ಇಂಡಿಯಾ ಚಿಪ್ ಲಿಮಿಟೆಡ್‌ನ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ

February 21st, 05:30 pm

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜಿ, ಜಿತಿನ್ ಪ್ರಸಾದ ಜಿ, ಉತ್ತರ ಪ್ರದೇಶ ಸರ್ಕಾರದ ಎಲ್ಲಾ ಸಚಿವರೆ, ಫಾಕ್ಸ್‌ಕಾನ್‌ ಸೆಮಿಕಂಡಕ್ಟರ್ ಬಿಸಿನೆಸ್ ಗ್ರೂಪ್‌ ಅಧ್ಯಕ್ಷರಾದ ಬಾಬ್ ಚೆನ್, ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷರಾದ ರೋಶ್ನಿ ನಾಡರ್ ಜಿ, ಕಾರ್ಯಕ್ರಮದಲ್ಲಿ ಹಾಜರಿರುವ ಉದ್ಯಮ ಮುಖಂಡರೆ, ಇತರ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಉತ್ತರಪ್ರದೇಶದಲ್ಲಿ ಎಚ್‌ಸಿಎಲ್-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಘಟಕದ ಶಿಲಾನ್ಯಾಸ ಸಮಾರಂಭಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

February 21st, 05:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದಲ್ಲಿ ನಡೆದ ಎಚ್‌ಸಿಎಲ್-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಘಟಕದ ಶಿಲಾನ್ಯಾಸ ಸಮಾರಂಭಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ನವದೆಹಲಿಯಲ್ಲಿ ನಡೆದ ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯ ನಂತರ, ಜಾಗತಿಕ ಸೆಮಿಕಂಡಕ್ಟರ್ ಕೇಂದ್ರವಾಗುವತ್ತ ಭಾರತದ ಪ್ರಯಾಣ ಸಾಗಿದೆ, ಈ ಸಮಾರಂಭವು ಒಂದು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ.

ಸ್ಟಾರ್ಟಪ್ ಇಂಡಿಯಾ ಮಹತ್ವಾಕಾಂಕ್ಷಿ ಉಪಕ್ರಮ 1 ದಶಕ ಗುರುತಿಸುವ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

January 16th, 01:30 pm

ಇದೀಗ ಸ್ಟಾರ್ಟಪ್‌ ಜಗತ್ತಿನ ಕೆಲವು ಜನರನ್ನು ಭೇಟಿ ಮಾಡಲು, ಅವರ ಸಾಧನೆಗಳು ಮತ್ತು ಪ್ರಯೋಗಗಳನ್ನು ನೋಡಲು ಮತ್ತು ಅವರಲ್ಲಿ ಕೆಲವರೊಂದಿಗೆ ಚರ್ಚೆ ನಡೆಸಲು ನನಗೆ ಅವಕಾಶ ಸಿಕ್ಕಿದೆ. ಕೃಷಿ, ಹಣಕಾಸು ತಂತ್ರಜ್ಞಾನ, ಚಲನಶೀಲತೆ, ಆರೋಗ್ಯ ಮತ್ತು ಸುಸ್ಥಿರತೆಯಲ್ಲಿ ಕೆಲಸ ಮಾಡುತ್ತಿರುವ ಸ್ಟಾರ್ಟಪ್‌ಗಳು - ಅವರ ಆಲೋಚನೆಗಳು ನನಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರಭಾವಶಾಲಿಯಾಗಿವೆ. ಆದರೂ, ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದ್ದು ನಿಮ್ಮ ಆತ್ಮವಿಶ್ವಾಸ ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳೇ ಕಾರಣವಾಗಿವೆ.

ರಾಷ್ಟ್ರೀಯ ನವೋದ್ಯಮ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ, 10 ವರ್ಷ ಪೂರೈಸಿದ ಸ್ಟಾರ್ಟ್ಅಪ್ ಇಂಡಿಯಾ

January 16th, 09:28 am

ರಾಷ್ಟ್ರೀಯ ನವೋದ್ಯಮ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೋದ್ಯಮಗಳ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಈ ವರ್ಷದ ಆಚರಣೆಯು ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮವನ್ನು ಆರಂಭಿಸಿ ಒಂದು ದಶಕ ಪೂರೈಸಿರುವುದನ್ನು ಗುರುತಿಸುತ್ತಿರುವ ವಿಶೇಷ ಮಹತ್ವವನ್ನು ಹೊಂದಿದೆ.

ರಾಷ್ಟ್ರೀಯ ಸ್ಟಾರ್ಟ್ಅಪ್ ದಿನದಂದು, ಜನವರಿ 16 ರಂದು ಸ್ಟಾರ್ಟ್ಅಪ್ ಇಂಡಿಯಾದ ಒಂದು ದಶಕದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

January 15th, 09:00 am

ರಾಷ್ಟ್ರೀಯ ಸ್ಟಾರ್ಟ್ಅಪ್ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 16 ರಂದು ಮಧ್ಯಾಹ್ನ 1 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಒಂದು ದಶಕದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.