ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ 53ನೇ ʼಪ್ರಗತಿʼ ಸಭೆ
August 25th, 09:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇವಾ ತೀರ್ಥದಲ್ಲಿ ನಡೆದ ಕ್ರಿಯಾತ್ಮಕ ಆಡಳಿತ ಮತ್ತು ಸಕಾಲಿಕ ಅನುಷ್ಠಾನಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧಾರಿತ, ಬಹು-ಮಾದರಿಯ ವೇದಿಕೆಯಾದ 'ಪ್ರಗತಿ'ಯ (PRAGATI) 53ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಯುಪಿಐ ಒಂದು ದಶಕ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಯುಪಿಐ ಅನುಭವಗಳನ್ನು ಹಂಚಿಕೊಳ್ಳುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಆಹ್ವಾನ
August 25th, 11:12 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ದಶಕದ ಹಿಂದೆ ಜಾರಿಗೊಳಿಸಲಾದ ಮತ್ತು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪಯಣದಲ್ಲಿ ಪ್ರಮುಖ ತಿರುವು ಪಡೆದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನ ಪರಿವರ್ತನಾತ್ಮಕ ಪಯಯಣವನ್ನು ಸ್ಮರಿಸಿಕೊಂಡರು.ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಒಂದು ಬಹು-ಟ್ರ್ಯಾಕಿಂಗ್ ಯೋಜನೆಗೆ ಸಂಪುಟ ಅನುಮೋದನೆ, ಭಾರತೀಯ ರೈಲ್ವೆಯ ಪ್ರಸ್ತುತ ಜಾಲ ಸುಮಾರು 46 ಕಿ.ಮೀ.ಗಳಷ್ಟು ವಿಸ್ತರಣೆ
July 24th, 04:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿರುವ ಬಳ್ಳಾರಿ - ಗುಂತಕಲ್ ವಿಭಾಗದ 3 ನೇ ಮತ್ತು 4 ನೇ ರೈಲು ಮಾರ್ಗಕ್ಕೆ ಸುಮಾರು ₹1,264 ಕೋಟಿ ಒಟ್ಟು ವೆಚ್ಚದಲ್ಲಿ ಅನುಮೋದನೆ ನೀಡಿದೆ.ಪಂಜಾಬ್‌ನ ಜಲಂಧರ್‌ನಲ್ಲಿ ₹5,470 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
July 17th, 03:45 pm
ಪಂಜಾಬ್‌ನ ಜಲಂಧರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ₹5,470 ಕೋಟಿಗೂ ಹೆಚ್ಚು ಮೌಲ್ಯದ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು, ಇದು ಸಂಪರ್ಕವನ್ನು ಬಲಪಡಿಸುವುದು, ಪ್ರಯಾಣಿಕರ ಅನುಕೂಲತೆಯನ್ನು ಸುಧಾರಿಸುವುದು ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.ಪ್ರಧಾನಮಂತ್ರಿ ಅವರು ಜುಲೈ 17 ರಂದು ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಗೆ ಭೇಟಿ ನೀಡಲಿದ್ದಾರೆ
July 15th, 06:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜುಲೈ 17ರಂದು ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಪ್ರಧಾನಮಂತ್ರಿಯವರು ಜಿಂದ್ ರೈಲು ನಿಲ್ದಾಣದಲ್ಲಿ ಜಿಂದ್ ಮತ್ತು ಸೋನಿಪತ್ ನಡುವಿನ ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ ಸುಮಾರು 11:30 ಗಂಟೆಗೆ ಪ್ರಧಾನಮಂತ್ರಿಯವರು ಜಿಂದ್ ನ ಏಕಲವ್ಯ ಕ್ರೀಡಾಂಗಣದಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.ರಾಷ್ಟ್ರೀಯ ಹೆದ್ದಾರಿ-19 ಮತ್ತು ಉತ್ತರ ಪ್ರದೇಶದ ವಾರಣಾಸಿ ರಿಂಗ್ ರಸ್ತೆ ನಡುವೆ 6 ಪಥದ ಗ್ರೀನ್‌ಫೀಲ್ಡ್ ಎಲಿವೇಟೆಡ್ ಕಾರಿಡಾರ್ ಮತ್ತು ಇಳಿಜಾರುಗಳು/ಲೂಪ್‌ಗಳು ಮತ್ತು ಪಾದಚಾರಿ ಮೇಲ್ಸೇತುವೆಯನ್ನು ಹೈಬ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ರಾಷ್ಟ್ರೀಯ ಹೆದ್ದಾರಿ(O) ಅಡಿಯಲ್ಲಿ ಒಟ್ಟು 14447.64 ಕೋಟಿ ರೂ. ಬಂಡವಾಳ ವೆಚ್ಚ
July 15th, 04:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆಯನ್ನು ನಿವಾರಿಸಲು ಗಂಗಾ ನದಿಯ ಉದ್ದಕ್ಕೂ ನದಿ ದಂಡೆಯ ಸಂಪರ್ಕದೊಂದಿಗೆ ರಾಷ್ಟ್ರೀಯ ಹೆದ್ದಾರಿ-19 (NH-19) ಮತ್ತು ವಾರಣಾಸಿ ರಿಂಗ್ ರಸ್ತೆ ನಡುವೆ ಲಿಂಕ್/ಕನೆಕ್ಟರ್ ಕಾರಿಡಾರ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಆರು ಪಥಗಳ ಎತ್ತರದ ಮುಖ್ಯ ಕ್ಯಾರೇಜ್‌ವೇ, ಐಕಾನಿಕ್ ಕೇಬಲ್-ಸ್ಟೇಯ್ಡ್ ಸೇತುವೆ, ಎಕ್ಸ್‌ಟ್ರಾಡೋಸ್ಡ್ ಫುಟ್ ಓವರ್ ಬ್ರಿಡ್ಜ್-ಕಮ್-ಮೇಜರ್ ಬ್ರಿಡ್ಜ್, ಲೂಪ್‌ಗಳು, ಇಳಿಜಾರುಗಳು, ಲಿಂಕ್ ರಸ್ತೆಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಿರುವ 46.039 ಕಿ.ಮೀ ಯೋಜನೆಯನ್ನು ಹೈಬ್ರಿಡ್ ಅನ್ಯುಟಿ ಮಾದರಿ (HAM) ಅಡಿಯಲ್ಲಿ14,447.64 ಕೋಟಿ ರೂ. ಒಟ್ಟು ಬಂಡವಾಳ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು, ಇದರಲ್ಲಿ ಸಿವಿಲ್ ಕಾಮಗಾರಿ ವೆಚ್ಚ 6,037.85 ಕೋಟಿ ರೂ. (ಯುಟಿಲಿಟಿ ಶಿಫ್ಟಿಂಗ್ ಸೇರಿದಂತೆ, ಜಿಎಸ್‌ಟಿ ಹೊರತುಪಡಿಸಿ) ಮತ್ತು 541.11 ಕೋಟಿ ರೂ. ಭೂಸ್ವಾಧೀನ ವೆಚ್ಚ ಸೇರಿವೆ.ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುವ, ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 145 ಕಿಲೋಮೀಟರ್ ಗಳಷ್ಟು ಹೆಚ್ಚಿಸುವ ಎರಡು ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
July 15th, 04:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಇಂದು ರೈಲ್ವೆ ಸಚಿವಾಲಯದ ಒಟ್ಟು ಅಂದಾಜು 3,907 ಕೋಟಿ ರೂಪಾಯಿ ವೆಚ್ಚದ 2 (ಎರಡು) ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಈ ಕೆಳಗಿನಂತಿವೆ:India-Indonesia Joint Statement on the State Visit by Prime Minister of India to Indonesia
July 07th, 05:15 pm
At the invitation of Indonesian President Prabowo Subianto, PM Modi is on a State Visit to Indonesia from 6-8 July 2026. PM Modi's visit reflects the shared commitment of the two leaders to achieve a substantial upward trajectory in the India-Indonesia Comprehensive Strategic Partnership. The two leaders held discussions at Istana Merdeka in Jakarta, covering the full spectrum of bilateral relations.ರಾಜಸ್ಥಾನದ ಬಲೋತ್ರಾದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 04th, 12:50 pm
ಈ ಭೂಮಿ ಅಸಂಖ್ಯಾತ ವೀರರ ಶೌರ್ಯಕ್ಕೆ ಸಾಕ್ಷಿಯಾಗಿದೆ. ಈ ಯುದ್ಧಭೂಮಿಯ ಪ್ರತಿಯೊಂದು ಕಣವು ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನ ಕಾಪಾಡಲು ನಮಗೆ ಕಲಿಸಿದೆ. ಸ್ವಾಭಿಮಾನ - ಅದು ವ್ಯಕ್ತಿಯಾಗಿರಲಿ ಅಥವಾ ರಾಷ್ಟ್ರವಾಗಿರಲಿ - ಅದು ಸ್ವಾವಲಂಬಿಯಾಗಿದ್ದಾಗ ಮಾತ್ರ, ಸಾಧ್ಯವಾದಷ್ಟು ಇತರರ ಮೇಲೆ ಕಡಿಮೆ ಅವಲಂಬಿತವಾದಾಗ ಮಾತ್ರ ಉನ್ನತ ಸ್ಥಾನದಲ್ಲಿ ಉಳಿಯುತ್ತದೆ. ಇಂದು ರಾಜಸ್ಥಾನದ ಮಣ್ಣಿನಿಂದ ಭಾರತವು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿಯಾಗುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಇಂದು ಈ ಸಂಸ್ಕರಣಾಗಾರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಸಂಸ್ಕರಣಾಗಾರವು ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತದೆ. ಈ ಸಂಸ್ಕರಣಾಗಾರಕ್ಕಾಗಿ ನಾನು ರಾಜಸ್ಥಾನದ ಯುವಕರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.ರಾಜಸ್ಥಾನದ ಬಲೋತ್ರಾದಲ್ಲಿ ಸುಮಾರು 1.06 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
July 04th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಬಲೋತ್ರಾದಲ್ಲಿ ಸುಮಾರು 1.06 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಉಪಕ್ರಮಗಳಿಗೆ ಹೆಚ್ಚು ಸಹಯೋಗದ ಶಕ್ತಿಯನ್ನು ನೀಡುವ ಇಂಗಿತವನ್ನು ತಮ್ಮ ಉತ್ಸಾಹದ ಮಾತುಗಳಲ್ಲಿ ವ್ಯಕ್ತಪಡಿಸಿದರು. ಬೇಸಿಗೆಯ ತೀವ್ರ ಬಿಸಿಲಿನ ಬಿಸಿಲಿನ ತಾಪವನ್ನು ಧೈರ್ಯದಿಂದ ನಿಭಾಯಿಸಿದ್ದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಬೃಹತ್ ಪ್ರಮಾಣದ ಜನಸಮೂಹದ ಪಾಲ್ಗೊಳ್ಳುವಿಕೆಯು ಪ್ರಸ್ತುತ ಆಡಳಿತಕ್ಕೆ ನೀಡಿರುವ ಬೆಂಬಲದ ದೃಢೀಕರಣವಾಗಿದೆ ಎಂದು ವ್ಯಾಖ್ಯಾನಿಸಿದರು. ಈ ಅಪಾರ ಬೆಂಬಲಕ್ಕಾಗಿ ನಾನು ರಾಜಸ್ಥಾನದ ಮಣ್ಣಿಗೆ ಸಂಪೂರ್ಣವಾಗಿ ಋಣಿಯಾಗಿದ್ದೇನೆ, ಇದು ನಮ್ಮ ಸರ್ಕಾರದ ಪ್ರಯತ್ನಗಳಲ್ಲಿ ನಿಮ್ಮ ಅತ್ಯುನ್ನತ ನಂಬಿಕೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ ಎಂದು ಶ್ರೀ ಮೋದಿ ದೃಢಪಡಿಸಿದರು.ಜುಲೈ 4 ರಂದು ಪ್ರಧಾನಮಂತ್ರಿ ಅವರಿಂದ ರಾಜಸ್ಥಾನ ಮತ್ತು ಗುಜರಾತ್ ಭೇಟಿ
July 03rd, 11:25 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 4, 2026 ರಂದು ರಾಜಸ್ಥಾನ ಮತ್ತು ಗುಜರಾತಿಗೆ ಭೇಟಿ ನೀಡಲಿದ್ದಾರೆ. ಸುಮಾರು ಬೆಳಿಗ್ಗೆ 10:45ಕ್ಕೆ, ಪ್ರಧಾನಮಂತ್ರಿ ಅವರು ಜೋಧ್ ಪುರ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮತ್ತು ಜೋಧ್ಪುರದಲ್ಲಿ ಮಾರ್ಪಡಿಸಿದ ಉಡಾನ್ ('ಮೋಡಿಫೈಡ್ ಉಡಾನ್') ಯೋಜನೆಗೆ ಚಾಲನೆ ನೀಡಲಿದ್ದಾರೆ. ತದನಂತರ, ಮಧ್ಯಾಹ್ನ ಸುಮಾರು 12:15ಕ್ಕೆ ಅವರು ಬಲೋತ್ರಾಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಲಿದ್ದಾರೆ, ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಪಶ್ಚಿಮ ಬಂಗಾಳದ ತಾರಕೇಶ್ವರದಲ್ಲಿ ನಡೆದ ಪಶ್ಚಿಮಬಂಗಾ ದಿವಸ್ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅನುವಾದ
June 20th, 05:13 pm
ಈ ವೇದಿಕೆಯಲ್ಲಿ, ರಾಜ್ಯಪಾಲ ಆರ್.ಎನ್. ರವಿ ಜೀ, ಜನಪ್ರಿಯ ಮತ್ತು ಶಕ್ತಿಯುತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೀ, ಇತರ ಗಣ್ಯರು ಮತ್ತು ಬಂಗಾಳದ ನನ್ನ ಸಹೋದರ ಸಹೋದರಿಯರು - ಬಾಬಾ ತಾರಕನಾಥ್ ಅವರ ಈ ಪವಿತ್ರ ಭೂಮಿ, ಐತಿಹಾಸಿಕ ಪಶ್ಚಿಮ ಬಂಗಾಳ ದಿನಾಚರಣೆಯಂದು ಮತ್ತು ಇಷ್ಟು ದೊಡ್ಡ ಸಭೆಯ ಸಮ್ಮುಖದಲ್ಲಿ, ಚುನಾವಣೆಗಳು ಮತ್ತು ಪ್ರಮಾಣ ವಚನ ಸ್ವೀಕಾರದ ನಂತರ ಮೊದಲ ಬಾರಿಗೆ ನಿಮ್ಮೊಂದಿಗೆ ಇರುವುದಕ್ಕೆ ನನಗೆ ಹೆಮ್ಮೆ ಎನಿಸಿದೆ. ಬಂಗಾಳದ ಗಾಳಿಯು ಈಗ ಹೊಸ ತಾಜಾತನವನ್ನು ಹೊಂದಿದೆ, ಪ್ರತಿಯೊಂದು ಕಣವೂ ಹೊಸ ಪರಿಮಳವನ್ನು ಹೊರಸೂಸುತ್ತಿದೆ. ಬಂಗಾಳವು ಸಂಕೋಲೆಗಳಿಂದ ಮುಕ್ತವಾಗಿದೆ ಎಂದು ಭಾಸವಾಗುತ್ತದೆ, ಬಂಗಾಳದ ಹೆಮ್ಮೆ ಮರಳಲು ಪ್ರಾರಂಭಿಸಿದೆ. ಇಂದಿನ ಕಾರ್ಯಕ್ರಮ, ಈ ಯೋಜನೆಗಳ ಉದ್ಘಾಟನೆಯು ಹೊಸ ಭವಿಷ್ಯವನ್ನು ನಿರ್ಮಿಸುವ ಬಂಗಾಳದ ಬದ್ಧತೆಗೆ ಸಾಕ್ಷಿಯಾಗಿದೆ. ಜನರ ಮುಖಗಳಲ್ಲಿನ ಹೊಳಪು, ಪ್ರತಿ ಹಳ್ಳಿಯಲ್ಲಿನ ಸಂತೋಷ ಮತ್ತು ನಂಬಿಕೆ - ನಿಮ್ಮ ಸಂತೋಷದಲ್ಲಿ ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಒಂದು ಮತ, ಒಂದು ಚುನಾವಣೆ, ಅದು ಎಷ್ಟು ಪರಿವರ್ತನೆ ತರಬಹುದು - ಇದು ಬಂಗಾಳದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ 'ಪಶ್ಚಿಮ ಬಂಗಾ ದಿವಸ' ಆಚರಣೆಯಲ್ಲಿ ಭಾಗವಹಿಸಿದರು
June 20th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳ ದಿವಸ (ಪಶ್ಚಿಮ ಬಂಗಾಳ ದಿನ) ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ನಂಟು ಹೊಂದಿರುವ ಐತಿಹಾಸಿಕ ಮಹತ್ವದ ಸ್ಥಳವಾದ ಹೂಗ್ಲಿಯ ತಾರಕೇಶ್ವರದಲ್ಲಿ ರಾಜ್ಯ ಮಟ್ಟದ ಆಚರಣೆಗಳನ್ನು ಆಯೋಜಿಸಲಾಗಿದೆ. ಈ ವರ್ಷದ ಪಶ್ಚಿಮ ಬಂಗಾಳ ದಿನಾಚರಣೆಯ ವಿಷಯವಾದ ಪಶ್ಚಿಮ ಬಂಗಾಳ: ಪರಂಪರೆ, ಸಾಮರಸ್ಯ ಮತ್ತು ಅಭಿವೃದ್ಧಿ ಎಂಬುದು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.ವಿಕಸಿತ ಭಾರತಕ್ಕಾಗಿ ಮುಂದಿನ ಪೀಳಿಗೆಯ ಮೂಲಸೌಕರ್ಯ ವ್ಯವಸ್ಥೆಯನ್ನು ನಿರ್ಮಿಸುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ
June 16th, 12:50 pm
ಕಳೆದ ದಶಕದಲ್ಲಿ ದಾಖಲೆಯ ಮೂಲಸೌಕರ್ಯ ನವೀಕರಣ ಕಂಡುಬಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೇಶದ ಜನತೆಗೆ ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ನಿರ್ಮಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ.ಭಾರತ-ಸ್ಲೋವಾಕಿಯಾ ಜಂಟಿ ಹೇಳಿಕೆ
June 15th, 05:32 pm
ಸ್ಲೋವಾಕ್ ಗಣರಾಜ್ಯದ ಪ್ರಧಾನ ಮಂತ್ರಿಗಳಾದ ಘನತೆವೆತ್ತ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನರೇಂದ್ರ ಮೋದಿ ಅವರು ಜೂನ್ 15, 2026 ರಂದು ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಿದರು.The trust of 140 crore Indians is our greatest strength and responsibility: PM Modi at the NDA Leaders’ Conclave
June 10th, 06:33 pm
PM Modi addressed the NDA Leaders' Conclave in New Delhi, highlighting the government's commitment to fulfilling the aspirations of 140 crore Indians and accelerating India's journey towards a Viksit Bharat. Speaking at the NDA Conclave at Bharat Mandapam after becoming the longest continuously serving elected Prime Minister of India, he said, To have the opportunity to serve Maa Bharti for such a long time is possible only through God's blessings. For me, 'Janta Janardan' is God.PM Modi addresses NDA Leaders' Conclave, reaffirms commitment to Viksit Bharat
June 10th, 06:30 pm
PM Modi addressed the NDA Leaders' Conclave in New Delhi, highlighting the government's commitment to fulfilling the aspirations of 140 crore Indians and accelerating India's journey towards a Viksit Bharat. Speaking at the NDA Conclave at Bharat Mandapam after becoming the longest continuously serving elected Prime Minister of India, he said, To have the opportunity to serve Maa Bharti for such a long time is possible only through God's blessings. For me, 'Janta Janardan' is God.ದಮನ್‌ನಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
June 05th, 10:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಮನ್‌ನಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದರು. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆ ಕೇಂದ್ರಾಡಳಿತ ಪ್ರದೇಶವಾದ ದಮನ್ ನ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆಗಳ ಅಗತ್ಯಗಳನ್ನು ಪೂರೈಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.ಪ್ರಧಾನಮಂತ್ರಿ ಅವರಿಂದ ದಮನ್ ನ ನಮೋ ವಿಮಾನ ನಿಲ್ದಾಣದಲ್ಲಿ ಆಧುನಿಕ ಟರ್ಮಿನಲ್ ಕಟ್ಟಡ ಉದ್ಘಾಟನೆ
June 05th, 10:18 pm
ಈ ಹೊಸ ಸೌಲಭ್ಯವು ಕೇಂದ್ರಾಡಳಿತ ಪ್ರದೇಶದ ಹೆಚ್ಚುತ್ತಿರುವ ಮೂಲಸೌಕರ್ಯ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ. ಟರ್ಮಿನಲ್ ಕಟ್ಟಡವು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಗಮನಾರ್ಹವಾಗಿ ಉತ್ತೇಜಿಸಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ರೋಜ್‌ಗಾರ್ ಮೇಳದ ನೇಮಕಾತಿ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 23rd, 11:15 am
ಈ ಹಂತವನ್ನು ತಲುಪಲು ನೀವು ದೀರ್ಘ ತಯಾರಿ ಮತ್ತು ಕಠಿಣ ಪರಿಶ್ರಮದ ಮೂಲಕ ಬಂದಿದ್ದೀರಿ. ಈ ಸಾಧನೆಗಾಗಿ ನಾನು ನಿಮಗೆ ಮತ್ತು ನಿಮ್ಮ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಇಲ್ಲಿಗೆ ಕರೆತರುವಲ್ಲಿ ನಿಮ್ಮ ಪೋಷಕರು ಮತ್ತು ಕುಟುಂಬಗಳ ಕೊಡುಗೆ ಅಪಾರವಾಗಿದೆ. ನಾವು ಈ ಹಂತಕ್ಕೆ ತಲುಪಲು ಕುಟುಂಬ ಮತ್ತು ಸಮಾಜ ಮಾತ್ರವೇ ದೊಡ್ಡ ಪಾತ್ರವನ್ನು ವಹಿಸಿರುವುದಿಲ್ಲ. ನಾವು ಇಲ್ಲಿಗೆ ಬಂದಿರುವುದು ನಮ್ಮಿಂದಾಗಿ ಅಥವಾ ನಮ್ಮ ಕುಟುಂಬಗಳಿಂದಾಗಿ ಮಾತ್ರ ಅಲ್ಲ. ಈ ವಿಶಾಲ ರಾಷ್ಟ್ರದ 140 ಕೋಟಿ ನಾಗರಿಕರ ಕೊಡುಗೆಯೂ ಸಹ ಬಹಳ ಮಹತ್ವದ್ದಾಗಿದೆ. ಆದ್ದರಿಂದ, ನಮ್ಮ ಜವಾಬ್ದಾರಿ ನಮ್ಮ ಮತ್ತು ನಮ್ಮ ಕುಟುಂಬಗಳ ಕಡೆಗೆ ಮಾತ್ರವಲ್ಲ, ಇಡೀ ಸಮಾಜದ ಕಡೆಗೂ ಹೋಗಬೇಕು. ಈ ಎಲ್ಲಾ ಕೆಲಸಗಳಿಗೆ ನೀವು ಇನ್ನಷ್ಟು ಸಮರ್ಥರಾಗುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.