ಭಾರತದ ಪ್ರಧಾನಮಂತ್ರಿ ಅವರ ನೆದರ್‌ಲ್ಯಾಂಡ್ಸ್ ಭೇಟಿ ಕುರಿತು ಭಾರತ- ನೆದರ್‌ಲ್ಯಾಂಡ್ಸ್ ಜಂಟಿ ಹೇಳಿಕೆ
May 17th, 03:45 am
ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 16-17ರಂದು ನೆದರ್‌ಲ್ಯಾಂಡ್ಸ್ ಗೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನಮಂತ್ರಿ ಮೋದಿ ಅವರು ನೆದರ್‌ಲ್ಯಾಂಡ್ಸ್ ಗೆ ನೀಡುತ್ತಿರುವ 2ನೇ ಭೇಟಿಯಾಗಿದೆ.ಪ್ರಮುಖ ಡಚ್ ಕಂಪನಿಗಳ ʻಸಿಇಒʼಗಳನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
May 16th, 10:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ರಾಬ್ ಜೆಟ್ಟನ್ ಅವರು ಇಂದು ಇಂಧನ, ಬಂದರುಗಳು, ಆರೋಗ್ಯ, ಕೃಷಿ ವ್ಯಾಪಾರ ಮತ್ತು ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳ ಪ್ರಮುಖ ಡಚ್ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಜೊತೆ ಚರ್ಚೆ ನಡೆಸಿದರು. ಉದ್ಯಮ ಮುಖಂಡರು ಮೂರು ಕ್ಲಸ್ಟರ್‌ಗಳ ಬಗ್ಗೆ ಪ್ರಸ್ತುತಿಗಳನ್ನು ನೀಡಿದರು ಮತ್ತು ಭಾರತಕ್ಕಾಗಿ ತಮ್ಮ ಕಾರ್ಯತಂತ್ರಗಳನ್ನು ವಿವರಿಸಿದರು, ಅವುಗಳೆಂದರೆ: ಸೆಮಿಕಂಡಕ್ಟರ್‌ಗಳು, ತಂತ್ರಜ್ಞಾನ ಮತ್ತು ನಾವೀನ್ಯತೆ; ಮೂಲಸೌಕರ್ಯ, ಸರಕು-ಸಾಗಣೆ ಮತ್ತು ಕಡಲಯಾನ; ಸುಸ್ಥಿರತೆ, ಇಂಧನ ಮತ್ತು ಕೃಷಿ.