CoalSETU ವಿಂಡೋಗೆ ಸಚಿವ ಸಂಪುಟದ ಅನುಮೋದನೆ: ವಿವಿಧ ಕೈಗಾರಿಕಾ ಬಳಕೆ ಮತ್ತು ರಫ್ತುಗಳಿಗಾಗಿ ಕಲ್ಲಿದ್ದಲು ಲಿಂಕೇಜ್ ಹರಾಜು; ನ್ಯಾಯಯುತ ಪ್ರವೇಶ ಹಾಗೂ ಸಂಪನ್ಮೂಲಗಳ ಸದ್ಬಳಕೆಯ ಖಾತರಿ
December 12th, 04:18 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿಯು CoalSETU ನೀತಿಗೆ ಇಂದು ಹಸಿರು ನಿಶಾನೆ ತೋರಿದೆ. ಕಲ್ಲಿದ್ದಲಿನ ತಡೆರಹಿತ, ದಕ್ಷ ಹಾಗೂ ಪಾರದರ್ಶಕ ಬಳಕೆಗಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇದರ ಅನ್ವಯ, ಲಿಂಕೇಜ್ ನೀತಿಯ ಅಡಿಯಲ್ಲಿ CoalSETU ವಿಂಡೋ ಎಂಬ ಹೊಸ ವ್ಯವಸ್ಥೆಯನ್ನು ತೆರೆಯಲಾಗುತ್ತಿದ್ದು, ಇದು ಯಾವುದೇ ಕೈಗಾರಿಕಾ ಬಳಕೆ ಹಾಗೂ ರಫ್ತಿಗಾಗಿ ಕಲ್ಲಿದ್ದಲನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸರ್ಕಾರ ಕೈಗೊಳ್ಳುತ್ತಿರುವ ಕಲ್ಲಿದ್ದಲು ವಲಯದ ಸರಣಿ ಸುಧಾರಣೆಗಳಲ್ಲಿ ಇದೂ ಒಂದಾಗಿದೆ.