From the seas to the skies, India is becoming increasingly secure and self-reliant: PM Modi in Mann Ki Baat

June 28th, 11:30 am

Addressing the 135th episode of Mann Ki Baat, PM Modi highlighted India's achievements in security and self-reliance. He spoke on a range of topics, including Atmanirbhar Bharat, International Yoga Day, insurance schemes, nature conservation, sports, culture and Vocal for Local. He also urged people to continue writing to him about inspiring efforts taking place in their local communities.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ 'ಪಶ್ಚಿಮ ಬಂಗಾ ದಿವಸ' ಆಚರಣೆಯಲ್ಲಿ ಭಾಗವಹಿಸಿದರು

June 19th, 11:54 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳ ದಿವಸ (ಪಶ್ಚಿಮ ಬಂಗಾಳ ದಿನ) ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ನಂಟು ಹೊಂದಿರುವ ಐತಿಹಾಸಿಕ ಮಹತ್ವದ ಸ್ಥಳವಾದ ಹೂಗ್ಲಿಯ ತಾರಕೇಶ್ವರದಲ್ಲಿ ರಾಜ್ಯ ಮಟ್ಟದ ಆಚರಣೆಗಳನ್ನು ಆಯೋಜಿಸಲಾಗಿದೆ. ಈ ವರ್ಷದ ಪಶ್ಚಿಮ ಬಂಗಾಳ ದಿನಾಚರಣೆಯ ವಿಷಯವಾದ ಪಶ್ಚಿಮ ಬಂಗಾಳ: ಪರಂಪರೆ, ಸಾಮರಸ್ಯ ಮತ್ತು ಅಭಿವೃದ್ಧಿ ಎಂಬುದು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆ ನಡೆಯಿತು

June 11th, 08:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ನಡೆದ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷದ ಆಶಯ ‘ವಿಕಸಿತ ಭಾರತ@2047 ಕ್ಕಾಗಿ ಸರ್ವರನ್ನೂ ಒಳಗೊಂಡ ಮಾನವ ಅಭಿವೃದ್ಧಿ’ ಎಂಬುದಾಗಿತ್ತು. ಈ ಸಭೆಯಲ್ಲಿ 28 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ ಗಳು ಮತ್ತು ಆಡಳಿತಾಧಿಕಾರಿಗಳು ಭಾಗವಹಿಸಿದ್ದರು. ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

June 05th, 04:30 pm

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸಿ.ಆರ್. ಪಾಟೀಲ್, ಉಪಮುಖ್ಯಮಂತ್ರಿ ಭಾಯಿ ಹರ್ಷ ಸಾಂಘ್ವಿ, ಗುಜರಾತ್ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜಿ, ಇಲ್ಲಿ ಉಪಸ್ಥಿತರಿರುವ ಇತರೆ ಸಚಿವರೆ, ಜನಪ್ರತಿನಿಧಿಗಳೆ ಮತ್ತು ಸೂರತ್‌ನ ನನ್ನ ಆತ್ಮೀಯ ಸಹೋದರ ಸಹೋದರಿಯರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಸೂರತ್ ನಲ್ಲಿ ₹18,800 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸಿದರು

June 05th, 04:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಸೂರತ್ ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಜರಾತ್ ನ ಜನತೆ ನೀಡುತ್ತಿರುವ ಅಚಲ ಬೆಂಬಲಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ನಾನು ಮೊದಲ ಬಾರಿಗೆ ಸೂರತ್ ಗೆ ಭೇಟಿ ನೀಡುತ್ತಿದ್ದೇನೆ. ಸೂರತ್ ನಿಂದ ನಾನು ಇಡೀ ಗುಜರಾತ್ ನ ಜನತೆಗೆ ನಮಸ್ಕರಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ, ಎಂದು ಶ್ರೀ ಮೋದಿ ಹೇಳಿದರು.

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಹಾಸ್ಟೆಲ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

May 11th, 06:15 pm

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಜಿ, ಕೇಂದ್ರ ಸಚಿವರು ಮತ್ತು ಸ್ಥಾಪಕ ಟ್ರಸ್ಟಿಗಳಾದ ಮನ್ಸುಖ್ ಭಾಯಿ ಮಾಂಡವೀಯ, ಸರ್ದಾರ್ ಧಾಮ್‌ನ ಅಧ್ಯಕ್ಷ ಗಗ್ಜಿ ಭಾಯಿ ಸುತಾರಿಯಾ ಜಿ, ದುಷ್ಯಂತ್ ಭಾಯಿ ಪಟೇಲ್, ಪಂಕಜ್ ಭಾಯಿ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜಿ, ವೇದಿಕೆಯಲ್ಲಿರುವ ಗುಜರಾತ್ ಸರ್ಕಾರದ ಎಲ್ಲಾ ಸಚಿವರೆ, ಎಲ್ಲಾ ದಾನಿಗಳೆ, ಟ್ರಸ್ಟಿಗಳೆ, ಗಣ್ಯ ಅತಿಥಿಗಳೆ ಮತ್ತು ಗುಜರಾತ್‌ನ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

May 11th, 06:00 pm

ಗುಜರಾತ್‌ನ ವಡೋದರಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದರು. ಸೋಮನಾಥ ದೇವಾಲಯವು ತನ್ನ 75ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವನ್ನು ಆಚರಿಸಿದ ದಿನದಂದು ವಡೋದರಾದ ಸರ್ದಾರ್ ಧಾಮ್‌ನಲ್ಲಿ ನಡೆದ ಗಣ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಶಿಕ್ಷಣ ಸಂಸ್ಥೆಗಳ ಉದ್ಘಾಟನೆ ಮತ್ತು ಆಧ್ಯಾತ್ಮಿಕ ಸ್ಮರಣಾರ್ಥ ಶುಭ ಸಂದರ್ಭದ ಕಾಕತಾಳೀಯತೆಯನ್ನು ಉಲ್ಲೇಖಿಸಿದರು. ಡಾ. ದುಷ್ಯಂತ್ ಮತ್ತು ದಕ್ಷಾ ಪಟೇಲ್ ಸಂಕೀರ್ಣವನ್ನು ಉದ್ಘಾಟಿಸುವುದರ ಜೊತೆಗೆ ಬೋಧನಾ ಸಹಾಯ ಯೋಜನೆಯನ್ನು ಉದ್ಘಾಟಿಸುವುದು ಮತ್ತು ಬಹು ಶೈಕ್ಷಣಿಕ ಯೋಜನೆಗಳಿಗೆ ಶಿಲಾನ್ಯಾಸ ಸಮಾರಂಭಗಳನ್ನು ನಡೆಸುವುದರೊಂದಿಗೆ, ಪ್ರಧಾನಮಂತ್ರಿಯವರು ಈ ಉಪಕ್ರಮಗಳನ್ನು ಯುವಜನರ ಭವಿಷ್ಯದ ವೃತ್ತಿಜೀವನಕ್ಕಾಗಿರುವ ಉಡಾವಣಾ ಪ್ಯಾಡ್‌ಗಳೆಂದು ಬಣ್ಣಿಸಿದರು. ಕೆಲವೇ ಗಂಟೆಗಳ ಹಿಂದೆ, ನಾನು ಪ್ರಭಾಸ್ ಪಠಾಣ್‌ನಲ್ಲಿ ಸೋಮನಾಥ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೆ, ಮತ್ತು ಈಗ ನಾವು ಇಲ್ಲಿ ಪರಿವರ್ತನಾತ್ಮಕ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸುತ್ತಿದ್ದೇವೆ, ಈ ಸಂಯೋಜನೆ ಪರಂಪರೆ ಮತ್ತು ಪ್ರಗತಿ ಹೇಗೆ ಒಟ್ಟಿಗೆ ಮುಂದುವರಿಯುತ್ತದೆ ಎಂಬುದನ್ನು ಸಂಕೇತಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

PM Modi's strong appeal to every Indian amid global challenges

May 10th, 08:39 pm

PM Modi addressed a public gathering in Hyderabad where he spoke about the global economic challenges triggered by recent conflicts and supply chain disruptions, and called for collective national responsibility to strengthen India’s resilience. He urged citizens to reduce fuel consumption, promote carpooling, use public transport and prioritise electric vehicles to help reduce pressure on imports and save foreign exchange.

ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನ ಸ್ವಜನಪಕ್ಷಪಾತ ರಾಜಕೀಯದಿಂದ ಜನರು ಬೇಸತ್ತಿದ್ದಾರೆ: ಹೈದರಾಬಾದ್‌ನಲ್ಲಿ ಪ್ರಧಾನಿ ಮೋದಿ

May 10th, 06:05 pm

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು, ಅಲ್ಲಿ ಅವರು ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನ, ಬಿಜೆಪಿಯ ಇತ್ತೀಚಿನ ಚುನಾವಣಾ ವಿಜಯಗಳ ಮಹತ್ವ ಮತ್ತು ನಡೆಯುತ್ತಿರುವ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಸಮಯದಲ್ಲಿ ದೇಶದ ಸಾಮೂಹಿಕ ಜವಾಬ್ದಾರಿಯ ಕುರಿತು ಮಾತನಾಡಿದರು.

ಹೈದರಾಬಾದ್‌ನಲ್ಲಿ ಪ್ರಧಾನಿ ಮೋದಿಯವರ ಬೃಹತ್ ರ್ಯಾಲಿಯು ಸ್ವಾವಲಂಬನೆ ಮತ್ತು ವಿಕಸಿತ ತೆಲಂಗಾಣದ ಮೇಲೆ ಕೇಂದ್ರೀಕರಿಸುತ್ತದೆ.

May 10th, 06:00 pm

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು, ಅಲ್ಲಿ ಅವರು ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನ, ಬಿಜೆಪಿಯ ಇತ್ತೀಚಿನ ಚುನಾವಣಾ ವಿಜಯಗಳ ಮಹತ್ವ ಮತ್ತು ನಡೆಯುತ್ತಿರುವ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಸಮಯದಲ್ಲಿ ದೇಶದ ಸಾಮೂಹಿಕ ಜವಾಬ್ದಾರಿಯ ಕುರಿತು ಮಾತನಾಡಿದರು.

ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್‌ನ 45 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

May 10th, 11:05 am

ಈಗ ಗುರುದೇವ್ ಅನೇಕ ವಿಷಯಗಳನ್ನು ಹೇಳಿದರು. ಅವರು ನನ್ನನ್ನು ಹೊಗಳುತ್ತಿದ್ದಾರೆಂದು ನೀವು ಭಾವಿಸಬಹುದು, ಆದರೆ ಅವರು ನನಗೆ ಕೆಲಸ ನಿಯೋಜಿಸುತ್ತಿದ್ದಾರೆಂದು ನಾನು ಭಾವಿಸಿದೆ. ನನಗೆ ಧನ್ಯವಾದ ಹೇಳಲು ಸಾಧ್ಯವಿಲ್ಲ ಎಂದು ನೀವು ಸರಿಯಾಗಿ ಹೇಳಿದ್ದೀರಿ, ನಾನು ನಿಮಗೆ ಸೇರಿದವನು, ನಾನು ನಿಮ್ಮ ನಡುವೆ ಮತ್ತು ನಿಮಗಾಗಿ ಬಂದಿದ್ದೇನೆ ಮತ್ತು ನಾನು ಎಲ್ಲಿದ್ದರೂ ಅದು ನಿಮ್ಮಿಂದಲೇ. ಇಂದು ಗುರುದೇವ್ ಅವರ 70 ವರ್ಷಗಳ ಕಾರ್ಯಕ್ರಮ, ಆದರೆ ನಾನು ಕುಟುಂಬದ ಭಾಗವಾಗಿರುವುದರಿಂದ, ನಿಮ್ಮ ಶತಮಾನೋತ್ಸವ ಆಚರಣೆ ಬಂದಾಗ, ನಾನು ಮತ್ತೆ ಬರುತ್ತೇನೆ ಎಂದು ನಾನು ಬಹಿರಂಗವಾಗಿ ಹೇಳುತ್ತೇನೆ.

ಕರ್ನಾಟಕದ ಬೆಂಗಳೂರಿನಲ್ಲಿ ನಡೆದ 'ದಿ ಆರ್ಟ್ ಆಫ್ ಲಿವಿಂಗ್'ನ 45ನೇ ವರ್ಷಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

May 10th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದ 'ದಿ ಆರ್ಟ್ ಆಫ್ ಲಿವಿಂಗ್'ನ 45ನೇ ವರ್ಷಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದ ಮಂಗಳಕರತೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮಕ್ಕಳ ವೈದಿಕ ಮಂತ್ರಘೋಷಗಳ ಸ್ವಾಗತ, ಭಗವಾನ್ ಗಣೇಶನ ದರ್ಶನ, ಶ್ರೀ ಶ್ರೀ ರವಿಶಂಕರ್ ಜೀ ಅವರ 70ನೇ ವರ್ಷ ಮತ್ತು ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷಾಚರಣೆಯ ಸಂಭ್ರಮದಿಂದ ಸಮೃದ್ಧವಾಗಿರುವ ಈ ಬೆಳಗಿನ ವಿಶಿಷ್ಟತೆಯನ್ನು ಬಣ್ಣಿಸಿದರು. ಇವು ನನ್ನ ನೆನಪಿನಲ್ಲಿ ಸದಾ ಉಳಿಯುವ ಕ್ಷಣಗಳು, ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

April 28th, 05:30 pm

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳೆ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಜಿ, ಉತ್ತರ ಪ್ರದೇಶದ ಸಂಸದ ಮತ್ತು ಯುಪಿ ಬಿಜೆಪಿ ಅಧ್ಯಕ್ಷರಾದ ಶ್ರೀ ಪಂಕಜ್ ಚೌಧರಿ ಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಹೋದರಿ ಪೂನಂ ಮೌರ್ಯ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಕಾಶಿಯ ಮಹಿಳಾ ಕೌನ್ಸಿಲರ್‌ಗಳು ಮತ್ತು ಗ್ರಾಮ ಮುಖ್ಯಸ್ಥರೆ, ಇತರೆ ಜನಪ್ರತಿನಿಧಿಗಳೆ ಮತ್ತು ಇಲ್ಲಿಗೆ ಬಂದಿರುವ ನನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳೆ ನಿಮ್ಮೆಲ್ಲರಿಗೂ ನಮಸ್ಕಾರ.

ವಾರಣಾಸಿಯಲ್ಲಿ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಸುಮಾರು 6,350 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ

April 28th, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಣಾಸಿಯಲ್ಲಿ ನಡೆದ ಸಮಾವೇಶದಲ್ಲಿ ಬೃಹತ್ ಮಹಿಳಾ ಸಭೆಯನ್ನುದ್ದೇಶಿಸಿ ಮಾತನಾಡಿದರು, ಅಲ್ಲಿ ಅವರು ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ಮಾಡಿದರು.

DMK’s policy is by the family, of the family and for the family: PM Modi in Coimbatore, Tamil Nadu

April 18th, 06:20 pm

Election, Coimbatore, Tamil Nadu, BJP, Lord Murugan, Puthandu, Nari Shakti Vandan Adhiniyam, Nari Shakti, Women Empowerment, Women's Reservation Bill, Parliament, Corruption, Highway, Roadways, Next Generation Infrastructure, Railway, Inclusive Growth, C. P. Radhakrishnan, Surya Ghar Muft Bijli Yojana, Rooftop Solar, Electricity for all, Investment, Jobs, Jal Jeevan Mission, MUDRA, Pradhan Mantri Ujjwala Yojana, Business, Income Tax, GST Bachat Utsav, Education, Healthcare, Ayushman Bharat Yojana, Jan Aushadhhi Kendra, Yuva Shakti, First Time Voters, Census, MSME, Economy, Natural Farming, Farmer Welfare, Innovation, Employment, Viksit Bharat Viksit Tamil Nadu,

PM Modi’s fiery speech electrifies Coimbatore

April 18th, 06:00 pm

Prime Minister Narendra Modi today delivered a high-energy and politically charged address in Coimbatore, Tamil Nadu, drawing an enthusiastic response from the public. Addressing a large gathering, Prime Minister Modi said the people of Tamil Nadu are sending a clear message ahead of the upcoming polls: “NDA is in, DMK is out.”

Congress = shop of lies, insult to the people: PM Modi in Hojai, Assam

April 06th, 11:20 am

PM Modi addressed a massive public meeting in Hojai, Assam. In his speech, he cited examples from Congress-ruled states and said that their guarantees fail on the ground. He warned Assam’s voters to remain cautious of misleading promises. He also raised concerns over illegal infiltration and its impact on Assam’s identity, land, and employment.

PM Modi addresses massive public meetings in Barpeta, Hojai and Dibrugarh

April 06th, 11:00 am

PM Modi addressed massive public meetings in Barpeta, Hojai and Dibrugarh, as election campaigning in Assam gathered strong momentum. Addressing enthusiastic crowds, PM Modi highlighted the vision of a self-reliant and Viksit Assam. He launched a strong attack on Congress, accusing it of promoting family-first politics, corruption, and false promises. He also spoke about expanding welfare initiatives along with ensuring reservation for women through the Nari Shakti Vandan Act.

ಅಸ್ಸಾಂನ ಗುವಾಹಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

March 13th, 05:30 pm

ಅಸ್ಸಾಂ ರಾಜ್ಯಪಾಲರಾದ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸರ್ಬಾನಂದ ಸೋನೋವಾಲ್ ಜಿ, ರಾಜ್ಯ ಸರ್ಕಾರದ ಎಲ್ಲಾ ಸಚಿವರೆ, ಜನಪ್ರತಿನಿಧಿಗಳೆ, ದೇಶಾದ್ಯಂತ ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿರುವ ನಮ್ಮ ಎಲ್ಲಾ ರೈತ ಮಿತ್ರರೆ, ಚಹಾ ತೋಟಗಳಲ್ಲಿ ಕೆಲಸ ಮಾಡುವ ನನ್ನ ಸಹೋದರ ಸಹೋದರಿಯರೆ ಮತ್ತು ನಮ್ಮ ಅನೇಕ ಹಿರಿಯ ಮುಖ್ಯಮಂತ್ರಿಗಳು ಇಂದು ಈ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಯಿಂದ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ, ಎಲ್ಲರಿಗೂ ನನ್ನ ಶುಭಾಶಯಗಳು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿ ₹19,4800 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು; ದೇಶಾದ್ಯಂತದ ಕೋಟ್ಯಂತರ ರೈತರಿಗೆ ₹18,000 ಕೋಟಿಗೂ ಹೆಚ್ಚಿನ ಮೊತ್ತದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಬಿಡುಗಡೆ ಮಾಡಿದರು

March 13th, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ಸುಮಾರು ₹19,4800 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ನಡೆದ ಭವ್ಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಗರದ ಜನರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ದೇಶಾದ್ಯಂತದಿಂದ ಕಾರ್ಯಕ್ರಮದಲ್ಲಿ ಸೇರಿದ್ದ ರೈತರು ಹಾಗೂ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಸಹೋದರ, ಸಹೋದರಿಯರನ್ನು ಅವರು ಸ್ವಾಗತಿಸಿದರು. ನವರಾತ್ರಿಯ ಮುನ್ನಾದಿನದಂದು ಮಾ ಕಾಮಾಖ್ಯ ಅವರ ಪವಿತ್ರ ಭೂಮಿಯಲ್ಲಿ ಇರುವ ಸೌಭಾಗ್ಯಕ್ಕಾಗಿ ಪ್ರಧಾನಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. ನವರಾತ್ರಿ ಪ್ರಾರಂಭವಾಗುವ ಸ್ವಲ್ಪ ಮೊದಲು ಮಾ ಕಾಮಾಖ್ಯ ಅವರ ಈ ಪವಿತ್ರ ಭೂಮಿಯಲ್ಲಿ ನಿಮ್ಮ ದರ್ಶನ ಪಡೆಯುವ ಭಾಗ್ಯ ನನಗೆ ದೊರೆತಿದೆ ಎಂದು ಶ್ರೀ ಮೋದಿ ಅವರು ಹೇಳಿದರು.