ಡಾ. ಕೆ. ಕಸ್ತೂರಿರಂಗನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
April 25th, 02:34 pm
ಭಾರತದ ವೈಜ್ಞಾನಿಕ ಮತ್ತು ಶೈಕ್ಷಣಿಕ ವಲಯದ ಅಗ್ರಮಾನ್ಯರಾದ ಡಾ. ಕೆ.ಕಸ್ತೂರಿರಂಗನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಡಾ. ಕೆ. ಕಸ್ತೂರಿರಂಗನ್ ಅವರು ಇಸ್ರೋಗೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದರು, ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಮುನ್ನಡೆಸಿದ್ದರು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಕರಡು ರಚನೆಯ ಪ್ರಕ್ರಿಯೆಯಲ್ಲಿ ಹಾಗೂ ಭಾರತದಲ್ಲಿ ಕಲಿಕೆಯನ್ನು ಹೆಚ್ಚು ಸಮಗ್ರವಾಗಿಸಲು ಮತ್ತು ಮುನ್ನಡೆಸಲು ಡಾ. ಕಸ್ತೂರಿರಂಗನ್ ಅವರ ಪ್ರಯತ್ನಗಳಿಗಾಗಿ ಭಾರತ ಅವರಿಗೆ ಸದಾ ಚಿರ ಋಣಿಯಾಗಿರಲಿದೆ. ಅವರು ಅನೇಕ ಯುವ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ.ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ
September 06th, 04:15 pm
ಸರ್, ಸಂಸ್ಕೃತ ಶಿಕ್ಷಕಿನಾಗಿ, ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ನನ್ನ ಕನಸಾಗಿತ್ತು. ಈ ಸಂಸ್ಕೃತಿಯು ನಮ್ಮ ಪುರಾತನ ಬೋಧನೆಗಳು ಅಥವಾ ಸಂಸ್ಕಾರಗಳ ಮೂಲಕ ಜೀವನದ ಮೌಲ್ಯಗಳು ಮತ್ತು ಆದರ್ಶಗಳನ್ನು ನೀಡುತ್ತದೆ. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ನನ್ನ ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಬಗ್ಗೆ ಆಸಕ್ತಿಯನ್ನು ಬೆಳೆಸಿದ್ದೇನೆ ಮತ್ತು ಅದನ್ನು ನೈತಿಕ ಶಿಕ್ಷಣದ ಅಡಿಪಾಯವನ್ನಾಗಿ ಮಾಡಿದ್ದೇನೆ. ವಿವಿಧ ಶ್ಲೋಕಗಳ ಮೂಲಕ, ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸಲು ನಾನು ಪ್ರಯತ್ನಿಸಿದ್ದೇನೆ.ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ಪ್ರಧಾನ ಮಂತ್ರಿ ಸಂವಾದ
September 06th, 04:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.