ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯಕ್ಕೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿಯ ಕುರಿತು ಜಂಟಿ ಹೇಳಿಕೆ
July 05th, 09:02 am
ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯದ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಕಮಲಾ ಪರ್ಸಾದ್-ಬಿಸೆಸ್ಸಾರ್ ಅವರ ಆಹ್ವಾನದ ಮೇರೆಗೆ, ಜುಲೈ 3 ರಿಂದ 4, 2025 ರವರೆಗೆ ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಿದರು.ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಮಂತ್ರಿಯೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ
July 04th, 11:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋರ್ಟ್ ಆಫ್ ಸ್ಪೇನ್‌ನ ರೆಡ್ ಹೌಸ್‌ನಲ್ಲಿ ಟ್ರಿನಿಡಾಡ್ ಮತ್ತು ಟೊಬೆಗೊ ಗಣರಾಜ್ಯದ [ಟಿ&ಟಿ] ಪ್ರಧಾನಮಂತ್ರಿ ಶ್ರೀಮತಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರ ಜೊತೆ ಮಾತುಕತೆ ನಡೆಸಿದರು. ಇತ್ತೀಚಿನ ಚುನಾವಣೆಗಳಲ್ಲಿ ಜಯಗಳಿಸಿದ ನಂತರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಶುಭ ಕೋರಿದರು. ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದ್ದಕ್ಕಾಗಿ ಟ್ರಿನಿಡಾಡ್ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.ಪ್ರಧಾನಮಂತ್ರಿಯವರ ಟ್ರಿನಿಡಾಡ್ ಮತ್ತು ಟೊಬೆಗೊಗೆ ಭೇಟಿ: ಫಲಿತಾಂಶಗಳ ಪಟ್ಟಿ
July 04th, 11:41 pm
ಟ್ರಿನಿಡಾಡ್ ಮತ್ತು ಟೊಬೆಗೊದಲ್ಲಿ (ಟಿ & ಟಿ) ಭಾರತೀಯ ಸಮುದಾಯದ ಸದಸ್ಯರ 6 ನೇ ತಲೆಮಾರಿನವರೆಗೆ ಭಾರತೀಯ ಮೂಲ (ಒಸಿಐ) ಕಾರ್ಡ್ ಸೌಲಭ್ಯವನ್ನು ವಿಸ್ತರಿಸುವುದು: ಈ ಮೊದಲು, ಈ ಸೌಲಭ್ಯವು ಟಿ & ಟಿಯಲ್ಲಿ 4 ನೇ ತಲೆಮಾರಿನ ಭಾರತೀಯ ಸಮುದಾಯದ ಸದಸ್ಯರಿಗೆ ಲಭ್ಯವಿತ್ತುPrime Minister meets with the President of Trinidad and Tobago
July 04th, 11:37 pm
PM Modi met Trinidad & Tobago President Kangaloo and the two leaders reflected on the enduring bonds shared by the two countries, anchored by strong people-to-people ties. PM Modi conveyed his sincere gratitude for the conferment of the ‘Order of the Republic of Trinidad and Tobago’—describing it as an honour for the 1.4 billion people of India.ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 04th, 09:30 pm
ಈ ಐತಿಹಾಸಿಕ 'ರೆಡ್ ಹೌಸ್'ನಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿರುವುದು ನನಗೆ ದೊರೆತ ವಿನಮ್ರ ಗೌರವ. ಈ ಐತಿಹಾಸಿಕ ಕಟ್ಟಡವು ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಸ್ವಾತಂತ್ರ್ಯ ಮತ್ತು ಘನತೆಗಾಗಿ ನಡೆದ ಹೋರಾಟ ಹಾಗೂ ತ್ಯಾಗಗಳಿಗೆ ಸಾಕ್ಷಿಯಾಗಿದೆ. ಕಳೆದ ಆರು ದಶಕಗಳಲ್ಲಿ ನೀವು ನ್ಯಾಯನಿಷ್ಠ, ಸರ್ವಸಮ್ಮತ ಹಾಗೂ ಸಮೃದ್ಧಿಯುತ ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ, ಈ ಭವನವು ನಿಮ್ಮ ಪಯಣದ ದೃಢ ಹೆಗ್ಗುರುತಾಗಿ ನಿಂತಿದೆ.ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
July 04th, 09:00 pm
ಸೆನೆಟ್ ಅಧ್ಯಕ್ಷರಾದ ಗೌರವಾನ್ವಿತ ವೇಡ್ ಮಾರ್ಕ್ ಮತ್ತು ಸದನದ ಸ್ಪೀಕರ್ ಗೌರವಾನ್ವಿತ ಜಗದೇವ್ ಸಿಂಗ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನ ಮಂತ್ರಿ ಮೋದಿ ಅವರು, ಈ ಸಂದರ್ಭವು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಗುರುತಿಸಿದೆ ಎಂದರು.PM Modi conferred with highest national award, the ‘Order of the Republic of Trinidad & Tobago
July 04th, 08:20 pm
PM Modi was conferred Trinidad & Tobago’s highest national honour — The Order of the Republic of Trinidad & Tobago — at a special ceremony in Port of Spain. He dedicated the award to the 1.4 billion Indians and the historic bonds of friendship between the two nations, rooted in shared heritage. PM Modi also reaffirmed his commitment to strengthening bilateral ties.ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಮಂತ್ರಿ ಗೌರವಾನ್ವಿತ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಸಾಂಪ್ರದಾಯಿಕ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಭಾಗಿ
July 04th, 09:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಿ ಗೌರವಾನ್ವಿತ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಸಾಂಪ್ರದಾಯಿಕ ಭೋಜನಕೂಟದಲ್ಲಿ ಭಾಗವಹಿಸಿದರು. ಟ್ರಿನಿಡಾಡ್ ಮತ್ತು ಟೊಬೆಗೊ ಆಯೋಜಿಸಿದ್ದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸೊಹರಿ ಎಲೆಯ ಮೇಲೆ ಆಹಾರವನ್ನು ಬಡಿಸಲಾಯಿತು, ಇದು ಟ್ರಿನಿಡಾಡ್ ಮತ್ತು ಟೊಬೆಗೊ ಜನರಿಗೆ, ವಿಶೇಷವಾಗಿ ಭಾರತೀಯ ಮೂಲ ಹೊಂದಿರುವವರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವದ್ದಾಗಿದೆಪೋರ್ಟ್ ಆಫ್ ಸ್ಪೇನ್‌ನಲ್ಲಿ ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
July 04th, 09:42 am
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿಯಾದರು. ಅವರು ಕೆಲವು ವರ್ಷಗಳ ಹಿಂದೆ ನಡೆದ ಮಹಾತ್ಮ ಗಾಂಧಿಯವರ 150 ನೇ ಜಯಂತಿ ಆಚರಣೆಯ ವೇಳೆ 'ವೈಷ್ಣವ ಜನ ತೋ' ಹಾಡಿದ್ದರು.ಪೋರ್ಟ್ ಆಫ್ ಸ್ಪೇನ್ ನಲ್ಲಿ ಭೋಜಪುರಿ ಚೌತಾಲ್ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
July 04th, 09:06 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ರೋಮಾಂಚಕ ಭೋಜ್‌ಪುರಿ ಚೌತಾಲ್ ಪ್ರದರ್ಶನವನ್ನು ಶ್ಲಾಘಿಸಿದರು. ಇದು ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿಯಿರಿ) ರಸಪ್ರಶ್ನೆ ವಿಜೇತರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
July 04th, 09:03 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿಯಿರಿ) ರಸಪ್ರಶ್ನೆ ವಿಜೇತ ಯುವಕರಾದ ಶಂಕರ್ ರಾಮ್‌ಜಟ್ಟನ್, ನಿಕೋಲಸ್ ಮರಾಜ್ ಮತ್ತು ವಿನ್ಸ್ ಮಹತೋ ಅವರನ್ನು ಭೇಟಿ ಮಾಡಿದರು.ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಮಂತ್ರಿಗೆ ರಾಮ ಮಂದಿರದ ಪ್ರತಿರೂಪ ಮತ್ತು ಪವಿತ್ರ ಜಲ ಉಡುಗೊರೆಯಾಗಿ ನೀಡಿದ ಪ್ರಧಾನಮಂತ್ರಿ
July 04th, 08:57 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಗೌರವಾರ್ಥವಾಗಿ ಆಯೋಜಿಸಲಾದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಕಮಲ ಪ್ರಸಾದ್-ಬಿಸ್ಸೆಸ್ಸರ್ ಅವರಿಗೆ ಅಯೋಧ್ಯೆಯಲ್ಲಿರುವ ರಾಮ ಮಂದಿರದ ಪ್ರತಿರೂಪವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ, ಅವರು ಸರಯು ನದಿಯಿಂದ ಮತ್ತು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದ ಪವಿತ್ರ ನೀರನ್ನು ಸಮರ್ಪಿಸಿದರು.ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ
July 04th, 05:56 am
ಈ ಸಂಜೆ ನಿಮ್ಮೆಲ್ಲರೊಂದಿಗೆ ಇರುವುದು ನನಗೆ ಅಪಾರ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಪ್ರಧಾನಮಂತ್ರಿ ಕಮಲಾ ಜೀ ಅವರ ಅದ್ಭುತ ಆತಿಥ್ಯ ಮತ್ತು ಕರುಣಾಮಯಿ ಮಾತುಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಸಮುದಾಯ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು
July 04th, 04:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಭಾರತೀಯ ವಲಸಿಗರ ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀಮತಿ ಕಮಲಾ ಪರ್ಸಾದ್-ಬಿಸ್ಸೆಸ್ಸಾರ್, ಅವರ ಕ್ಯಾಬಿನೆಟ್ ಸದಸ್ಯರು, ಸಂಸತ್ ಸದಸ್ಯರು ಮತ್ತು ಹಲವಾರು ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿಯವರನ್ನು ವಲಸಿಗರು ಅಸಾಧಾರಣ ಆತ್ಮೀಯತೆಯಿಂದ ಸ್ವಾಗತಿಸಿದರು ಮತ್ತು ವರ್ಣರಂಜಿತ ಸಾಂಪ್ರದಾಯಿಕ ಇಂಡೋ-ಟ್ರಿನಿಡಾಡಿಯನ್ ಸ್ವಾಗತವನ್ನು ನೀಡಲಾಯಿತು.ಟ್ರಿನಿಡಾಡ್ ಮತ್ತು ಟೊಬಾಗೊಗೆ ಅಧಿಕೃತ ಭೇಟಿಗಾಗಿ ಪ್ರಧಾನಮಂತ್ರಿ ಅವರು ಪೋರ್ಟ್ ಆಫ್ ಸ್ಪೇನ್ ಗೆ ಆಗಮಿಸಿದರು
July 04th, 02:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜುಲೈ 3-4ರವರೆಗೆ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಲು ಇಂದು ಪೋರ್ಟ್ ಆಫ್ ಸ್ಪೇನ್ ಗೆ ಆಗಮಿಸಿದರು. 1999ರ ಬಳಿಕ ಭಾರತದ ಪ್ರಧಾನಿಯೊಬ್ಬರು ಟಿ ಮತ್ತು ಟಿಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಉಭಯ ದೇಶಗಳ ನಡುವಿನ ನಿಕಟ ಬಾಂಧವ್ಯದ ಸಂಕೇತವಾಗಿ, ಪೋರ್ಟ್ ಆಫ್ ಸ್ಪೇನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಗೌರವಾನ್ವಿತ ಶ್ರೀಮತಿ ಕಮಲಾ ಪರ್ಸಾದ್-ಬಿಸ್ಸೆಸ್ಸಾರ್ ಮತ್ತು ಅವರ ಕ್ಯಾಬಿನೆಟ್ ಸದಸ್ಯರು ಮತ್ತು ಇತರ ಹಲವಾರು ಗಣ್ಯರು ಸ್ವಾಗತಿಸಿದರು. ಪ್ರಧಾನಮಂತ್ರಿಯವರಿಗೆ ಔಪಚಾರಿಕ ಗಾರ್ಡ್ ಆಫ್ ಹಾನರ್ ನೀಡಲಾಯಿತು ಮತ್ತು ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸ್ವಾಗತಿಸಲಾಯಿತು.