ಎಕನಾಮಿಕ್ ಟೈಮ್ಸ್ ಜಾಗತಿಕ ನಾಯಕರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 23rd, 10:10 pm
ಜಾಗತಿಕ(ವಿಶ್ವ) ನಾಯಕರ ವೇದಿಕೆಗೆ ಆಗಮಿಸಿರುವ ಎಲ್ಲ ಗೌರವಾನ್ವಿತ ಅತಿಥಿಗಳನ್ನು ನಾನು ಸ್ವಾಗತಿಸುತ್ತೇನೆ. ಈ ವೇದಿಕೆಯ ಸಮಯವು ತುಂಬಾ ಪರಿಪೂರ್ಣವಾಗಿದೆ, ಆದ್ದರಿಂದ ನಾನು ಅದನ್ನು ಪ್ರಶಂಸಿಸುತ್ತೇನೆ. ಕಳೆದ ವಾರವಷ್ಟೇ ನಾನು ಕೆಂಪು ಕೋಟೆಯಿಂದ ಮುಂದಿನ ಪೀಳಿಗೆಯ ಸುಧಾರಣೆಗಳ ಬಗ್ಗೆ ಮಾತನಾಡಿದ್ದೆ, ಈಗ ಈ ವೇದಿಕೆ ಆ ಉತ್ಸಾಹದಲ್ಲಿ ಶಕ್ತಿ ಗುಣಕವಾಗಿ ಕಾರ್ಯ ನಿರ್ವಹಿಸುತ್ತಿದೆ.ನವದೆಹಲಿಯಲ್ಲಿ ನಡೆದ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
August 23rd, 05:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಡೆದ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ವರ್ಲ್ಡ್ ಲೀಡರ್ ಫೋರಂನಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಈ ವೇದಿಕೆಯ ಸಮಯ ಅತ್ಯಂತ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟ ಶ್ರೀ ಮೋದಿ ಅವರು, ಈ ಸಕಾಲಿಕ ಉಪಕ್ರಮಕ್ಕಾಗಿ ಆಯೋಜಕರನ್ನು ಶ್ಲಾಘಿಸಿದರು.ಕಳೆದ ವಾರವಷ್ಟೇ, ಮುಂದಿನ ಪೀಳಿಗೆಯ ಸುಧಾರಣೆಗಳ ಬಗ್ಗೆ ಕೆಂಪು ಕೋಟೆಯಿಂದ ಮಾತನಾಡಿದ ಅವರು, ಈ ವೇದಿಕೆ ಈಗ ಆ ಚೈತನ್ಯಕ್ಕೆ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.2025ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
July 21st, 10:30 am
ಮುಂಗಾರು ಎಂದರೆ ಹೊಸತನ ಮತ್ತು ಸೃಷ್ಟಿಯ ಸಂಕೇತ. ಇಲ್ಲಿಯವರೆಗೆ ಬಂದಿರುವ ವರದಿಗಳ ಪ್ರಕಾರ, ಇಡೀ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ವಲಯಕ್ಕೆ ಲಾಭವಾಗುವ ವಾತಾವರಣ ನಿರ್ಮಾಣವಾಗಿದೆ. ಮಳೆಯು ನಮ್ಮ ರೈತರ ಆರ್ಥಿಕತೆಗೆ ಮಾತ್ರವಲ್ಲದೆ, ದೇಶದ ಆರ್ಥಿಕತೆಗೂ, ಗ್ರಾಮೀಣ ಆರ್ಥಿಕತೆಗೂ ಮತ್ತು ಪ್ರತಿಯೊಂದು ಮನೆಯ ಆರ್ಥಿಕತೆಗೂ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಪಡೆದಿರುವ ಮಾಹಿತಿಯ ಪ್ರಕಾರ, ಈ ವರ್ಷ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವು ಕಳೆದ ಹತ್ತು ವರ್ಷಗಳ ದಾಖಲೆಗಿಂತ ಸುಮಾರು ಮೂರು ಪಟ್ಟು ಹೆಚ್ಚಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
July 21st, 09:54 am
ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ಹೇಳಿಕೆಗಳಲ್ಲಿ, ಅವರು ಭಯಾನಕ ಪಹಲ್ಗಾಮ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿದರು ಮತ್ತು ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸುವಲ್ಲಿ ಭಾರತದ ರಾಜಕೀಯ ನಾಯಕತ್ವದ ಒಗ್ಗಟ್ಟಿನ ಧ್ವನಿಯನ್ನು ಶ್ಲಾಘಿಸಿದರು. ಡಿಜಿಟಲ್ ಇಂಡಿಯಾದ, ವಿಶೇಷವಾಗಿ ಯುಪಿಐನ ಜಾಗತಿಕ ಮನ್ನಣೆಯನ್ನು ಪ್ರಧಾನಿ ಗಮನಿಸಿದರು. ನಕ್ಸಲಿಸಂ ಮತ್ತು ಮಾವೋವಾದ ಕ್ಷೀಣಿಸುತ್ತಿದೆ ಎಂದು ಅವರು ದೃಢಪಡಿಸಿದರು ಮತ್ತು ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಸಹ ಶ್ಲಾಘಿಸಿದರು.‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 18.06.2023 ರಂದು ಮಾಡಿದ ‘ಮನ್ ಕಿ ಬಾತ್’ – 102 ನೇ ಸಂಚಿಕೆಯ ಕನ್ನಡ ಅವತರಣಿಕೆ
June 18th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ, 'ಮನದ ಮಾತಿ’ಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ, 'ಮನದ ಮಾತು' ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ, ಆದರೆ, ಈ ಬಾರಿ ಅದು ಒಂದು ವಾರ ಮುಂಚಿತವಾಗಿ ಪ್ರಸಾರವಾಗುತ್ತಿದೆ. ನಾನು ಮುಂದಿನ ವಾರ ಅಮೆರಿಕಾದಲ್ಲಿ ಇರುತ್ತೇನೆ ಮತ್ತು ಅಲ್ಲಿ ಬಹಳ ವ್ಯಸ್ತವಾಗಿರುತ್ತೇನೆ ಎಂಬುದು ನಿಮಗೆಲ್ಲ ಗೊತ್ತು, ಹಾಗಾಗಿ ನಾನು ತೆರಳುವ ಮೊದಲು ನಿಮ್ಮೊಂದಿಗೆ ಮಾತನಾಡಬೇಕೆಂದು ಯೋಚಿಸಿದೆ. ಇದಕ್ಕಿಂತ ಉತ್ತಮವಾದದ್ದು ಇನ್ನೇನಿದೆ? ನಿಮ್ಮೆಲ್ಲರ ಆಶೀರ್ವಾದ, ನಿಮ್ಮ ಸ್ಫೂರ್ತಿ, ನನ್ನ ಶಕ್ತಿಯನ್ನು ಹೆಚ್ಚಿಸುತ್ತದೆ.ಭಾರತದ ವ್ಯಾಕ್ಸಿನೇಷನ್ ಅಭಿಯಾನವು ಜಗತ್ತಿಗೆ ಒಂದು ಅಧ್ಯಯನವಾಗಬಹುದು: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
June 27th, 11:30 am
ಮನ್ ಕಿ ಬಾತ್ ಸಂದರ್ಭದಲ್ಲಿ, ಮುಂಬರುವ ಟೋಕಿಯೊ ಒಲಿಂಪಿಕ್ಸ್ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಧಾನಿ ಮೋದಿ ಮಾತನಾಡಿದರು, ದಿವಂಗತ ಮಿಲ್ಖಾ ಸಿಂಗ್ ಮತ್ತು ಅವರ ಕೊಡುಗೆಯನ್ನು ನೆನಪಿಸಿಕೊಂಡರು. ನಡೆಯುತ್ತಿರುವ ಲಸಿಕೆ ಅಭಿಯಾನದ ಬಗ್ಗೆ ಪ್ರಧಾನಿ ಮೋದಿ ಬೆಳಕು ಚೆಲ್ಲಿದರು ಮತ್ತು ಇದು ಜಗತ್ತಿಗೆ ಒಂದು ಅಧ್ಯಯನವಾಗಬಹುದು ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರೊಂದಿಗೆ ಮಾತನಾಡಿದ ಅವರು ಯಾವುದೇ ವದಂತಿಗಳಿಗೆ ಬಲಿಯಾಗದಂತೆ ಮತ್ತು ಲಸಿಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ನೀರಿನ ಸಂರಕ್ಷಣೆ, ಅಮೃತ್ ಮಹೋತ್ಸವ್ ಮತ್ತು ಹೆಚ್ಚಿನವುಗಳ ಬಗ್ಗೆ ಪ್ರಧಾನಿ ಮಾತನಾಡಿದರು.ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಕನ್ನಡ ಅವತರಣಿಕೆ
September 14th, 09:58 am
ದೀರ್ಘ ಕಾಲದ ನಂತರ ನಾನು ಇಂದು ನಿಮ್ಮನ್ನು ನೋಡುತ್ತಿದ್ದೇನೆ. ನೀವೆಲ್ಲರೂ ಚೆನ್ನಾಗಿದ್ದೀರೆಂದು ತಿಳಿಯುತ್ತೇನೆ. ನಿಮ್ಮ ಕುಟುಂಬದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಭಾವಿಸುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ.We strengthened our anti-terrorist laws within 100 days of government: PM
September 12th, 12:20 pm
Prime Minister Narendra Modi today inaugurated several key development projects in Jharkhand. Among the projects that Shri Modi inaugurated include the new building of the Jharkhand Legislative Assembly, the Sahebganj Multi-Modal terminal and hundreds of Eklavya Model Schools. PM Modi also laid the foundation stone for a new building of Jharkhand’s new Secretariat building while also launching the PM Kisan Man Dhan Yojana and a National Pension Scheme for Traders at this occasion.ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಉದ್ಘಾಟಿಸಿದ ಪ್ರಧಾನ ಮಂತ್ರಿ
September 12th, 12:11 pm
ರೈತರ ಬದುಕು ಸುರಕ್ಷಿತಗೊಳಿಸುವ ಮತ್ತೊಂದು ಪ್ರಮುಖ ಪ್ರಯತ್ನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಉದ್ಘಾಟಿಸಿದರು.Forget 'Paksh' and 'Vipaksh'. Think about issues with a ‘Nishpaksh spirit’ and work in the larger interest of the nation: PM
June 17th, 11:54 am
PM Modi addressed the media ahead of the Monsoon Session of Parliament. Appreciating the role of Opposition, PM Modi said, “An active Opposition is important in a Parliamentary democracy. The Opposition need not bother about their numbers. I hope they speak actively and participate in house proceedings.” He added that when we come to Parliament, we should forget ‘Paksh’ and ‘Vipaksh’ and think about issues with a ‘Nishpaksh spirit’ and work in the larger interest of the nation.17 ನೇ ಲೋಕ ಸಭೆಯ ಆರಂಭದಲ್ಲಿ ಪ್ರಧಾನ ಮಂತ್ರಿ ಅವರ ಮಾಧ್ಯಮ ಹೇಳಿಕೆ.
June 17th, 11:53 am
17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಕ್ಕೆ ಮೊದಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲಾ ಹೊಸ ಸಂಸದರಿಗೆ ಸ್ವಾಗತ ಕೋರಿದರು.ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
July 18th, 11:11 am
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೇಶವನ್ನು ಕಾಡುತ್ತಿರುವ ಹಲವು ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಬೇಕಿದೆ. ಸದನದ ಹಿರಿಯ ಹಾಗೂ ಅನುಭವಿ ಸದಸ್ಯರ ಜತೆಗಿನ ವ್ಯಾಪಕ ಚರ್ಚೆಯಿಂದ ಸದನ ಮತ್ತು ರಾಷ್ಟ್ರಕ್ಕೆ ಲಾಭವಾಗಲಿದೆ. ಅವರುಗಳ ಉತ್ತಮ ಸಲಹೆಯಿಂದ ಸರ್ಕಾರಕ್ಕೆ ಉತ್ತಮ ನೀತಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು ಸಮಯದ ಸದುಪಯೋಗವನ್ನು ಅತಿ ಹೆಚ್ಚಿನ ರೀತಿಯಲ್ಲಿ ಪಡೆದುಕೊಂಡು ಪ್ರಮುಖ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತವೆಂಬ ಎಂಬ ವಿಶ್ವಾಸ ನನಗಿದೆ. ಸದನದ ಕಾರ್ಯ ಕಲಾಪಗಳಲ್ಲಿ ಎಲ್ಲರೂ ಸಹಕರಿಸಿ ರಾಜ್ಯ ಶಾಸಕಾಂಗ ಸಭೆಗಳಿಗೆ ಸಂಸತ್ ಕಾರ್ಯ ಕಲಾಪ ಪ್ರೇರಣೆಯಾಗಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಇದನ್ನು ನೆರೆವೇರಿಸುತ್ತಾರೆಂಬ ವಿಶ್ವಾಸ ನನಗಿದೆ. ನಾನು ನನ್ನ ಆಸೆ ಆಕಾಂಕ್ಷೆಗಳ ಅನುರೂಪ ಸದನದ ಕಾರ್ಯ ಕಲಾಪ ಸುಗಮವಾಗಿರುವಂತೆ ನೋಡಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ. ಈ ಬಾರಿಯೂ ನಾನು ನನ್ನ ಬಯಕೆಯನ್ನು ತಮ್ಮ ಮುಂದೆ ಪ್ರಸ್ತುತಪಡಿಸಿದ್ದೇನೆ. ಈ ಬಗ್ಗೆ ನಾವು ಮತ್ತೊಮ್ಮೆ ಪ್ರಯತ್ನ ಪಡಬೇಕು ಮತ್ತು ನಿರಂತರ ಪ್ರಯತ್ನಶೀಲರಾಗಿರಬೇಕು. ಸರ್ಕಾರ ಸದಸ್ಯರು ಬಯಸುವ ಎಲ್ಲ ರೀತಿಯ ಚರ್ಚೆಗಳಿಗೆ ಸಿದ್ಧವಾಗಿದೆ. ಈ ಬಾರಿಯ ಅತಿಯಾದ ಮುಂಗಾರು ಮಳೆಯಿಂದಾಗಿ ದೇಶದ ಹಲವು ಭಾಗಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮತ್ತೆ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಈ ಬಗ್ಗೆ ಚರ್ಚೆ ಪ್ರಸ್ತುತವೆಂದು ನಾನು ಭಾವಿಸುತ್ತೇನೆ.ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭಕ್ಕೂ ಮುನ್ನ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಭಾಷಾಂತರ
July 17th, 10:40 am
ಸಂಸತ್ತಿನ ಮಳೆಗಾಲದ ಅಧಿವೇಶನವು ಇಂದಿನಿಂದ ಆರಂಭವಾಗುತ್ತಿದೆ. ಬೇಸಿಗೆಯ ಬಳಿಕ, ಬರುವ ಪ್ರಥಮ ಮಳೆ ಇಳೆಗೆ ಹೊಸ ಸುಗಂಧವನ್ನು ತರುತ್ತದೆ. ಅದೇ ರೀತಿ ಈ ಮಳೆಗಾಲದ ಅಧಿವೇಶನ ಕೂಡ ಜಿಎಸ್ಟಿಯ ಯಶಸ್ವೀ ಅನುಷ್ಠಾನದ ಬಳಿಕ ಹೊಸ ಸ್ಫೂರ್ತಿಯನ್ನು ತರಲಿದೆ. ಯಾವಾಗ ರಾಜಕೀಯ ಪಕ್ಷಗಳು ಮತ್ತು ಸರ್ಕಾರ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತವೆಯೋ ಆಗ, ಜನತೆಗೆ ಒಳಿತನ್ನು ಮಾಡುವ ಅವರ ಬದ್ಧತೆ ವ್ಯಕ್ತವಾಗುತ್ತದೆ.ಇದು ಜಿಎಸ್ಟಿಯ ಯಶಸ್ವೀ ಅನುಷ್ಠಾನದೊಂದಿಗೆ ಸಾಬೀತಾಗಿದೆ. ಜಿಎಸ್ಟಿಯ ಸ್ಪೂರ್ತಿ ಒಟ್ಟಿಗೆ ಬಲವಾಗಿ ಬೆಳೆಯುವುದರ ಸಂಕೇತವಾಗಿದೆ. ಮಳೆಗಾಲದ ಅಧಿವೇಶನವು ಹಲವು ಲೆಕ್ಕಾಚಾರದಿಂದ ಮಹತ್ವವಾದ್ದಾಗಿದೆ.ಮಳೆಗಾಲದ ಅಧಿವೇಶನ ಮೊದಲು ಸರ್ವಪಕ್ಷ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
July 16th, 03:18 pm
ಸಂಸತ್ತಿನ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಈ ಅಧಿವೇಶನದ ಸಮಯವನ್ನು ನಾವು ಗರಿಷ್ಠ ಬಳಕೆ ಮಾಡಿಕೊಳ್ಳಬೇಕಾದ್ದು ಈ ಹೊತ್ತಿನ ಅಗತ್ಯವಾಗಿದೆ. ಕೆಲವೊಂದು ಅಪವಾದಗಳ ಹೊರತು ಪಡಿಸಿ, ಕಳೆದ ಮೂರು ವರ್ಷಗಳಲ್ಲಿ ಸಂಸತ್ತಿನ ಫಲಶ್ರುತಿಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಇದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ನನ್ನ ಧನ್ಯವಾದಗಳು