಾಗಿ ಕಾರ್ಯ ನಿರ್ವಹಿಸುವ ಮೂಲಭೂತ ಕ್ಷೇತ್ರಗಳಾಗಿವೆ. ಆದ್ದರಿಂದ, ಈ ವೆಬಿನಾರ್‌ನಲ್ಲಿ ನಾವು ಈ ನಿರ್ಣಾಯಕ ಆಯಾಮ(ವಿಷಯ)ಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಇಲ್ಲಿ ಉಪಸ್ಥಿತರಿರುವ ಎಲ್ಲಾ ತಜ್ಞರು, ನೀತಿ ನಿರೂಪಕರು, ವಿದ್ವಾಂಸರು, ಉದ್ಯಮಿಗಳು ಮತ್ತು ನನ್ನ ಯುವ ಒಡನಾಡಿಗಳ ಆಲೋಚನೆಗಳು ಮತ್ತು ಸಲಹೆಗಳು ಅತ್ಯಂತ ಮುಖ್ಯ. ಬಜೆಟ್ ವೆಬಿನಾರ್‌ನ ಈ 4ನೇ ಕಲಾಪದಲ್ಲಿ ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

"ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಈಡೇರಿಸುವುದು" ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

March 09th, 10:15 am

ಸಬ್ ಕಾ ಸಾಥ್ ಸಬ್ ಕಾ ವಿಕಾಸ್-ಜನರ ಆಕಾಂಕ್ಷೆಗಳನ್ನು ಪೂರೈಸುವುದು ಎಂಬ ವಿಷಯ ಕುರಿತ ಬಜೆಟ್ ನಂತರದ 4ನೇ ಸರಣಿಯ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರಗಳು ಈ ಗುರಿಗಳನ್ನು ಸಾಧಿಸುವ ಪ್ರಾಥಮಿಕ ಸಾಧನಗಳಾಗಿವೆ ಎಂದು ಒತ್ತಿ ಹೇಳಿದ ಮೋದಿ, ಬಜೆಟ್ ಘೋಷಣೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಚರ್ಚಿಸಬೇಕು ಎಂದು ತಜ್ಞರು ಮತ್ತು ನೀತಿ ನಿರೂಪಕರನ್ನು ಸ್ವಾಗತಿಸಿದರು. ಸಾರ್ವಜನಿಕ ಆಕಾಂಕ್ಷೆಗಳನ್ನು ಪೂರೈಸುವುದು ಕೇವಲ ಒಂದು ವಿಷಯವಲ್ಲ; ಇದು ಈ ಬಜೆಟ್ ಮತ್ತು ಈ ಸರ್ಕಾರದ ನಿರ್ಣಯದ ಪ್ರಮುಖ ಉದ್ದೇಶವಾಗಿದೆ ಎಂದು ಮೋದಿ ಹೇಳಿದರು.

ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

January 04th, 01:00 pm

ಉತ್ತರ ಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಜಿ, ಉತ್ತರ ಪ್ರದೇಶದ ಸಚಿವರಾದ ಸಹೋದರ ರವೀಂದ್ರ ಜೈಸ್ವಾಲ್ ಜಿ, ದಯಾಶಂಕರ್ ಜಿ, ಗಿರೀಶ್ ಯಾದವ್ ಜಿ, ಬನಾರಸ್ ಮೇಯರ್ ಅಶೋಕ್ ತಿವಾರಿ ಜಿ, ಇತರೆ ಜನಪ್ರತಿನಿಧಿಗಳೆ, ವಾಲಿಬಾಲ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳೆ, ದೇಶಾದ್ಯಂತ ಬಂದಿರುವ ಆಟಗಾರರೆ ಮತ್ತು ಕಾಶಿಯ ನನ್ನ ಕುಟುಂಬ ಸದಸ್ಯರೆಲ್ಲರಿಗೂ ನಮಸ್ಕಾರ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ʻ72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿʼಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು

January 04th, 12:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ವಾರಣಾಸಿಯ ಸಂಸತ್ ಸದಸ್ಯನಾಗಿ, ಎಲ್ಲಾ ಆಟಗಾರರನ್ನು ಸ್ವಾಗತಿಸಲು ಮತ್ತು ಅಭಿನಂದಿಸಲು ಸಂತಸವಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಇಂದಿನಿಂದ ವಾರಣಾಸಿಯಲ್ಲಿ ಪ್ರಾರಂಭವಾಗುತ್ತಿದೆ. ಆಟಗಾರರು ಅಪಾರ ಕಠಿಣ ಪರಿಶ್ರಮದ ಬಳಿಕ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ತಲುಪಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ವಾರಣಾಸಿಯ ಮೈದಾನದಲ್ಲಿ ಅವರ ಪ್ರಯತ್ನಗಳನ್ನು ಪರೀಕ್ಷಿಗೆ ಒಡ್ಡಲಾಗುವುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇಶದ 28 ರಾಜ್ಯಗಳ ತಂಡಗಳು ಒಟ್ಟುಗೂಡಿ ʻಏಕ ಭಾರತ, ಶ್ರೇಷ್ಠ ಭಾರತʼದ ಸುಂದರ ಚಿತ್ರಣವನ್ನು ಪ್ರಸ್ತುತಪಡಿಸಿವೆ ಎಂದು ಅವರು ಹೇಳಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಪ್ರಧಾನಮಂತ್ರಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.