ಪ್ರಧಾನಮಂತ್ರಿ ಜನ್ ಧನ್ ಯೋಜನೆಯ 11 ಪರಿವರ್ತನಾ ವರ್ಷಗಳನ್ನು ಆಚರಿಸಿದ ಪ್ರಧಾನಮಂತ್ರಿ
August 28th, 01:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ (ಪಿ.ಎಂ.ಜೆ.ಡಿ.ವೈ.) 11ನೇ ವಾರ್ಷಿಕೋತ್ಸವವನ್ನು ಆಚರಿಸಿದರು, ಇದು ಭಾರತದಾದ್ಯಂತ ಆರ್ಥಿಕ ಒಳಗೊಳ್ಳುವಿಕೆಯನ್ನು ಮರುರೂಪಿಸಿದ ಪರಿವರ್ತಕ ಉಪಕ್ರಮವಾಗಿದೆ. ಪಿ.ಎಂ.ಜೆ.ಡಿ.ವೈ. ಘನತೆಯನ್ನು ಹೆಚ್ಚಿಸಿದೆ ಮತ್ತು ಕೊನೆಯ ಮೈಲಿಗಳ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಮೂಲಕ ಜನರಿಗೆ ತಮ್ಮದೇ ಆದ ಹಣೆಬರಹವನ್ನು ಬರೆಯುವ ಶಕ್ತಿಯನ್ನು ನೀಡಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ದೃಢಪಡಿಸಿದರು.ಬಾಹ್ಯಾಕಾಶ ವಲಯದಲ್ಲಿ ಭಾರತದ ಗಮನಾರ್ಹ ಪ್ರಗತಿ; ಯುವಕರು ಮತ್ತು ನವೋದ್ಯಮಗಳು ಹೊಸತನ್ನು ಅನ್ವೇಷಿಸಲು ಪ್ರೋತ್ಸಾಹಕ ಸುಧಾರಣೆಗಳು – ಪ್ರಧಾನಮಂತ್ರಿ
August 23rd, 01:03 pm
ಭಾರತವು 140 ಕೋಟಿ ಭಾರತೀಯರ ಕೌಶಲ್ಯ ಮತ್ತು ಪ್ರತಿಭೆಯೊಂದಿಗೆ ಬಾಹ್ಯಾಕಾಶ ಜಗತ್ತಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ.2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಹಾದಿ ಸ್ವಾವಲಂಬನೆಯ ಮೂಲಕ ಸಾಗುತ್ತದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ
July 27th, 11:30 am
‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ ಅಲೆ ಹರಿದಾಡಿತು. ಇಡೀ ದೇಶ ಹೆಮ್ಮೆಯಿಂದ ಬೀಗಿತು. ಆಗಸ್ಟ್ 2023 ರಲ್ಲಿ ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಆದಾಗ, ದೇಶದಲ್ಲಿ ಹೊಸ ವಾತಾವರಣವೇ ಸೃಷ್ಟಿಯಾಗಿದ್ದು ನನಗೆ ನೆನಪಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲವೂ ಅರಳಿತು. ಈಗ ಚಿಕ್ಕ ಚಿಕ್ಕ ಮಕ್ಕಳು ಕೂಡ ನಾವು ಬಾಹ್ಯಾಕಾಶಕ್ಕೆ ಹೋಗುತ್ತೇವೆ, ಚಂದ್ರನ ಮೇಲೆ ಇಳಿಯುತ್ತೇವೆ - ನಾವು ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆ ಎಂದು ಹೇಳುತ್ತಾರೆ.ಕಳೆದ 11 ವರ್ಷಗಳಲ್ಲಿ ಭಾರತದ ರಕ್ಷಣಾ ಕ್ಷೇತ್ರದ ಅಭೂತಪೂರ್ವ ಬೆಳವಣಿಗೆ, ಸ್ವಾವಲಂಬನೆ ಮತ್ತು ಆಧುನೀಕರಣ ಬಲಪಡಿಸಿರುವುದನ್ನು ಪ್ರಧಾನಮಂತ್ರಿ ಶ್ಲಾಘಿಸಿದರು
June 10th, 09:47 am
ಕಳೆದ 11 ವರ್ಷಗಳಲ್ಲಿ ಭಾರತವು ತನ್ನ ರಕ್ಷಣಾ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ, ಇದು ರಕ್ಷಣಾ ಉತ್ಪಾದನೆಯಲ್ಲಿ ಆಧುನೀಕರಣ ಮತ್ತು ಸ್ವಾವಲಂಬನೆಯತ್ತ ಸ್ಪಷ್ಟ ಗಮನ ಹರಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 30.03.2025 ರಂದು ಮಾಡಿದ ‘ಮನ್ ಕಿ ಬಾತ್’ – 120ನೇ ಸಂಚಿಕೆಯ ಕನ್ನಡ ಅವತರಣಿಕೆ
March 30th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಈ ಶುಭ ದಿನದಂದು, ನಿಮ್ಮೊಂದಿಗೆ 'ಮನದ ಮಾತು' ಹಂಚಿಕೊಳ್ಳುವ ಅವಕಾಶ ನನಗೆ ಲಭಿಸಿದೆ. ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿ. ಇಂದಿನಿಂದ ಚೈತ್ರ ನವರಾತ್ರಿ ಪ್ರಾರಂಭವಾಗಲಿದೆ. ಇಂದಿನಿಂದ ಭಾರತೀಯ ನವ ವರ್ಷವೂ ಆರಂಭವಾಗುತ್ತದೆ. ಈ ಬಾರಿ ವಿಕ್ರಮ ಸಂವತ್ಸರ ಅಂದರೆ ೨೦೮೨ (ಎರಡು ಸಾವಿರದ ಎಂಬತ್ತೆರಡು) ಶುರುವಾಗಲಿದೆ. ನನ್ನ ಮುಂದೆ ನೀವು ಬರೆದ ಬಹಳಷ್ಟು ಪತ್ರಗಳಿವೆ. ಬಿಹಾರದವರು, ಬಂಗಾಳದವರು, ಕೆಲವರು ತಮಿಳುನಾಡಿನವರು, ಕೆಲವರು ಗುಜರಾತ್‌ನವರು ಪತ್ರ ಬರೆದಿದ್ದಾರೆ. ಬಹಳ ಆಸಕ್ತಿಕರವಾಗಿ ಜನರು ತಮ್ಮ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪತ್ರಗಳು ಶುಭ ಹಾರೈಕೆಗಳು ಮತ್ತು ಅಭಿನಂದನಾ ಸಂದೇಶಗಳನ್ನು ಹೊತ್ತು ತಂದಿವೆ. ಆದರೆ ಇಂದು ನಿಮ್ಮೊಂದಿಗೆ ಕೆಲವು ಸಂದೇಶಗಳನ್ನು ಹಂಚಿಕೊಳ್ಳಬಯಸುತ್ತೇನೆ -ನಮ್ಮ ಅನ್ನದಾತರ ಬಗ್ಗೆ ಹೆಮ್ಮೆಯಿದೆ ಮತ್ತು ಅವರ ಜೀವನ ಸುಧಾರಣೆಗೆ ಬದ್ಧ: ಪ್ರಧಾನಮಂತ್ರಿ
February 24th, 10:01 am
ಭಾರತದ ಅನ್ನದಾತರ ಬಗ್ಗೆ ಸರ್ಕಾರಕ್ಕೆ ಹೆಮ್ಮೆಯಿದೆ ಮತ್ತು ಅವರ ಜೀವನ ಸುಧಾರಣೆಗೆ ಬದ್ಧ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.ಭಾರತೀಯ ವಲಸಿಗರು ವಿವಿಧ ರಾಷ್ಟ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
November 24th, 11:30 am
ಮನ್ ಕಿ ಬಾತ್‌ನ 116 ನೇ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಎನ್‌ಸಿಸಿ ದಿನದ ಮಹತ್ವವನ್ನು ಚರ್ಚಿಸಿದರು, ಎನ್‌ಸಿಸಿ ಕೆಡೆಟ್‌ಗಳ ಬೆಳವಣಿಗೆ ಮತ್ತು ವಿಪತ್ತು ಪರಿಹಾರದಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸಿದರು. ಅವರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಯುವ ಸಬಲೀಕರಣಕ್ಕೆ ಒತ್ತು ನೀಡಿದರು ಮತ್ತು ವಿಕಸಿತ್ ಭಾರತ್ ಯುವ ನಾಯಕರ ಸಂವಾದದ ಕುರಿತು ಮಾತನಾಡಿದರು. ಅವರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನ್ಯಾವಿಗೇಟ್ ಮಾಡಲು ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಯುವಕರ ಸ್ಪೂರ್ತಿದಾಯಕ ಕಥೆಗಳು ಮತ್ತು ಏಕ್ ಪೆಡ್ ಮಾ ಕೆ ನಾಮ್ ಅಭಿಯಾನದ ಯಶಸ್ಸನ್ನು ಹಂಚಿಕೊಂಡರು.ತ್ರಿವರ್ಣ ಧ್ವಜದ ವೈಭವವನ್ನು ಎತ್ತಿ ಹಿಡಿಯುವಲ್ಲಿ 'ಹರ್ ಘರ್ ತಿರಂಗ ಅಭಿಯಾನ' ಒಂದು ವಿಶಿಷ್ಟ ಹಬ್ಬವಾಗಿದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ
July 28th, 11:30 am
ನನ್ನ ಪ್ರೀತಿಯ ದೇಶವಾಸಿಗಳೆ, 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ, ಆತ್ಮೀಯ ಶುಭಾಶಯಗಳು. ಈ ಕ್ಷಣದಲ್ಲಿ ಜರುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಇಡೀ ವಿಶ್ವದ ಗಮನ ಸೆಳೆದಿದೆ, ಈ ಋತುವಿನ ಫ್ಲೇವರ್ ಆಗಿದೆ. ಒಲಿಂಪಿಕ್ಸ್ ನಮ್ಮ ಆಟಗಾರರಿಗೆ ವಿಶ್ವ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಅವರಿಗೆ ಅವಕಾಶ ನೀಡಿದೆ. ನಮ್ಮ ಆಟಗಾರರನ್ನು ಪ್ರೋತ್ಸಾಹಿಸೋಣ... ಭಾರತ ತಂಡಕ್ಕೆ ಚಿಯರ್!!#10YearsOfMyGov: ಉತ್ತಮ ಆಡಳಿತಕ್ಕಾಗಿ ವೇದಿಕೆಯನ್ನು ಅತ್ಯದ್ಭುತ ವೇದಿಕೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ
July 26th, 06:50 pm
ಮೈಗೌವ್ ವೇದಿಕೆಯು ಇಂದು ಹತ್ತು ವರ್ಷ ಪೂರೈಸಿದ್ದು, ಉತ್ತಮ ಆಡಳಿತ ಮತ್ತು ಪಾಲ್ಗೊಳ್ಳುವಿಕೆಗೆ ಇದು ಅತ್ಯದ್ಭುತ ವೇದಿಕೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮನ್ ಕಿ ಬಾತ್: ‘ಮೇರಾ ಪೆಹ್ಲಾ ವೋಟ್ – ದೇಶ್ ಕೆ ಲಿಯೇ’...ಪ್ರಥಮ ಬಾರಿಗೆ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ಮೋದಿ ಮನವಿ
February 25th, 11:00 am
ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ‘ಮನದ ಮಾತು’ ೧೧೦ನೇ ಸಂಚಿಕೆಗೆ ಸುಸ್ವಾಗತ. ಎಂದಿನಂತೆ, ಈ ಬಾರಿಯೂ ನಿಮ್ಮ ಸಾಕಷ್ಟು ಸಲಹೆಗಳು, ಮಾಹಿತಿ ಮತ್ತು ಟೀಕೆ ಟಿಪ್ಪಣಿಗಳನ್ನು ನಾವು ಸ್ವೀಕರಿಸಿದ್ದೇವೆ. ಮತ್ತು ಎಂದಿನಂತೆ, ಈ ಬಾರಿಯೂ ಸಹ ಸಂಚಿಕೆಯಲ್ಲಿ ಯಾವ ವಿಷಯಗಳನ್ನು ಸೇರಿಸಬೇಕು ಎಂಬುದು ಸವಾಲಾಗಿದೆ. ನನಗೆ ಧನಾತ್ಮಕತೆಯ ಬಹಳಷ್ಟು ಮಾಹಿತಿ ದೊರೆತಿವೆ. ಇವುಗಳಲ್ಲಿ ಇತರರಿಗೆ ಭರವಸೆಯ ಆಶಾ ಕಿರಣವನ್ನು ಮೂಡಿಸುವ ಮೂಲಕ ಅವರ ಜೀವನ ಸುಧಾರಿಸುವಲ್ಲಿ ಶ್ರಮಿಸುತ್ತಿರುವ ಅನೇಕ ದೇಶವಾಸಿಗಳ ಉಲ್ಲೇಖವಿದೆ.ನವದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಎನ್‌ಸಿಸಿ ಕೆಡೆಟ್ಸ್ ರಾಲಿ(Rally) ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
January 27th, 05:00 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಶ್ರೀ ರಾಜನಾಥ್ ಸಿಂಗ್ ಜಿ, ಶ್ರೀ ಅಜಯ್ ಭಟ್ ಜಿ, ಸಶಸ್ತ್ರ ಪಡೆಗಳ ಮುಖ್ಯಸ್ಥ(ಸಿಡಿಎಸ್)ರಾದ ಜನರಲ್ ಅನಿಲ್ ಚೌಹಾಣ್ ಜಿ, ಎಲ್ಲಾ 3 ಸೇನಾಪಡೆಗಳ ಮುಖ್ಯಸ್ಥರೆ, ರಕ್ಷಣಾ ಕಾರ್ಯದರ್ಶಿ, ಎನ್‌ಸಿಸಿ ಮಹಾನಿರ್ದೇಶಕರೆ, ಇಲ್ಲಿರುವ ಎಲ್ಲಾ ಗಣ್ಯ ಅತಿಥಿಗಳೆ ಮತ್ತು ಎನ್‌ಸಿಸಿಯ ನನ್ನ ಯುವ ಒಡನಾಡಿಗಳೆ!ದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ʻಎನ್‌ಸಿಸಿ ಪಿಎಂ ರ‍್ಯಾಲಿ’ ಉದ್ದೇಶಿಸಿ ಪ್ರಧಾನಿ ಭಾಷಣ
January 27th, 04:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನದಲ್ಲಿ ವಾರ್ಷಿಕ ʻಎನ್‌ಸಿಸಿ ಪಿಎಂ ರ‍್ಯಾಲಿʼಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಶ್ರೀ ಮೋದಿ ಅವರು ಸಾಕ್ಷಿಯಾದರು. ಅತ್ಯುತ್ತಮ ಕೆಡೆಟ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಎನ್‌ಸಿಸಿ ಬಾಲಕಿಯರ ಮೆಗಾ ಸೈಕ್ಲೋಥಾನ್ ಮತ್ತು ಝಾನ್ಸಿಯಿಂದ ದೆಹಲಿಗೆ ʻನಾರಿಶಕ್ತಿ ವಂದನೆ ಓಟʼಕ್ಕೂ (ಎನ್ಎಸ್‌ವಿಆರ್) ಅವರು ಹಸಿರು ನಿಶಾನೆ ತೋರಿದರು.Veer Bal Diwas symbolizes the resolve to do anything to protect Bhartiyata: PM Modi
December 26th, 12:03 pm
Prime Minister Narendra Modi addressed the program marking ‘Veer Bal Diwas’ at Bharat Mandapam in New Delhi. Addressing the gathering, the Prime Minister remarked that the nation is remembering the immortal sacrifices of Veer Sahibzade and deriving inspiration from them as a new chapter of Veer Bal Diwas unfolds for India in the Azadi Ka Amrit Kaal. PM Modi emphasized, “This day reminds us that age does not matter when it comes to heights of bravery.'ವೀರ ಬಾಲ ದಿವಸ್' ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ
December 26th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಭಾರತ್ ಮಂಟಪ’ದಲ್ಲಿ ನಡೆದ 'ವೀರ ಬಾಲ ದಿವಸ್' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರು ಮಕ್ಕಳಿಂದ ಗಾಯನ ಹಾಗೂ ಮೂರು ಸಮರ ಕಲೆಗಳ ಪ್ರದರ್ಶನಗಳಿಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೆಹಲಿಯಲ್ಲಿ ಯುವಜನರ ಜಾಥಾಕ್ಕೆ ಹಸಿರು ನಿಶಾನೆ ತೋರಿದರು.ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯಾಗಿ 2 ವರ್ಷವಾದ ಸಂದರ್ಭದಲ್ಲಿ ಸಂತಸ ವ್ಯಕ್ತ ಪಡಿಸಿದ ಪ್ರಧಾನಮಂತ್ರಿ
December 14th, 03:00 pm
ಕಾಶಿ ವಿಶ್ವನಾಥ ಕಾರಿಡಾರ್ ಗೆ 2 ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತ ಪಡಿಸಿದರು.ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕಸಿತ ಭಾರತ 2047 – ಯುವ ಧ್ವನಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 11th, 10:35 am
ವಿಕಸಿತ ಭಾರತ'ದ ನಿರ್ಣಯಗಳಿಗೆ ಸಂಬಂಧಿಸಿದಂತೆ ಇಂದು ಬಹಳ ಮುಖ್ಯವಾದ ದಿನ. 'ವಿಕಸಿತ ಭಾರತ'ಕ್ಕೆ ಸಂಬಂಧಿಸಿದ ಈ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ನಾನು ಎಲ್ಲ ರಾಜ್ಯಪಾಲರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇಶದ ಯುವಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲ ಸಹೋದ್ಯೋಗಿಗಳನ್ನು ನೀವು ಒಂದೇ ವೇದಿಕೆಯಲ್ಲಿ ತಂದಿದ್ದೀರಿ. ಶಿಕ್ಷಣ ಸಂಸ್ಥೆಗಳ ಪಾತ್ರವು ವೈಯಕ್ತಿಕ ಅಭಿವೃದ್ಧಿಗೆ ಕಾರಣವಾಗುತ್ತದೆ, ಮತ್ತು ರಾಷ್ಟ್ರವನ್ನು ವೈಯಕ್ತಿಕ ಅಭಿವೃದ್ಧಿಯ ಮೂಲಕ ನಿರ್ಮಿಸಲಾಗುತ್ತದೆ. ಭಾರತವು ಪ್ರಸ್ತುತ ತನ್ನನ್ನು ತಾನು ಕಂಡುಕೊಳ್ಳುತ್ತಿರುವ ಯುಗದಲ್ಲಿ, ವೈಯಕ್ತಿಕ ಅಭಿವೃದ್ಧಿಯ ಅಭಿಯಾನವು ಅತ್ಯಂತ ನಿರ್ಣಾಯಕವಾಗಿದೆ. ಯುವ ಧ್ವನಿ ಕಾರ್ಯಾಗಾರದ ಯಶಸ್ಸಿಗೆ ನಾನು ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ.'ವಿಕಸಿತ ಭಾರತ @2047: ವಾಯ್ಸ್ ಆಫ್ ಯೂತ್'ಗೆ ಚಾಲನೆ ನೀಡಿದ ಪ್ರಧಾನಿ
December 11th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ವಿಕಸಿತ ಭಾರತ@2047: ವಾಯ್ಸ್ ಆಫ್ ಯೂತ್'ಗೆ ಚಾಲನೆ ನೀಡಿದರು. ಈ ಉಪಕ್ರಮದ ಆರಂಭದ ಅಂಗವಾಗಿ ದೇಶಾದ್ಯಂತ ರಾಜಭವನಗಳಲ್ಲಿ ಆಯೋಜಿಸಲಾದ ಕಾರ್ಯಾಗಾರಗಳಲ್ಲಿ ಪ್ರಧಾನಿ ಮೋದಿ ಅವರು ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಬೋಧಕವರ್ಗದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.140 ಕೋಟಿ ಜನರು ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
November 26th, 11:30 am
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ 'ಮನದ ಮಾತಿ' ಗೆ ನಿಮಗೆ ಸ್ವಾಗತ. ಆದರೆ ನವೆಂಬರ್ 26 ಇಂದಿನ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ ಆ ದಾಳಿಯಿಂದ ಚೇತರಿಸಿಕೊಂಡು ಈಗ ಸಂಪೂರ್ಣ ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿರುವುದು ಭಾರತದ ಶಕ್ತಿಯಾಗಿದೆ. ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಪುರುಷರನ್ನು ಇಂದು ದೇಶ ಸ್ಮರಿಸಿಕೊಳ್ಳುತ್ತಿದೆ.ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
October 31st, 10:00 am
ಇಲ್ಲಿ ನೆರೆದಿರುವ ಎಲ್ಲಾ ಯುವಕರು ಮತ್ತು ನಿಮ್ಮಂತಹ ಧೈರ್ಯಶಾಲಿಗಳ ಈ ಉತ್ಸಾಹವು ರಾಷ್ಟ್ರೀಯ ಏಕತಾ ದಿವಸ್‌ನ (ರಾಷ್ಟ್ರೀಯ ಏಕತಾ ದಿನ) ದೊಡ್ಡ ಶಕ್ತಿಯಾಗಿದೆ. ಒಂದು ರೀತಿಯಲ್ಲಿ, ನನ್ನ ಮುಂದೆ ಮಿನಿ ಭಾರತವನ್ನೇ ನೋಡಬಹುದು. ವಿವಿಧ ರಾಜ್ಯಗಳು, ವಿವಿಧ ಭಾಷೆಗಳು ಮತ್ತು ವಿಭಿನ್ನ ಸಂಪ್ರದಾಯಗಳು ಇಲ್ಲಿವೆ, ಆದರೆ ಇಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಏಕತೆಯ ಗಟ್ಟಿಯಾದ ಎಳೆಯಿಂದ ಸಂಪರ್ಕ ಹೊಂದಿದ್ದಾನೆ. ಲೆಕ್ಕವಿಲ್ಲದಷ್ಟು ಮಣಿಗಳಿವೆ, ಆದರೆ ಹಾರವು ಒಂದೇ ಆಗಿದೆ. ಲೆಕ್ಕವಿಲ್ಲದಷ್ಟು ದೇಹಗಳಿವೆ, ಆದರೆ ಮನಸ್ಸು ಒಂದೇ ಆಗಿದೆ. ಆಗಸ್ಟ್ 15 ನಮ್ಮ ಸ್ವಾತಂತ್ರ್ಯೋತ್ಸವ ಆಚರಣೆಯ ದಿನ ಮತ್ತು ಜನವರಿ 26 ನಮ್ಮ ಗಣರಾಜ್ಯೋತ್ಸವದ ದಿನವಾಗಿದೆ, ಅದೇ ರೀತಿ ಅಕ್ಟೋಬರ್ 31 ದೇಶದ ಮೂಲೆ ಮೂಲೆಗೂ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುವ ಹಬ್ಬವಾಗಿದೆ.ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ʻರಾಷ್ಟ್ರೀಯ ಏಕತಾ ದಿನʼದ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ
October 31st, 09:12 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻರಾಷ್ಟ್ರೀಯ ಏಕತಾ ದಿನʼದ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯಂದು ಏಕತಾ ಪ್ರತಿಮೆಗೆ ಅವರು ಗೌರವ ನಮನ ಸಲ್ಲಿಸಿದರು. ಬಿಎಸ್ಎಫ್ ಮತ್ತು ವಿವಿಧ ರಾಜ್ಯ ಪೊಲೀಸರ ತುಕಡಿಗಳನ್ನು ಒಳಗೊಂಡ ʻರಾಷ್ಟ್ರೀಯ ಏಕತಾ ದಿವಸ್ ಪೆರೇಡ್ʼ, ಸಂಪೂರ್ಣ ಮಹಿಳಾ ʻಸಿಆರ್‌ಪಿಎಫ್ʼ ಬೈಕ್ ಸವಾರರ ʻಡೇರ್ಡೆವಿಲ್ ಶೋʼ, ʻಬಿಎಸ್ಎಫ್ʼನ ಮಹಿಳಾ ಪೈಪ್ ಬ್ಯಾಂಡ್, ಗುಜರಾತ್ ಮಹಿಳಾ ಪೊಲೀಸರಿಂದ ನೃತ್ಯ ಸಂಯೋಜನೆ ಕಾರ್ಯಕ್ರಮ, ವಿಶೇಷ ಎನ್‌ಸಿಸಿ ಪ್ರದರ್ಶನ, ಶಾಲಾ ಬ್ಯಾಂಡ್‌ಗಳ ಪ್ರದರ್ಶನ, ಭಾರತೀಯ ವಾಯುಪಡೆಯ ವೈಮಾನಿಕ ಹಾರಾಟ, ʻರೋಮಾಂಚಕ ಗ್ರಾಮʼಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಶ್ರೀ ಮೋದಿ ಅವರು ಸಾಕ್ಷಿಯಾದರು.