ಕೋಲ್ಕತ್ತಾದಲ್ಲಿ ನಡೆದ ಐ.ಎನ್.ಎಸ್. ಅಗ್ರೇ, ಐ.ಎನ್.ಎಸ್. ದುನಾಗಿರಿ ಮತ್ತು ಐ.ಎನ್.ಎಸ್. ಸಂಶೋಧಕ್ ತ್ರಿವಳಿ ನೌಕಾದಳ ಹಡಗು ಕಾರ್ಯಾರಂಭ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
June 21st, 12:51 pm
ಪಶ್ಚಿಮ ಬಂಗಾಳದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರ್.ಎನ್.ರವಿ ಜೀ, ಉತ್ಸಾಹಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೀ, ನೌಕಾಪಡೆಯ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಜೀ, ಇಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಮಹಿಳೆಯರೇ ಮತ್ತು ಮಹನೀಯರೇ!ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಮೂರು ನೌಕಾ ಹಡಗುಗಳಾದ ಐಎನ್ಎಸ್ ದುನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರೇ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಾರಂಭಗೊಳಿಸಿದರು
June 21st, 12:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸ ಮಾಡಿ ನಿರ್ಮಿಸಲಾದ ಮೂರು ನೌಕಾ ಹಡಗುಗಳಾದ ಐ.ಎನ್.ಎಸ್. ದುನಾಗಿರಿ, ಸುಧಾರಿತ ರಹಸ್ಯ ಯುದ್ಧ ನೌಕೆ ಅಂದರೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾದ ಹಾಗು ವೈರಿಯ ರಾಡಾರ್, ಸೋನಾರ್, ದೃಶ್ಯ ಮತ್ತು ಇನ್ಫ್ರಾರೆಡ್ ಚಕ್ಷುಗಳಿಗೆ ಸುಲಭದಲ್ಲಿ ಗೋಚರಿಸದ ಮಧ್ಯಮ ಗಾತ್ರದ ನೌಕಾ ಯುದ್ದನೌಕೆ ಐ.ಎನ್.ಎಸ್. ಸಂಶೋಧಕ್ ಮತ್ತು ಜಲಾಂತರ್ಗಾಮಿ ನಿರೋಧಕ ಯುದ್ಧ ನೌಕೆ ಐ.ಎನ್.ಎಸ್. ಅಗ್ರೇ ಇವುಗಳನ್ನು ಕಾರ್ಯಾರಂಭಗೊಳಿಸಿದರು. ಈ ಸೇರ್ಪಡೆಗಳು ರಾಷ್ಟ್ರದ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸುತ್ತವೆ ಮತ್ತು ಭೌಗೋಳಿಕ ರಾಜಕೀಯ ಬೆದರಿಕೆಗಳ ವಿರುದ್ಧ ನಮ್ಮ ಕರಾವಳಿ ನೀರಿನ ಭದ್ರತೆಯನ್ನು ಬಲಪಡಿಸುತ್ತವೆ. ಎಲ್ಲಾ ಮೂರು ಹಡಗುಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು 200ಕ್ಕೂ ಹೆಚ್ಚು ಎಂಎಸ್ಎಂಇಗಳು ಸೇರಿದಂತೆ ಭಾರತೀಯ ಉದ್ಯಮದ ವ್ಯಾಪಕ ಭಾಗವಹಿಸುವಿಕೆಯೊಂದಿಗೆ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಕೋಲ್ಕತ್ತಾದಲ್ಲಿ ನಿರ್ಮಿಸಿದೆ. ಶೇಕಡಾ 75 ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿಗಳೊಂದಿಗೆ, ಈ ಹಡಗುಗಳು ಆತ್ಮನಿರ್ಭರತೆಗೆ ಭಾರತದ ಬದ್ಧತೆಗೆ ಸಾಕ್ಷಿಯಾಗಿವೆ.ಉತ್ತರ ಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಂತ Iರ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 28th, 12:15 pm
ಉದ್ಘಾಟನೆ ನೆರವೇರಿದೆಯೇ? ಉದ್ಘಾಟನೆ ನೆರವೇರಿದೆಯೇ? ಇನ್ನೂ ಇಲ್ಲ, ಈಗ ಅರ್ಧ ಕೆಲಸ ಮಾತ್ರವೇ ಮುಗಿದಿದೆ. ನಾನು ಆ ಪರದೆಯನ್ನು ಮಾತ್ರ ಸರಿಸಿದ್ದೇನೆ, ಆದರೆ ಇಂದು ಈ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಇಲ್ಲಿ ಹಾಜರಿರುವ ನೀವೆಲ್ಲರೂ ಮಾಡಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನಿಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆಯಿರಿ, ನಿಮ್ಮ ಮೊಬೈಲ್ ಫೋನ್‌ನ ದೀಪವನ್ನು ಆನ್ ಮಾಡಿ, ನೀವೇ ಅದನ್ನು ಉದ್ಘಾಟಿಸುತ್ತಿದ್ದೀರಿ. ದೀಪವನ್ನು ಬೆಳಗುವ ಮೂಲಕ, ಇಲ್ಲಿ ಹಾಜರಿರುವ ಪ್ರತಿಯೊಬ್ಬರೂ ಇಂದು ಈ ವಿಮಾನ ನಿಲ್ದಾಣವನ್ನು ಉದ್ಘಾಟಿಸುತ್ತಿದ್ದಾರೆ. ಇದು ನಿಮ್ಮ ಆಸ್ತಿ, ಇದು ನಿಮ್ಮ ಭವಿಷ್ಯ, ಇದು ನಿಮ್ಮ ಕಠಿಣ ಪರಿಶ್ರಮ. ಆದ್ದರಿಂದ ಇದರ ಉದ್ಘಾಟನೆಯನ್ನು ನಿಮ್ಮ ಕೈಗಳಿಂದಲೇ ಮಾಡಲಾಗುತ್ತಿದೆ. ಭಾರತ ಮಾತೆಗೆ ಜಯವಾಗಲಿ ಎಂದು ಹೇಳುವ ಮೂಲಕ, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ, ದೀಪವನ್ನು ಸಂಪೂರ್ಣ ತೋರಿಸಿ. ಭಾರತ ಮಾತೆಗೆ ಜಯವಾಗಲಿ! ಭಾರತ ಮಾತೆಗೆ ಜಯವಾಗಲಿ! ಭಾರತ ಮಾತೆಗೆ ಜಯವಾಗಲಿ! ತುಂಬು ಧನ್ಯವಾದಗಳು. ಈಗ ಉದ್ಘಾಟನೆ ಪೂರ್ಣವಾಗಿದೆ.ಸುಮಾರು ₹11,200 ಕೋಟಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ I ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
March 28th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಜೇವರ್‌ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ , ಇಂದು ವಿಕ್ಷಿತ್ ಯುಪಿ, ವಿಕಸಿತ ಭಾರತ ಅಭಿಯಾನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಭಾರತದ ಅತಿದೊಡ್ಡ ರಾಜ್ಯವು ಈಗ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಮೊದಲನೆಯದಾಗಿ, ಈ ವಿಮಾನ ನಿಲ್ದಾಣದ ಅಡಿಪಾಯವನ್ನು ಹಾಕಿದ್ದಕ್ಕಾಗಿ ಮತ್ತು ಈಗ ಅದನ್ನು ಉದ್ಘಾಟಿಸಿದ್ದಕ್ಕಾಗಿ ಹಾಗು ಎರಡನೆಯದಾಗಿ, ಈ ಭವ್ಯ ವಿಮಾನ ನಿಲ್ದಾಣದ ಹೆಸರು ಉತ್ತರ ಪ್ರದೇಶದೊಂದಿಗೆ ಸಂಬಂಧ ಹೊಂದಿರುವುದರಿಂದಾಗಿ ತಮಗೆ ಎರಡು ಪಟ್ಟು ಹೆಮ್ಮೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಸಂತಸ ಹಂಚಿಕೊಂಡರು. ನನ್ನನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಸಂಸತ್ ಸದಸ್ಯನನ್ನಾಗಿ ಮಾಡಿದ ರಾಜ್ಯ ಇದು, ಮತ್ತು ಅದರ ಗುರುತು ಈಗ ಈ ಭವ್ಯ ವಿಮಾನ ನಿಲ್ದಾಣದೊಂದಿಗೆ ಸಂಬಂಧ ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು.'ಮನ್ ಕಿ ಬಾತ್' ಜನರ ಸಾಮೂಹಿಕ ಪ್ರಯತ್ನಗಳನ್ನು ಸಾರ್ವಜನಿಕರಿಗೆ ತಿಳಿಸಲು ಅತ್ಯುತ್ತಮ ವೇದಿಕೆಯಾಗಿದೆ: ಪ್ರಧಾನಿ ಮೋದಿ
November 30th, 11:30 am
ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನ ದಿನಾಚರಣೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ, ಐಎನ್ಎಸ್ 'ಮಹೆ' ಸೇರ್ಪಡೆ ಮತ್ತು ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಸೇರಿದಂತೆ ನವೆಂಬರ್ ತಿಂಗಳ ಪ್ರಮುಖ ಘಟನೆಗಳನ್ನು ಹೈಲೈಟ್ ಮಾಡಿದರು. ದಾಖಲೆಯ ಆಹಾರ ಧಾನ್ಯ ಮತ್ತು ಜೇನುತುಪ್ಪ ಉತ್ಪಾದನೆ, ಭಾರತದ ಕ್ರೀಡಾ ಯಶಸ್ಸುಗಳು, ವಸ್ತು ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಕೃಷಿಯಂತಹ ಹಲವಾರು ಪ್ರಮುಖ ವಿಷಯಗಳನ್ನು ಸಹ ಅವರು ಸ್ಪರ್ಶಿಸಿದರು. ಎಲ್ಲರೂ ಕಾಶಿ-ತಮಿಳು ಸಂಗಮದ ಭಾಗವಾಗಬೇಕೆಂದು ಪ್ರಧಾನಿ ಒತ್ತಾಯಿಸಿದರು.