ಮೇಘಾಲಯ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ನಿಧನಕ್ಕೆ ಪ್ರಧಾನ ಮಂತ್ರಿ ಶೋಕ.

July 08th, 02:15 pm

ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.“ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ಅವರ ನಿಧನದಿಂದ ದುಃಖತಪ್ತನಾಗಿದ್ದೇನೆ. ಸಂಸತ್ ಪಟುವಾಗಿ , ಸಚಿವರಾಗಿ ಮತ್ತು ರಾಜ್ಯಪಾಲರಾಗಿ ಅವರು ರಾಷ್ಟ್ರಕ್ಕೆ ಗಣನೀಯ ದೇಣಿಗೆ ನೀಡಿದ್ದಾರೆ. ಕೇರಳದ ಅಭಿವೃದ್ಧಿಗಾಗಿ ಅವರು ವಿಶೇಷವಾಗಿ ದುಡಿದಿದ್ದರು. ಈ ದುಃಖದ ಸಂದರ್ಭದಲ್ಲಿ ನಾವು ಅವರ ಕುಟುಂಬದ ಮತ್ತು ಹಿತೈಶಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಆಶಿಸುತ್ತೇವೆ” ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.