ಅನಿವಾಸಿ ಭಾರತೀಯ ನಾಗರಿಕರ (ಒಸಿಐ) ಹೊಸ ಪೋರ್ಟಲ್ ಗೆ ಪ್ರಧಾನಮಂತ್ರಿ ಮೆಚ್ಚುಗೆ
May 19th, 09:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯ ನಾಗರಿಕರ (ಒಸಿಐ) ಹೊಸ ಪೋರ್ಟಲ್ ಅನ್ನು ಶ್ಲಾಘಿಸಿದ್ದಾರೆ. ವೈಶಿಷ್ಟ್ಯಗಳ ವರ್ಧನೆ ಸಹಿತವಾಗಿ ಸುಧಾರಿತ ಕಾರ್ಯನಿರ್ವಹಣೆಯೊಂದಿಗೆ, ಹೊಸ ಒಸಿಐ ಪೋರ್ಟಲ್ ನಾಗರಿಕ ಸ್ನೇಹಿ ಡಿಜಿಟಲ್ ಆಡಳಿತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.