ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಕುರಿತು ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

March 24th, 02:05 pm

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅದರಿಂದ ಉಂಟಾಗುವ ಸನ್ನಿವೇಶಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇಂದು ನಾನು ಈ ಗಂಭೀರ ಪರಿಸ್ಥಿತಿಗಳ ಕುರಿತು ಸರ್ಕಾರದ ನಿಲುವು ಹಂಚಿಕೊಳ್ಳಲು ಸಂಸತ್ತಿನ ಮೇಲ್ಮನೆಯ ಮುಂದೆ ಮತ್ತು ನನ್ನ ಸಹ ನಾಗರಿಕರ ಮುಂದೆ ನಿಂತಿದ್ದೇನೆ. ಈ ಯುದ್ಧವು ಈಗ 3 ವಾರಗಳಿಗೂ ಹೆಚ್ಚು ಕಾಲದಿಂದ ಮುಂದುವರೆದಿದೆ. ಇದು ವಿಶ್ವಾದ್ಯಂತ ತೀವ್ರ ಇಂಧನ ಬಿಕ್ಕಟ್ಟು ಸೃಷ್ಟಿಸಿದೆ. ಭಾರತಕ್ಕೂ ಈ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿವೆ. ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಗಳು ಅಸ್ತವ್ಯಸ್ತಗೊಂಡಿವೆ. ಸುಮಾರು 1 ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಜೀವನೋಪಾಯ ಖಚಿತಪಡಿಸಿಕೊಳ್ಳುವುದು ಭಾರತಕ್ಕೆ ಒಂದು ಪ್ರಮುಖ ಕಾಳಜಿಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅನೇಕ ಹಡಗುಗಳು ಸಿಲುಕಿಕೊಂಡಿವೆ, ಅದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಇದ್ದಾರೆ. ಇದು ಭಾರತಕ್ಕೂ ಗಂಭೀರ ಕಳವಳದ ವಿಷಯವಾಗಿದೆ. ಇಂತಹ ಭೀಕರ ಸಂದರ್ಭಗಳಲ್ಲಿ ಸಂಸತ್ತಿನ ಈ ಮೇಲ್ಮನೆಯಿಂದ ಶಾಂತಿ ಮತ್ತು ಸಂವಾದಕ್ಕಾಗಿ ಒಗ್ಗಟ್ಟಿನ ಧ್ವನಿ ಇಡೀ ಜಗತ್ತನ್ನು ತಲುಪುವುದು ಅತ್ಯಗತ್ಯವಾಗಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡಿದರು

March 24th, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸಿದ ಪರಿಸ್ಥಿತಿಯ ಕುರಿತು ಸರ್ಕಾರದ ನಿಲುವನ್ನು ಮಂಡಿಸಿದರು. ಮೂರು ವಾರಗಳಿಗೂ ಹೆಚ್ಚು ಕಾಲದಿಂದ ಭುಗಿಲೆದ್ದಿರುವ ಈ ಯುದ್ಧವು ಭಾರತದ ಮೇಲೆ ತೀವ್ರ ಆತಂಕಕಾರಿ ಪರಿಣಾಮಗಳನ್ನು ಬೀರುವ ಸೂಚನೆಗಳೊಂದಿಗೆ ತೀವ್ರ ಜಾಗತಿಕ ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ ಎಂಬುದನ್ನು ತಿಳಿಸಿದ ಪ್ರಧಾನಮಂತ್ರಿ ಮೋದಿ ಅವರು, ಈ ಸಂಘರ್ಷವು ಭಾರತದ ವ್ಯಾಪಾರ ಮಾರ್ಗಗಳನ್ನು ಅಡ್ಡಿಪಡಿಸುತ್ತಿದೆ ಮತ್ತು ಪೆಟ್ರೋಲ್, ಡೀಸೆಲ್, ಅನಿಲ ಹಾಗೂ ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಸುಮಾರು ಒಂದು ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದು, ಕೆಲಸ ಮಾಡುತ್ತಿರುವುದರಿಂದ, ಅವರ ಸುರಕ್ಷತೆ ಮತ್ತು ಜೀವನೋಪಾಯವು ತೀವ್ರ ಕಳವಳದ ವಿಷಯವಾಗಿ ಮೂಡಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು, ಜೊತೆಗೆ ಹಾರ್ಮುಜ್ ಜಲಸಂಧಿಯಲ್ಲಿ, ಹಡಗುಗಳಲ್ಲಿ ಸಿಲುಕಿಕೊಂಡಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ಸದಸ್ಯರ ಬಗ್ಗೆಯೂ ಗಮನ ಸೆಳೆದರು. ಇಂತಹ ಗಂಭೀರ ಸಂದರ್ಭದಲ್ಲಿ, ಭಾರತ ಸಂಸತ್ತಿನ ಈ ಘನ ಮೇಲ್ಮನೆಯಿಂದ ಇಡೀ ಜಗತ್ತಿಗೆ ಶಾಂತಿ ಮತ್ತು ಸಂವಾದದ ಏಕೀಕೃತ ಧ್ವನಿ ಹೊರಹೊಮ್ಮುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಅವರು ದೃಢಪಡಿಸಿದರು.

ಎನ್‌ಎಕ್ಸ್‌ಟಿ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

March 12th, 10:47 pm

ಇಂದು, ಮಾರ್ಚ್ 12, ಬಹಳ ಐತಿಹಾಸಿಕ ದಿನ. 1930 ಮಾರ್ಚ್ 12ರಂದು, ಮಹಾತ್ಮ ಗಾಂಧಿ ಅವರು ಸಬರಮತಿ ಆಶ್ರಮದಿಂದ ದಂಡಿಯಾತ್ರೆ ಪ್ರಾರಂಭಿಸಿದರು. ಇದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಒಂದು ಮಹತ್ವದ ತಿರುವು, ಏಕೆಂದರೆ ಈ ಪ್ರಯಾಣವು ದೇಶದ ಪ್ರತಿಯೊಂದು ಮೂಲೆಯನ್ನು ಒಂದೇ ಗುರಿಯೊಂದಿಗೆ ಸಂಪರ್ಕಿಸಿತು. ಅದೇ ಭಾರತದ ಸ್ವಾತಂತ್ರ್ಯ. ಇಂದು ಈ ಐತಿಹಾಸಿಕ ಪ್ರಯಾಣದ ಸುಮಾರು 100 ವರ್ಷಗಳ ನಂತರ, ನಾವು ಭಾರತೀಯರು ಮತ್ತೊಂದು ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಪ್ರಯಾಣವು ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ(ವಿಕಸಿತ ಭಾರತ). ನಮ್ಮ ಗುರಿ ಒಂದೇ, ನಮ್ಮ ಗಮ್ಯಸ್ಥಾನ ಒಂದೇ – ಅದೇ ಅಭಿವೃದ್ಧಿ ಹೊಂದಿದ ಭಾರತ. ಈ ಗುರಿ ಸಾಧಿಸುವಲ್ಲಿ ಇಂತಹ ಶೃಂಗಗಳಲ್ಲಿ ನಡೆಯುವ ಚಿಂತನ ಮಂಥನ ಮತ್ತು ಅವುಗಳಿಂದ ಪಡೆದ ಅಮೃತವು ದೊಡ್ಡ ಪಾತ್ರ ವಹಿಸುತ್ತದೆ. ಮುಂದಿನ ಶೃಂಗಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ. ದೇಶ ಮತ್ತು ವಿಶ್ವದ ಅನೇಕ ಸಹೋದ್ಯೋಗಿಗಳು ಇಲ್ಲಿಗೆ ಬಂದಿದ್ದಾರೆ, ಕೆಲವರು ಹಳೆಯ ಪರಿಚಯಸ್ಥರು ಇದ್ದಾರೆ. ನಿಮ್ಮೆಲ್ಲರನ್ನು ನಾನು ಸ್ವಾಗತಿಸುತ್ತೇನೆ.

ಎನ್‌ಎಕ್ಸ್‌ಟಿ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

March 12th, 08:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಐಟಿವಿ ನೆಟ್‌ವರ್ಕ್‌ನ ಎನ್‌ಎಕ್ಸ್‌ಟಿ ಶೃಂಗಸಭೆ ಉದ್ದೇಶಿಸಿ ಮಾತನಾಡಿದರು. ದಂಡಿಯಾತ್ರೆಯ ಐತಿಹಾಸಿಕ ವಾರ್ಷಿಕೋತ್ಸವ ಗುರುತಿಸಿದ ಅವರು, ಭಾರತದ ಅಂದಿನ ಸ್ವಾತಂತ್ರ್ಯ ಹೋರಾಟ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಇಂದಿನ ಅನ್ವೇಷಣೆಯ ನಡುವಿನ ಸಮಾನಾಂತರ ಚಿಂತನೆಯನ್ನು ಪ್ರಸ್ತಾಪಿಸಿದರು. 1930ರ ದಂಡಿಯಾತ್ರೆಯು ದೇಶವನ್ನು ಸ್ವಾತಂತ್ರ್ಯದತ್ತ ಒಗ್ಗೂಡಿಸಿದಂತೆ, ಪ್ರಸ್ತುತ ವಿಕಸಿತ ಭಾರತ ಮಿಷನ್ 140 ಕೋಟಿ ಭಾರತೀಯರ ಸಾಮೂಹಿಕ ಗುರಿಯಾಗಿದೆ ಎಂದು ಮೋದಿ ಹೇಳಿದರು. ಇಂದು ಆ ಐತಿಹಾಸಿಕ ಪ್ರಯಾಣದ ಸುಮಾರು 100 ವರ್ಷಗಳ ನಂತರ, ನಾವು ಭಾರತೀಯರು ಮತ್ತೊಮ್ಮೆ 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ)ಕ್ಕಾಗಿ ಹೊಸ ಪ್ರಯಾಣ ಆರಂಭಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.

ಭಾರತ ಇಂಧನ ಸಪ್ತಾಹ-2026 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ

January 27th, 10:15 am

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಗೋವಾ ಮುಖ್ಯಮಂತ್ರಿಗಳೆ, ಇತರೆ ಸಚಿವರೆ, ರಾಯಭಾರಿಗಳೆ, ಸಿಇಒಗಳೆ, ಗಣ್ಯ ಅತಿಥಿಗಳೆ, ಇತರ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ʻಭಾರತ ಇಂಧನ ಸಪ್ತಾಹ-2026ʼರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ

January 27th, 10:08 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಭಾರತ ಇಂಧನ ಸಪ್ತಾಹ-2026ʼರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತು ಆರಂಭಿಸಿದ ಶ್ರೀ ಮೋದಿಯವರು, ಇಂಧನ ಸಪ್ತಾಹದ ಈ ಹೊಸ ಆವೃತ್ತಿಗಾಗಿ ಸುಮಾರು 125 ದೇಶಗಳ ಪ್ರತಿನಿಧಿಗಳು ಗೋವಾದಲ್ಲಿ ಸೇರಿದ್ದಾರೆ ಎಂದು ಹೇಳಿದರು. ಇಂಧನ-ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಚರ್ಚಿಸಲು ಅವರು ಭಾರತಕ್ಕೆ ಬಂದಿದ್ದಾರೆ ಎಂದು ಅವರು ಒತ್ತಿ ಹೇಳಿದ ಪ್ರಧಾನಮಂತ್ರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು.

ಜುಲೈ 18ರಂದು ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

July 17th, 11:04 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 18ರಂದು ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30 ರ ಸುಮಾರಿಗೆ ಬಿಹಾರದ ಮೋತಿಹರಿಯಲ್ಲಿ 7,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಅವರು ಶಿಲಾನ್ಯಾಸ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿ ಅವರು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಅವರನ್ನು ಭೇಟಿಯಾದರು

July 06th, 01:48 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರ್ಜೆಂಟೀನಾದ ಅಧ್ಯಕ್ಷ ಘನತೆವೆತ್ತ ಜೇವಿಯರ್ ಮಿಲೀ ಅವರನ್ನು ಭೇಟಿ ಮಾಡಿದರು. ಕಾಸಾ ರೊಸಾಡಾಗೆ ಆಗಮಿಸಿದಾಗ ಅಧ್ಯಕ್ಷ ಮಿಲೀ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಿನ್ನೆ ಬ್ಯೂನಸ್ ಐರಿಸ್ ಗೆ ಆಗಮಿಸಿದ ಪ್ರಧಾನಮಂತ್ರಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. 57 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿರುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತಿರುವುದರಿಂದ ಇದು ಭಾರತ-ಅರ್ಜೆಂಟೀನಾ ಸಂಬಂಧಗಳಿಗೆ ಮಹತ್ವದ ವರ್ಷವಾಗಿದೆ. ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ಮಿಲೀ ಅವರಿಗೆ ಧನ್ಯವಾದ ಅರ್ಪಿಸಿದರು.

ಪ್ರಧಾನಮಂತ್ರಿ ಅವರಿಂದ ಅರ್ಜೆಂಟೀನಾ ಅಧ್ಯಕ್ಷರ ಭೇಟಿ

November 20th, 08:09 pm

ಇದು ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಾಗಿತ್ತು. ಐತಿಹಾಸಿಕ ಮೂರನೇ ಅವಧಿಯ ಅಧಿಕಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಮಿಲೀ ಅವರು ಅಭಿನಂದಿಸಿದರು. ಪ್ರಧಾನಮಂತ್ರಿ ಸಹ ಅಧ್ಯಕ್ಷ ಮೈಲಿ ಅವರು ಅಧಿಕಾರ ವಹಿಸಿಕೊಂಡಿರುವುದಕ್ಕೆ ಶುಭ ಕೋರಿದರು.

ಫೆಬ್ರವರಿ 16 ರಂದು ವಿಕಸಿತ ‘ಭಾರತ – ವಿಕಸಿತ ರಾಜಸ್ಥಾನ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ

February 15th, 03:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಫೆಬ್ರವರಿ 16 ರಂದು ಬೆಳಿಗ್ಗೆ 11 ಗಂಟೆಗೆ ‘ವಿಕಸಿತ ಭಾರತ – ವಿಕಸಿತ ರಾಜಸ್ಥಾನ’ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಜಸ್ಥಾನದಲ್ಲಿ 17,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಸ್ತೆ, ರೈಲ್ವೆ, ಸೌರ ವಿದ್ಯುತ್, ವಿದ್ಯುತ್ ಪ್ರಸರಣ, ಕುಡಿಯುವ ನೀರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಪ್ರಮುಖ ಕ್ಷೇತ್ರಗಳ ಯೋಜನೆಗಳನ್ನು ಇವು ಒಳಗೊಂಡಿವೆ.

​​​​​​​ಗೋವಾದಲ್ಲಿ ನಡೆದ ಭಾರತ ಇಂಧನ ಸಪ್ತಾಹ 2024 ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅನುವಾದ

February 06th, 12:00 pm

ಇದು ಭಾರತ ಇಂಧನ ಸಪ್ತಾಹದ ಎರಡನೇ ಆವೃತ್ತಿ, ನಾನು ನಿಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇದು ಕ್ರಿಯಾಶೀಲ ಶಕ್ತಿಗೆ ಹೆಸರಾದ ರಾಜ್ಯ ಗೋವಾದಲ್ಲಿ ನಡೆಯುತ್ತಿರುವುದು ನನಗೆ ಅತೀವ ಆನಂದ ತಂದಿದೆ. ತನ್ನ ಆತಿಥ್ಯಕ್ಕೆ ಹೆಸರುವಾಸಿಯಾದ ಗೋವಾ ತನ್ನ ಶ್ರೀಮಂತ ಸೌಂದರ್ಯ ಮತ್ತು ಸಂಸ್ಕೃತಿಯಿಂದಾಗಿ ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಸ್ತುತ ಗೋವಾ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರುತ್ತಿದೆ. ಆದ್ದರಿಂದ, ಪರಿಸರ ಪ್ರಜ್ಞೆ ಮತ್ತು ಸುಸ್ಥಿರ ಭವಿಷ್ಯವನ್ನು ಚರ್ಚಿಸಲು ನಾವು ಸಭೆ ನಡೆಸುತ್ತಿರುವಾಗ, ಗೋವಾ ಒಂದು ಸೂಕ್ತ ಸ್ಥಳವಾಗಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಮ್ಮ ಗೌರವಾನ್ವಿತ ವಿದೇಶಿ ಅತಿಥಿಗಳು ಜೀವಮಾನವಿಡೀ ಗೋವಾದ ಅಚ್ಚುಮೆಚ್ಚಿನ ನೆನಪುಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆಂಬ ವಿಶ್ವಾಸ ನನಗಿದೆ

​​​​​​​ಇಂಡಿಯಾ ಇಂಧನ ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಮಂತ್ರಿ

February 06th, 11:18 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದಲ್ಲಿಂದು “ಭಾರತ ಇಂಧನ ಸಪ್ತಾಹ-2024” ಕಾರ್ಯಕ್ರಮ ಉದ್ಘಾಟಿಸಿದರು. “ಭಾರತ ಇಂಧನ ಸಪ್ತಾಹ-2024” ಕಾರ್ಯಕ್ರಮವು ಭಾರತದ ಅತಿ ದೊಡ್ಡ ಮತ್ತು ಎಲ್ಲವನ್ನು ಒಳಗೊಂಡಿರುವ ಇಂಧನ ಪ್ರದರ್ಶನ ಮತ್ತು ಸಮ್ಮೇಳನವಾಗಿದ್ದು, ಭಾರತದ ಇಂಧನ ಪರಿವರ್ತನೆಯ ಗುರಿಗಳನ್ನು ವೇಗಗೊಳಿಸಲು ಸಂಪೂರ್ಣ ಇಂಧನ ಮೌಲ್ಯ ಸರಪಳಿಯನ್ನು ಒಟ್ಟುಗೂಡಿಸುತ್ತದೆ. ಪ್ರಧಾನ ಮಂತ್ರಿ ಅವರು ಜಾಗತಿಕ ಮಟ್ಟದ ತೈಲ ಮತ್ತು ಅನಿಲ ಕ್ಷೇತ್ರದ ಸಿಇಒಗಳು ಮತ್ತು ತಜ್ಞರೊಂದಿಗೆ ದುಂಡುಮೇಜಿನ ಸಭೆ ನಡೆಸಿದರು.

​​​​​​​ಕೃಷ್ಣಾ- ಗೋದಾವರಿ ಜಲಾನಯನ ಪ್ರದೇಶದಿಂದ ಆಳ ನೀರಿನಲ್ಲಿ ತೈಲ ಉತ್ಪಾದನೆ ಶುಭಾರಂಭಕ್ಕೆ ಪ್ರಧಾನ ಮಂತ್ರಿಗಳ ಶ್ಲಾಘನೆ

January 08th, 10:06 am

ಕೃಷ್ಣಾ- ಗೋದಾವರಿ ಜಲಾನಯನ ಪ್ರದೇಶದಲ್ಲಿ ಸಂಕೀರ್ಣ ಮತ್ತು ಕ್ಲಿಷ್ಟಕರವಾದ ಆಳವಾದ ನೀರಿನಲ್ಲಿ ಮೊದಲ ತೈಲ ಉತ್ಪಾದನಾ ಕಾರ್ಯ (ಕೆಜಿ-ಡಿಡಬ್ಲ್ಯೂಎನ್-98/2 ಬ್ಲಾಕ್, ಬಂಗಾಳ ಕೊಲ್ಲಿಯ ಕರಾವಳಿಯಲ್ಲಿದೆ) ಶುಭಾರಂಭಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂದು ಶ್ಲಾಘಿಸಿದ್ದಾರೆ.

ಜಾಗತಿಕ ತೈಲ ಮತ್ತು ಅನಿಲ ವಲಯದ ತಜ್ಞರು ಮತ್ತು ಸಿಇಒಗಳ ಜತೆ ಪ್ರಧಾನ ಮಂತ್ರಿ ವೀಡಿಯೊ ಕಾನ್ಫರೆನ್ಸ್ ಸಂವಾದ

October 20th, 09:17 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳು ಮತ್ತು ತಜ್ಞರ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.