2000 ಕೋಟಿ ರೂ. ವೆಚ್ಚದ "ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ ಸಿ ಡಿ ಸಿ) ಕ್ಕೆ ಸಹಾಯಧನ" ಕೇಂದ್ರ ವಲಯ ಯೋಜನೆಗೆ ಸಂಪುಟದ ಅನುಮೋದನೆ

July 31st, 03:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2025-26 ರಿಂದ 2028-29 ರವರೆಗೆ ನಾಲ್ಕು ವರ್ಷಗಳ ಅವಧಿಗೆ (2025-26 ರ ಹಣಕಾಸು ವರ್ಷದಿಂದ ಪ್ರತಿ ವರ್ಷ 500 ಕೋಟಿ ರೂ.) 2000 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ ಸಿ ಡಿ ಸಿ) ಕ್ಕೆ ಅನುದಾನ ಎಂಬ ಕೇಂದ್ರ ವಲಯ ಯೋಜನೆಗೆ ಅನುಮೋದನೆ ನೀಡಿದೆ.