ಶ್ರೀ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಪ್ರಧಾನಮಂತ್ರಿ ಅಭಿನಂದನೆ
September 20th, 07:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಮೋಹನ್ ಲಾಲ್ ಅವರನ್ನು ಅಭಿನಂದಿಸಿದ್ದಾರೆ. ಶ್ರೀ ಮೋಹನ್ ಲಾಲ್ ಅವರು ಶ್ರೇಷ್ಠತೆ ಮತ್ತು ಬಹುಮುಖ ಪ್ರತಿಭೆಯನ್ನು ಪ್ರತಿನಿಧಿಸಿದ್ದಾರೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ದಶಕಗಳ ಕಾಲದ ಶ್ರೀಮಂತ ಕಾರ್ಯವೈಖರಿಯೊಂದಿಗೆ, ಅವರು ಮಲಯಾಳಂ ಸಿನಿಮಾ, ರಂಗಭೂಮಿಯ ಮುಂಚೂಣಿ ಬೆಳಕಾಗಿದ್ದಾರೆ ಹಾಗೂ ಕೇರಳದ ಸಂಸ್ಕೃತಿಯ ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಅವರ ಸಿನಿಮಾ ಮತ್ತು ರಂಗಭೂಮಿ ಪ್ರತಿಭೆ ನಿಜಕ್ಕೂ ಪ್ರೇರಣಾದಾಯಕವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಇತ್ತೀಚಿನ “ಮನ್ ಕಿ ಬಾತ್” ಸಂಚಿಕೆಯಲ್ಲಿ ಬೊಜ್ಜಿನ ವಿರುದ್ಧ ಸಾಮೂಹಿಕ ಕ್ರಮಕ್ಕೆ ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ
February 24th, 09:11 am
ಹೆಚ್ಚುತ್ತಿರುವ ಬೊಜ್ಜು ಪ್ರಮಾಣವನ್ನು ಎದುರಿಸುವ ತುರ್ತು ಅಗತ್ಯವನ್ನು ವಿವರಿಸುತ್ತಾ, ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಪ್ರತಿಪಾದಿಸಲು ಪ್ರಮುಖ ವ್ಯಕ್ತಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಾಮನಿರ್ದೇಶನ ಮಾಡಿದರು. ಆರೋಗ್ಯದ ಕುರಿತಾದ ಆಂದೋಲನವನ್ನು ಮತ್ತಷ್ಟು ವಿಸ್ತರಿಸಲು ಇನ್ನೂ 10 ಜನರನ್ನು ಪರಸ್ಪರ ನಾಮನಿರ್ದೇಶನ ಮಾಡುವಂತೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು.