ಈ ವಾರ ಭಾರತದ ಬಗ್ಗೆ ವಿಶ್ವ

April 22nd, 12:27 pm

ರಾಜತಾಂತ್ರಿಕ ಫೋನ್ ಕರೆಗಳಿಂದ ಹಿಡಿದು ಹೊಸ ವೈಜ್ಞಾನಿಕ ಆವಿಷ್ಕಾರಗಳವರೆಗೆ, ಈ ವಾರ ಜಾಗತಿಕ ವೇದಿಕೆಯಲ್ಲಿ ಭಾರತದ ಉಪಸ್ಥಿತಿಯು ಸಹಯೋಗ, ನಾವೀನ್ಯತೆ ಮತ್ತು ಸಾಂಸ್ಕೃತಿಕ ಹೆಮ್ಮೆಯಿಂದ ಗುರುತಿಸಲ್ಪಟ್ಟಿದೆ.

ಶ್ರೀ ಎಲಾನ್‌ ಮಸ್ಕ್‌ ಅವರೊಂದಿಗಿನ ಸಂಭಾಷಣೆಯಲ್ಲಿ ದ್ವಿಪಕ್ಷೀಯ ತಂತ್ರಜ್ಞಾನ ಸಹಕಾರದ ಸಾಮರ್ಥ್ಯವನ್ನು ಪ್ರಧಾನಮಂತ್ರಿಯವರು ಮಹತ್ವಪೂರ್ಣವಾಗಿ ಹೇಳಿದ್ದಾರೆ

April 18th, 01:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಎಲಾನ್‌ ಮಸ್ಕ್‌ ಅವರೊಂದಿಗೆ ರಚನಾತ್ಮಕ ಸಂವಾದ ನಡೆಸಿದರು. ಇಬ್ಬರೂ ಪರಸ್ಪರ ಹಿತಾಸಕ್ತಿಯ ವಿಷಯಗಳ ವ್ಯಾಪ್ತಿಯನ್ನು ಪರಿಶೀಲಿಸಿ ಸಂವಾದ ನಡೆಸಿದರು. ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಇವರಿಬ್ಬರ ಸಭೆಯ ಸಂದರ್ಭದಲ್ಲಿ ನಡೆದ ಚರ್ಚೆಯ ವಿಷಯಗಳನ್ನು ಇಬ್ಬರು ನಾಯಕಯರು ಮರುಪರಿಶೀಲಿಸಿಕೊಂಡರು. ಇವರು ಸಂವಹನವು ತಾಂತ್ರಿಕ ಪ್ರಗತಿಗಾಗಿ ಹಂಚಿಕೆಯ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ.

ಪ್ರಧಾನಿ ಮೋದಿ ಮತ್ತು ಟ್ರಂಪ್ ಭಾರತ-ಅಮೆರಿಕ ಮೆಗಾ ಪಾಲುದಾರಿಕೆಯನ್ನು ರೂಪಿಸಿದರು

February 14th, 06:46 pm

ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಅಮೆರಿಕ ಭೇಟಿಯು ಒಂದು ಸ್ಮರಣೀಯ ಸಂದರ್ಭವಾಗಿದ್ದು, ಎರಡೂ ರಾಷ್ಟ್ರಗಳ ನಡುವಿನ ಆಳವಾದ ಕಾರ್ಯತಂತ್ರ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ತಮ್ಮ ವಾಸ್ತವ್ಯದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಅಮೆರಿಕದ ನಾಯಕರು, ವ್ಯಾಪಾರ ಉದ್ಯಮಿಗಳು ಮತ್ತು ಭಾರತೀಯ ವಲಸೆಗಾರರೊಂದಿಗೆ ಉನ್ನತ ಮಟ್ಟದ ಸಭೆಗಳು ಮತ್ತು ಚರ್ಚೆಗಳಲ್ಲಿ ತೊಡಗಿಸಿಕೊಂಡರು, ಇದು ರಕ್ಷಣೆ, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ರಾಜತಾಂತ್ರಿಕತೆಯಂತಹ ನಿರ್ಣಾಯಕ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಭೇಟಿಯು ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಸಂಬಂಧವನ್ನು ಪುನರುಚ್ಚರಿಸಿತು, ಹೊಸ ವಿಶ್ವ ಕ್ರಮವನ್ನು ರೂಪಿಸುವಲ್ಲಿ ಎರಡೂ ರಾಷ್ಟ್ರಗಳನ್ನು ಜಾಗತಿಕ ಪಾಲುದಾರರನ್ನಾಗಿ ಇರಿಸಿತು.

ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರು (ಡಿಓಜಿಇ) ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು

February 13th, 11:51 pm

ಪ್ರಧಾನ ಮಂತ್ರಿ ಮೋದಿ ಅವರು ನಾವೀನ್ಯತೆ, AI, ಬಾಹ್ಯಾಕಾಶ, ಸುಸ್ಥಿರತೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ಆಡಳಿತದಲ್ಲಿ ಸಹಯೋಗವನ್ನು ಚರ್ಚಿಸಲು ಟೆಸ್ಲಾ ಸಿಇಒ ಮತ್ತು ಅಮೆರಿಕದ ಡಿಓಜಿಇ ಮುಖ್ಯಸ್ಥ ಎಲೋನ್ ಮಸ್ಕ್ ಅವರನ್ನು ಭೇಟಿಯಾದರು.

ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ವಿಶ್ವ ನಾಯಕರಿಂದ ಪ್ರಧಾನಿ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ

June 10th, 12:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಭಿನಂದನಾ ಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆಯಾದ 'X' ನಲ್ಲಿ ವಿಶ್ವ ನಾಯಕರ ಸಂದೇಶಗಳಿಗೆ ಶ್ರೀ ಮೋದಿ ಉತ್ತರಿಸಿದರು.

ಅಮೆರಿಕದ ದಿಗ್ಗಜ ಉದ್ಯಮಿ ಶ್ರೀ ಎಲೋನ್ ಮಸ್ಕ್ ಅವರೊಂದಿಗೆ ಪ್ರಧಾನ ಮಂತ್ರಿ ಸಭೆ

June 21st, 08:22 am

ಅಮೆರಿಕದ ತಂತ್ರಜ್ಞಾನ ವಲಯದ ದಿಗ್ಗಜ, ಖ್ಯಾತ ಉದ್ಯಮಿ ಮತ್ತು ಟೆಸ್ಲಾ ಇನ್ ಕಾರ್ಪೊರೇಷನ್ & ಸ್ಪೇಸ್ಎಕ್ಸ್ ಸಿಇಒ, ಸಿಟಿಒ ಮಾಲೀಕ, ಮತ್ತು ಟ್ವಿಟರ್ ಅಧ್ಯಕ್ಷ, ಬೋರಿಂಗ್ ಕಂಪನಿ ಮತ್ತು ಎಕ್ಸ್-ಕಾರ್ಪ್ ಸಂಸ್ಥಾಪಕ, ನ್ಯೂರಾಲಿಂಕ್ ಮತ್ತು ಒಪನ್ಎಐ ಸಹಸಂಸ್ಥಾಪಕ. ಶ್ರೀ ಎಲೋನ್ ಮಸ್ಕ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಯಾರ್ಕ್ ನಲ್ಲಿಂದು ಭೇಟಿಯಾದರು;