ವರುಣಾ ನದಿ ದಂಡೆ ಮತ್ತು ಅದರ ಇಳಿಜಾರು/ಲೂಪ್‌ಗಳು ಸೇರಿ ಉತ್ತರ ಪ್ರದೇಶದಲ್ಲಿ 6/4 ಪಥದ ಎತ್ತರದ ಕಾರಿಡಾರ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.
July 15th, 04:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆ ನಿವಾರಿಸಲು ವರುಣಾ ನದಿಯ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ-31 ಮತ್ತು ವಾರಣಾಸಿ ರಿಂಗ್ ರಸ್ತೆಯನ್ನು ಸಂಪರ್ಕಿಸುವ 43.218 ಕಿ.ಮೀ. ಲಿಂಕ್/ಕನೆಕ್ಟರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಮುಖ್ಯ ಸರಕು ಸಾಗಾಣೆ ಮಾರ್ಗ (ಕ್ಯಾರೇಜ್‌ವೇ), ಮೇಲು ಸೇತುವೆಗಳು, ಲೂಪ್‌ಗಳು, ರ‍್ಯಾಂಪ್‌ಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಂತೆ 6/4 ಪಥದ ಪ್ರಧಾನವಾಗಿ ಎತ್ತರದ ಕಾರಿಡಾರ್ ಅನ್ನು ಒಳಗೊಂಡಿದೆ ಮತ್ತು ಇದನ್ನು ಹೈಬ್ರಿಡ್ ಅನ್ಯುಟಿ ಮಾದರಿ (ಎಚ್ ಎಎಂ) ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳ ವೆಚ್ಚ 4,565.33 ಕೋಟಿ ರೂ. ಮತ್ತು ಭೂ ಸ್ವಾಧೀನ ವೆಚ್ಚ ರೂ.934.91 ಕೋಟಿ ರೂ. ಸೇರಿದೆ.ಉತ್ತರ ಪ್ರದೇಶದಲ್ಲಿ ಒಟ್ಟು ₹7,145.14 ಕೋಟಿ ಬಂಡವಾಳ ವೆಚ್ಚದಲ್ಲಿ, ಬಿಒಟಿ (ಟೋಲ್) ಮಾದರಿಯಲ್ಲಿ ಎನ್ ಎಚ್ -34 ರ 4 / 6 ಪಥಗಳ ನಿಯಂತ್ರಿತ ಪ್ರವೇಶದ ಕಾನ್ಪುರ-ಕಬ್ರಾಯ್ ವಿಭಾಗದ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ
July 01st, 03:09 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ರಾಷ್ಟ್ರೀಯ ಹೆದ್ದಾರಿಗಳ (ಒ) ಕಾರ್ಯಕ್ರಮದ ಅಡಿಯಲ್ಲಿ ಭೂಪಾಲ್-ಕಾನ್ಪುರ ಆರ್ಥಿಕ ಕಾರಿಡಾರ್ನ ಪ್ರಮುಖ ಭಾಗವಾಗಿರುವ, 117.7 ಕಿ.ಮೀ ಉದ್ದದ ಕಾನ್ಪುರ-ಕಬ್ರಾಯ್ ನಿಯಂತ್ರಿತ ಪ್ರವೇಶದ ಗ್ರೀನ್ ಫೀಲ್ಡ್ ಹೆದ್ದಾರಿಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು ನಾಲ್ಕು ಪಥಗಳ ನಿಯಂತ್ರಿತ ಪ್ರವೇಶದ ಕಾರಿಡಾರ್ ಆಗಿದ್ದು, ಭವಿಷ್ಯದಲ್ಲಿ ಆರು ಪಥಗಳಾಗಿ ವಿಸ್ತರಿಸಲು ಪೂರಕವಾದ ರಚನೆಗಳೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟು ಬಂಡವಾಳ ಅಂದಾಜು ₹7,145.14 ಕೋಟಿ ವೆಚ್ಚದ ಈ ಯೋಜನೆಯನ್ನು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ ಎಚ್ ಎ ಐ) ಬಿಒಟಿ (ಟೋಲ್) ಮಾದರಿಯಲ್ಲಿ ಅನುಷ್ಠಾನಗೊಳಿಸಲಿದೆ. ಜೊತೆಗೆ ಎನ್ ಎಚ್-34 ರ ಅಸ್ತಿತ್ವದಲ್ಲಿರುವ ಕಾನ್ಪುರ-ಕಬ್ರಾಯ್ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನೂ ಸಹ ಇದು ಒಳಗೊಂಡಿರುತ್ತದೆ.