79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು
August 15th, 07:26 pm
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ದಿನಾಚರಣೆಯಲ್ಲಿ ಮಾರಿಷಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಿದರು
March 12th, 03:12 pm
ಸಮಾರಂಭದಲ್ಲಿ, ಮಾರಿಷಸ್ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಶ್ರೀ ಧರ್ಮಬೀರ್ ಗೋಖೂಲ್ ಅವರು ಪ್ರಧಾನಿ ಮೋದಿಯವರಿಗೆ ಮಾರಿಷಸ್ ನ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಅಂಡ್ ಕೀ ಆಫ್ ದಿ ಇಂಡಿಯನ್ ಓಷನ್ (ಜಿ.ಸಿ.ಎಸ್.ಕೆ) ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಭಾರತದ ನಾಯಕರೊಬ್ಬರು ಈ ಗೌರವಕ್ಕೆ ಪಾತ್ರರಾಗುತ್ತಿರುವುದು ಇದೇ ಮೊದಲು.ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಮತ್ತು ಕೀ ಆಫ್ ಇಂಡಿಯನ್ ಓಷನ್ (ಜಿ ಸಿ ಎಸ್ ಕೆ ) ಗೌರವ ಪಡೆದ ಪ್ರಧಾನಮಂತ್ರಿಯವರ ಸ್ವೀಕಾರದ ನುಡಿಗಳು
March 12th, 03:00 pm
ಮಾರಿಷಸ್‌ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಇದು ಕೇವಲ ನನಗೆ ಸಂದಿರುವ ಗೌರವವಲ್ಲ. ಇದು 1.4 ಶತಕೋಟಿ ಭಾರತೀಯರಿಗೆ ಸಂದ ಗೌರವವಾಗಿದೆ. ಭಾರತ ಮತ್ತು ಮಾರಿಷಸ್ ನಡುವಿನ ಶತಮಾನಗಳ ಹಳೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯದ ಗೌರವ ಸೂಚಕವಾಗಿದೆ. ಇದು ಪ್ರಾದೇಶಿಕ ಶಾಂತಿ, ಪ್ರಗತಿ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ಹಂಚಿತ ಬದ್ಧತೆಯ ಗುರುತಿಸುವಿಕೆ ಹಾಗೂ ಜಾಗತಿಕ ದಕ್ಷಿಣದ ಹಂಚಿತ ಭರವಸೆಗಳು ಮತ್ತು ಆಕಾಂಕ್ಷೆಗಳ ಸಂಕೇತವಾಗಿದೆ. ನಾನು ಈ ಪ್ರಶಸ್ತಿಯನ್ನು ಪೂರ್ಣ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಶತಮಾನಗಳ ಹಿಂದೆ ಭಾರತದಿಂದ ಮಾರಿಷಸ್‌ಗೆ ಬಂದ ನಿಮ್ಮ ಪೂರ್ವಜರಿಗೆ ಮತ್ತು ಅವರ ಎಲ್ಲಾ ಪೀಳಿಗೆಗೆ ನಾನು ಅದನ್ನು ಅರ್ಪಿಸುತ್ತೇನೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಅವರು ಮಾರಿಷಸ್ ಅಭಿವೃದ್ಧಿಯಲ್ಲಿ ಸುವರ್ಣ ಅಧ್ಯಾಯವನ್ನು ಬರೆದಿದ್ದಾರೆ ಮತ್ತು ಅದರ ರೋಮಾಂಚಕ ವೈವಿಧ್ಯತೆಗೆ ಕೊಡುಗೆ ನೀಡಿದ್ದಾರೆ.ಭಾರತ - ಮಾರಿಷಸ್ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ
March 12th, 12:30 pm
140 ಕೋಟಿ ಭಾರತೀಯರ ಪರವಾಗಿ, ಮಾರಿಷಸ್ ಜನತೆಗೆ ಅವರ ರಾಷ್ಟ್ರೀಯ ದಿನದಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಮತ್ತೊಮ್ಮೆ ಮಾರಿಷಸ್ ಗೆ ಭೇಟಿ ನೀಡುತ್ತಿರುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ. ಈ ಗೌರವಕ್ಕಾಗಿ ಪ್ರಧಾನಿ ನವೀನಚಂದ್ರ ರಾಮಗೂಲಮ್ ಮತ್ತು ಮಾರಿಷಸ್ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಮಾರಿಷಸ್ ಪ್ರಧಾನಮಂತ್ರಿಯವರು ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಮಂತ್ರಿಯವರ ಭಾಷಣ
March 12th, 06:15 am
ಮೊಟ್ಟ ಮೊದಲಿಗೆ, ಪ್ರಧಾನಮಂತ್ರಿ ಅವರ ಭಾವನಾತ್ಮಕ ಮತ್ತು ಸ್ಪೂರ್ತಿದಾಯಕ ಚಿಂತನೆಗಳಿಗಾಗಿ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಭವ್ಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನಿ, ಮಾರಿಷಸ್ ಸರ್ಕಾರ ಮತ್ತು ಅದರ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ಮಾರಿಷಸ್‌ಗೆ ಭೇಟಿ ನೀಡುವುದು ಭಾರತೀಯ ಪ್ರಧಾನಿಗೆ ಸದಾ ಬಹಳ ವಿಶೇಷವಾಗಿರುತ್ತದೆ. ಇದು ಕೇವಲ ರಾಜತಾಂತ್ರಿಕ ಭೇಟಿಯಲ್ಲ, ಆದರೆ ಕುಟುಂಬವನ್ನು ಭೇಟಿ ಮಾಡುವ ಅವಕಾಶ. ನಾನು ಮಾರಿಷಸ್ ನೆಲದಲ್ಲಿ ಕಾಲಿಟ್ಟ ಕ್ಷಣದಿಂದಲೇ ಈ ಬಾಂಧವ್ಯವನ್ನು ಅನುಭವಿಸಿದೆ. ಎಲ್ಲೆಡೆ ಒಂದೇ ಎಂದು ಸೇರಿಕೊಳ್ಳುವ ಭಾವನೆ ಇದೆ. ಶಿಷ್ಟಾಚಾರದ ಯಾವುದೇ ಅಡೆತಡೆಗಳಿಲ್ಲ. ಮಾರಿಷಸ್ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಮತ್ತೊಮ್ಮೆ ನನ್ನನ್ನು ಆಹ್ವಾನಿಸಿರುವುದು ನನಗೆ ಹಮ್ಮೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ 140 ಕೋಟಿ ಭಾರತೀಯರ ಪರವಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ.ಮಾರಿಷಸ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ
March 12th, 06:07 am
10 ವರ್ಷಗಳ ಹಿಂದೆ ಇದೇ ದಿನದಂದು ನಾನು ಮಾರಿಷಸ್‌ಗೆ ಬಂದಾಗ, ನಾನು ಆಗಮನಕ್ಕೆ ಕೇವಲ ಒಂದು ವಾರ ಮೊದಲು ನಾವು ಹೋಳಿ ಆಚರಿಸಿದೆವು. ನಾನು ಭಾರತದಿಂದ ಫಾಗುವಾದ ಉತ್ಸಾಹವನ್ನು ನನ್ನೊಂದಿಗೆ ತಂದಿದ್ದೇನೆ. ಈ ಬಾರಿ ನಾನು ಮಾರಿಷಸ್‌ನಿಂದ ಭಾರತಕ್ಕೆ ಹೋಳಿಯ ಬಣ್ಣಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಒಂದು ದಿನದ ನಂತರ ನಾವು ಅಲ್ಲಿ ಹೋಳಿಯನ್ನು ಆಚರಿಸುತ್ತೇವೆ. 14 ರಂದು ಎಲ್ಲೆಡೆ ಬಣ್ಣ ಇರುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರಿಷಸ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು
March 11th, 07:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾರಿಷಸ್ ಪ್ರಧಾನಮಂತ್ರಿ ಘನತೆವೆತ್ತ ನವೀನಚಂದ್ರ ರಾಮಗೂಲಮ್ ಅವರೊಂದಿಗೆ ಟ್ರಿಯಾನಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾರಿಷಸ್ ನಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದ ಸ್ನೇಹಿತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳು, ವೃತ್ತಿಪರರು, ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು ಮತ್ತು ವ್ಯಾಪಾರ ಮುಖಂಡರು ಸೇರಿದಂತೆ ಭಾರತೀಯ ಸಮುದಾಯದ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಇದರಲ್ಲಿ ಮಾರಿಷಸ್ ನ ಹಲವಾರು ಸಚಿವರು, ಸಂಸದರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.ಚುನಾವಣಾ ಗೆಲುವಿಗಾಗಿ ಮಾರಿಷಸ್ ನ ಚುನಾಯಿತ ಪ್ರಧಾನಮಂತ್ರಿ ಡಾ.ನವೀನ್ ರಾಮ್ ಗೂಲಂ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
November 11th, 08:57 pm
ಮಾರಿಷಸ್ ನಲ್ಲಿ ನಡೆದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಚುನಾಯಿತ ಪ್ರಧಾನಮಂತ್ರಿ ಡಾ. ನವೀನ್ ರಾಮ್ ಗೂಲಂ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.