ಐಸಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ
November 06th, 10:15 am
ಗೌರವಾನ್ವಿತ ಪ್ರಧಾನಮಂತ್ರಿಗಳೇ, ತುಂಬು ಧನ್ಯವಾದಗಳು. ನಾವು ಇಲ್ಲಿರುವುದಕ್ಕೆ ನಮಗೆ ಅಪಾರ ಗೌರವ ಮತ್ತು ಸೌಭಾಗ್ಯ ತಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಒಂದು ಅಭಿಯಾನದ ಬಗ್ಗೆ ಹೇಳಲು ಬಯಸುತ್ತೇನೆ. ಈ ಹೆಣ್ಣು ಮಕ್ಕಳು ಅದ್ಭುತಗಳನ್ನೇ ಮಾಡಿದ್ದಾರೆ, ನಿಜವಾಗಿಯೂ ಅದ್ಭುತ. ಕಳೆದ 2 ವರ್ಷಗಳಿಂದ, ಅವರು ತುಂಬಾ ಶ್ರಮ ಹಾಕಿದ್ದಾರೆ. ಅಪಾರ ಪ್ರಯತ್ನವನ್ನು ತೋರಿಸಿದ್ದಾರೆ. ಪ್ರತಿ ಅಭ್ಯಾಸ ಅವಧಿಯಲ್ಲೂ, ಅವರು ಪೂರ್ಣ ಗಮನ ಮತ್ತು ಶಕ್ತಿ ಹಾಕಿ ಆಡಿದರು. ಅವರ ಕಠಿಣ ಪರಿಶ್ರಮ ನಿಜವಾಗಿಯೂ ಫಲ ನೀಡಿದೆ ಎಂದು ನಾನು ಹೇಳುತ್ತೇನೆ.ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಸಂವಾದ
November 06th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ ಮಾರ್ಗದ ನಂಬರ್ 7ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್ ಗಳೊಂದಿಗೆ ಸಂವಾದ ನಡೆಸಿದರು. 2025ರ ನವೆಂಬರ್ 2ರಂದು ರಾತ್ರಿ ನಡೆದ ಫೈನಲ್ಸ್ ನಲ್ಲಿ ಭಾರತ ತಂಡ ದಕ್ಷಿಣಾ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತು. ದೇವ ದೀಪಾವಳಿ ಮತ್ತು ಗುರುಪುರಬ್ ಎರಡನ್ನೂ ಗುರುತಿಸುವ ಈ ದಿನವು ಬಹಳ ಮಹತ್ವದ ದಿನವಾಗಿದೆ ಎಂದು ಪ್ರಧಾನಮಂತ್ರಿಹೇಳಿದರು ಮತ್ತು ಹಾಜರಿದ್ದ ಎಲ್ಲಾ ಆಟಗಾರ್ತಿಯರಿಗೂ ಶುಭ ಕೋರಿದರು.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
September 04th, 05:35 pm
ನಮ್ಮ ಸಂಪ್ರದಾಯದಲ್ಲಿ ಶಿಕ್ಷಕರ ಬಗ್ಗೆ ವಿಶೇಷ ಗೌರವವಿದೆ, ಮತ್ತು ಅವರು ಸಮಾಜದ ದೊಡ್ಡ ಶಕ್ತಿಯೂ ಹೌದು. ಶಿಕ್ಷಕರು ಆಶೀರ್ವಾದಕ್ಕಾಗಿ ಎದ್ದು ನಿಲ್ಲುವಂತೆ ಮಾಡುವುದು ತಪ್ಪು. ನಾನು ಅಂತಹ ಪಾಪವನ್ನು ಮಾಡಲು ಬಯಸುವುದಿಲ್ಲ. ಆದರೆ ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ. ನನಗೆ, ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ಅದ್ಭುತ ಅನುಭವವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮದೇ ಆದ ಕಥೆಯನ್ನು ಹೊಂದಿರಬೇಕು, ಏಕೆಂದರೆ ಅದು ಇಲ್ಲದೇ, ನೀವು ಈ ಹಂತವನ್ನು ತಲುಪುತ್ತಿರಲಿಲ್ಲ. ಆ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯವನ್ನು ಒದಗಿಸುವುದು ಕಷ್ಟ, ಆದರೆ ನಾನು ನಿಮ್ಮಿಂದ ಕಲಿಯಬಹುದಾದ ಸ್ವಲ್ಪವಾದರೂ ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು ಮತ್ತು ಅದಕ್ಕಾಗಿ, ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಕೊನೆಯಲ್ಲ. ಈಗ, ಈ ಪ್ರಶಸ್ತಿಯ ನಂತರ ಎಲ್ಲರ ಗಮನವು ನಿಮ್ಮ ಮೇಲಿದೆ. ಇದರರ್ಥ ನಿಮ್ಮ ವ್ಯಾಪ್ತಿಯು ಗಮನಾರ್ಹವಾಗಿ ವಿಸ್ತರಿಸಿದೆ. ಹಿಂದೆ, ನಿಮ್ಮ ಪ್ರಭಾವ ಅಥವಾ ಆದೇಶದ ವ್ಯಾಪ್ತಿಯು ಸೀಮಿತವಾಗಿತ್ತು, ಆದರೆ ಈಗ ಈ ಮನ್ನಣೆಯ ನಂತರ, ಅದು ಹೆಚ್ಚು ವಿಸ್ತಾರವಾಗಿ ಬೆಳೆಯಬಹುದು. ಇದು ಆರಂಭ ಎಂದು ನಾನು ನಂಬುತ್ತೇನೆ ಮತ್ತು ಈ ಅವಕಾಶವನ್ನು ಬಳಸಿಕೊಳ್ಳಬೇಕು. ನಿಮ್ಮೊಳಗೆ ಏನೇ ಇರಲಿ, ಅದನ್ನು ನೀವು ಸಾಧ್ಯವಾದಷ್ಟು ಹಂಚಿಕೊಳ್ಳಬೇಕು. ನೀವು ಹಾಗೆ ಮಾಡಿದಾಗ, ನಿಮ್ಮ ತೃಪ್ತಿಯ ಭಾವನೆ ಬೆಳೆಯುತ್ತದೆ ಮತ್ತು ನೀವು ಆ ದಿಕ್ಕಿನಲ್ಲಿ ಶ್ರಮಿಸುವುದನ್ನು ಮುಂದುವರಿಸಬೇಕು. ಈ ಪ್ರಶಸ್ತಿಗೆ ನಿಮ್ಮ ಆಯ್ಕೆಯು ನಿಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ಇದು ಸಾಧ್ಯವಾಗಿದೆ. ಒಬ್ಬ ಶಿಕ್ಷಕ ಕೇವಲ ವರ್ತಮಾನದ ಬಗ್ಗೆ ಅಲ್ಲ, ರಾಷ್ಟ್ರದ ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಾನೆ, ಭವಿಷ್ಯವನ್ನು ಮೆರುಗುಗೊಳಿಸುತ್ತಾನೆ ಮತ್ತು ಇದು ಇತರರಿಗಿಂತ ಕಡಿಮೆಯಿಲ್ಲದ ರಾಷ್ಟ್ರ ಸೇವೆಯಾಗಿದೆ ಎಂದು ನಾನು ನಂಬುತ್ತೇನೆ. ಇಂದು, ನಿಮ್ಮಂತಹ ಕೋಟ್ಯಂತರ ಶಿಕ್ಷಕರು ಅದೇ ಭಕ್ತಿ, ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಇಲ್ಲಿಗೆ ಬರುವ ಅವಕಾಶ ಸಿಗುವುದಿಲ್ಲ. ಬಹುಶಃ ಅನೇಕರು ಪ್ರಯತ್ನಿಸಿಲ್ಲ, ಅಥವಾ ಕೆಲವರು ಗಮನಿಸಿಲ್ಲ. ಅಂತಹ ಸಾಮರ್ಥ್ಯಗಳನ್ನು ಹೊಂದಿರುವ ಅಸಂಖ್ಯಾತ ಜನರಿದ್ದಾರೆ. ಅವರೆಲ್ಲರ ಸಾಮೂಹಿಕ ಪ್ರಯತ್ನಗಳಿಂದ ರಾಷ್ಟ್ರವು ಮುಂದುವರಿಯುವುದು, ಹೊಸ ಪೀಳಿಗೆಗಳನ್ನು ಪೋಷಿಸುವುದನ್ನು, ರಾಷ್ಟ್ರಕ್ಕಾಗಿ ಬದುಕುವುದನ್ನು ಖಚಿತಪಡಿಸುತ್ತವೆ ಮತ್ತು ಅದರಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ
September 04th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನುದ್ದೇಶಿಸಿ ಭಾಷಣ ಮಾಡಿದರು. ಭಾರತೀಯ ಸಮಾಜವು ಶಿಕ್ಷಕರ ಬಗ್ಗೆ ಹೊಂದಿರುವ ಸ್ವಾಭಾವಿಕ ಗೌರವವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಬಲ ಶಕ್ತಿ ಎಂದು ಬಣ್ಣಿಸಿದರು. ಶಿಕ್ಷಕರನ್ನು ಗೌರವಿಸುವುದು ಕೇವಲ ಆಚರಣೆಯಲ್ಲ, ಆದರೆ ಅವರ ಜೀವಮಾನದ ಸಮರ್ಪಣೆ ಮತ್ತು ಪ್ರಭಾವದ ಮನ್ನಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು.79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು
August 15th, 03:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕೆಂಪು ಕೋಟೆಯ ಕೊತ್ತಲಗಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರ 103 ನಿಮಿಷಗಳ ಕಾಲ ಕೆಂಪು ಕೋಟೆಯಿಂದ ಮಾಡಿದ ಭಾಷಣವು ಅತ್ಯಂತ ದೀರ್ಘ ಮತ್ತು ನಿರ್ಣಾಯಕ ಭಾಷಣವಾಗಿದ್ದು, 2047ರ ವೇಳೆಗೆ ವಿಕ್ಷಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದೆ. ಪ್ರಧಾನಮಂತ್ರಿ ಅವರ ಭಾಷಣವು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿತ್ತು, ಇತರರನ್ನು ಅವಲಂಬಿಸಿದ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕತ್ವದ ಶಕ್ತಿಯುಳ್ಳ ದೇಶದವರೆಗೆ ಭಾರತದ ಪ್ರಯಾಣವನ್ನು ಎತ್ತಿ ತೋರಿಸಿತು.79ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
August 15th, 07:00 am
ಈ ಸ್ವಾತಂತ್ರ್ಯೋತ್ಸವವು ನಮ್ಮ ಜನರ 140 ಕೋಟಿ ಸಂಕಲ್ಪಗಳ ಆಚರಣೆಯಾಗಿದೆ. ಈ ಸ್ವಾತಂತ್ರ್ಯೋತ್ಸವವು ಸಾಮೂಹಿಕ ಸಾಧನೆಗಳು ಮತ್ತು ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ರಾಷ್ಟ್ರವು ನಿರಂತರವಾಗಿ ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. ಇಂದು, 140 ಕೋಟಿ ಭಾರತೀಯರು ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದ್ದಾರೆ. ಮರುಭೂಮಿಯಾಗಿರಲಿ, ಹಿಮಾಲಯದ ಶಿಖರಗಳಾಗಿರಲಿ, ಸಮುದ್ರ ತೀರಗಳಾಗಿರಲಿ, ಅಥವಾ ಜನನಿಬಿಡ ಪ್ರದೇಶಗಳಾಗಿರಲಿ, 'ಹರ್ ಘರ್ ತಿರಂಗಾ' ಹಾರುತ್ತಿದೆ, ಎಲ್ಲೆಡೆ ಒಂದೇ ಪ್ರತಿಧ್ವನಿ, ಒಂದೇ ಹರ್ಷೋದ್ಗಾರ: ನಮ್ಮ ಜೀವಕ್ಕಿಂತ ಪ್ರಿಯವಾದ ನಮ್ಮ ತಾಯ್ನಾಡಿಗೆ ಜೈ.India celebrates 79th Independence Day
August 15th, 06:45 am
PM Modi, in his address to the nation on the 79th Independence day paid tribute to the Constituent Assembly, freedom fighters, and Constitution makers. He reiterated that India will always protect the interests of its farmers, livestock keepers and fishermen. He highlighted key initiatives—GST reforms, Pradhan Mantri Viksit Bharat Rozgar Yojana, National Sports Policy, and Sudharshan Chakra Mission—aimed at achieving a Viksit Bharat by 2047. Special guests like Panchayat members and “Drone Didis” graced the Red Fort celebrations.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 29.06.2025 ರಂದು ಮಾಡಿದ ‘ಮನ್ ಕಿ ಬಾತ್’ – 123ನೇ ಸಂಚಿಕೆಯ ಕನ್ನಡ ಅವತರಣಿಕೆ
June 29th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ‘ಮನದ ಮಾತು’ ಕಾರ್ಯಕ್ರಮಕ್ಕೆ ಸ್ವಾಗತ, ನಿಮ್ಮೆಲ್ಲರಿಗೂ ಅಭಿನಂದನೆಗಳು. ಯೋಗದ ಶಕ್ತಿ ಮತ್ತು ‘ಅಂತಾರಾಷ್ಟ್ರೀಯ ಯೋಗ ದಿನ’ದ ನೆನಪುಗಳಿಂದ ನಿಮ್ಮ ಮನ ಉತ್ಸಾಹದಿಂದಿರಬಹುದು. ಈ ಬಾರಿಯೂ, ಜೂನ್ 21 ರಂದು, ದೇಶ ಮತ್ತು ವಿದೇಶಗಳ ಕೋಟ್ಯಂತರ ಜನರು ‘ಅಂತಾರಾಷ್ಟ್ರೀಯ ಯೋಗ ದಿನ’ದಲ್ಲಿ ಭಾಗವಹಿಸಿದ್ದರು. ಇದು 10 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂಬುದು ನಿಮಗೆ ನೆನಪಿದೆಯೇ. ಈ 10 ವರ್ಷಗಳಲ್ಲಿ, ಈ ಯೋಗ ದಿನಾಚರಣೆ ಪ್ರತಿ ವರ್ಷವೂ ಭವ್ಯವಾಗುತ್ತಲೇ ಸಾಗುತ್ತಿದೆ. ಹೆಚ್ಚು ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದರ ಸಂಕೇತವೂ ಇದಾಗಿದೆ. ಈ ಬಾರಿ ‘ಯೋಗ ದಿನ’ದ ಸಾಕಷ್ಟು ಆಕರ್ಷಕ ಚಿತ್ರಗಳನ್ನು ನಾವು ನೋಡಿದ್ದೇವೆ. ವಿಶಾಖಪಟ್ಟಣದ ಕಡಲತೀರದಲ್ಲಿ ಮೂರು ಲಕ್ಷ ಜನರು ಒಗ್ಗೂಡಿ ಯೋಗ ಮಾಡಿದರು. ವಿಶಾಖಪಟ್ಟಣದಿಂದಲೇ ಮತ್ತೊಂದು ಅದ್ಭುತ ಕಾರ್ಯಕ್ರಮ ನಡೆದಿರುವುದು ತಿಳಿದು ಬಂದಿದೆ. ಎರಡು ಸಾವಿರಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ಕಾಲ 108 ಸೂರ್ಯ ನಮಸ್ಕಾರಗಳನ್ನು ಇಲ್ಲಿ ಮಾಡಿದ್ದಾರೆ. ಅದೆಷ್ಟು ಶಿಸ್ತು, ಅದೆಷ್ಟು ಸಮರ್ಪಣೆ ಇದ್ದಿರಬೇಕು ಎಂದು ಕಲ್ಪಿಸಿಕೊಳ್ಳಿ. ನಮ್ಮ ನೌಕಾಪಡೆಯ ಹಡಗುಗಳಲ್ಲಿಯೂ ಸಹ ಯೋಗದ ಭವ್ಯ ಪ್ರದರ್ಶನ ನಡೆಯಿತು. ತೆಲಂಗಾಣದಲ್ಲಿ, ಮೂರು ಸಾವಿರ ದಿವ್ಯಾಂಗರು ಒಟ್ಟಾಗಿ ಯೋಗ ಶಿಬಿರದಲ್ಲಿ ಭಾಗವಹಿಸಿದರು. ಯೋಗವು ಯಾವ ರೀತಿ ಸಬಲೀಕರಣದ ಮಾಧ್ಯಮವಾಗಿದೆ ಎಂಬುದನ್ನು ಅವರು ತೋರಿಸಿದರು. ದೆಹಲಿಯ ಜನರು ಶುದ್ಧ ಯಮುನೆಯ ಸಂಕಲ್ಪದೊಂದಿಗೆ ಯಮುನಾ ನದಿ ತೀರದಲ್ಲಿ ಯೋಗ ಪ್ರದರ್ಶನ ಮಾಡಿದರು ಜಮ್ಮು ಮತ್ತು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯಲ್ಲಿಯೂ ಜನರು ಯೋಗ ಮಾಡಿದರು. ಹಿಮಾಲಯದ ಹಿಮಭರಿತ ಶಿಖರಗಳು ಮತ್ತು ಐಟಿಬಿಪಿ ಸೈನಿಕರು ಕೂಡಾ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಶೌರ್ಯ ಮತ್ತು ಸಾಧನೆ ಜೊತೆಗೆ ಹೆಜ್ಜೆ ಹಾಕಿದವು. ಗುಜರಾತ್‌ನ ಜನರು ಕೂಡ ಹೊಸ ಇತಿಹಾಸವನ್ನು ಸೃಷ್ಟಿಸಿದರು. ವಡ್ನಗರದಲ್ಲಿ, 2121 (ಎರಡು ಸಾವಿರದ ನೂರ ಇಪ್ಪತ್ತೊಂದು) ಜನರು ಒಟ್ಟಿಗೆ ಭುಜಂಗಾಸನವನ್ನು ಮಾಡಿದರು ಮತ್ತು ಹೊಸ ದಾಖಲೆಯನ್ನು ಸೃಷ್ಟಿಸಿದರು. ನ್ಯೂಯಾರ್ಕ್, ಲಂಡನ್, ಟೋಕಿಯೊ, ಪ್ಯಾರಿಸ್, ಪ್ರಪಂಚದ ಪ್ರತಿಯೊಂದು ಮಹಾ ನಗರಗಳಿಂದಲೂ ಯೋಗಾಭ್ಯಾಸದ ಚಿತ್ರಗಳು ತಲುಪಿದವು ಮತ್ತು ಪ್ರತಿ ಚಿತ್ರದಲ್ಲೂ ಶಾಂತಿ, ಸ್ಥಿರತೆ ಮತ್ತು ಸಮತೋಲನ ಎಂಬ ವಿಷಯಗಳು ವಿಶೇಷವಾಗಿದ್ದವು. ಈ ಬಾರಿಯ ತತ್ವವು ಬಹಳ ವಿಶೇಷವಾಗಿತ್ತು, ‘Yoga for One Earth, One Health, ಅಂದರೆ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'. ಇದು ಕೇವಲ ಒಂದು ಘೋಷಣೆಯಲ್ಲ, 'ವಸುಧೈವ ಕುಟುಂಬಕಂ' ಎಂಬುದರ ಅನುಭೂತಿ ನಮಗೆ ಮೂಡುವಂತೆ ಮಾಡುವ ನಿರ್ದೇಶನವಾಗಿದೆ. ಈ ವರ್ಷದ ಯೋಗ ದಿನದ ಭವ್ಯತೆ ಖಂಡಿತವಾಗಿಯೂ ಹೆಚ್ಚು ಹೆಚ್ಚು ಜನರನ್ನು ಯೋಗಾಭ್ಯಾಸದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದು ನನಗೆ ವಿಶ್ವಾಸವಿದೆ.ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 28th, 11:15 am
ಶ್ರವಣಬೆಳಗೊಳದ ಸ್ವಾಮಿ ಚಾರುಕೀರ್ತಿ ಜಿ ಮುಖ್ಯಸ್ಥರಾದ ಪರಮ ಶ್ರದ್ಧೆಯ ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜ್ ಜಿ, ನನ್ನ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಜಿ, ನನ್ನ ಸಹ ಸಂಸದ ನವೀನ್ ಜೈನ್ ಜಿ, ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಿಯಾಂಕ್ ಜೈನ್ ಜಿ, ಕಾರ್ಯದರ್ಶಿ ಮಮತಾ ಜೈನ್ ಜಿ, ಇತರೆ ಗೌರವಾನ್ವಿತ ಗಣ್ಯರೆ, ಪೂಜ್ಯ ಸಾಧು ಸಂತರೆ, ಮಹಿಳೆಯರೆ ಮತ್ತು ಮಹನೀಯರೆ, ಜೈ ಜಿನೇಂದ್ರ!ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
June 28th, 11:01 am
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಶತಮಾನೋತ್ಸವ ಆಚರಣೆಯ ಪಾವಿತ್ರ್ಯವನ್ನು ಪ್ರಸ್ತಾಪಿಸಿದ ಅವರು, ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಒಂದು ಮಹತ್ವದ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿದೆ. ಪೂಜ್ಯ ಆಚಾರ್ಯರ ಅಮರ ಸ್ಫೂರ್ತಿಯಿಂದ ತುಂಬಿರುವ ಈ ಕಾರ್ಯಕ್ರಮವು ಅಸಾಧಾರಣ ಮತ್ತು ಉನ್ನತಿಗೇರಿಸುವ ವಾತಾವರಣವನ್ನು ಸೃಷ್ಟಿಸುತ್ತಿದೆ. ಇಲ್ಲಿ ನೆರೆದಿರುವ ಎಲ್ಲಾ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 21st, 07:06 am
ಆಂಧ್ರ ಪ್ರದೇಶ ರಾಜ್ಯಪಾಲರಾದ ಸೈಯದ್ ಅಬ್ದುಲ್ ನಜೀರ್ ಜಿ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ, ನನ್ನ ಆತ್ಮೀಯ ಗೆಳೆಯ ಚಂದ್ರಬಾಬು ನಾಯ್ಡು ಗಾರು, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಕೆ. ರಾಮಮೋಹನ್ ನಾಯ್ಡು ಜಿ, ಪ್ರತಾಪರಾವ್ ಜಾಧವ್ ಜಿ, ಚಂದ್ರಶೇಖರ್ ಜಿ, ಭೂಪತಿ ರಾಜು ಶ್ರೀನಿವಾಸ್ ವರ್ಮಾ ಗಾರು, ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗಾರು, ಇಲ್ಲಿರುವ ಇತರೆ ಗಣ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ! ನಿಮ್ಮೆಲ್ಲರಿಗೂ ನಮಸ್ಕಾರ!ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
June 21st, 06:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವಿಶ್ವ ಯಕೃತ್ತಿನ ದಿನದಂದು ಜಾಗರೂಕತೆಯಿಂದ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವುದನ್ನು ಮತ್ತು ಸ್ಥೂಲಕಾಯತೆಯ ವಿರುದ್ಧ ಹೋರಾಡಲು ನಾಗರಿಕರನ್ನು ಒತ್ತಾಯಿಸಿದ ಪ್ರಧಾನಮಂತ್ರಿ
April 19th, 01:13 pm
ವಿಶ್ವ ಯಕೃತ್ತಿನ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ನಾಗರಿಕರು ಜಾಗರೂಕ ಆಹಾರ ಪದ್ಧತಿಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮತ್ತು ಆರೋಗ್ಯಕರ ಜೀವನಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು. ಸಣ್ಣ ಮತ್ತು ಪರಿಣಾಮಕಾರಿ ಬದಲಾವಣೆಗಳ ಪ್ರಾಮುಖ್ಯತೆಯನ್ನು ತಿಳಿಸುತ್ತಾ, ತೈಲ ಸೇವನೆಯನ್ನು ಕಡಿಮೆ ಮಾಡುವಂತಹ ಕ್ರಮಗಳು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಗಣನೀಯವಾಗಿ ಕೊಡುಗೆ ನೀಡುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.ಸಿಲ್ವಾಸ್ಸಾದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಭಾಷಣ
March 07th, 03:00 pm
ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಆಡಳಿತಾಧಿಕಾರಿ ಶ್ರೀ ಪ್ರಫುಲ್ಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀಮತಿ ಕಲ್ಬೆನ್ ಡೆಲ್ಕರ್, ಎಲ್ಲಾ ಗಣ್ಯರೇ, ಸಹೋದರ ಸಹೋದರಿಯರೇ, ನಮಸ್ಕಾರ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಚಾಲನೆ ನೀಡಿದರು
March 07th, 02:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಪ್ರದೇಶದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಅವಕಾಶ ನೀಡಿದ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಮರ್ಪಿತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಜನರೊಂದಿಗೆ ತಾವು ಹೊಂದಿರುವ ಆತ್ಮೀಯತೆ ಮತ್ತು ದೀರ್ಘಕಾಲದ ಸಂಪರ್ಕವನ್ನು ಅವರು ನೆನಪಿಸಿಕೊಂಡರು, ಈ ಪ್ರದೇಶದೊಂದಿಗಿನ ತಮ್ಮ ಬಂಧವು ದಶಕಗಳಷ್ಟು ಹಳೆಯದು ಎಂಬುದನ್ನವರು ಹಂಚಿಕೊಂಡರು. 2014 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಪ್ರದೇಶವು ಸಾಧಿಸಿದ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಾಮರ್ಥ್ಯವನ್ನು ಆಧುನಿಕತೆ ಮತ್ತು ಪ್ರಗತಿಯ ಗುರುತಾಗಿ ಪರಿವರ್ತಿಸಿರುವುದನ್ನು ಅವರು ಪ್ರಸ್ತಾಪಿಸಿದರು.ಇತ್ತೀಚಿನ “ಮನ್ ಕಿ ಬಾತ್” ಸಂಚಿಕೆಯಲ್ಲಿ ಬೊಜ್ಜಿನ ವಿರುದ್ಧ ಸಾಮೂಹಿಕ ಕ್ರಮಕ್ಕೆ ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ
February 24th, 09:11 am
ಹೆಚ್ಚುತ್ತಿರುವ ಬೊಜ್ಜು ಪ್ರಮಾಣವನ್ನು ಎದುರಿಸುವ ತುರ್ತು ಅಗತ್ಯವನ್ನು ವಿವರಿಸುತ್ತಾ, ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಪ್ರತಿಪಾದಿಸಲು ಪ್ರಮುಖ ವ್ಯಕ್ತಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಮನಿರ್ದೇಶನ ಮಾಡಿದರು. ಆರೋಗ್ಯದ ಕುರಿತಾದ ಆಂದೋಲನವನ್ನು ಮತ್ತಷ್ಟು ವಿಸ್ತರಿಸಲು ಇನ್ನೂ 10 ಜನರನ್ನು ಪರಸ್ಪರ ನಾಮನಿರ್ದೇಶನ ಮಾಡುವಂತೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು.