ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 04th, 01:00 pm
ಉತ್ತರ ಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಜಿ, ಉತ್ತರ ಪ್ರದೇಶದ ಸಚಿವರಾದ ಸಹೋದರ ರವೀಂದ್ರ ಜೈಸ್ವಾಲ್ ಜಿ, ದಯಾಶಂಕರ್ ಜಿ, ಗಿರೀಶ್ ಯಾದವ್ ಜಿ, ಬನಾರಸ್ ಮೇಯರ್ ಅಶೋಕ್ ತಿವಾರಿ ಜಿ, ಇತರೆ ಜನಪ್ರತಿನಿಧಿಗಳೆ, ವಾಲಿಬಾಲ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳೆ, ದೇಶಾದ್ಯಂತ ಬಂದಿರುವ ಆಟಗಾರರೆ ಮತ್ತು ಕಾಶಿಯ ನನ್ನ ಕುಟುಂಬ ಸದಸ್ಯರೆಲ್ಲರಿಗೂ ನಮಸ್ಕಾರ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ʻ72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿʼಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು
January 04th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ವಾರಣಾಸಿಯ ಸಂಸತ್ ಸದಸ್ಯನಾಗಿ, ಎಲ್ಲಾ ಆಟಗಾರರನ್ನು ಸ್ವಾಗತಿಸಲು ಮತ್ತು ಅಭಿನಂದಿಸಲು ಸಂತಸವಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಇಂದಿನಿಂದ ವಾರಣಾಸಿಯಲ್ಲಿ ಪ್ರಾರಂಭವಾಗುತ್ತಿದೆ. ಆಟಗಾರರು ಅಪಾರ ಕಠಿಣ ಪರಿಶ್ರಮದ ಬಳಿಕ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ತಲುಪಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ವಾರಣಾಸಿಯ ಮೈದಾನದಲ್ಲಿ ಅವರ ಪ್ರಯತ್ನಗಳನ್ನು ಪರೀಕ್ಷಿಗೆ ಒಡ್ಡಲಾಗುವುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇಶದ 28 ರಾಜ್ಯಗಳ ತಂಡಗಳು ಒಟ್ಟುಗೂಡಿ ʻಏಕ ಭಾರತ, ಶ್ರೇಷ್ಠ ಭಾರತʼದ ಸುಂದರ ಚಿತ್ರಣವನ್ನು ಪ್ರಸ್ತುತಪಡಿಸಿವೆ ಎಂದು ಅವರು ಹೇಳಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಪ್ರಧಾನಮಂತ್ರಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.ವಾರಾಣಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ಜನವರಿ 4 ರಂದು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ
January 03rd, 02:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 4 ರಂದು ಮಧ್ಯಾಹ್ನ 12 ಗಂಟೆಗೆ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ವಾರಾಣಸಿಯ ಡಾ. ಸಂಪೂರ್ಣಾನಂದ ಕ್ರೀಡಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.