ಪ್ರತಿಯೊಬ್ಬ ನಾಗರಿಕರಿಗೂ ಆರ್ಥಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, '2047 ರ ವೇಳೆಗೆ ಎಲ್ಲರಿಗೂ ವಿಮೆ'ಯ ಬಗ್ಗೆ ಒತ್ತು ನೀಡಿದ್ದಾರೆ.
September 04th, 08:55 pm
ಸಾರ್ವತ್ರಿಕ ಆರ್ಥಿಕ ರಕ್ಷಣೆ ಮತ್ತು ಆರೋಗ್ಯ ರಕ್ಷಣೆಗೆ ಸರ್ಕಾರದ ಪ್ರಮುಖ ಹೆಜ್ಜೆಯ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಗೆರೆಹಾಕಿದರು. #NextGenGST ಸುಧಾರಣೆಗಳ ಇತ್ತೀಚಿನ ಹಂತವು ಜೀವ ಮತ್ತು ಆರೋಗ್ಯ ವಿಮಾ ಉತ್ಪನ್ನಗಳ ಮೇಲೆ ಗಮನಾರ್ಹ ತೆರಿಗೆ ವಿನಾಯಿತಿಯನ್ನು ನೀಡಿ, ಅವುಗಳನ್ನು ಹೆಚ್ಚು ಕೈಗೆಟುಕುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸುಲಭವಾಗಿ ದೊರಕುವಂತೆ ಮಾಡುತ್ತದೆ.