ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 31st, 07:00 pm

ಮೊದಲಿಗೆ, ತಡವಾಗಿ ಬಂದಿದ್ದಕ್ಕಾಗಿ ನಾನುನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಇಂದು ಸರ್ದಾರ್ ಸಾಹೇಬ್ ಅವರ 150ನೇ ಜನ್ಮ ದಿನಾಚರಣೆ. ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಆ ಕಾರ್ಯಕ್ರಮದಿಂದಾಗಿ, ನಾನು ಇಲ್ಲಿಗೆ ತಲುಪಲು ವಿಳಂಬವಾಯಿತು. ಸಮಯಕ್ಕೆ ಸರಿಯಾಗಿ ಆಗಮಿಸಲು ಮತ್ತು ಅದಕ್ಕಾಗಿ ನಿಮ್ಮ ಕ್ಷಮೆ ಕೇಳಲು ಸಾಧ್ಯವಾಗದಿದ್ದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಆರಂಭದಲ್ಲಿ ನಾವು ಕೇಳಿದ ಮಂತ್ರಗಳ ಶಕ್ತಿ ಮತ್ತು ಚೈತನ್ಯವನ್ನು ಇನ್ನೂ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನಿಮ್ಮೊಂದಿಗೆ ಬರಲು ಅವಕಾಶ ಸಿಕ್ಕಾಗಲೆಲ್ಲಾ ಇದು ನನಗೆ ದೈವಿಕ ಮತ್ತು ಅಸಾಧಾರಣ ಅನುಭವವಾಗಿದೆ. ಇದು ಸ್ವಾಮಿ ದಯಾನಂದ ಜಿ ಅವರ ಆಶೀರ್ವಾದ, ಇದು ಅವರ ಆದರ್ಶಗಳಿಗೆ ನಮ್ಮ ಸಾಮೂಹಿಕ ಗೌರವ, ಮತ್ತು ನಿಮ್ಮೆಲ್ಲ ಚಿಂತಕರೊಂದಿಗಿನ ನನ್ನ ದಶಕಗಳ ವೈಯಕ್ತಿಕ ಬಾಂಧವ್ಯದ ಪರಿಣಾಮವಾಗಿ ನಾನು ನಿಮ್ಮೊಂದಿಗೆ ಇರಲು ಅವಕಾಶ ಪಡೆದಿದ್ದೇನೆ. ನಾನು ನಿಮ್ಮನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾನು ಒಂದು ಅನನ್ಯ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದ್ದೇನೆ. ಇದೇ ರೀತಿಯ 9 ಸಭಾಂಗಣಗಳನ್ನು ಸ್ಥಾಪಿಸಲಾಗಿದೆ ಎಂಬುದು ನನಗೆ ತಿಳಿದುಬಂದಿದೆ. ಅಲ್ಲಿ ನಮ್ಮ ಎಲ್ಲಾ ಆರ್ಯ ಸಮಾಜದ ಸದಸ್ಯರು ವೀಡಿಯೊ ಲಿಂಕ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ನಾನು ಅವರನ್ನು ನೋಡಲು ಸಾಧ್ಯವಾಗದಿದ್ದರೂ, ನಾನು ಇಲ್ಲಿಂದ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 31st, 09:00 am

ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಐತಿಹಾಸಿಕ ಸಂದರ್ಭ, ಏಕತಾನಗರದಲ್ಲಿ ಈ ಶುಭ ಬೆಳಗ್ಗೆ, ಈ ವಿಹಂಗಮ ನೋಟ, ಸರ್ದಾರ್ ಸಾಹೇಬರ ಪಾದಗಳ ಬಳಿ ನಮ್ಮ ಉಪಸ್ಥಿತಿಯ ಮೂಲಕ ಇಂದು ನಾವೆಲ್ಲರೂ ಒಂದು ಮಹಾನ್ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. ದೇಶಾದ್ಯಂತ ನಡೆಯುತ್ತಿರುವ ಏಕತಾ ಓಟ, ಕೋಟ್ಯಂತರ ಭಾರತೀಯರ ಉತ್ಸಾಹ, ನಾವು ಹೊಸ ಭಾರತದ ಸಂಕಲ್ಪವನ್ನು ನೇರವಾಗಿ ಅನುಭವಿಸುತ್ತಿದ್ದೇವೆ. ನಿನ್ನೆ ಸಂಜೆ ನಡೆದ ಅದ್ಭುತ ಪ್ರಸ್ತುತಿ ಸೇರಿದಂತೆ ಇತ್ತೀಚೆಗೆ ಇಲ್ಲಿ ನಡೆದ ಕಾರ್ಯಕ್ರಮಗಳು ಭೂತಕಾಲದ ಸಂಪ್ರದಾಯ, ವರ್ತಮಾನದ ಕಠಿಣ ಪರಿಶ್ರಮ, ಶೌರ್ಯ ಮತ್ತು ಭವಿಷ್ಯದ ಸಾಧನೆಗಳ ಒಂದು ನೋಟವನ್ನು ಹೊಂದಿದ್ದವು. ಸರ್ದಾರ್ ಸಾಹೇಬರ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ, ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಸರ್ದಾರ್ ಸಾಹೇಬರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿವಸ್(ರಾಷ್ಟ್ರೀಯ ಏಕತಾ ದಿನ)ದಂದು ಎಲ್ಲಾ 140 ಕೋಟಿ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಗುಜರಾತ್‌ ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು

October 31st, 08:44 am

ಗುಜರಾತ್ ನ ಕೆವಾಡಿಯಾದಲ್ಲಿ ಇಂದು ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಸರ್ದಾರ್ ಪಟೇಲ್ ಅವರ 150ನೇ ಜಯಂತಿಯು ಒಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಏಕತಾ ನಗರದ ಮುಂಜಾವು ದೈವಿಕ ಮತ್ತು ಸುಂದರ ಎಂದು ಬಣ್ಣಿಸಿದ ಶ್ರೀ ಮೋದಿ, ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನೆರೆದ ಜನಸಮೂಹವನ್ನು ಉಲ್ಲೇಖಿಸಿದರು ಮತ್ತು ದೇಶವು ಬಹಳ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ದೇಶಾದ್ಯಂತ ನಡೆದ ಏಕತಾ ಓಟ ಮತ್ತು ಲಕ್ಷಾಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಅವರು ಎತ್ತಿ ತೋರಿಸಿದರು, ನವ ಭಾರತಕ್ಕಾಗಿ ಸಂಕಲ್ಪವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಒತ್ತಿ ಹೇಳಿದರು. ಹಿಂದೆ ನಡೆದ ಕಾರ್ಯಕ್ರಮಗಳು ಮತ್ತು ನಿನ್ನೆ ಸಂಜೆ ನಡೆದ ಗಮನಾರ್ಹ ಪ್ರಸ್ತುತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಹಿಂದಿನ ಸಂಪ್ರದಾಯಗಳು, ಇಂದಿನ ಕಠಿಣ ಪರಿಶ್ರಮ ಮತ್ತು ಶೌರ್ಯ ಮತ್ತು ಭವಿಷ್ಯದ ಸಾಧನೆಗಳನ್ನು ಇವುಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರ 150 ನೇ ಜಯಂತಿಯ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ದೇಶದ 140 ಕೋಟಿ ನಾಗರಿಕರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.

ನವದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

August 06th, 07:00 pm

ಕೇಂದ್ರ ಸಚಿವ ಸಂಪುಟದ ನನ್ನೆಲ್ಲಾ ಸಹೋದ್ಯೋಗಿಗಳೆ, ಇಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂಸತ್ ಸದಸ್ಯರೆ, ಎಲ್ಲಾ ಸರ್ಕಾರಿ ನೌಕರರೆ, ಇತರೆ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

ನವದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು

August 06th, 06:30 pm

ನವದೆಹಲಿಯ ಕರ್ತವ್ಯ ಪಥದಲ್ಲಿ ಇಂದು ಕರ್ತವ್ಯ ಭವನ-3 ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರಾಂತಿಯ ಮಾಸವಾದ ಆಗಸ್ಟ್, ಆಗಸ್ಟ್ 15 ಕ್ಕೆ ಮುನ್ನವೇ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ತಂದಿದೆ ಎಂದು ಹೇಳಿದರು. ಆಧುನಿಕ ಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಧನೆಗಳಿಗೆ ಭಾರತ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು. ನವದೆಹಲಿಯ ಇತ್ತೀಚಿನ ಮೂಲಸೌಕರ್ಯಗಳಾದ ಕರ್ತವ್ಯ ಪಥ, ಹೊಸ ಸಂಸತ್ತು ಕಟ್ಟಡ, ಹೊಸ ರಕ್ಷಣಾ ಕಚೇರಿಗಳ ಸಂಕೀರ್ಣ, ಭಾರತ ಮಂಟಪ, ಯಶೋಭೂಮಿ, ಹುತಾತ್ಮರಿಗೆ ಸಮರ್ಪಿತವಾದ ರಾಷ್ಟ್ರೀಯ ಯುದ್ಧ ಸ್ಮಾರಕ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಮತ್ತು ಕರ್ತವ್ಯ ಭವನದ ನಿರ್ಮಾಣ ಮುಂತಾದದವುಗಳನ್ನು ಪಟ್ಟಿಮಾಡಿದರು. ಇವು ಕೇವಲ ಹೊಸ ಕಟ್ಟಡಗಳು ಅಥವಾ ಸಾಮಾನ್ಯ ಮೂಲಸೌಕರ್ಯಗಳಲ್ಲ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ , ಅಮೃತ ಕಾಲದಲ್ಲಿ, ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ನೀತಿಗಳನ್ನು ಈ ಕಟ್ಟಡಗಳಲ್ಲಿ ರೂಪಿಸಲಾಗುತ್ತಿದೆ ಮತ್ತು ಮುಂಬರುವ ದಶಕಗಳಲ್ಲಿ, ರಾಷ್ಟ್ರದ ದಿಕ್ಕನ್ನು ಈ ಸಂಸ್ಥೆಗಳು ನಿರ್ಧರಿಸುತ್ತವೆ ಎಂದು ಹೇಳಿದರು. ಕರ್ತವ್ಯ ಭವನದ ಉದ್ಘಾಟನೆಗಾಗಿ ಎಲ್ಲಾ ನಾಗರಿಕರನ್ನು ಅಭಿನಂದಿಸಿದ ಅವರು, ಅದರ ನಿರ್ಮಾಣದಲ್ಲಿ ಭಾಗಿಯಾದ ಎಂಜಿನಿಯರ್‌ ಗಳು ಮತ್ತು ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದರು.

ದೆಹಲಿಯ ಪ್ರತಿಯೊಬ್ಬ ಪ್ರಜೆಯೂ ಹೇಳುತ್ತಿದ್ದಾರೆ - ಎಎಪಿ-ದ ನಹಿಂ ಸಹೇಂಗೆ...ಬದಲ್ ಕೆ ರಹೇಂಗೆ: ಪ್ರಧಾನಿ ಮೋದಿ

January 05th, 01:15 pm

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ರೋಹಿಣಿಯಲ್ಲಿ ಬೃಹತ್ ಮತ್ತು ಉತ್ಸಾಹಭರಿತ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯ ಆಡಳಿತದಲ್ಲಿ ನಗರದ ಭವಿಷ್ಯದ ಬಗ್ಗೆ ಬಲವಾದ ದೃಷ್ಟಿಕೋನವನ್ನು ರೂಪಿಸಿದರು. ಜನಸಮೂಹದ ಹರ್ಷೋದ್ಗಾರಗಳೊಂದಿಗೆ, ರಾಜಧಾನಿಯನ್ನು ಜಾಗತಿಕ ನಗರ ಮಾದರಿಯನ್ನಾಗಿ ಪರಿವರ್ತಿಸಲು ಒಂದು ದಶಕದ ಆಡಳಿತ ವೈಫಲ್ಯಗಳನ್ನು ಕೊನೆಗೊಳಿಸುವ ಮತ್ತು ಡಬಲ್ ಇಂಜಿನ್ ಸರ್ಕಾರ ಕ್ಕೆ ಅಧಿಕಾರ ನೀಡುವ ಮೂಲಕ ಉತ್ತಮ ಆಡಳಿತದ ಯುಗವನ್ನು ಪ್ರಾರಂಭಿಸಲು ದೆಹಲಿಯ ಜನರಿಗೆ ಪ್ರಧಾನಿ ಕರೆ ನೀಡಿದರು. ಅಭಿವೃದ್ಧಿ.

ದೆಹಲಿಯನ್ನು ವಿಶ್ವ ದರ್ಜೆಯ ನಗರವನ್ನಾಗಿ ಪರಿವರ್ತಿಸಲು ಕರೆ ನೀಡಿದ ಪ್ರಧಾನಿ ಮೋದಿ, ಉತ್ತಮ ಆಡಳಿತಕ್ಕಾಗಿ ಬಿಜೆಪಿಯ ದೃಷ್ಟಿಯನ್ನು ಎತ್ತಿ ತೋರಿಸುತ್ತದೆ

January 05th, 01:00 pm

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ರೋಹಿಣಿಯಲ್ಲಿ ಬೃಹತ್ ಮತ್ತು ಉತ್ಸಾಹಭರಿತ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯ ಆಡಳಿತದಲ್ಲಿ ನಗರದ ಭವಿಷ್ಯದ ಬಗ್ಗೆ ಬಲವಾದ ದೃಷ್ಟಿಕೋನವನ್ನು ರೂಪಿಸಿದರು. ಜನಸಮೂಹದ ಹರ್ಷೋದ್ಗಾರಗಳೊಂದಿಗೆ, ರಾಜಧಾನಿಯನ್ನು ಜಾಗತಿಕ ನಗರ ಮಾದರಿಯನ್ನಾಗಿ ಪರಿವರ್ತಿಸಲು ಒಂದು ದಶಕದ ಆಡಳಿತ ವೈಫಲ್ಯಗಳನ್ನು ಕೊನೆಗೊಳಿಸುವ ಮತ್ತು ಡಬಲ್ ಇಂಜಿನ್ ಸರ್ಕಾರ ಕ್ಕೆ ಅಧಿಕಾರ ನೀಡುವ ಮೂಲಕ ಉತ್ತಮ ಆಡಳಿತದ ಯುಗವನ್ನು ಪ್ರಾರಂಭಿಸಲು ದೆಹಲಿಯ ಜನರಿಗೆ ಪ್ರಧಾನಿ ಕರೆ ನೀಡಿದರು. ಅಭಿವೃದ್ಧಿ.

ದೇಶದ ಎಲ್ಲಾ ಕುಟುಂಬ ನಡೆಸುವ ಪಕ್ಷಗಳ ಕಾರ್ಯಕರ್ತರು ಹತಾಶೆಯ ಉತ್ತುಂಗದಲ್ಲಿದ್ದಾರೆ: ಒಡಿಶಾದ ಕೇಂದ್ರಪಾರಾದಲ್ಲಿ ಪ್ರಧಾನಿ ಮೋದಿ

May 29th, 01:45 pm

ಒಡಿಶಾ ಬಿಜೆಪಿಯ ಸಂಸದರು ಮತ್ತು ಶಾಸಕರಿಗೆ ಪ್ರತಿ ಹಂತದಲ್ಲೂ ಬಂಪರ್ ವೋಟಿಂಗ್ ನೀಡಿದೆ: ಒಡಿಶಾದ ಕೇಂದ್ರಪಾರಾದಲ್ಲಿ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಮಯೂರ್‌ಭಂಜ್, ಬಾಲಸೋರ್ ಮತ್ತು ಒಡಿಶಾದ ಕೇಂದ್ರಪಾರಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು

May 29th, 01:00 pm

ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದ ಮಯೂರ್‌ಭಂಜ್, ಬಾಲಸೋರ್ ಮತ್ತು ಕೇಂದ್ರಪಾರಾದಲ್ಲಿ ಉತ್ಸಾಹಭರಿತ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ರಾಜ್ಯ ಮತ್ತು ದೇಶಕ್ಕೆ ಅಭೂತಪೂರ್ವ ಅಭಿವೃದ್ಧಿ ಮತ್ತು ಪರಿವರ್ತನೆಯ ದೃಷ್ಟಿಯನ್ನು ಹೊಂದಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ನಾಯಕತ್ವದಲ್ಲಿ ಕಳೆದ ದಶಕದ ಸಾಧನೆಗಳನ್ನು ಒತ್ತಿ ಹೇಳಿದರು ಮತ್ತು ಮುಂದಿನ ಐದು ವರ್ಷಗಳ ಕಾಲ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಾಕಿದರು, ಎಲ್ಲಾ ಭಾರತೀಯರಿಗೆ ನಿರಂತರ ಪ್ರಗತಿ ಮತ್ತು ಸಮೃದ್ಧಿಯ ಭರವಸೆ ನೀಡಿದರು.

ದೆಹಲಿ ಪ್ರಗತಿಗೆ ಸಾಕ್ಷಿಯಾಗುತ್ತಿರುವಾಗ, ಇಂಡಿ ಮೈತ್ರಿಯು ಅದರ ವಿನಾಶಕ್ಕೆ ಬಾಗುತ್ತದೆ: ಈಶಾನ್ಯ ದೆಹಲಿಯಲ್ಲಿ ಪ್ರಧಾನಿ ಮೋದಿ

May 18th, 07:00 pm

2024 ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿಯವರು ತಮ್ಮ ಪ್ರಚಾರದ ಹಾದಿಯಲ್ಲಿ ಇಂದು ಈಶಾನ್ಯ ದೆಹಲಿಯನ್ನು ಮೊದಲ ಬಾರಿಗೆ ಅತ್ಯಂತ ಉತ್ಸಾಹದಿಂದ ಉದ್ದೇಶಿಸಿ ಮಾತನಾಡಿದರು. ಅವರು ಉಜ್ವಲ ಭವಿಷ್ಯವನ್ನು ಭರವಸೆ ನೀಡಿದರು, ರಾಜಧಾನಿಯಾಗಿ ದೆಹಲಿಯು ಒಂದು ಮಾರ್ಗವನ್ನು ಮುನ್ನಡೆಸಬೇಕು ಎಂದು ಒತ್ತಿ ಹೇಳಿದರು. ಭ್ರಷ್ಟಾಚಾರ ಮುಕ್ತ ರಾಷ್ಟ್ರ.

ಪ್ರಧಾನಿ ಮೋದಿ ಅವರು ಈಶಾನ್ಯ ದೆಹಲಿಯಲ್ಲಿ ಉತ್ಸಾಹಭರಿತ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು

May 18th, 06:30 pm

2024 ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿಯವರು ತಮ್ಮ ಪ್ರಚಾರದ ಹಾದಿಯಲ್ಲಿ ಇಂದು ಈಶಾನ್ಯ ದೆಹಲಿಯನ್ನು ಮೊದಲ ಬಾರಿಗೆ ಅತ್ಯಂತ ಉತ್ಸಾಹದಿಂದ ಉದ್ದೇಶಿಸಿ ಮಾತನಾಡಿದರು. ಅವರು ಉಜ್ವಲ ಭವಿಷ್ಯವನ್ನು ಭರವಸೆ ನೀಡಿದರು, ರಾಜಧಾನಿಯಾಗಿ ದೆಹಲಿಯು ಒಂದು ಮಾರ್ಗವನ್ನು ಮುನ್ನಡೆಸಬೇಕು ಎಂದು ಒತ್ತಿ ಹೇಳಿದರು. ಭ್ರಷ್ಟಾಚಾರ ಮುಕ್ತ ರಾಷ್ಟ್ರ.

The dreams of crores of women, poor and youth are Modi's resolve: PM Modi

February 18th, 01:00 pm

Addressing the BJP National Convention 2024 at Bharat Mandapam, Prime Minister Narendra Modi said, “Today is February 18th, and the youth who have reached the age of 18 in this era will vote in the country's 18th Lok Sabha election. In the next 100 days, you need to connect with every new voter, reach every beneficiary, every section, every community, and every person who believes in every religion. We need to gain the trust of everyone.

PM Modi addresses BJP Karyakartas during BJP National Convention 2024

February 18th, 12:30 pm

Addressing the BJP National Convention 2024 at Bharat Mandapam, Prime Minister Narendra Modi said, “Today is February 18th, and the youth who have reached the age of 18 in this era will vote in the country's 18th Lok Sabha election. In the next 100 days, you need to connect with every new voter, reach every beneficiary, every section, every community, and every person who believes in every religion. We need to gain the trust of everyone.

ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

January 26th, 03:37 pm

ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರದ್ಧಾಂಜಲಿ ಸಲ್ಲಿಸಿದರು.

ಮಾದಕ ವ್ಯಸನದ ವಿರುದ್ಧದ ಅಭಿಯಾನದಲ್ಲಿ ಯುವಕರ ಹೆಚ್ಚುತ್ತಿರುವ ಭಾಗವಹಿಸುವಿಕೆ ತುಂಬಾ ಉತ್ತೇಜನಕಾರಿಯಾಗಿದೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

July 30th, 11:30 am

'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಜುಲೈ ತಿಂಗಳು ಎಂದರೆ ಮುಂಗಾರಿನ ತಿಂಗಳು, ಮಳೆಯ ಋತುಮಾನ. ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪದಿಂದ ಚಿಂತೆ ಮತ್ತು ಆತಂಕ ಕವಿದಿತ್ತು. ಯಮುನೆ ಸೇರಿದಂತೆ ಹಲವು ನದಿಗಳ ಪ್ರವಾಹದಿಂದಾಗಿ ಹಲವು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ. ಇದೇ ಸಮಯದಲ್ಲಿ, ದೇಶದ ಪಶ್ಚಿಮ ಭಾಗ ಮತ್ತು ಕೆಲವು ದಿನಗಳ ಹಿಂದೆ ಗುಜರಾತ್ ನ ಕೆಲ ಪ್ರದೇಶಗಳಿಗೆ ಬಿಪರ್ಜೋಯ್ ಚಂಡಮಾರುತವು ಸಹ ಅಪ್ಪಳಿಸಿತ್ತು. ಆದರೆ ಸ್ನೇಹಿತರೇ, ಈ ವಿಪತ್ತುಗಳ ಮಧ್ಯೆ, ನಾವು ದೇಶವಾಸಿಗಳೆಲ್ಲರೂ ಮತ್ತೊಮ್ಮೆ ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ತೋರಿಸಿದ್ದೇವೆ. ಸ್ಥಳೀಯ ಜನತೆ, ನಮ್ಮ ಎನ್‌ಡಿಆರ್‌ಎಫ್ ಯೋಧರು, ಸ್ಥಳೀಯ ಆಡಳಿತ ಇಂತಹ ವಿಪತ್ತುಗಳನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದಾರೆ. ಯಾವುದೇ ವಿಪತ್ತನ್ನು ಎದುರಿಸುವಲ್ಲಿ ನಮ್ಮ ಸಾಮರ್ಥ್ಯ ಮತ್ತು ಸಂಪನ್ಮೂಲಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ - ಆದರೆ ಅದೇ ವೇಳೆ, ನಾವು ತೋರುವ ಸಂವೇದನಶೀಲತೆ ಮತ್ತು ಪರಸ್ಪರರಿಗೆ ಆಸರೆಯಾಗಿ ನಿಲ್ಲುವ ಮನೋಭಾವವು ಮಹತ್ವಪೂರ್ಣವಾಗಿರುತ್ತದೆ. ಸರ್ವಜನ ಹಿತ ಎಂಬ ಭಾವನೆಯೇ ಭಾರತದ ಹೆಗ್ಗುರುತಾಗಿದೆ ಮತ್ತು ಭಾರತದ ಶಕ್ತಿಯಾಗಿದೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರ (ಐಇಸಿಸಿ) ಸಂಕೀರ್ಣವನ್ನು ಉದ್ಘಾಟಿಸಿ ಪ್ರಧಾನಮಂತ್ರಿಯವರ ಭಾಷಣ

July 26th, 11:28 pm

ಇಂದು, ಈ ದೈವಿಕ ಮತ್ತು ಭವ್ಯವಾದ 'ಭಾರತ ಮಂಟಪ'ವನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನು ಸಂತೋಷ, ಸಡಗರ ಮತ್ತು ಹೆಮ್ಮೆಯ ಪ್ರಜ್ಞೆಯಿಂದ ತುಂಬಿದ್ದಾನೆ. 'ಭಾರತ ಮಂಟಪ' ಭಾರತದ ಸಾಮರ್ಥ್ಯ ಮತ್ತು ಹೊಸ ಶಕ್ತಿಗೆ ಸಾಕ್ಷಿಯಾಗಲು ಆಹ್ವಾನವಾಗಿದೆ. 'ಭಾರತ ಮಂಟಪ' ಭಾರತದ ಭವ್ಯತೆ ಮತ್ತು ಅದರ ಇಚ್ಛಾಶಕ್ತಿಯ ದೃಷ್ಟಿಕೋನವಾಗಿದೆ. ಕೊರೋನಾ ಸೋಂಕಿನ ಸವಾಲಿನ ಸಮಯದಲ್ಲಿ ಎಲ್ಲೆಡೆ ಕೆಲಸ ಸ್ಥಗಿತಗೊಂಡಾಗ, ನಮ್ಮ ಕಾರ್ಮಿಕರು ಅದರ ನಿರ್ಮಾಣವನ್ನು ಪೂರ್ಣಗೊಳಿಸಲು ಹಗಲು ರಾತ್ರಿ ಕೆಲಸ ಮಾಡಿದರು.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಭಾಂಗಣ (ಐಐಸಿಸಿ) ಸಂಕೀರ್ಣವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು

July 26th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಸಭಾಂಗಣ (ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ - ಐಐಸಿಸಿ) ಸಂಕೀರ್ಣವನ್ನು ಉದ್ಘಾಟಿಸಿದರು. ಅವರು ಜಿ-20 ನಾಣ್ಯ ಮತ್ತು ಜಿ-20 ಅಂಚೆಚೀಟಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ, ಡ್ರೋನ್ ಮೂಲಕ ನಡೆಸಲಾದ ವೀಕ್ಷಣಾ ವ್ಯವಸ್ಥೆ ಮೂಲಕ ಕನ್ವೆನ್ಷನ್ ಸೆಂಟರ್ ಗೆ ‘ಭಾರತ ಮಂಟಪ’ ಎಂದು ನಾಮಕರಣ ಮಾಡಲಾಯಿತು ಮತ್ತು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪ್ರಧಾನಮಂತ್ರಿ ಭಾಗವಹಿಸಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ, ಮತ್ತು ರಾಷ್ಟ್ರೀಯ ಯೋಜನೆಯಾಗಿ ಸುಮಾರು ರೂ 2700 ಕೋಟಿ ವೆಚ್ಚದಲ್ಲಿ ಈ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಗತಿಯ ಹಾದಿಯ ಭಾರತವನ್ನು ಜಾಗತಿಕ ವ್ಯಾಪಾರ ತಾಣವಾಗಿ ಉತ್ತೇಜಿಸಲು ಈ ಸಂಕೀರ್ಣ ಸಹಾಯ ಮಾಡುತ್ತದೆ.

ದೆಹಲಿ-ಕರ್ನಾಟಕ ಸಂಘದ ಅಮೃತ ಮಹೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

February 25th, 05:20 pm

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪ್ರಹ್ಲಾದ ಜೋಶಿ ಜಿ, ಸಂಸತ್ತಿನ ನಮ್ಮ ಹಿರಿಯ ಸಹೋದ್ಯೋಗಿ ಡಾ. ವೀರೇಂದ್ರ ಹೆಗ್ಗಡೆ ಜಿ, ಪರಮಪೂಜ್ಯ ಸ್ವಾಮಿ ನಿರ್ಮಲಾನಂದನಾಥ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ನಂಜಾವದೂತ ಸ್ವಾಮೀಜಿ, ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ಸಂಪುಟದ ನನ್ನ ಇತರೆ ಸಹೋದ್ಯೋಗಿಗಳು, ಸಂಸದರು, ಸಿ.ಟಿ. ರವಿ ಜೀ, ದೆಹಲಿ-ಕರ್ನಾಟಕ ಸಂಘದ ಎಲ್ಲಾ ಸದಸ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ದೆಹಲಿ-ಕರ್ನಾಟಕ ಸಂಘದ ಅಮೃತ ಮಹೋತ್ಸವ ‘ಬಾರಿಸು ಕನ್ನಡ ಡಿಂಡಿಮವʼ ಉದ್ಘಾಟಿಸಿದ ಪ್ರಧಾನಿ

February 25th, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಅವರು ವಸ್ತು ಪ್ರದರ್ಶನವನ್ನು ಸಹ ವೀಕ್ಷಿಸಿದರು. ಈ ಉತ್ಸವವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿದೆ ಮತ್ತು ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಸಂಭ್ರಮಿಸುತ್ತದೆ.

ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ನಡೆದ ಎನ್ ಸಿಸಿ ರ್ಯಾಲಿಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

January 28th, 09:51 pm

ದೇಶದ 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಎನ್ ಸಿಸಿ ತನ್ನ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಹಲವು ವರ್ಷಗಳಿಂದ ಎನ್ ಸಿಸಿಯನ್ನು ಪ್ರತಿನಿಧಿಸಿದ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದವರನ್ನು ನಾನು ಪ್ರಶಂಸಿಸುತ್ತೇನೆ. ಇಂದು, ನನ್ನ ಮುಂದೆ ಇರುವ ಎನ್ ಸಿಸಿ ಕೆಡೆಟ್ ಗಳು ಇನ್ನೂ ವಿಶೇಷ. ಇಂದು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ ಸಮಯ ಬದಲಾಗಿದೆ ಮಾತ್ರವಲ್ಲ, ಅದರ ರೂಪವೂ ಬದಲಾಗಿದೆ ಎಂದು ತೋರಿಸುತ್ತದೆ. ಪ್ರೇಕ್ಷಕರ ಸಂಖ್ಯೆಯೂ ಮೊದಲಿಗಿಂತ ಹೆಚ್ಚಾಗಿದೆ. ಈ ಕಾರ್ಯಕ್ರಮವು ವೈವಿಧ್ಯತೆಯಿಂದ ಕೂಡಿದೆ, ಆದರೆ 'ಏಕ್ ಭಾರತ್ ಶ್ರೇಷ್ಠ ಭಾರತ್ ' ಎಂಬ ಮೂಲ ಮಂತ್ರವನ್ನು ಭಾರತದ ಮೂಲೆ ಮೂಲೆಗೂ ಹರಡಿದ್ದಕ್ಕಾಗಿ ಇದು ಸದಾ ನೆನಪಿನಲ್ಲಿ ಉಳಿಯುತ್ತದೆ. ಎನ್ ಸಿಸಿಯ ಇಡೀ ತಂಡವನ್ನು, ಅದರ ಎಲ್ಲಾ ಅಧಿಕಾರಿಗಳು ಮತ್ತು ಆಡಳಿತಗಾರರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನೀವು ಎನ್ ಸಿಸಿ ಕೆಡೆಟ್ ಗಳಾಗಿ ಮತ್ತು ದೇಶದ ಯುವಕರಾಗಿ 'ಅಮೃತ್' ಕಾಲವನ್ನು ಪ್ರತಿನಿಧಿಸುತ್ತೀರಿ. ಈ 'ಅಮೃತ್' ಕಾಲವು ಮುಂದಿನ 25 ವರ್ಷಗಳಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ಭಾರತವನ್ನು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ.